'ಬಾಹುಬಲಿ' ನಿರ್ದೇಶಕನ ಮೇಲೆ ಶ್ರೀದೇವಿ ಅಸಮಾಧಾನ, ಕಾರಣ 'ಶಿವಗಾಮಿ' ಪಾತ್ರ

By Suneel

ಎಸ್.ಎಸ್.ರಾಜಮೌಳಿ ನಿರ್ದೇಶನದ 'ಬಾಹುಬಲಿ- ದಿ ಬಿಗಿನ್ನಿಂಗ್' ಮತ್ತು 'ಬಾಹುಬಲಿ-2' ಚಿತ್ರದಲ್ಲಿ 'ಶಿವಗಾಮಿ' ಪಾತ್ರ 'ಬಾಹುಬಲಿ' ಪ್ರಭಾಸ್ ಮತ್ತು 'ಬಲ್ಲಾಳದೇವ' ರಾಣಾ ದಗ್ಗುಬಾಟಿ ಪಾತ್ರಗಳಷ್ಟೆ ಪ್ರಮುಖವಾದದ್ದು. ಈ ಪಾತ್ರಕ್ಕೆ ರಮ್ಯಾ ಕೃಷ್ಣ ರವರಿಗೂ ಮೊದಲು ಬಾಲಿವುಡ್ ನಟಿ ಶ್ರೀದೇವಿ ಅವರನ್ನು ಅಪ್ರೋಚ್ ಮಾಡಲಾಗಿತ್ತಂತೆ. ಈ ಸುದ್ದಿ ಇತ್ತೀಚೆಗೆ ಹೊರಬಿದ್ದ ನಂತರ ಇಂತಹ ಪವರ್ ಫುಲ್ ಪಾತ್ರವನ್ನು ಶ್ರೀದೇವಿ ರಿಜೆಕ್ಟ್ ಮಾಡಿದ್ದೇಕೆ ಎಂದು ತಿಳಿಯಲು ಸಿನಿ ಪ್ರೇಕ್ಷಕರು ಕಾತುರರಾಗಿದ್ದಾರೆ.

ಈಗ ಕೊನೆಗೂ ಶ್ರೀದೇವಿ 'ಶಿವಗಾಮಿ' ಪಾತ್ರವನ್ನು ರಿಜೆಕ್ಟ್ ಮಾಡಿದ್ದೇಕೆ ಮತ್ತು ಈ ಹಿನ್ನೆಲೆಯಲ್ಲಿ ಎಸ್.ಎಸ್.ರಾಜಮೌಳಿ ಹೇಳಿಕೆ ಸಾಮಾಜಿಕ ಜಾಲಾತಾಣದಲ್ಲಿ ತಪ್ಪಾಗಿ ಹರಡುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿ ಮಾತನಾಡಿದ್ದಾರೆ. ಮುಂದೆ ಓದಿರಿ..

ಕೊನೆಗೂ ಬಾಯಿಬಿಟ್ಟ ಶ್ರೀದೇವಿ

ಕೊನೆಗೂ ಬಾಯಿಬಿಟ್ಟ ಶ್ರೀದೇವಿ

ಇತ್ತೀಚೆಗೆ ತೆಲುಗು ಸುದ್ದಿ ವಾಹಿನಿಯೊಂದರ ಜೊತೆಗಿನ ಸಂದರ್ಶನದಲ್ಲಿ ತಮ್ಮ ಬಗೆಗಿನ ಮೊದಲ ಕಾಂಟ್ರೊವರ್ಸಿ ಬಗ್ಗೆ ಮಾತನಾಡಿರುವ ಶ್ರೀದೇವಿ, 'ಬಾಹುಬಲಿ' ಸಿನಿಮಾ ರಿಜೆಕ್ಟ್ ಮಾಡಿದ್ದು ಏಕೆ ಎಂಬುದಕ್ಕೆ ಉತ್ತರಿಸಿ, "ನನ್ನ ವೃತ್ತಿ ಜೀವನದಲ್ಲಿ ಹಲವು ಸಿನಿಮಾಗಳಲ್ಲಿ ಹಲವು ಕಾರಣಗಳಿಂದ ನಟಿಸಿಲ್ಲ" ಎಂದಿದ್ದಾರೆ. ಆದರೆ 'ಬಾಹುಬಲಿ'ಯಲ್ಲಿನ ಶಿವಗಾಮಿ ಪಾತ್ರ ರಿಜೆಕ್ಟ್ ಮಾಡಿದ್ದು ಏಕೆ ಎಂಬುದಕ್ಕೆ ಸ್ಪಷ್ಟ ಉತ್ತರ ನೀಡಿಲ್ಲ.

ಗಾಳಿಸುದ್ದಿಯನ್ನು ಅಲ್ಲಗಳೆದ ಶ್ರೀದೇವಿ

ಗಾಳಿಸುದ್ದಿಯನ್ನು ಅಲ್ಲಗಳೆದ ಶ್ರೀದೇವಿ

"ಈ ಚಿತ್ರದಲ್ಲಿ ಅಭಿನಯಿಸಲು ನಾನು 10 ಕೋಟಿ ಸಂಭಾವನೆ, ಒಂದು ಹೋಟೆಲ್ ನಲ್ಲಿನ ಸಂಪೂರ್ಣ ಫ್ಲೋರ್ ಮತ್ತು ಹತ್ತು ವಿಮಾನ ಟಿಕೆಟ್ ಗಳನ್ನು ಡಿಮ್ಯಾಂಡ್ ಮಾಡಿದೆ ಎಂದು ಗಾಳಿಸುದ್ದಿ ಹರಡಿದೆ. ಆದರೆ ಇದೆಲ್ಲಾ ರೂಮರ್ಸ್. ಬಹಳ ದಿನದಿಂದ ಈ ಬಗ್ಗೆ ಮಾತನಾಡದೇ ಸುಮ್ಮನಿದ್ದೆ. ಇಂದು ಈ ಬಗ್ಗೆ ಹೇಳುತ್ತಿದ್ದೇನೆ. ಕಾರಣ ಆ ಚಿತ್ರಗಳು ಬಿಡುಗಡೆ ಆಗಿ ಸಕ್ಸಸ್ ಸಹ ಆಗಿವೆ. ಆದರೂ ಜನರು ಇಂದಿಗೂ ಈ ಬಗ್ಗೆ ಮಾತನಾಡುತ್ತಿದ್ದರು. 50 ವರ್ಷಗಳಲ್ಲಿ 300 ಕ್ಕಿಂತ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಆದರೆ ನಾನು ಈ ಡಿಮ್ಯಾಂಡ್ ಮಾಡಿಲ್ಲ" ಎಂದಿದ್ದಾರೆ ಶ್ರೀದೇವಿ.

ರಾಜಮೌಳಿ ಸಂದರ್ಶನ ನೋಡಿ ಬೇಸರ

ರಾಜಮೌಳಿ ಸಂದರ್ಶನ ನೋಡಿ ಬೇಸರ

"ರಾಜಮೌಳಿಗೆ 'ಬಾಹುಬಲಿ'ನಿರ್ಮಾಪಕರು ನಾನು ಹೀಗೆಲ್ಲಾ ಡಿಮ್ಯಾಂಡ್ ಮಾಡಿದ್ದೇನೆ ಎಂದು ತಪ್ಪಾಗಿ ಹೇಳಿದರೋ ಅಥವಾ ಮಿಸ್ ಕಂಮ್ಯೂನಿಕೇಷನ್ ಆಗಿದೆಯೋ ಗೊತ್ತಿಲ್ಲಾ. ಇದರ ಬಗ್ಗೆ ಸಾರ್ವಜನಿಕವಾಗಿ ಮಾತನಾಡಲು ಆಗುವುದಿಲ್ಲ. ಆದರೆ ನಾನು ರಿಜೆಕ್ಟ್ ಮಾಡಿರುವುದಕ್ಕೆ ಸಂದರ್ಶನದಲ್ಲಿ ರಾಜಮೌಳಿ ಹೇಳಿದ ಕಾರಣ ನೋಡಿ ಶಾಕ್ ಆಯ್ತು" ಎಂದು ತೆಲುಗು ಸುದ್ದಿ ವಾಹಿನಿಯೊಂದರ ಸಂದರ್ಶನದಲ್ಲಿ ಹೇಳಿದ್ದಾರೆ.

ರಾಜಮೌಳಿ ಹೇಳಿಕೆಯಿಂದ ದುಃಖಿತರಾದ ಶ್ರೀದೇವಿ

ರಾಜಮೌಳಿ ಹೇಳಿಕೆಯಿಂದ ದುಃಖಿತರಾದ ಶ್ರೀದೇವಿ

"ನಾನು ರಾಜಮೌಳಿ ಬಗ್ಗೆ ಕೇಳಿದ್ದೇನೆ. ಅವರು ತುಂಬಾ ಶಾಂತ ಸ್ವಭಾವದವರು ಮತ್ತು ಒಳ್ಳೆಯ ವ್ಯಕ್ತಿ. ಅವರ 'ಈಗ' ಸಿನಿಮಾ ನೋಡಿದ್ದು, ಅವರೊಂದಿಗೆ ವರ್ಕ್ ಮಾಡಲು ಖುಷಿ ಆಗುತ್ತದೆ. ಆದರೆ ಒಬ್ಬ ಗ್ರೇಟ್ ಟೆಕ್ನಿಷಿಯನ್ ಆಗಿ ಅವರು 'ಶಿವಗಾಮಿ' ಪಾತ್ರದ ಆಯ್ಕೆಯ ಹಿನ್ನೆಲೆಯಲ್ಲಿ ನನ್ನ ಬಗ್ಗೆ ಮಾತನಾಡಿದ್ದು ಬೇಸರ ತರಿಸಿದ್ದು, ತುಂಬಾ ದುಃಖವಾಗಿದೆ" -ಶ್ರೀದೇವಿ.

More from Filmibeat

English summary
Ever since the news about Sridevi rejecting Shivagami's role in Baahubali 2 surfaced on the social media, audiences were keen to know what made Sridevi reject such a powerful role!. Finally, Sridevi revealed why she rejected Baahubali 2.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X