For Quick Alerts
  ALLOW NOTIFICATIONS  
  For Daily Alerts

  ಶ್ರೀದೇವಿ ಅನಾರೋಗ್ಯದ ಗುಟ್ಟು ರಟ್ಟು ಮಾಡಿದ ಆತ್ಮೀಯ ಗೆಳತಿ

  By Harshitha
  |
  ಶ್ರೀದೇವಿ ಅನಾರೋಗ್ಯದ ಗುಟ್ಟು ರಟ್ಟು ಮಾಡಿದ ಆತ್ಮೀಯ ಗೆಳತಿ | Filmibeat Kannada

  ನಟಿ ಶ್ರೀದೇವಿ ಬಾರದ ಲೋಕಕ್ಕೆ ತೆರಳಿದ್ದಾರೆ. ದುಬೈ ಹೋಟೆಲ್ ನಲ್ಲಿನ ಬಾತ್ ಟಬ್ ಒಳಗೆ ಆಕಸ್ಮಿಕವಾಗಿ ಬಿದ್ದು, ನೀರಲ್ಲಿ ಮುಳುಗಿ ನಟಿ ಶ್ರೀದೇವಿ ಕಳೆದ ಶನಿವಾರ ಕೊನೆಯುಸಿರೆಳೆದರು.

  ಶ್ರೀದೇವಿ ರಕ್ತದಲ್ಲಿ ಆಲ್ಕೋಹಾಲ್ ಅಂಶ ಇರುವುದು ಪತ್ತೆ ಆಗಿದೆ. ಮದ್ಯ ಸೇವನೆ ಮಾಡಿದ್ದ ಶ್ರೀದೇವಿ, ಆಯಾತಪ್ಪಿ ಬಾತ್ ಟಬ್ ಒಳಗೆ ಬಿದ್ದಿರಬಹುದು ಅಂತೆಲ್ಲ ವರದಿ ಆಯ್ತು.

  ವಾಸ್ತವ ಏನಪ್ಪಾ ಅಂದ್ರೆ, ದುಬೈಗೆ ಶ್ರೀದೇವಿ ಹೊರಟಾಗ ಆಕೆಯ ಆರೋಗ್ಯ ಸರಿ ಇರಲಿಲ್ಲ. ಜ್ವರದಿಂದ ಬಳಲುತ್ತಿದ್ದ ಶ್ರೀದೇವಿ, ಮಾತ್ರೆಗಳನ್ನು ಸೇವಿಸುತ್ತಿದ್ದರು ಎಂದು ಶ್ರೀದೇವಿ ಆತ್ಮೀಯ ಗೆಳತಿ ಹೇಳಿದ್ದಾರೆ. ಮುಂದೆ ಓದಿರಿ...

  ಶ್ರೀದೇವಿ ಗೆಳತಿ ಪಿಂಕಿ ರೆಡ್ಡಿ

  ಶ್ರೀದೇವಿ ಗೆಳತಿ ಪಿಂಕಿ ರೆಡ್ಡಿ

  ಶ್ರೀದೇವಿ ಎಂಟು ವರ್ಷದ ಬಾಲಕಿಯಾಗಿದ್ದಾಗಿನಿಂದಲೂ ಪಿಂಕಿ ರೆಡ್ಡಿ ಪರಿಚಯ. ಇಬ್ಬರೂ ಕ್ಲೋಸ್ ಫ್ರೆಂಡ್ಸ್. ಶ್ರೀದೇವಿ ಜೀವನವನ್ನ ಹತ್ತಿರದಿಂದ ಬಲ್ಲವರ ಪೈಕಿ ಪಿಂಕಿ ರೆಡ್ಡಿ ಕೂಡ ಒಬ್ಬರು. ಶ್ರೀದೇವಿ ನಿಧನ ಸುದ್ದಿ ಕೇಳಿ, ''ನಾನು ನನ್ನ ಸಹೋದರಿಯನ್ನು ಕಳೆದುಕೊಂಡಿದ್ದೇನೆ'' ಎಂದು ಭಾವುಕರಾದರು ಪಿಂಕಿ ರೆಡ್ಡಿ.

  ಪಿಂಕಿ ರೆಡ್ಡಿ ತಂದೆ ಕೂಡ ನಿರ್ಮಾಪಕ

  ಪಿಂಕಿ ರೆಡ್ಡಿ ತಂದೆ ಕೂಡ ನಿರ್ಮಾಪಕ

  ಪಿಂಕಿ ರೆಡ್ಡಿ ತಂದೆ ಕೂಡ 'ಚಾಂದಿನಿ' ಚಿತ್ರದ ಸಹ ನಿರ್ಮಾಪಕರ ಪೈಕಿ ಒಬ್ಬರು. ಹೀಗಾಗಿ, ಶ್ರೀದೇವಿಯ ಸಿನಿ ಜರ್ನಿ ಹಾಗೂ ವೈಯುಕ್ತಿಕ ಬದುಕು ಪಿಂಕಿ ರೆಡ್ಡಿಗೆ ಚೆನ್ನಾಗಿ ಗೊತ್ತು.

  ಜ್ವರದಿಂದ ಬಳಲುತ್ತಿದ್ದ ಶ್ರೀದೇವಿ

  ಜ್ವರದಿಂದ ಬಳಲುತ್ತಿದ್ದ ಶ್ರೀದೇವಿ

  ದುಬೈ ಹೊರಡುವಾಗ ನಟಿ ಶ್ರೀದೇವಿ ಆರೋಗ್ಯ ಸರಿ ಇರಲಿಲ್ಲ. ಜ್ವರದಿಂದ ಶ್ರೀದೇವಿ ಬಳಲುತ್ತಿದ್ದರು. ''ದುಬೈಗೆ ಹೊರಡುವ ದಿನ ನಾನು ಶ್ರೀದೇವಿ ಜೊತೆ ಮಾತನಾಡಿದ್ದೆ. ಜ್ವರ ಇದೆ, ಮಾತ್ರೆ ತೆಗೆದುಕೊಳ್ಳುತ್ತಿದ್ದೇನೆ. ತುಂಬಾ ಸುಸ್ತು ಆಗುತ್ತಿದೆ. ಆದ್ರೆ, ಮದುವೆಗೆ ಹೋಗಲೇಬೇಕು ಎಂದು ಶ್ರೀದೇವಿ ಹೇಳಿದ್ದರು'' ಎನ್ನುತ್ತಾರೆ ಪಿಂಕಿ ರೆಡ್ಡಿ.

  ಬೇಸರ ಆಗಿದೆ

  ಬೇಸರ ಆಗಿದೆ

  ''ಶ್ರೀದೇವಿ ಸಾವಿನ ಸುತ್ತ ಅನುಮಾನ ಹಾಗೂ ಏನೇನೋ ಊಹಾಪೋಹ ಕೇಳಿಬರುತ್ತಿದೆ. ಅದನ್ನೆಲ್ಲ ನೋಡಿ ಮನಸ್ಸಿಗೆ ಬೇಸರ ಆಗಿದೆ. ಸಿಟ್ಟು ಕೂಡ ಬರುತ್ತಿದೆ'' ಅಂತಾರೆ ಪಿಂಕಿ ರೆಡ್ಡಿ.

  ದಿಗ್ಬ್ರಮೆಗೊಂಡ ಬೋನಿ ಕಪೂರ್

  ದಿಗ್ಬ್ರಮೆಗೊಂಡ ಬೋನಿ ಕಪೂರ್

  ''ಬೋನಿ ಕಪೂರ್ ಜೊತೆಗೆ ನಿನ್ನೆಯಷ್ಟೇ ಮಾತನಾಡಿದೆ. ಅವರು ದಿಗ್ಭ್ರಮೆಗೊಂಡಿದ್ದಾರೆ'' - ಪಿಂಕಿ ರೆಡ್ಡಿ

  ಬೋನಿ ಕಪೂರ್ ಮೊದಲ ಪತ್ನಿ ಮತ್ತು ಶ್ರೀದೇವಿ ಇಬ್ಬರೂ ದುರಾದೃಷ್ಟವಂತರೇ.! ಯಾಕೆ.?ಬೋನಿ ಕಪೂರ್ ಮೊದಲ ಪತ್ನಿ ಮತ್ತು ಶ್ರೀದೇವಿ ಇಬ್ಬರೂ ದುರಾದೃಷ್ಟವಂತರೇ.! ಯಾಕೆ.?

  ಶ್ರೀದೇವಿ ದುಬೈಗೆ ಹೋಗಿದ್ದು ಮೋಹಿತ್ ಮದುವೆಗೆ.! ಅಷ್ಟಕ್ಕೂ, ಯಾರೀ ಮೋಹಿತ್.?ಶ್ರೀದೇವಿ ದುಬೈಗೆ ಹೋಗಿದ್ದು ಮೋಹಿತ್ ಮದುವೆಗೆ.! ಅಷ್ಟಕ್ಕೂ, ಯಾರೀ ಮೋಹಿತ್.?

  English summary
  The day Sridevi was flying to Dubai, she was down with Fever, reveals Sridevi's best friend Pinky Reddy.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X