ಶ್ರೀದೇವಿ ಪುತ್ರಿಯ ಚೊಚ್ಚಲ ಚಿತ್ರದ ಪೋಸ್ಟರ್.! ಇದು ರೀಮೇಕ್ ಸಿನಿಮಾ.!
ಬಾಲಿವುಡ್ ಎವರ್ ಗ್ರೀನ್ ನಟಿ ಶ್ರೀದೇವಿ ಮಗಳ ಚೊಚ್ಚಲ ಸಿನಿಮಾ ಯಾವುದು ಎಂಬ ಕುತೂಹಲಕ್ಕೆ ಬ್ರೇಕ್ ಬಿದ್ದಿದ್ದು, ಮೊದಲ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ.
ಈ ಮೊದಲೇ ಹೇಳಿದಂತೆ ನಿರ್ಮಾಪಕ ಕರಣ್ ಜೋಹರ್, ಶ್ರೀದೇವಿ ಪುತ್ರಿಯನ್ನ ಬಾಲಿವುಡ್ ಸಿನಿ ಲೋಕಕ್ಕೆ ಪರಿಚಯಿಸುತ್ತಿದ್ದು, ಈ ಚಿತ್ರಕ್ಕೆ 'ದಡಕ್' ಎಂದು ಹೆಸರಿಡಲಾಗಿದೆ.

ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಗೆ ಶಾಹೀದ್ ಕಪೂರ್ ಸಹೋದರ ಇಶಾನ್ ಖತ್ತಾರ್ ನಾಯಕನಾಗಿ ಬಿಗ್ ಇಂಡಸ್ಟ್ರಿಗೆ ಎಂಟ್ರಿ ಕೊಡ್ತಿದ್ದಾರೆ.

ಶಶಾಂಕ್ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದು, ಜುಲೈ 18ಕ್ಕೆ ಸಿನಿಮಾ ರಿಲೀಸ್ ಮಾಡುವುದಾಗಿ ದಿನಾಂಕ ಕೂಡ ಘೋಷಣೆ ಮಾಡಲಾಗಿದೆ.
ಅಂದ್ಹಾಗೆ, 'ದಡಕ್' ಸಿನಿಮಾ ಮರಾಠಿಯ ಸೂಪರ್ ಹಿಟ್ ಸಿನಿಮಾ 'ಸೈರಾಟ್' ಚಿತ್ರದ ರೀಮೆಕ್. ಈ ಚಿತ್ರದಲ್ಲಿ ರಿಂಕು ರಾಜಗುರು ಮತ್ತು ಆಕಾಶ್ ತುಸಾರ್ ಅಭಿನಯಿಸಿದ್ದರು. ಇದೇ ಚಿತ್ರ ಕನ್ನಡದಲ್ಲಿ 'ಮನಸು ಮಲ್ಲಿಗೆ' ಎಂಬ ಹೆಸರಿನಲ್ಲಿ ರೀಮೇಕ್ ಆಗಿ ರಿಲೀಸ್ ಆಗಿತ್ತು.
More from Filmibeat
English summary
Karan Johar has revealed the first poster for the upcoming debut of Sridevi’s daughter Jhanvi Kapoor and Shahid Kapoor’s brother Ishaan Khattar Dhadak. ಶ್ರೀದೇವಿ ಪುತ್ರಿಯ ಚೊಚ್ಚಲ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ.


Click it and Unblock the Notifications











