ಮೋಹಕ ತಾರೆ ಶ್ರೀದೇವಿಗೆ ಜನ್ಮ ದಿನದ ಸಂಭ್ರಮ

By * ಜೇಮ್ಸ್ ಮಾರ್ಟಿನ್

ಈ ಸಿನಿಮಾ ತಾರೆಗಳಿಗೆ ಐವತ್ತಾದರೂ ಇನ್ನೂ ಇಪ್ಪತ್ತರ ಹರೆಯದಂತೆ ಕಂಗೊಳಿಸುತ್ತಾರೆ. ಅದಕ್ಕೇ ಅಲ್ಲವೇ ಹೇಳೋದು ಸಿನಿಮಾ ತಾರೆಗಳಿಗೆ ವಯಸ್ಸೇ ಆಗುವುದಿಲ್ಲ ಎಂದು. ದಕ್ಷಿಣ ಭಾರತದಲ್ಲಿ ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದ ಶ್ರೀದೇವಿ ಬಾಲಿವುಡ್ ಅಂಗಳದಲ್ಲಿ ಬೆಳೆದ ರೀತಿ ಅನುಕರಣೀಯ.

ಒಂದಾನೊಂದು ಕಾಲದಲ್ಲಿ ಅಭಿಮಾನಿಗಳನ್ನು ತಮ್ಮ ಮೋಹಕ ಚೆಲುವಿನಿಂದ ಮಂತ್ರಮುಗ್ಧರಾಗಿಸಿದ್ದ ತಾರೆ ಶ್ರೀದೇವಿ. ಈಗಲೂ ಅವರು ಬಣ್ಣ ಹಚ್ಚಿದರೆ ಎಂಬತ್ತು ಎಂಬತ್ತರ ದಶಕದ ಕಲಾರಸಿಕರು ಮತ್ತೊಮ್ಮೆ ಮುಗಿಬಿದ್ದು ನೋಡುತ್ತಾರೆ.

ಬಾಲ ಮುರುಗನ ಪಾತ್ರಧಾರಿಯಾಗಿ ಬಣ್ಣ ಹಚ್ಚಿದಾಗ ಶ್ರೀದೇವಿಗಿನ್ನೂ ನಾಲ್ಕರ ಪ್ರಾಯ. ನಂತರ ಸಾಲು ಸಾಲು ಚಿತ್ರಗಳಲ್ಲಿ ಕಾಣಿಸಿಕೊಂಡ ಶ್ರೀದೇವಿ ಬಾಲಿವುಡ್ ಗೆ ಕಾಲಿಟ್ಟಿದ್ದು 1975ರ ಜೂಲಿ ಚಿತ್ರದ ಮೂಲಕ. [ಚಿಕ್ಕಿ ಶ್ರೀದೇವಿ ಬಗ್ಗೆ ಅರ್ಜುನ ಉವಾಚ]

ತಮಿಳಿನಲ್ಲಿ ಮೂನ್ಡ್ರು ಮುಡಿಚ್ಚು ಚಿತ್ರದಲ್ಲಿ ನಟಿಸಿದರೂ ಶ್ರೀದೇವಿ ಪ್ರತಿಭೆ ಅನಾವರಣಗೊಂಡಿದ್ದು 16 ವಯಾಧಿನಿಲೆ(1977) ನಂತರ ಸಿಗಪ್ಪು ರೋಜಕ್ಕಲ್, ಮೀನ್ಡುಂ ಕೋಕಿಲ, ಮೂನ್ ಡ್ರಾಂ ಪಿರೈ, ವರುಮಾಯಿನ್ ನಿರಮ್ ಸಿವಪ್ಪು, ಪ್ರೇಮಾಭಿಷೇಕಂ, ಆಖರಿ ಪೋರಾಟಂ, ಜಗದೇಕ ವೀರುಡು ಅತಿಲೋಕ ಸುಂದರಿ, ಕ್ಷಣ ಕ್ಷಣಂ ತನಕ ದಕ್ಷಿಣ ಭಾರತದಲ್ಲಿ ಅಗ್ರ ನಾಯಕಿಯಾಗಿ ಮೆರೆದರು.

ಕಮಲ್ ಹಾಸನ್ ಹಾಗೂ ಶ್ರೀದೇವಿ ಜೋಡಿ ಚಿತ್ರದಲ್ಲಿ ಸೂಪರ್ ಸ್ಟಾರ್ ರಜನಿ ಕಾಂತ್ ವಿಲನ್ ರೋಲ್ ಮಾಡಿದ್ದರೆ ಸಾಕು ಜನ ಮುಗಿ ಬಿದ್ದು ಚಿತ್ರಮಂದಿರಕ್ಕೆ ಬರುತ್ತಿದ್ದರು. ಶ್ರೀದೇವಿ ಚಿತ್ರ ಹಿಟ್ ಆಗಿದ್ದು 'ಜಂಪಿಂಗ್ ಜಾಕ್' ಜಿತೇಂದ್ರ ಜೋಡಿಯ ಹಿಮ್ಮತ್ ವಾಲ ಚಿತ್ರದ ಮೂಲಕ. ಮುಂದೆ ಹಿಂದಿ ಚಿತ್ರರಂಗ ಆಳಿದ್ದು ಈಗ ಇತಿಹಾಸ. ಇಂಗ್ಲೀಷ್ ವಿಂಗ್ಲೀಷ್ ಮೂಲಕ ಮತ್ತೆ ಬಣ್ಣದ ಲೋಕಕ್ಕೆ ಮರಳಿದ ಶ್ರೀದೇವಿ ಈಗ ಮತ್ತೊಮೆ ಕಮಲ್ ಜೊತೆ ನಟಿಸುವ ಸಾಧ್ಯತೆಯಿದೆಯಂತೆ.

ಮೊದಲ ಮಹಿಳಾ ಸ್ಟಾರ್

ಮೊದಲ ಮಹಿಳಾ ಸ್ಟಾರ್

ವಕ್ತ್ ಕಿ ಅವಾಜ್, ಚಾಂದಿನಿ, ಸದ್ಮಾ, ನಗೀನಾ, ಚಾಲ್ ಬಾಜ್, ಲಮ್ಹೆ, ಖುದಾ ಗವಾ, ಗುಮ್ರಾ, ಲಾಡ್ಲಾ, ಜುದಾಯಿಮುಂತಾದ ಚಿತ್ರಗಳು ಶ್ರೀದೇವಿಗೆ ಹೆಸರು ತಂದು ಕೊಟ್ಟಿತು. 2012ರಲ್ಲಿ 15 ವರ್ಷಗಳ ಅಂತರದ ನಂತರ ಮತ್ತೆ ಬಣ್ಣ ಹಚ್ಚಿದ ಶ್ರೀದೇವಿ ಇಂಗ್ಲೀಷ್ ವಿಂಗ್ಲೀಷ್ ಚಿತ್ರದಲ್ಲಿ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡು ಯಶಸ್ವಿಯಾದರು. ಸಿಎನ್ ಎನ್ ಐಬಿಎನ್ ನ ಭಾರತದ ಶ್ರೇಷ್ಠ 100 ನಟಿಯರ ಪಟ್ಟಿಯಲ್ಲಿ ಶ್ರೀದೇವಿ ಕಾಣಿಸಿಕೊಂಡಿದ್ದಾರೆ.

ಶ್ರೀದೇವಿಗೆ ರೇಖಾ ವಾಯ್ಸ್

ಶ್ರೀದೇವಿಗೆ ರೇಖಾ ವಾಯ್ಸ್

ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟಾಗ ಶ್ರೀದೇವಿಗೆ ಹಿಂದಿ ಡಬ್ ಮಾಡುವಷ್ಟು ಭಾಷೆ ಮೇಲೆ ಹಿಡಿತವಿರಲಿಲ್ಲ. ಹೀಗಾಗಿ ನಟಿ ನಾಜ್ ಅವರು ಕೆಲಕಾಲ ವಾಯ್ಸ್ ಡಬ್ ಮಾಡುತ್ತಿದ್ದರು. ರೇಖಾ ಅವರು ಆಖ್ರೀ ರಾಸ್ತಾ ಚಿತ್ರದಲ್ಲಿ ಶ್ರೀದೇವಿಗೆ ದನಿ ದಾನ ಮಾಡಿದ್ದರು. ಚಾಂದಿನಿ ಚಿತ್ರದಲ್ಲಿ ವಾಯ್ ಡಬ್ ಮಾಡಿದ ಶ್ರೀದೇವಿ, ಶೀರ್ಷಿಕೆ ಗೀತೆಯನ್ನು ಹಾಡಿದರು. ಸದ್ಮಾ ಚಿತ್ರದಲ್ಲಿ ಕಮಲ್ ಜತೆ ಕೂಡಾ ಹಿನ್ನೆಲೆ ಗಾಯನ ಮಾಡಿದ್ದರು.

ಫ್ಯಾಷನ್ ದಿವಾ ಶ್ರೀದೇವಿ ಅಯ್ಯಪ್ಪನ್

ಫ್ಯಾಷನ್ ದಿವಾ ಶ್ರೀದೇವಿ ಅಯ್ಯಪ್ಪನ್

'ಶ್ರೀದೇವಿ ನನ್ನ ಹೀರೋ ಆಕೆ ನೋಡಿ ನನ್ನ ಸ್ಟೈಲ್ ಬದಲಾಯಿಸಿಕೊಂಡಿದ್ದೇನೆ' ಎಂದು ಕರೀನಾ ಕಪೂರ್ ಹೇಳಿದ್ದರು. ಶ್ರೀದೇವಿ ಬಾಲಿವುಡ್ ಗೆ ಕಾಲಿಟ್ಟ ಮೇಲೆ ಸಂಪೂರ್ಣವಾಗಿ ತಮ್ಮ ಉಡುಗೆ ತೊಡುಗೆಗಳ ಶೈಲಿಯನ್ನು ಬದಲಾಯಿಸಿಕೊಂಡರು. 2012ರಲ್ಲಿ ಲಾಕ್ಮೆ ಫ್ಯಾಷನ್ ವೀಕ್ಸ್ ನಲ್ಲಿ ಬೂದು ಬಣ್ನದ ಶಾರ್ಟ್ ಹಾಕಿಕೊಂಡು ಬಂದು ದಿಟ್ಟತನ ಮೆರೆದರು.

ಅವರ ಡ್ರೆಸ್ಸಿಂಗ್ ಸೆನ್ಸ್ ಬಗ್ಗೆ ಮೆಚ್ಚುಗೆ

ಅವರ ಡ್ರೆಸ್ಸಿಂಗ್ ಸೆನ್ಸ್ ಬಗ್ಗೆ ಮೆಚ್ಚುಗೆ

ನೀತಾ ಲುಲ್ಲಾ, ಕ್ವಿನೀ ಧೋಡಿ, ಪ್ರಿಯಾ ಚಿಂತನ್ ಅವರ ವಸ್ತ್ರ ವಿನ್ಯಾಸಕ್ಕೆ ಶ್ರೀದೇವಿ ರೂಪದರ್ಶಿಯಾಗಿ ಕಾಣಿಸಿಕೊಂಡಿದ್ದಾರೆ. HDIL couture ವೀಕ್ ನಲ್ಲಿ Showstopper ಆಗಿದ್ದರು. ಈಗಲೂ ಅವರ ಡ್ರೆಸ್ಸಿಂಗ್ ಸೆನ್ಸ್ ಬಗ್ಗೆ ಬಾಲಿವುಡ್ ಹೆಮ್ಮೆಯಿಂದ ಹೊಗಳುತ್ತದೆ.

ಬಣ್ಣದ ಲೋಕಕ್ಕೆ ರೀ ಎಂಟ್ರಿ

ಬಣ್ಣದ ಲೋಕಕ್ಕೆ ರೀ ಎಂಟ್ರಿ

ಸುಮಾರು 15 ವರ್ಷಗಳ ನಂತರ ಚಿತ್ರರಂಗಕ್ಕೆ ಮರು ಪ್ರವೇಶ ಬಯಸಿದ ಶ್ರೀದೇವಿ ಅವರು ಇಂಗ್ಲೀಷ್ ತಿಳಿಯದ ಮಧ್ಯಮ ವರ್ಗದ ಗೃಹಿಣಿಯ ಪಾತ್ರದಲ್ಲಿ ಕಾಣಿಸಿಕೊಂಡರು. ಇಂಗ್ಲೀಷ್ ಭಾಷೆ ಕಲಿಯುವುದಷ್ಟೇ ಮುಖ್ಯವಲ್ಲ. ಭಾಷೆ ಜತೆಗೆ ಭಾವನೆ, ಕುಟುಂಬದ ಬಾಂಧವ್ಯಕ್ಕೂ ಬೆಲೆ ನೀಡಬೇಕು ಎಂದು ಚಿತ್ರ ಸಂದೇಶ ಸಾರಿತ್ತು. ಇಂಗ್ಲೀಷ್ ವಿಂಗ್ಲೀಷ್ ಚಿತ್ರ ಜನ ಮೆಚ್ಚುಗೆ ಗಳಿಸಿತು.

ಈಗ ದೃಶ್ಯ ಚಿತ್ರದ ತಮಿಳು ಆವೃತ್ತಿಯಲ್ಲಿ ಕಮಲ್ ಹಾಸನ್ ಜತೆ ನಟಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಕಮಲ್ ಹಾಗೂ ಶ್ರೀದೇವಿ ಯಶಸ್ವಿ ಜೋಡಿ ನೋಡಲು ಸಿನಿರಸಿಕರೂ ಕಾದಿದ್ದಾರೆ.

ಡ್ಯಾನ್ಸಿಂಗ್ ಸ್ಟಾರ್ ಶ್ರೀದೇವಿ

ಡ್ಯಾನ್ಸಿಂಗ್ ಸ್ಟಾರ್ ಶ್ರೀದೇವಿ

ಜಂಪಿಂಗ್ ಜಾಕ್ ಜಿತೇಂದ್ರ ಜೊತೆ ಭರ್ಜರಿಯಾಗಿ ಸ್ಟೆಪ್ಸ್ ಹಾಕುವ ಮೂಲಕ ಹಿಂದಿ ಚಿತ್ರರಂಗದಲ್ಲಿ ಡ್ಯಾನ್ಸಿಂಗ್ ಸ್ಟಾರ್ ಆಗಿ ಕೂಡಾ ಮೆರೆದ ಶ್ರೀದೇವಿ ಅವರ ನೃತ್ಯ ಪ್ರತಿಭೆಗೆ ಪ್ರಭುದೇವ ಕೂಡಾ ತಲೆದೂಗುತ್ತಾರೆ.

ಶ್ರೀದೇವಿ ಕುಟುಂಬದ ಚಿತ್ರ

ಶ್ರೀದೇವಿ ಕುಟುಂಬದ ಚಿತ್ರ

ಮಕ್ಕಳು ಹಾಗೂ ಪತಿ ಬೋನಿ ಕಪೂರ್ ಜೊತೆ ಶ್ರೀದೇವಿ

ಶ್ರೀದೇವಿ ಅವರ ಅಪರೂಪದ ಚಿತ್ರ

ಶ್ರೀದೇವಿ ಅವರ ಅಪರೂಪದ ಚಿತ್ರ

ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ಜೊತೆ ಇರುವ ಈ ಚಿತ್ರ ಶ್ರೀದೇವಿ ಅವರ ಮೆಚ್ಚಿನ ಚಿತ್ರಗಳಲ್ಲಿ ಒಂದೆನಿಸಿದೆ.

More from Filmibeat

English summary
Sridevi is one of the finest actresses in Bollywood. She is considered the first female superstar of Bollywood. It is the birthday of Sridevi. The South-Indian beauty, Sridevi turned 51 today (13th August, 2014).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X