twitter
    For Quick Alerts
    ALLOW NOTIFICATIONS  
    For Daily Alerts

    ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಅಸಮಾಧಾನ ಹೊರಹಾಕಿದ ಎಸ್ ಪಿ ಬಿ

    |

    ಸೋಷಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಖ್ಯಾತ ಗಾಯಕ ಎಸ್ ಪಿ ಬಾಲಸುಪ್ರಬ್ರಹ್ಮಣ್ಯಂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಫೇಸ್ ಬುಕ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.

    ಗಾಯಕಿ ಲತಾ ಮಂಗೇಶ್ಕರ್ ಅನಾರೋಗ್ಯದ ಹಿನ್ನಲೆಯಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಏನೇನೋ ಸುದ್ದಿಗಳು ಹರಿದಾಡುತ್ತಿತ್ತು. ಸರಿಯಾದ ಮಾಹಿತಿ ಇಲ್ಲದೆ ಕೆಲವರು ಏನೇನೋ ಬರೆಯುತ್ತಿದ್ದರು. ಗಾಸಿಪ್ ಗಳನ್ನು ಹಬ್ಬಿಸುತ್ತಿದ್ದರು. ಈ ಬಗ್ಗೆ ಎಸ್ ಪಿ ಬಾಲಸುಬ್ರಹ್ಮಣ್ಯಂ ಬೇಸರಗೊಂಡಿದ್ದಾರೆ.

    ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಆಸ್ಪತ್ರೆಗೆ ದಾಖಲುಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಆಸ್ಪತ್ರೆಗೆ ದಾಖಲು

    ''ಲತಾ ಜೀ ಆರೋಗ್ಯ ಸ್ಥಿತಿಯ ಬಗ್ಗೆ ತಿಳಿಯದೆ, ಕೆಲವರು ಸೋಷಿಯಲ್ ಮೀಡಿಯಾದಲ್ಲಿ ರೂಮರ್ ಹಬ್ಬಿಸುತ್ತಿದ್ದಾರೆ. ಕೆಟ್ಟ ಸುದ್ದಿ ಮಾಡುತ್ತಿದ್ದಾರೆ. ಅದು ತಪ್ಪು. ನಾನು ಅವರನ್ನು ವೈಯಕ್ತಿಕವಾಗಿ ವಿಚಾರಿಸಿದ್ದೇನೆ. ಅವರು ಆರೋಗ್ಯವಾಗಿ ಇದ್ದಾರೆ. ಅವರಿಗೆ ಲಕ್ಷಾಂತರ ಜನರ ಆಶೀರ್ವಾದ ಇದೆ.'' ಎಂದು ತಿಳಿಸಿದ್ದಾರೆ.

    Sp Balasubrahmanyam Unhappy With The People Who Spreading Fake News About Lata Mangeshkar Health

    ''ಯಾರೋ ಒಂದು ಪೋಸ್ಟ್ ಹಾಕಿದರು ಅಂತ ಅದನ್ನು ನಂಬಬೇಡಿ, ಶೇರ್ ಮಾಡಬೇಡಿ. ಅದು ಸರಿ ಅಲ್ಲ. ನಾವೆಲ್ಲ ಲತಾ ಜೀ ಅವರ ಆರೋಗ್ಯಕ್ಕಾಗಿ ಪ್ರಾರ್ಥನೆ ಮಾಡೋಣ.'' ಎಂದು ಎಸ್ ಪಿ ಬಿ ಮನವಿ ಮಾಡಿದ್ದಾರೆ.

    ಅಂದಹಾಗೆ, ಲತಾ ಮಂಗೇಶ್ಕರ್ ಅವರಿಗೆ ಎದೆ ಭಾಗದಲ್ಲಿ ಸೋಂಕು ಇರುವ ಕಾರಣ ಅವರನ್ನು ನವೆಂಬರ್ 11 ರಂದು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

    English summary
    Singer Sp Balasubrahmanyam unhappy with the people who spreading fake news about Lata Mangeshkar health.
    Monday, November 18, 2019, 16:48
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X