ನಟಿ ಶ್ರೀದೇವಿಯ ನೆಚ್ಚಿನ ಸೀರೆ ಹರಾಜು: ಭಾರಿ ಮೊತ್ತಕ್ಕೆ ಸೇಲ್.!

ಬಾಲಿವುಡ್ ಎವರ್ ಗ್ರೀನ್ ನಟಿ ಶ್ರೀದೇವಿ ಈಗ ಬರಿ ನೆನಪು ಮಾತ್ರ. ಶ್ರೀದೇವಿ ನಿಧನರಾಗಿ ಒಂದು ವರ್ಷ ಕಳೆದಿದೆ. ಫೆಬ್ರವರಿ 24, 2018 ರಂದು ಶ್ರೀದೇವಿ ದುಬೈನಲ್ಲಿ ಅನುಮಾನಸ್ಪಾದವಾಗಿ ಸಾವನ್ನಪ್ಪಿದ್ದರು. ಶ್ರೀದೇವಿಯ ಅನಿರೀಕ್ಷಿತ ಆ ಸಾವು ಈಗಲೂ ಅವರ ಅಭಿಮಾನಿಗಳನ್ನ ಕಾಡ್ತಿದೆ.

ಮೊದಲ ವರ್ಷದ ಪುಣ್ಯ ಸ್ಮರಣಾರ್ಥವಾಗಿ ಶ್ರೀದೇವಿಯ ಅಚ್ಚುಮೆಚ್ಚಿನ ಸೀರೆಯನ್ನ ಹರಾಜು ಹಾಕಲಾಗಿತ್ತು. ಈ ಸೀರೆಯ ಮಾರಾಟದಿಂದ ಬಂದ ಹಣ್ಣವನ್ನ ಒಂದೊಳ್ಳೆ ಕೆಲಸಕ್ಕೆ ಬಳಸುವುದಾಗಿ ಶ್ರೀದೇವಿ ಕುಟುಂಬ ತಿಳಿಸಿದೆ.

ಶ್ರೀದೇವಿಯ ನೆಚ್ಚಿನ ಸೀರೆ ಹ್ಯಾಂಡಲೂಮ್ ಕೋಟಾ ಎಂಬ ಸೀರೆಯನ್ನ ಚೆನ್ನೈ ಮೂಲದ 'ಪರಿಸರ' ಆನ್ ಲೈನ್ ಕಂಪನಿಯೊಂದು ಹರಾಜಿಗೆ ಇಟ್ಟಿತ್ತು. ಮೂಲ ಬೆಲೆ 40 ಸಾವಿರವಿದ್ದ ಈ ಸೀರೆ ಅಂತಿಮವಾಗಿ 1.30 ಲಕ್ಷಕ್ಕೆ ಮಾರಾಟವಾಗಿದೆ ಎಂದು ತಿಳಿದುಬಂದಿದೆ.

Sridevi favourite saree auction

ಸೀರೆಯ ಮಾರಾಟದಿಂದ ಬಂದ ಹಣವನ್ನ ಕನ್ಫರ್ಮ್ ಇಂಡಿಯಾ ಫೌಂಡೇಶನ್ ಗೆ ನೀಡಲು ಬೋನಿ ಕಪೂರ್ ಮತ್ತು ಶ್ರೀದೇವಿ ಮಗಳು ಜಾಹ್ನವಿ ನಿರ್ಧರಿಸಿದ್ದು, ಅಂಗವಿಕಲ ಮಕ್ಕಳು, ಆರ್ಥಿಕವಾಗಿ ಹಿಂದುಳಿದವರು, ಮಹಿಳೆಯರಿಗೆ ಸಹಾಯ ಮಾಡಲಾಗುವುದಂತೆ.

More from Filmibeat

English summary
A handwoven Kota saree, one of Sridevi’s favourites, is on auction online ahead of her first death anniversary, which falls on Sunday. The bid started at Rs 40,000 a few days ago, is underway and had reached Rs 130,000.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X