For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್‌ ಗೆ ಪಾದಾರ್ಪಣೆ ಮಾಡಲಿದ್ದಾರೆ ಶ್ರೀದೇವಿ ಎರಡನೇ ಪುತ್ರಿ

  |

  ಮಗಳನ್ನು ತಮ್ಮಂತೆ ಸಿನಿಮಾ ನಾಯಕಿಯನ್ನಾಗಿ ಮಾಡಬೇಕೆಂದು ಬಹು ಆಸೆಯಿಟ್ಟುಕೊಂಡಿದ್ದ ನಟಿ ಶ್ರೀದೇವಿ ತಮ್ಮ ಮಗಳು ಜಾಹ್ನವಿಯನ್ನು ನಟಿಯನ್ನಾಗಿಯೇನೋ ಮಾಡಿದರು, ಆದರೆ ಆಕೆಯ ಮೊದಲ ಸಿನಿಮಾ ಬಿಡುಗಡೆಗೆ ಮುನ್ನವೇ ಇಹಲೋಕ ತ್ಯಜಿಸಿದ್ದರು.

  ನಟಿ ಜಾಹ್ನವಿ ಕಪೂರ್ ಈಗ ಬಾಲಿವುಡ್‌ನ ಉದಯೋನ್ಮುಖ ನಟಿಯರಲ್ಲಿ ಒಬ್ಬರು. ಇದೀಗ ಶ್ರೀದೇವಿ ಅವರ ಎರಡನೇ ಪುತ್ರಿ ಸಹ ಬಾಲಿವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ಬಗ್ಗೆ ಅವರ ತಂದೆ ಬೋನಿ ಕಪೂರ್ ಅವರೇ ಮಾಹಿತಿ ನೀಡಿದ್ದಾರೆ.

  ಜಾಹ್ನವಿ ಕಪೂರ್ ಳ ತಂಗಿ ಖುಷಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲಿದ್ದಾರೆ. ಅದೂ ದೊಡ್ಡ ಬ್ಯಾನರ್ ನ ಸಿನಿಮಾ ಮೂಲಕವೇ ಖುಷಿ ನಟಿಯಾಗಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ.

  ಮಾಧ್ಯಮವೊಂದರೊಟ್ಟಿಗೆ ಮಾತನಾಡಿರುವ ನಿರ್ಮಾಪಕ ಬೋನಿ ಕಪೂರ್, 'ಖುಷಿಗೆ ನಟನೆಯೆಂದರೆ ಬಹಳ ಆಸಕ್ತಿ. ಆಕೆ ಸಹ ಕೆಲವೇ ದಿನಗಳಲ್ಲಿ ನಟಿಯಾಗಳಿದ್ದಾರೆ. ದೊಡ್ಡ ಘೋಷಣೆಯನ್ನು ಕೆಲವೇ ದಿನಗಳಲ್ಲಿ ಮಾಡಲಿದ್ದೇವೆ' ಎಂದಿದ್ದಾರೆ. ಆದರೆ ತಮ್ಮ ಮಗಳ ಸಿನಿಮಾವನ್ನು ತಾವು ನಿರ್ಮಿಸುವುದಿಲ್ಲ ಎಂದೂ ಸಹ ಹೇಳಿದ್ದಾರೆ ಬೋನಿ ಕಪೂರ್.

  'ನನ್ನ ಬಳಿ ಸಂಪನ್ಮೂಲ ಇದೆ, ಆದರೆ ಬೇರೆಯವರು ಆಕೆಯನ್ನು ಲಾಂಚ್ ಮಾಡಿದರೆ ಉತ್ತಮ ಎಂಬುದು ನನ್ನ ಅಭಿಪ್ರಾಯ. ನಾನು ಆಕೆಯ ತಂದೆಯಾಗಿ ಮಗಳು ಕೇಳಿದ್ದಕ್ಕೆಲ್ಲಾ ತಯಾರಿದ್ದೇನೆ ಆದರೆ ನಿರ್ಮಾಪಕನಾಗಿ ಅದು ಉತ್ತಮ ನಿರ್ಣಯವಲ್ಲ. ನಟಿಯಾಗಿ ಆಕೆಯೂ ಸಹ ಪೂರ್ಣ ಕಂಫರ್ಟ್ ಜೋನ್‌ನಲ್ಲಿರಬಾರದು' ಎಂದಿದ್ದಾರೆ ಬೋನಿ ಕಪೂರ್.

  ಬಾಕ್ಸರ್ ಮುಂದೆ ಘರ್ಜಿಸಲಿದ್ದಾರೆ ಉಪೇಂದ್ರ | Filmibeat Kannada

  ಬೋನಿ ಕಪೂರ್ ಮಕ್ಕಳಾದ ಜಾಹ್ನವಿ ಕಪೂರ್ ಹಾಗೂ ಅರ್ಜುನ್ ಕಪೂರ್ ಇಬ್ಬರನ್ನೂ ಬೇರೆ ನಿರ್ಮಾಪಕರು ಲಾಂಚ್ ಮಾಡಿದ್ದರು. ಮಕ್ಕಳ ಸಿನಿಮಾವನ್ನು ಬೋನಿ ಕಪೂರ್ ಈ ವರೆಗೆ ನಿರ್ಮಿಸಿಲ್ಲ.

  English summary
  Sri Devi's second daughter Khushi to make bollywood debute soon. Her father Bony Kapoor said will announce the news soon.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X