ಶ್ರೀದೇವಿ ನೆನಪು : ಚಾಂದಿನಿ ಅಗಲಿ ಆರು ವರ್ಷ, ಕನ್ನಡದಲ್ಲಿಯೂ ನಟಿಸಿದ್ದ ಸೌಂದರ್ಯದ ಸಿರಿದೇವಿ..!

ಅಂದಕಾಲತ್ತಿಲ್ ನ ರೂಪ್ ಕೀ ರಾಣಿ ಶ್ರೀದೇವಿ. 80-90ರ ದಶಕದಲ್ಲಿ ದಕ್ಷಿಣದಿಂದ ಉತ್ತರದವರೆಗೆ ಮಿಂಚಿದ ಶ್ರೀದೇವಿ ಆರು ವರ್ಷ ಹಿಂದೆ ಮರೆಯಾದರು. ಇವತ್ತು ಕೂಡ ಶ್ರೀದೇವಿಯ ಹಠಾತ್ ಸಾವಿಗೆ ಕಾರಣ ಇನ್ನೂ ನಿಗೂಢ

ತಮಿಳುನಾಡು ಶಿವಕಾಶಿ ಜಿಲ್ಲೆಯ ಮೀನಾಂಪಟ್ಟಿ 1963, ಆಗಸ್ಟ್ 13ರಂದು ಜನಿಸಿದ್ದ ಶ್ರೀದೇವಿ ಅವರ ಪೂರ್ಣ ಹೆಸರು ಶ್ರೀದೇವಿ ಅಯ್ಯಪ್ಪನ್. ಇವರ ತಂದೆ ಅಯ್ಯಪ್ಪನ್ ವಕೀಲರು. ಆಂಧ್ರಪ್ರದೇಶದ ನೆಲ್ಲೂರು ಮೂಲದ ತಾಯಿ ರಾಜೇಶ್ವರಿ ಗೃಹಿಣಿ. ಶ್ರೀಲತಂ ಇವರ ಸಹೋದರಿ.

Sridevis journey from South Cinema to Bollywood stardom

ಇನ್ನೂ ಶ್ರೀದೇವಿ ಚಿತ್ರರಂಗವನ್ನ ಪ್ರವೇಶಿಸಿದ್ದು ಬಾಲನಟಿಯಾಗಿ. 'ಕಂದನ್ ಕರುಣೈ' ಚಿತ್ರದ ಮೂಲಕ ಚೈಲ್ಡ್ ಆರ್ಟಿಸ್ಟ್ ಆಗಿ ಬೆಳ್ಳಿತೆರೆ ಗೆ ಲಗ್ಗೆ ಇಟ್ಟ ಶ್ರೀದೇವಿ, ಚಿತ್ರದಲ್ಲಿ ಮುರುಗ ದೇವತೆಯ ಪಾತ್ರವನ್ನ ನಿರ್ವಹಿಸಿದ್ದರು. ಆ ವಯಸ್ಸಿನಲ್ಲಿ.. ಆ ಕಾಲದಲ್ಲಿ.. ಮೊದಲ ಸಿನಿಮಾದಲ್ಲಿಯೇ ತನ್ನ ಅಭಿನಯದಿಂದ ಎಲ್ಲರನ್ನ ಸೆಳೆದ ಶ್ರೀದೇವಿ ಆ ನಂತರ ತೆಲುಗು, ಕನ್ನಡ, ತಮಿಳು ಮತ್ತು ಮಲಯಾಳಂ ಚಿತ್ರಗಳಲ್ಲಿ ಶ್ರೀದೇವಿ ನಟಿಸಿದರು.

1976ರಲ್ಲಿ ಶ್ರೀದೇವಿ ನಾಯಕಿಯ ಸ್ಥಾನವನ್ನ ಅಲಂಕರಿಸಿದರು. ವಿಶೇಷ ಅಂದರೆ ಕೆ.ಬಾಲಚಂದರ್ ನಿರ್ದೇಶನದಲ್ಲಿ ಮೊಂಡ್ರು ಮೂಡಿಚು ಚಿತ್ರಕ್ಕೆ ಶ್ರೀದೇವಿ ನಾಯಕಿಯಾಗಿ ಆಯ್ಕೆಯಾದಾಗ ಇವರ ವಯಸ್ಸು ಕೇವಲ ಹದಿಮೂರು. ಹದಿಮೂರರ ಪ್ರಾಯದಲ್ಲಿಯೇ ನಾಯಕಿಯಾಗಿ ರಜಿನಿಕಾಂತ್ ಹಾಗೂ ಕಮಲ್ ಹಾಸನ್ ಜೊತೆ ತೆರೆ ಹಂಚಿಕೊಂಡ ಶ್ರೀದೇವಿ ಫಿಲ್ಮ್ ಫೇರ್ ನ ಅತ್ಯುತ್ತಮ ನಟಿ ಪ್ರಶಸ್ತಿಗೆ ನಾಮಾಂಕಿತಗೊಂಡಿದ್ದರು. ಪದಹರೆಳ್ಳ ವಯಸು, ವೇಟಗಾಡು, ಜಗದೇಕ ವೀರುಡು, ಅತಿಲೋಕ ಸುಂದರಿ ಅವರ ಕೆಲವು ಯಶಸ್ವೀ ತೆಲುಗು ಚಿತ್ರಗಳು.

Sridevis journey from South Cinema to Bollywood stardom

ಇನ್ನೂ ಶ್ರೀದೇವಿ ಕೇವಲ ತಮಿಳು, ತೆಲುಗು, ಮಲಯಾಳಂ ಹಿಂದಿಯಲ್ಲಿ ಅಷ್ಟೇ ಅಲ್ಲ ಕನ್ನಡದಲ್ಲಿ ಕೂಡ ನಟಿಸಿದ್ದರು. ಡಾ.ರಾಜ್ ಕುಮಾರ್ ಅಭಿನಯದ ಭಕ್ತ ಕುಂಬಾರ (1974)ದಲ್ಲಿ ಕಾಣಿಸಿಕೊಂಡಿದ್ದ ಶ್ರೀದೇವಿ ಹೆಣ್ಣು ಸಂಸಾರದ ಕಣ್ಣು (1976) ಮತ್ತು ಪ್ರಿಯಾ (1979) ಚಿತ್ರಗಳಲ್ಲಿ ಕೂಡ ನಟಿಸಿದ್ದರು

ಶ್ರೀದೇವಿ ಹಿಂದಿ ಸಿನಿಮಾ ಅಭಿಯಾನ ಆರಂಭವಾಗಿದ್ದು ಜ್ಯೂಲಿ' ಚಿತ್ರದ ಬಾಲನಟಿಯಾಗಿ. ಸೋಲ್ವಾ ಸಾವನ್' (1979) ಚಿತ್ರದೊಂದಿಗೆ ನಾಯಕಿಯಾಗಿ ಬಾಲಿವುಡ್‍ಗೆ ಪರಿಚಯವಾದರು. ಹಿಮ್ಮತ್‍ವಾಲಾ' (1983) ಅವರ ಸಿನಿಮಾ ಜೀವನಕ್ಕೆ ಮಹತ್ವದ ತಿರುವು ಕೊಟ್ಟಿತು. ಜಿತೇಂದ್ರ ಹೀರೋ ಆಗಿದ್ದ ಚಿತ್ರದ ಮೂಲಕ ಶ್ರೀದೇವಿ ಸ್ಟಾರ್ ಹಿರೋಯಿನ್ ಆದರು. ಮುಂದೆ ಶ್ರೀದೇವಿ - ಜಿತೇಂದ್ರ ಜೋಡಿಯ ತೋಫಾ ಮತ್ತು ಮವಾಲಿ ಚಿತ್ರಗಳೂ ಯಶಸ್ವಿಯಾದವು.

Sridevis journey from South Cinema to Bollywood stardom

ಶ್ರೀದೇವಿ ಕೇವಲ ಅತ್ಯುತ್ತಮ ನಟಿಯಷ್ಟೇ ಆಗಿರಲಿಲ್ಲ, ಅತ್ಯುತ್ತಮ ನೃತ್ಯಗಾರ್ತಿಯೂ ಆಗಿದ್ದರು. ನೋಡ..ನೋಡ್ತಾ..ಹಿಂದಿ ಚಿತ್ರರಂಗದ ನಂ.1 ನಟಿಯಾಗಿ ಸ್ಥಾಪಿತರಾದರು. ರೇಖಾ, ಹೇಮಾ ಮಾಲಿನಿ ಅವರನ್ನೂ ಕೂಡ ಸೆಡ್ಡು ಹೊಡೆದರು. ಜಸ್ಟೀಸ್ ಚೌಧರಿ, ಜಾನಿ ದೋಸ್ತ್, ಮಕ್ಸದ್, ಆಖ್ರೀ ರಾಸ್ತಾ, ಜಾನ್‍ಬಾಜ್, ಘರ್ ಸನ್ಸಾರ್, ನಗಿನಾ, ಮಿಸ್ಟರ್ ಇಂಡಿಯಾ, ಸುಹಾಗನ್, ಔಲಾದ್ , ಖುದಾ ಗವಾ, ಗುಮ್ರಾಹ್, ಲಾಡ್ಲಾ, ರೂಪ್ ಕೀ ರಾಣಿ ಚೋರೋ ಕಾ ರಾಜಾ, ಶ್ರೀದೇವಿ ವರ್ಚಸ್ಸನ್ನ ಇನ್ನಷ್ಟು ಹೆಚ್ಚಿಸಿದವು.

ದ್ವಿಪಾತ್ರದಲ್ಲಿ ನಟಿಸಿದ್ದ ಚಾಲ್‍ಬಾಜ್', ಚಿತ್ರದ ಉತ್ತಮ ಅಭಿನಯಕ್ಕಾಗಿ ಶ್ರೀದೇವಿಗೆ ಮೊದಲ ಫಿಲ್ಮ್ ಫೇರ್ ಪುರಸ್ಕಾರ ಸಂದಿತು. ಇದೇ ವರ್ಷ ತೆರೆಕಂಡ ಯಶ್ ಚೋಪ್ರಾ ನಿರ್ದೇಶನದ ಚಾಂದಿನಿ' ಚಿತ್ರದ ಅತ್ಯುತ್ತಮ ನಟಿ ಪುರಸ್ಕಾರಕ್ಕೆ ಅವರು ನಾಮನಿರ್ದೇಶನಗೊಂಡಿದ್ದರು. ಮುಂದೆ ಚೋಪ್ರಾ ಅವರೇ ನಿರ್ದೇಶಿಸಿದ ಲಮ್ಹೇ' ಚಿತ್ರದ ದ್ವಿಪಾತ್ರಕ್ಕಾಗಿ ಶ್ರೀದೇವಿ ಮತ್ತೊಮ್ಮೆ ಫಿಲ್ಮ್ ಫೇರ್ ಪ್ರಶಸ್ತಿಯನ್ನ ಮುಡಿಗೇರಿಸಿಕೊಂಡಿದ್ದರು.

Sridevis journey from South Cinema to Bollywood stardom

ಜುದಾಯಿ ಚಿತ್ರದ ನಂತರ ಚಿತ್ರರಂಗದಿಂದ ಬ್ರೇಕ್ ಪಡೆದ ಶ್ರೀದೇವಿ ನಿರ್ಮಾಪಕ ಬೋನಿ ಕಪೂರ್ ಅವರನ್ನು ವರಿಸಿದರು. ಈ ದಾಂಪತ್ಯಕ್ಕೆ ಜಾಹ್ನವಿ ಮತ್ತು ಖುಷಿ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಸಿನಿಮಾಗೆ ವಿದಾಯ ಹೇಳಿದ ಆರು ವರ್ಷಗಳ ನಂತರ ಶ್ರೀದೇವಿ ಮಾಲಿನಿ ಅಯ್ಯರ್' ಸರಣಿಯೊಂದಿಗೆ ಕಿರುತೆರೆಗೆ ಬಂದಿದ್ದರು. ಮೇರಿ ಬೀವಿ ಕಾ ಜವಾಬ್ ನಹೀ' (2004) ಚಿತ್ರದೊಂದಿಗೆ ಅವರು ಹಿರಿತೆರೆಗೆ ಮರಳಿದರು. 2012ರಲ್ಲಿ ತೆರೆಕಂಡ ಇಂಗ್ಲಿಷ್ ವಿಂಗ್ಲಿಷ್' ಸಿನಿಮಾ ಶ್ರೀದೇವಿ ಅವರಿಗೆ ಹೆಸರು ತಂದುಕೊಟ್ಟಿತು. 2013ರ ಬಾಂಬೆ ಟಾಕೀಸ್' ಚಿತ್ರದಲ್ಲೂ ಅವರು ಕಾಣಿಸಿಕೊಂಡಿದ್ದರು.

2017ರಲ್ಲಿ ತೆರೆಗೆ ಬಂದ ಮಾಮ್ ಶ್ರೀದೇವಿ ಅಭಿನಯದ ಕಟ್ಟ ಕಡೆಯ ಸಿನಿಮಾ. ತಮ್ಮ ಜೀವಿತಾವಧಿಯಲ್ಲಿ ಹತ್ತಾರು ಪ್ರತಿಷ್ಟಿತ ಪುರಸ್ಕಾರಗಳನ್ನ ಪಡೆದಿದ್ದ ಶ್ರೀದೇವಿ, ದುಬೈನಲ್ಲಿ ಇದೇ ದಿನದಂದು, ಆರು ವರ್ಷದ ಹಿಂದೆ ಕೊನೆಯುಸಿರೆಳೆದರು. ಹೋಟೆಲ್ ರೂಂನ ಬಾತ್​ಟಬ್​ನಲ್ಲಿ ಮುಳುಗಿ ಇಹಲೋಕ ತ್ಯಜಿಸಿದರು. ಮೊದಲು ಅದೊಂದು ಕೊಲೆ ಎಂದೇ ಹಲವರು ಪ್ರತಿಪಾದಿಸಿದರೂ ಕೂಡ ತನಿಖೆಯ ಬಳಿಕ ಶ್ರೀದೇವಿಯವರು ಬಾತ್​ ಟಬ್​ನಲ್ಲಿ ಮುಳುಗಿಯೇ ಮೃತಪಟ್ಟಿದ್ದು ಎಂದು ವರದಿ ನೀಡಲಾಗಿತ್ತು. ಇವತ್ತು ಕೂಡ ಶ್ರೀದೇವಿ ಸಾವಿನ ಸುತ್ತ ಹಲವು ಅನುಮಾನಗಳು ಅನೇಕರಲ್ಲಿ ಇದ್ದೇ ಇವೆ.

More from Filmibeat

English summary
Sridevi Death Anniversary 2024: The late actress' journey from the South Indian film industry to Hindi cinema is a tale of determination, adaptability, and the creation of a true legend.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X