ಆರ್‌ಜೆ ಮಹ್ವಾಶ್‌ಗೆ ಗುಡ್ ಬೈ ? ಬಿಗ್ ಬಾಸ್ ಸ್ಫರ್ಧಿಯ ಬೆನ್ನ ಹಿಂದೆ ಬಿದ್ದ ಯುಜ್ವೇಂದ್ರ ಚಹಾಲ್- ವಿಡಿಯೋ ವೈರಲ್

ಹೇಳಿ ಕೇಳಿ ಇದು ಬಣ್ಣದ ಲೋಕ. ಇಲ್ಲಿ ದಿನಕ್ಕೊಂದು ಸುದ್ದಿಗಳು ಹರಿದಾಡುತ್ತವೆ. ಹೀಗೆ ಹರಿದಾಡುವ ಸುದ್ದಿಗಳಲ್ಲಿ ಕೆಲವು ಸತ್ಯ ಆಗಿದ್ದರೆ ಇನ್ನು ಕೆಲವು ಮಿಥ್ಯ ಆಗಿರುತ್ತವೆ. ಆದರೂ.. ಈ ಅಂತೆ-ಕಂತೆಯ ಸಂತೆಯಲ್ಲಿ ಊಹಾಪೋಹ ಸುದ್ದಿಗಳಿಗೆ ಬರ ಇಲ್ಲ. ಅದರಲ್ಲಿಯೂ ಲವ್ .. ಬ್ರೇಕಪ್.. ಮದುವೆ.. ಡಿವೋರ್ಸ್‌ ಸುದ್ದಿಗಳು ಇಲ್ಲಿ ತುಂಬಾನೇ ಮಾಮೂಲು. ಯಾಕೆಂದರೆ.. ಚಿತ್ರರಂಗದ ಧ್ರುವತಾರೆಯರ...

ಬದುಕಿನಲ್ಲಿ ಬ್ರೇಕಪ್ಪು.. ಲವ್ವು.. ಡವ್ವು.. ಕಡಿಮೆ ಇಲ್ಲ. ಒಬ್ಬರ ನಂತರ ಒಬ್ಬರನ್ನು ಮದುವೆಯಾಗುವುದು ಆ ನಂತರ ಅವರಿಗೂ ಕೂಡ ಗುಡ್ ಬೈ ಹೇಳಿ ಹೊರನಡೆಯುವುದು ಹೊಸದೇನೂ ಅಲ್ಲ. ಇಲ್ಲಿ ಹಲವರಿಗೆ ಎಲ್ಲವೂ ಬಟ್ಟೆ ಬದಲಿಸಿದಷ್ಟೇ ಸುಲಭ. ಹೀಗಾಗಿ ಇವರ ವ್ಯೆಯಕ್ತಿಕ ಬದುಕಿನ ಮೇಲೆ ಹಲವರ ಕಣ್ಣಿರುತ್ತೆ. ಹೀಗಿರುವಾಗ ತಪ್ಪಿಸಿಕೊಳ್ಳಲು ಹೇಗೆ ಸಾಧ್ಯ.? ಇದಕ್ಕೆ ಉದಾಹರಣೆಯೇ ವೈರಲ್ ಆದ ಯಜುವೇಂದ್ರ ಚಹಾಲ್ ಅವರ ವಿಡಿಯೋ.

Spotted Yuzvendra Chahal amp amp Shefali Bagga Fuel Dating Rumors Days After RJ Mahvash Snub

ಹೌದು, ಎಲ್ಲರಿಗೆ ಗೊತ್ತಿರುವಂತೆ ಧನಶ್ರೀ ವರ್ಮಾಗೆ ವಿಚ್ಛೇದನ ನೀಡಿದ ನಂತರ ಚಹಾಲ್ ಏಕಾಂಗಿ ಆಗಿದ್ದರು. ಆದರೆ.. ಅಷ್ಟರಲ್ಲಿ ಇವರ ಬದುಕಿನಲ್ಲಿ ಆರ್‌ಜೆ ಮಹ್ವಾಶ್ ಪ್ರವೇಶವಾಯ್ತು. 2025ರಲ್ಲಿ ದುಬೈನಲ್ಲಿ ನಡೆದಿದ್ದ ಚಾಂಪಿಯನ್ಸ್ ಟ್ರೋಫಿಯ ಸಮಯದಲ್ಲಿ ಇಬ್ಬರು ಗ್ಯಾಲರಿಯಲ್ಲಿ ಕುಂತು ಮ್ಯಾಚ್‌ ಕಣ್ತುಂಬಿಕೊಂಡಿದ್ದರು.

ಆದರೆ, ಇದೇ ಸಮಯದಲ್ಲಿ ಇಬ್ಬರನ್ನು ಜೊತೆಯಲ್ಲಿ ಕಣ್ತುಂಬಿಕೊಂಡ ಹಲವರು ಇಬ್ಬರ ನಡುವೆ ಪ್ರೇಮಾಂಕುರವಾಗಿದೆ ಎನ್ನುವ ಸುದ್ದಿಯನ್ನು ಹಬ್ಬಿಸಿದರು. ಇದಕ್ಕೆ ಪೂರಕವಾಗಿ ಹಲವು ಬಾರಿ ಆ ನಂತರ ಚಹಾಲ್ ಮತ್ತು ಮಹ್ವಾಶ್ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗುತ್ತಲೇ ಬಂದರು. ಹೀಗಾಗಿ ಹಬ್ಬಿರುವ ಈ ಸುದ್ದಿಯನ್ನು ಹಲವರು ನಿಜಾ ಎಂದುಕೊಂಡಿದ್ದರು.

ಆದರೆ ಅಷ್ಟರಲ್ಲಿ ಇವರ ಸಂಬಂಧದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ಹೊರ ಬಂತು. ಇನ್‌ಸ್ಟಾಗ್ರಾಮ್‌ನಲ್ಲಿ ಇಬ್ಬರು ಒಬ್ಬರನ್ನೊಬ್ಬರು ಅನ್‌ಫಾಲೋ ಮಾಡಿರುವ ವಿಚಾರ ಜಗಜ್ಜಾಹೀರಾಯ್ತು. ಈ ಸುದ್ದಿಯನ್ನು ಕೇಳಿ ಯಜುವೇಂದ್ರ ಚಹಾಲ್ ಅವರ ಅಭಿಮಾನಿಗಳು ನಿರಾಸೆಗೊಂಡಿದ್ದರು. ಹೀಗಿರುವಾಗ ಇದೀಗ ''ಬಿಗ್ ಬಾಸ್'' ಸ್ಫರ್ಧಿಯ ಜೊತೆ ಚಹಾಲ್ ಕಾಣಿಸಿಕೊಂಡಿದ್ದಾರೆ.

ಹೌದು, ಶೆಫಾಲಿ ಬಗ್ಗಾ.. ಹಿಂದಿಯ ''ಬಿಗ್ ಬಾಸ್'' 13ರ ಸ್ಫರ್ಧಿ. ಇಷ್ಟೇ ಅಲ್ಲ ಸುದ್ದಿ ನಿರೂಪಕಿ ಕೂಡ ಹೌದು, ಕ್ರಿಕೆಟ್‌ನ ವರದಿಗಾರ್ತಿ ಕೂಡ ಹೌದು ಶೆಫಾಲಿ. ಲೆಜೆಂಡ್ಸ್ ಕ್ರಿಕೆಟ್ ಟ್ರೋಫಿ, ಸಿಸಿಎಲ್, ವುಮೆನ್ಸ್ ಕ್ರಿಕೆಟ್ ಲೀಗ್, ಸೇರಿ ಅನೇಕ ಪಂದ್ಯಾವಳಿಗಳ ನಿರೂಪಣೆಯನ್ನು ಶೆಫಾಲಿ ಮಾಡಿದ್ದಾರೆ. ಭಾರತ ಕ್ರಿಕೆಟ್ ತಂಡದವರ ಜೊತೆ ಮಾತ್ರ ಅಲ್ಲ ದೇಶ ವಿದೇಶದ ಅನೇಕ ಕ್ರಿಕೆಟ್ ಪ್ಲೇಯರ್ಸ್‌ಗಳಿಗೆ ಕೂಡ ಶೆಫಾಲಿ ಚಿರಪರಿಚಿತ.

Spotted Yuzvendra Chahal amp amp Shefali Bagga Fuel Dating Rumors Days After RJ Mahvash Snub

ಇಂಥಾ ಶೆಫಾಲಿ ಬಗ್ಗಾ ಜೊತೆ ಯಜುವೇಂದ್ರ ಚಹಾಲ್ ಮುಂಬೈನ ರೆಸ್ಟೋರೆಂಟ್ ಒಂದರಲ್ಲಿ ಕಾಣಿಸಿಕೊಂಡಿದ್ದಾರೆ. ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದ್ದಾರೆ. ಕ್ಯಾಮರಾ ಕಣ್ಣುಗಳಿಂದ ಶೆಫಾಲಿ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದರೆ ಚಹಾಲ್ ನಗು ನಗುತ್ತ ಕ್ಯಾಮರಾಗೆ ಫೋಸ್ ನೀಡಿದ್ದಾರೆ.

ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಊಹಾಪೋಹಗಳಿಗೆ ಎಡೆ ಮಾಡಿ ಕೊಟ್ಟಿದೆ. ಯಜುವೇಂದ್ರ ಚಹಾಲ್ ಮತ್ತು ಶೆಫಾಲಿ ಬಗ್ಗಾ ಸಂಬಂಧದ ಕುರಿತು ಈಗ ಚರ್ಚೆ ನಡೆಯುತ್ತಿದೆ. ಆರ್‌ಜೆ ಮಹ್ವಾಶ್ ಅವರಿಂದ ದೂರವಾದ ಚಹಾಲ್ ಈಗ ಶೆಫಾಲಿ ಬಗ್ಗಾ ಅವರ ಹಿಂದೆ ಬಿದ್ದಿದ್ದಾರಾ ? ಎನ್ನುವ ಅನುಮಾನ ಕೂಡ ಹಲವರನ್ನು ಕಾಡುತ್ತಿದೆ.

ಎಂದಿನಂತೆ ತಮ್ಮ ಸಂಬಂಧದ ಕುರಿತು ಕೇಳಿ ಬರುತ್ತಿರುವ ಪ್ರಶ್ನೆಗಳಿಗೆ ಮತ್ತು ನಡೆಯುತ್ತಿರುವ ಚರ್ಚೆಗಳಿಗೆ ಚಹಾಲ್ ಆಗಲಿ ಶೆಫಾಲಿ ಆಗಲಿ ಉತ್ತರ ನೀಡಿಲ್ಲ. ಸ್ಪಷ್ಟನೆ ನೀಡಿಲ್ಲ. ಮುಂಬರುವ ದಿನಗಳಲ್ಲಿ ಇಬ್ಬರಲ್ಲಿ ಯಾರಾದರೂ ಒಬ್ಬರು ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ. ಇಬ್ಬರ ಚಲನ ವಲನಗಳ ಮೇಲೀಗ ಒಂದು ವರ್ಗ ಕಣ್ಣಿಟ್ಟಿದೆ.

More from Filmibeat

English summary
Yuzvendra Chahal and Shefali Bagga spark massive speculation! See the viral photos of their latest appearance together following the social media fallout with rumored partner RJ Mahvash.
Read more about: cricket viral video
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X