»   » ಐವತ್ತರಲ್ಲಿ ತುಂಡು ಚಡ್ಡಿ ತೊಟ್ಟ ಅಭಿನೇತ್ರಿ ಶ್ರೀದೇವಿ

ಐವತ್ತರಲ್ಲಿ ತುಂಡು ಚಡ್ಡಿ ತೊಟ್ಟ ಅಭಿನೇತ್ರಿ ಶ್ರೀದೇವಿ

By: ಉದಯರವಿ
Subscribe to Filmibeat Kannada

ಈ ಸಿನಿಮಾ ತಾರೆಗಳಿಗೆ ಐವತ್ತಾದರೂ ಇನ್ನೂ ಇಪ್ಪರ ಹರೆಯದಂತೆ ಕಂಗೊಳಿಸುತ್ತಾರೆ. ಅದಕ್ಕೇ ಅಲ್ಲವೇ ಹೇಳೋದು ಸಿನಿಮಾ ತಾರೆಗಳಿಗೆ ವಯಸ್ಸೇ ಆಗುವುದಿಲ್ಲ ಎಂದು. ಬಾಲಿವುಡ್ ಚಿತ್ರರಂಗದ ಅಭಿನೇತ್ರಿ ಶ್ರೀದೇವಿ ಅವರಿಗೆ ಇಬ್ಬರು ಹೆಣ್ಣು ಮಕ್ಕಳು. ಇನ್ನೇನು ಅವರು ಬೆಳ್ಳಿಪರದೆಗೆ ಪರಿಚಯವಾಗುವುದರಲ್ಲಿದ್ದಾರೆ.

ಆದರೆ ಶ್ರೀದೇವಿ ಅವರು ಈ ಪ್ರಾಯದಲ್ಲೂ ತುಂಡುಡುಗೆ ತೊಟ್ಟು ಚಿತ್ರರಸಿಕರನ್ನು ತಮ್ಮ ಹಾವಭಾವಗಳಲ್ಲಿ ಮತ್ತೊಮ್ಮೆ ಕೆಣಕಿದ್ದಾರೆ. ವೋಗ್ ಇಂಡಿಯಾ ನಿಯತಕಾಲಿಕೆಯಲ್ಲಿ ಅವರು ವಿವಿಧ ಭಾವಭಂಗಿಗಳು ಎಲ್ಲರ ಕಣ್ಮನ ಸೆಳೆಯುತ್ತಿವೆ. 'Sridevi in Modern dresses'; The Age(Less) Issue ಎಂಬುದು ಈ ಬಾರಿಯ ಸಂಚಿಕೆ ವಿಶೇಷ.

ಇತ್ತೀಚೆಗೆ ಮಕಾವುನಲ್ಲಿ ನಡೆದ 14ನೇ IIFA 2013ರಲ್ಲೂ ಶ್ರೀದೇವಿ ಮಿಂಚಿದ್ದರು. ಈಗ 'ವೋಗ್' ನಿಯತಕಾಲಿಕೆಯಲ್ಲಿ ಶಾರ್ಟ್ಸ್ ನಲ್ಲಿ ಕಾಣಿಸಿಕೊಂಡು ಎಲ್ಲರ ಗಮನಸೆಳೆದಿದ್ದಾರೆ. ಅವರ ಭಾವಭಂಗಿಗಳಿಗೆ ಇಂದಿನ ಕಾಲದ ನಟಿಯರು ನಾಚಿ ನೀರಾಗುತ್ತಾರೆ.

ಒಂದಾನೊಂದು ಕಾಲದಲ್ಲಿ ಅಭಿಮಾನಿಗಳನ್ನು ತಮ್ಮ ಮೋಹಕ ಚೆಲುವಿನಿಂದ ಮಂತ್ರಮುಗ್ಧರಾಗಿಸಿದ್ದ ತಾರೆ ಶ್ರೀದೇವಿ. ಈಗಲೂ ಅವರು ಬಣ್ಣ ಹಚ್ಚಿದರೆ ಎಂಬತ್ತು ಎಂಬತ್ತರ ದಶಕದ ಕಲಾರಸಿಕರು ಮತ್ತೊಮ್ಮೆ ಮುಗಿಬಿದ್ದು ನೋಡುತ್ತಾರೆ. ವೋಗ್ ಸಂಚಿಕೆಯಲ್ಲಿನ ಶ್ರೀದೇವಿ ಚಿತ್ರಗಳು ಸ್ಲೈಡ್ ಗಳಲ್ಲಿ...

ಶಾರ್ಟ್ಸ್ ಮತ್ತು ಹೈ ಹೀಲ್ ನಲ್ಲಿ ಶ್ರೀದೇವಿ

ಶ್ರೀದೇವಿ ಶಾರ್ಟ್ಸ್ ತೊಟ್ಟು ಹೈ ಹೀಲ್ ಪಾದರಕ್ಷೆ ಧರಿಸಿದರೆ ಇಂದಿನ ಕಾಲದ ನಟಿಯರೂ ನಾಚುತ್ತಾರೆ.

ಶ್ರೀದೇವಿ ಅವರೇನಾದರೂ ಗಣಿತದ ಟೀಚರಾ?

ಈ ಫೋಟೋ ನೋಡಿದರೆ ಶ್ರೀದೇವಿ ಅವರೇನಾದರೂ ಗಣಿತದ ಟೀಚರ್ ಇರಹುದೇ? ಎಂಬ ಪ್ರಶ್ನೆ ಮೂಡುತ್ತದೆ.

ಈ ಹಿಂದೊಮ್ಮೆ ಶ್ರೀದೇವಿ ಪುತ್ರಿ ಶಾರ್ಟ್ಸ್ ನಲ್ಲಿ ದರ್ಶನ

ಈ ಹಿಂದೊಮ್ಮೆ ಶ್ರೀದೇವಿ ಅವರ ಪುತ್ರಿ ಜಾಹ್ನವಿ ಅವರು ತುಂಡುಡುಗೆಯಲ್ಲಿ ದರ್ಶನ ಭಾಗ್ಯ ನೀಡಿದ್ದರು. ಬಹುಶಃ ತಮ್ಮ ಮಗಳನ್ನು ಸಿನಿಮಾ ರಂಗಕ್ಕೆ ಪರಿಚಯಿಸುವ ಉದ್ದೇಶದಿಂದ ಶ್ರೀದೇವಿ ಹೀಗೆ ಮಾಡಿದ್ದಾರೆ ಎಂಬ ಮಾತುಗಳು ಆಗ ಧಾರಾವಾಳಿ ಕೇಳಿಬಂದಿದ್ದವು.

ಬೆಳದಿಂಗಳ ತಾರೆ ಶ್ರೀದೇವಿ

ಚಾಂದನಿ, ಮಿ.ಇಂಡಿಯಾ ಮತ್ತು ಛಾಲ್ ಬಾಜ್ ಚಿತ್ರಗಳು ಇಂದಿಗೂ ಶ್ರೀದೇವಿಯನ್ನು ಆರಾಧಿಸುವ ಅಭಿಮಾನಿಗಳನ್ನು ಕಾಡುತ್ತಲೇ ಇವೆ.

ವರ್ಮಾ ಕೂಡ ಶ್ರೀದೇವಿ ಅವರ ಮಹಾನ್ ಫ್ಯಾನ್

ಶ್ರೀದೇವಿ ಅವರನ್ನು ಆರಾಧಿಸುವ ಬಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು, ನಾನು ಶ್ರೀದೇವಿ ಮಹಾ ಫ್ಯಾನ್. ಅವರ ಚಿತ್ರವನ್ನು ಎಲ್ಲರಂತೆ ಕ್ಯೂನಲ್ಲಿ ನಿಂತು ಟಿಕೆಟ್ ತೆಗೆದುಕೊಂಡೇ ನೋಡಲಿದ್ದೇನೆ" ಎಂದಿದ್ದರು.

ಶ್ರೀದೇವಿ ಕೋಹಿನೂರ್ ಡೈಮಂಡ್ ಇದ್ದಂತೆ

ಇಂಗ್ಲಿಷ್ ವಿಂಗ್ಲಿಷ್ ಅಗಬಹುದು, ಅಮೆರಿಕಾ ಗಿಮೆರಿಕಾ ಆಗಬಹುದು. ಇಂಡಿಯಾ ವಿಂಡಿಯಾ ಆಗಬಹುದು... ಆದ್ರೆ ಶ್ರೀದೇವಿ ವ್ರೀದೇವಿ ಆಗೋಕೆ ಸಾಧ್ಯವಿಲ್ಲ. ಜಗತ್ತಿನಲ್ಲಿ ಬೇಕಾದಷ್ಟು ಕೊಹಿನೂರ್ ವಜ್ರಗಳಿರಬಹುದು, ಆದ್ರೆ ನಮಗಿರೋದು ಒನ್ ಅಂಡ್ ಓನ್ಲಿ ಶ್ರೀದೇವಿ!" ಎಂದಿದ್ದರು. ವರ್ಮಾ.

English summary
Bollywood actress Sridevi on the cover of Vogue India Magazine August 2013. Sridevi has been roped in by the Vogue India to appear on the cover page of its latest edition, August 2013. The theme of this month’s cover issue is ‘Sridevi in Modern dresses’; The Age(Less) Issue.
Please Wait while comments are loading...