twitter
    For Quick Alerts
    ALLOW NOTIFICATIONS  
    For Daily Alerts

    ಶ್ರೀದೇವಿ ಸಾವಿನ ಬಗ್ಗೆ ಬಾಂಬ್ ಸಿಡಿಸಿದ ಕೇರಳ ಡಿಜಿಪಿ: ಅದು ಆಕಸ್ಮಿಕವಲ್ಲ, ಕೊಲೆ.!

    |

    Recommended Video

    ಶ್ರೀದೇವಿ ಬಗ್ಗೆ ಬಾಂಬ್ ಸಿಡಿಸಿದ ಕೇರಳ ಡಿಜಿಪಿ: ಅದು ಆಕಸ್ಮಿಕವಲ್ಲ | FILMIBEAT KANNADA

    ಬಾಲಿವುಡ್ ಎವರ್ ಗ್ರೀನ್ ನಟಿ ಶ್ರೀದೇವಿಯನ್ನ ಎಂದಿಗೂ ಮರೆಯಲಾಗುವುದಿಲ್ಲ. ಶ್ರೀದೇವಿ ನಟನೆ, ಸೌಂದರ್ಯಕ್ಕಿಂತ ಆಕೆಯ ಸಾವಿನ ವಿಚಾರವೇ ಈಗ ಹೆಚ್ಚು ಕಾಡುತ್ತಿದೆ. ಶ್ರೀದೇವಿ ಸಾವನ್ನಪ್ಪಿ ಸುಮಾರು ಒಂದೂವರೆ ವರ್ಷ ಆಗಿದೆ. ಈಗಲೂ ಆ ಸಾವಿನ ಸುತ್ತಾ ಅನುಮಾನಗಳು ಹುಟ್ಟಿಕೊಳ್ಳುತ್ತಿದೆ.

    ಫೆಬ್ರವರಿ 24, 2018 ರಂದು ದುಬೈನ ಪ್ರತಿಷ್ಠಿತ ಹೋಟೆಲ್ ರೂಂನಲ್ಲಿ ಅನುಮಾನಸ್ಪಾದವಾಗಿ ಶ್ರೀದೇವಿಯ ಶವ ಸಿಕ್ಕಿತ್ತು. ತನಿಖೆ ನಡೆಸಿದ್ದ ಪೊಲೀಸರು ಇದು ಆಕಸ್ಮಿಕ ಸಾವು, ಪಾನಮತ್ತರಾಗಿದ್ದರಿಂದ ಕಾಲು ಜಾರಿ ಬಾತ್ ಟಾಬ್ ನಲ್ಲಿ ಬಿದ್ದು ಮುಳುಗಿ ನಿಧನರಾಗಿದ್ದಾರೆ ಎಂದು ವರದಿ ನೀಡಿದ್ದರು.

    ನಟಿ ಶ್ರೀದೇವಿ ಪೋಸ್ಟ್ ಮಾರ್ಟಂ ರಿಪೋರ್ಟ್ ಸುತ್ತ ಅನುಮಾನದ ಹುತ್ತ.! ನಟಿ ಶ್ರೀದೇವಿ ಪೋಸ್ಟ್ ಮಾರ್ಟಂ ರಿಪೋರ್ಟ್ ಸುತ್ತ ಅನುಮಾನದ ಹುತ್ತ.!

    ಆದರೆ, ಈ ಸಾವಿನ ಬಗ್ಗೆ ಅನೇಕ ತನಿಖಾಧಿಕಾರಿಗಳು ವಿಶೇಷ ಕಾಳಜಿ ವಹಿಸುತ್ತಿದ್ದಾರೆ. ಒಂದಲ್ಲ ಒಂದು ಕಾರಣದಿಂದ ಇದು ಆಕಸ್ಮಿಕ ಸಾವಲ್ಲ, ಕೊಲೆ ಎಂದು ಆರೋಪಿಸುತ್ತಿದ್ದಾರೆ. ಇದೀಗ, ಕೇರಳ ಜೈಲು ಡಿಜಿಪಿಯೊಬ್ಬರು ಶ್ರೀದೇವಿ ಸಾವಿನ ಬಗ್ಗೆ ಬಾಂಬ್ ಸಿಡಿಸಿದ್ದಾರೆ. ಇದು ಆಕಸ್ಮಿಕ ಸಾವಲ್ಲ, ಇದು ಪೂರ್ವನಿಯೋಜಿತ ಕೊಲೆ ಎಂದು ಹೇಳುತ್ತಿದ್ದಾರೆ. ಏನಿದು ಹೊಸ ಟ್ವಿಸ್ಟ್? ಮುಂದೆ ಓದಿ....

    ಕೇರಳ ಡಿಜಿಪಿ ರಿಷಿರಾಜ್ ಸಿಂಗ್ ಆರೋಪ

    ಕೇರಳ ಡಿಜಿಪಿ ರಿಷಿರಾಜ್ ಸಿಂಗ್ ಆರೋಪ

    ಶ್ರೀದೇವಿ ಅವರ ಸಾವು ಆಕಸ್ಮಿಕವಲ್ಲ, ಅದು ಕೊಲೆ ಎಂದು ಕೇರಳದ ಜೈಲು ಡಿಜಿಪಿ ರಿಷಿರಾಜ್ ಸಿಂಗ್ ಸಂದರ್ಶನವೊಂದರಲ್ಲಿ ಹೇಳಿಕೆ ನೀಡಿದ್ದಾರೆ. ಅವರ ಸಾವಲ್ಲಿ ಅನೇಕ ರೀತಿಯ ಅನುಮಾನಗಳಿವೆ, ಅದನ್ನ ಮುಚ್ಚಿಡಲಾಗಿದೆ. ಈ ಬಗ್ಗೆ ಹಲವು ಸಾಕ್ಷಿ ಆಧಾರಗಳು ಕೂಡ ಇವೆ ಎಂದು ಹೇಳುವ ಮೂಲಕ ಬಾಂಬ್ ಸಿಡಿಸಿದ್ದಾರೆ.

    ಶ್ರೀದೇವಿ ಸತ್ತಿದ್ದು ಹೇಗೆ? ಇಲ್ಲಿದೆ ಆಘಾತಕಾರಿ ಸುದ್ದಿ!

    ಒಂದು ಅಡಿ ಆಳದಲ್ಲಿ ಮುಳುಗಲು ಸಾಧ್ಯವಿಲ್ಲ

    ಒಂದು ಅಡಿ ಆಳದಲ್ಲಿ ಮುಳುಗಲು ಸಾಧ್ಯವಿಲ್ಲ

    ಕೇರಳ ಡಿಜಿಪಿ ರಿಷಿರಾಜ್ ಸಿಂಗ್ ಅವರ ಸ್ನೇಹಿತ ವಿಧಿವಿಜ್ಞಾನ ತಜ್ಞ ಡಾ ಉಮದತನ್ (ಈಗ ಬದುಕಿಲ್ಲ) ಅವರು, ಶ್ರೀದೇವಿ ಸಾವಿನ ಕುರಿತು ಹಲವು ವಿಷ್ಯಗಳನ್ನ ಡಿಜಿಪಿ ಬಳಿ ಪ್ರಸ್ತಾಪಿಸಿದ್ದರಂತೆ. ''ಪಾನಮತ್ತರಾದವರು ಯಾರೇ ಆಗಲಿ ಒಂದು ಅಡಿ ಆಳದಲ್ಲಿ ಮುಳುಗಿ ಸಾವನ್ನಪ್ಪಲು ಸಾಧ್ಯವಿಲ್ಲ. ಬಾಹ್ಯ ದಬ್ಬಕೆ ಇಲ್ಲದೇ ಯಾರೂ ಬಾತ್ ಟಾಬ್ ನಲ್ಲಿ ಮುಳುಗಲು ಆಗಲ್ಲ'' ಎಂದು ಡಾ ಉಮದತನ್ ಹೇಳಿದ್ದರಂತೆ.

    ಸಾಂದರ್ಭಿಕ ಪುರಾವೆ ತೋರಿಸಿದ್ದರು

    ಸಾಂದರ್ಭಿಕ ಪುರಾವೆ ತೋರಿಸಿದ್ದರು

    ''ಶ್ರೀದೇವಿ ಅವರ ಶವಪರೀಕ್ಷೆ ನಡೆಸಿದ್ದ ವಿಧಿವಿಜ್ಞಾನ ತಜ್ಞ ಡಾ ಉಮದತನ್ ಅವರು ಹಲವು ಸಾಂದರ್ಭಿಕ ಪುರಾವೆ ತೋರಿಸಿ, ಇದು ಆಕಸ್ಮಿಕ ಸಾವಲ್ಲ, ಇದು ಕೊಲೆ ಎಂದು ಹೇಳುತ್ತಿದ್ದರು. ಶ್ರೀದೇವಿ ಕೊಲೆಯಾದ ಜಾಗದ ಸುತ್ತಮುತ್ತಲಿನ ಸಾಕ್ಷಿಗಳ ಬಗ್ಗೆಯೂ ಮಾತನಾಡಿದ್ದರು'' ಎಂದು ರಿಷಿರಾಜ್ ಸಿಂಗ್ ಹೇಳಿದ್ದಾರೆ.

    ಬಿಗ್ ಬ್ರೇಕಿಂಗ್: ಶ್ರೀದೇವಿ ಸಾವಿನ ಹಿಂದೆ ದಾವೂದ್ ಇಬ್ರಾಹಿಂ ಕೈವಾಡ.!ಬಿಗ್ ಬ್ರೇಕಿಂಗ್: ಶ್ರೀದೇವಿ ಸಾವಿನ ಹಿಂದೆ ದಾವೂದ್ ಇಬ್ರಾಹಿಂ ಕೈವಾಡ.!

    ಹಲವರು ತನಿಖೆ ನಡೆಸಲು ಪ್ರಯತ್ನ ಮಾಡಿದ್ರು.!

    ಹಲವರು ತನಿಖೆ ನಡೆಸಲು ಪ್ರಯತ್ನ ಮಾಡಿದ್ರು.!

    ಶ್ರೀದೇವಿ ಸಾವಿನ ಬಗ್ಗೆ ಈಗಾಗಲೇ ಅನೇಕ ಐಪಿಎಸ್ ಮಟ್ಟದ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಪ್ರಮುಖವಾಗಿ ದೆಹಲಿ ನಿವೃತ್ತಿ ಎಸಿಪಿ ವೇದ್ ಭೂಷಣ್ ಶರ್ಮಾ ಇದು ಕೊಲೆ ಎಂದಿದ್ದರು. ಭೂಷಣ್ ಶರ್ಮಾ ಅವರದ್ದು ಖಾಸಗಿ ತನಿಖೆ ಸಂಸ್ಥೆ ಇದೆ. ಈ ಮೂಲಕ ಶ್ರೀದೇವಿ ಸಾವನ್ನ ಭೇದಿಸಲು ಮುಂದಾಗಿದ್ದರು. ಆದ್ರೆ, ದುಬೈನ ಹೋಟೆಲ್ ಸಿಬ್ಬಂಧಿ ಶ್ರೀದೇವಿ ತಂಗಿದ್ದ ಹೋಟೆಲ್ ರೂಂ ಪ್ರವೇಶಿಸಲು ಅವಕಾಶ ಮಾಡಿಕೊಡಲಿಲ್ಲವಂತೆ. ಇದೆಲ್ಲ ಗಮನಿಸಿದಾಗ ಈ ಸಾವಿನ ಸುತ್ತಾ ಅನುಮಾನಗಳು ಹೆಚ್ಚಾಗುತ್ತೆ.

    ಶ್ರೀದೇವಿ ಸಾವಿಗೆ ಟ್ವಿಸ್ಟ್: ಪ್ಯ್ಲಾನ್ ಮಾಡಿ ಕೊಲ್ಲಲಾಗಿದೆಯಂತೆ.! ಶ್ರೀದೇವಿ ಸಾವಿಗೆ ಟ್ವಿಸ್ಟ್: ಪ್ಯ್ಲಾನ್ ಮಾಡಿ ಕೊಲ್ಲಲಾಗಿದೆಯಂತೆ.!

    ನಿರಾಕರಿಸಿದ ಬೋನಿ ಕಪೂರ್

    ನಿರಾಕರಿಸಿದ ಬೋನಿ ಕಪೂರ್

    ಕೇರಳ ಡಿಜಿಪಿ ರಿಷಿರಾಜ್ ಸಿಂಗ್ ಅವರ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಶ್ರೀದೇವಿ ಪತಿ ಬೋನಿ ಕಪೂರ್, 'ಇದು ಸ್ಟುಪಿಡ್ ಹೇಳಿಕೆ, ಇಂತಹ ಹೇಳಿಕೆಗಳಿಗೆ ನಾನು ಉತ್ತರಿಸಲ್ಲ' ಎಂದು ಹೇಳುವ ಮೂಲಕ ಆರೋಪವನ್ನ ಅನುಮಾನದಿಂದ ನೋಡುವಂತೆ ಮಾಡಿದ್ದಾರೆ.

    English summary
    Kerala DGP Rishiraj Singh has claimed Sridevi death is not a accidental, its pre planned murder. she died on February 24, 2018, due to accidental drowning in a bathtub in Dubai.
    Saturday, July 13, 2019, 12:00
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X