For Quick Alerts
  ALLOW NOTIFICATIONS  
  For Daily Alerts

  ಸಲ್ಮಾನ್ ಸಿನಿಮಾದಲ್ಲಿ ಸೂಪರ್ ವಿಲನ್: ಎಂಟ್ರಿ ದೃಶ್ಯಕ್ಕೆ 10 ಕೋಟಿ ಖರ್ಚು

  |

  ಮಾಸ್ ಹೀರೋಗಳ ಸಿನಿಮಾದಲ್ಲಿ ಎಂಟ್ರಿ ಸೀನ್‌ಗೆ ಬಹಳವೇ ಮಹತ್ವ. ಹೀರೊ ಎಂಟ್ರಿ ಸೀನ್‌ಗಳು ಅಭಿಮಾನಿಗಳು ಸಿನಿಮಾದ ಜೊತೆಗೆ ಕನೆಕ್ಟ್ ಆಗುವ ಮೊದಲ ಅಂಶ ಹಾಗಾಗಿ ಆ ಸೀನ್‌ಗಳಿಗೆ ಹೆಚ್ಚಿನ ಮಹತ್ವ.

  ಸಲ್ಮಾನ್ ಖಾನ್ ಸಿನಿಮಾಗಳಲ್ಲಿಯಂತೂ ಹೀರೊ ಎಂಟ್ರಿ ಸೀನ್‌ಗೆ ಬಹಳ ಮಹತ್ವ ನೀಡಲಾಗುತ್ತದೆ. ಇದೀಗ ಸಲ್ಮಾನ್ ನಟಿಸುತ್ತಿರುವ 'ಟೈಗರ್ 3' ಸಿನಿಮಾದಲ್ಲಿ ಸಹ ಇದೇ ಮುಂದುವರೆದಿದೆ. ಆದರೆ ಈ ಸಿನಿಮಾದ ವಿಶೇಷವೆಂದರೆ ಸಲ್ಮಾನ್ ಎಂಟ್ರಿ ಸೀನ್‌ಗಿಂತಲೂ ಹೆಚ್ಚಿನ ಮಹತ್ವವನ್ನು ವಿಲನ್‌ ಎಂಟ್ರಿ ಸೀನ್‌ಗೆ ನೀಡಲಾಗುತ್ತಿದೆ.

  'ಟೈಗರ್ 3' ಸಿನಿಮಾದಲ್ಲಿ ಬಾಲಿವುಡ್ ನಾಯಕ ಇಮ್ರಾನ್ ಹಾಶ್ಮಿ ವಿಲನ್ ಆಗಿದ್ದು, ಇಮ್ರಾನ್ ಎಂಟ್ರಿ ದೃಶ್ಯವೊಂದಕ್ಕಾಗಿಯೇ ಹತ್ತು ಕೋಟಿ ರುಪಾಯಿ ಹಣ ವ್ಯಯಿಸಲಾಗುತ್ತಿದೆ.

  ಇದೇ ಮೊದಲ ಬಾರಿಗೆ ಸ್ಟಾರ್ ಹೀರೊ ಸಿನಿಮಾದಲ್ಲಿ ಸಂಪೂರ್ಣ ವಿಲನ್ ಆಗಿ ಇಮ್ರಾನ್ ಹಾಶ್ಮಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗಾಗಿಯೇ ಅವರ ಎಂಟ್ರಿ ಸೀನ್‌ಗೆ ಹೆಚ್ಚಿನ ಮಹತ್ವವನ್ನು ನಿರ್ದೇಶಕರು ನೀಡಿದ್ದಾರೆ.

  'ಟೈಗರ್ 3' ಹೆಸರೇ ಹೇಳುವಂತೆ 'ಏಕ್‌ ತಾ ಟೈಗರ್', 'ಟೈಗರ್ ಜಿಂದಾ ಹೈ' ಸಿನಿಮಾ ಸರಣಿಯ ಮೂರನೇ ಸಿನಿಮಾ ಆಗಿದ್ದು, ಮೊದಲೆರಡು ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದ ಕತ್ರಿನಾ ಕೈಫ್ ಈ ಸಿನಿಮಾದಲ್ಲಿಯೂ ನಾಯಕಿಯಾಗಿದ್ದಾರೆ. 'ಟೈಗರ್ ಜಿಂದಾ ಹೈ' ಸಿನಿಮಾ ನಿರ್ದೇಶಿಸಿದ್ದ ಅಲಿ ಅಬ್ಬಾಸ್ ಜಫರ್ ಅವರೇ ಈ ಸಿನಿಮಾವನ್ನೂ ನಿರ್ದೇಶನ ಮಾಡುತ್ತಿದ್ದಾರೆ. 'ಏಕ್‌ ತಾ ಟೈಗರ್' ಅನ್ನು ಕಬೀರ್ ಖಾನ್ ನಿರ್ದೇಶನ ಮಾಡಿದ್ದರು.

  ದುನಿಯಾ ಸಿನಿಮಾದ ಕಥೆಯಂತೆ ನಿಜಜೀವನದಲ್ಲಿಯೂ ಆಯ್ತು

  ಸಲ್ಮಾನ್ ನಟನೆಯ 'ಅಂತಿಮ್' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಜೊತೆಗೆ 'ನೋ ಎಂಟ್ರಿ 2', 'ಇನ್‌ಶಾ ಅಲ್ಲಾಹ್', 'ಕಬಿ ಈದ್ ಕಬಿ ದಿವಾಲಿ', 'ಬುಲ್‌ ಬುಲ್ ಮ್ಯಾರೇಜ್ ಹಾಲ್', 'ವಾಂಟೆಡ್ 2', 'ರಘು ರಾಜಾ ರಾಮ್', 'ಭಜರಂಗಿ ಭಾಯಿಜಾನ್ 2', 'ದಬಂಗ್ 4' , 'ಢಾಕ್' ಸಿನಿಮಾಗಳಲ್ಲಿ ಸಲ್ಮಾನ್ ನಟಿಸಲಿದ್ದಾರೆ.

  English summary
  Spending 10 crore for Emraan Hashmi's entry scene in Tiger 3 movie. Salman Khan is hero of this movie, Katrina Kaif is heroine.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X