ಮುಂಬೈ ನಿವಾಸ ತಲುಪಿದ ಶ್ರೀದೇವಿ ಪಾರ್ಥೀವ ಶರೀರ
ಕಡೆಗೂ ನಟಿ ಶ್ರೀದೇವಿ ಪಾರ್ಥೀವ ಶರೀರ ಭಾರತ ತಲುಪಿದೆ. ಇಹಲೋಕ ತ್ಯಜಿಸಿ ಮೂರು ದಿನಗಳು ಕಳೆದ ಬಳಿಕ, ಶ್ರೀದೇವಿ ಮೃತದೇಹ ಮುಂಬೈನಲ್ಲಿರುವ ಅವರ ನಿವಾಸ ತಲುಪಿದೆ.
ಸಂಬಂಧಿ ಮೋಹಿತ್ ಮಾರ್ವಾ ವಿವಾಹದಲ್ಲಿ ಪಾಲ್ಗೊಳ್ಳಲು ದುಬೈಗೆ ತೆರಳಿದ್ದ ಶ್ರೀದೇವಿ, ಅಲ್ಲೇ ಕೊನೆಯುಸಿರೆಳೆದರು. ಬಾತ್ ಟಬ್ ನಲ್ಲಿ ಬಿದ್ದು, ನೀರಲ್ಲಿ ಮುಳುಗಿ ಶ್ರೀದೇವಿ ಸಾವನ್ನಿಪ್ಪಿದ್ದಾರೆ ಎಂದು ಫೋರೆನ್ಸಿಕ್ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ದುಬೈನಲ್ಲಿ ವಿದೇಶಿ ಪ್ರಜೆ ಮೃತಪಟ್ಟಾಗ, ಅನುಸರಿಸಬೇಕಾದ ಎಲ್ಲ ಕಾನೂನು ಪ್ರಕ್ರಿಯೆಗಳು ಶ್ರೀದೇವಿ ಪ್ರಕರಣದಲ್ಲೂ ಅನುಸರಿಸಲಾಯಿತು. ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡ ಮೇಲೆ, ದುಬೈ ಪೊಲೀಸರ ತನಿಖೆ ಮುಗಿದ್ಮೇಲೆ, ಶ್ರೀದೇವಿ ಸಾವಿನ ಪ್ರಕರಣವನ್ನು ದುಬೈ ಪಬ್ಲಿಕ್ ಪ್ರಾಸಿಕ್ಯೂಷನ್ ಕ್ಲೋಸ್ ಮಾಡಿ, ಕುಟುಂಬಕ್ಕೆ ಪಾರ್ಥೀವ ಶರೀರವನ್ನು ಹಸ್ತಾಂತರಿಸಿತು.
ಪಾರ್ಥೀವ ಶರೀರವನ್ನು ಸಂರಕ್ಷಿಸುವ ಪ್ರಕ್ರಿಯೆ (ಎಂಬ್ಲೇಮಿಂಗ್) ಮುಗಿದ ಬಳಿಕ ದುಬೈ ವಿಮಾನ ನಿಲ್ದಾಣದಿಂದ ಭಾರತೀಯ ಕಾಲಮಾನ 7 ಗಂಟೆ ಆಸುಪಾಸಿಗೆ ಪ್ರೈವೇಟ್ ಜೆಟ್ ಮೂಲಕ ಮುಂಬೈಗೆ ಹೊರಟ ಶ್ರೀದೇವಿ ಕುಟುಂಬ ಭಾರತೀಯ ಕಾಲಮಾನ 9.30 ಆಸುಪಾಸಿಗೆ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು.

ಶ್ರೀದೇವಿ ಪಾರ್ಥೀವ ಶರೀರದೊಂದಿಗೆ ಪತಿ ಬೋನಿ ಕಪೂರ್, ಅರ್ಜುನ್ ಕಪೂರ್ ಹಾಗೂ ಸಂಜಯ್ ಕಪೂರ್ ಇದ್ದರು. ಮುಂಬೈ ವಿಮಾನ ನಿಲ್ದಾಣದಲ್ಲಿ ಶ್ರೀದೇವಿ ಪುತ್ರಿಯರಾದ ಜಾಹ್ನವಿ ಕಪೂರ್, ಖುಷಿ ಕಪೂರ್, ಸಂಬಂಧಿ ಅನಿಲ್ ಕಪೂರ್, ಸೋನಂ ಕಪೂರ್, ಅನಿಲ್ ಅಂಬಾನಿ ಸೇರಿದಂತೆ ಕಪೂರ್ ಕುಟುಂಬದ ಸದಸ್ಯರು ಹಾಜರಿದ್ದರು.
ಏರ್ ಪೋರ್ಟ್ ನಿಂದ ಆಂಬ್ಯುಲೆನ್ಸ್ ಮೂಲಕ ಶ್ರೀದೇವಿ ಪಾರ್ಥೀವ ಶರೀರವನ್ನ ಗ್ರೀನ್ ಎಕರ್ಸ್ ಹೋಮ್ (ಲೋಕಂಡ್ವಾಲಾ)ನಲ್ಲಿರುವ ತಮ್ಮ ನಿವಾಸಕ್ಕೆ ರವಾನಿಸಲಾಯಿತು. ನಾಳೆ ಬೆಳಗ್ಗೆ 9.30 ರಿಂದ ಸೆಲೆಬ್ರೇಷನ್ಸ್ ಕ್ಲಬ್ ನಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿದ್ದು, ಮಧ್ಯಾಹ್ನ 4.00 ರ ಸುಮಾರಿಗೆ ವಿಲ್ಲೆ ಪಾರ್ಲೆಯ ಚಿತಾಗಾರದಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ.


Click it and Unblock the Notifications











