ಶಾರುಖ್ ಖಾನ್ 60 ; ಬಾದ್‌ಷಾ ಉಗ್ರಾವತಾರ, ಹುಚ್ಚೆದ್ದ ಅಭಿಮಾನಿ ಬಳಗ ! ಕಿಂಗ್ ಟೀಸರ್- SRK ಧಗಧಗ

ಬದುಕು ಹೀಗೆ ಎಂದು ಹೇಳಲು ಸಾಧ್ಯ ಇಲ್ಲ. ಯಾವ ಕ್ಷಣದಲ್ಲಾದರೂ ಬದುಕು ಬದಲಾಗಬಹುದು. ಆರಕ್ಕೇರಿದವರು ಮೂರಕ್ಕಿಳಿಯಬಹುದು. ಮೂರಕ್ಕಿಳಿದವರು ಆರಕ್ಕೇರಬಹುದು. ನಾನೇನೂ ಅಲ್ಲ ಅಂದುಕೊಂಡೇ ಕುಂತರೆ ಇದ್ದಲ್ಲೇ ಇರಬಹುದು. ಅಥವಾ, ನನ್ನಲ್ಲೇನೋ ಇದೆ ಅಂದುಕೊಳ್ಳುವುದರ ಜೊತೆಗೆ ತನ್ನ ಶಕ್ತಿ ಸಾಮರ್ಥ್ಯಗಳನ್ನು ಗುರುತಿಸಿಕೊಂಡವನು, ಮತ್ತದನ್ನು ಹೊರತೆಗೆಯುವಲ್ಲಿ ಶ್ರಮಿಸಿದವನು ಎಂಥ ಎತ್ತರಕ್ಕೆ ಬೇಕಾದರೂ ಏರಿ ನಿಲ್ಲಬಹುದು. ಇದಕ್ಕೆ ಶಾರುಖ್ ಖಾನ್ ಅತ್ಯುತ್ತಮ ಉದಾಹರಣೆ.

ಹೌದು, ಯಾವುದೇ ಗಾಡ್‌ ಫಾದರ್‌ಗಳಿಲ್ಲದೇ ಕೇವಲ ತನ್ನಲ್ಲಿನ ಕಲೆಯನ್ನಷ್ಟೇ ನಂಬಿಕೊಂಡು ಚಿತ್ರರಂಗಕ್ಕೆ ಬಂದವರು ಶಾರುಖ್ ಖಾನ್. ಇವತ್ತು ಶಾರುಖ್ ಖಾನ್ ಬಳಿ ಎಲ್ಲವೂ ಇದೆ. ವಿಶ್ವದೆಲ್ಲೆಡೆ ಅಸಂಖ್ಯಾತ ಅಗಣಿತ ಅಭಿಮಾನಿ ಬಳಗ ಇದೆ.

SRK UNLEASHED in KING Glimpse Ruthless Avatar amp amp 60th Birthday Trailer Tease Ignite Fan Frenzy

ಇಷ್ಟೇ ಅಲ್ಲ ಭಾರತದ ನಂಬರ್ 1 ಶ್ರೀಮಂತ ಹೀರೋ ಶಾರುಖ್ ಖಾನ್. ಕಳೆದ ಮೂರುವರೆ ದಶಕಗಳಿಂದ ಮನರಂಜನೆಯ ರಸದೌತಣ ಬಡಿಸುತ್ತಿರುವ ಶಾರುಖ್ ಖಾನ್ ಬಳಿ ₹7300 ಕೋಟಿ ಆಸ್ತಿ ಇದೆ. 1000 ಕೋಟಿ ರೂಪಾಯಿಗಿಂತ ಹೆಚ್ಚಿನ ನಿವ್ವಳ ಸಂಪತ್ತು ಹೊಂದಿರುವ ಭಾರತೀಯರ ಪಟ್ಟಿಯನ್ನು ಪ್ರತಿ ವರ್ಷ ಬಿಡುಗಡೆ ಮಾಡುವ ಹುರುನ್ ಇಂಡಿಯಾದಲ್ಲಿ ಶಾರುಖ್ ಆಸ್ತಿಯನ್ನು ₹7300 ಕೋಟಿ ಎಂದು ಉಲ್ಲೇಖಿಸಿದೆ.

ಇಂಥಾ ಶಾರುಖ್ ಖಾನ್‌ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಈ ಸಂಭ್ರಮವನ್ನು ''ಕಿಂಗ್'' ಟೀಸರ್ ಇನ್ನು ಹೆಚ್ಚಿಸಿದೆ. 60ನೇ ವರ್ಷದ ಬರ್ತ್‌ಡೇ ಸಂಭ್ರಮದಲ್ಲಿ ಬಿಡುಗಡೆಯಾದ ''ಕಿಂಗ್'' ಟೀಸರ್ ಶಾರುಖ್ ಖಾನ್ ಅಸಂಖ್ಯಾತ ಅಗಣಿತ ಅಭಿಮಾನಿಗಳನ್ನು ಹುಚ್ಚಿಡಿಸಿದೆ.

''ಕಿಂಗ್'' ಟೀಸರ್‌ನಲ್ಲಿ ಶಾರುಖ್ ಖಾನ್ ಸಂಪೂರ್ಣ ಹೊಚ್ಚ ಹೊಸ ಅವತಾರದಲ್ಲಿ ಮುಂದೆ ಬಂದಿದ್ದಾರೆ. ಈ ಹಿನ್ನೆಲೆ ಇದು ಶಾರುಖ್ ಖಾನ್ ಅವರ ಹೊಸ ಅಧ್ಯಾಯ ಎನ್ನಬಹುದು. ಶಾರುಖ್ ಖಾನ್ ಅವರ ಈ ರಗಡ್ ಮತ್ತು ಮಾಸ್ ರೂಪ ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದ್ದು ಮುಂದಿನ ವರ್ಷದ ಡಿಸೆಂಬರ್‌ನಲ್ಲಿ ಬಾಕ್ಸಾಫೀಸ್‌ನಲ್ಲಿ ಹಲವು ದಾಖಲೆಗಳು ಛಿದ್ರವಾಗುವ ಎಲ್ಲ ಲಕ್ಷಣ ಸದ್ಯ ಕಂಡು ಬರುತ್ತಿದೆ. ಬಾಲಿವುಡ್‌ ಪಂಡಿತರ ಬಾಯಲ್ಲಿ ಕೂಡ ಸದ್ಯ ಇದೇ ಭವಿಷ್ಯವಾಣಿ ಕೇಳಿ ಬರುತ್ತಿದೆ.

ಅಂದ್ಹಾಗೇ ''ಕಿಂಗ್'' ಚಿತ್ರವನ್ನು ಈ ಹಿಂದೆ ನಡೆದ ಮಾತುಕಥೆಯಂತೆ ಸುಜೋಯ್ ಘೋಷ್ ನಿರ್ದೇಶಿಸಬೇಕಿತ್ತು. ಆದರೆ.. ಆ ನಂತರ ನಡೆದ ಬೆಳವಣಿಗೆಯಲ್ಲಿ ಸುಜಯ್ ಘೋಷ್ ಅವರಿಗೆ ಶಾರುಖ್ ಖಾನ್ ಮನೆಯ ದಾರಿ ತೋರಿಸಿದ್ದರು. ಸುಜಯ್ ಘೋ‍ಷ್ ಬದಲು ತಮ್ಮ ''ಪಠಾಣ್'' ಚಿತ್ರವನ್ನು ನಿರ್ದೇಶಿಸಿ ತಮ್ಮನ್ನು ಗೆಲ್ಲಿಸಿದ್ದ ಸಿದ್ಧಾರ್ಥ್ ಆನಂದ್ ಅವರಿಗೆ ಕಿಂಗ್ ಜವಾಬ್ಧಾರಿಗಳನ್ನು ಶಾರುಖ್ ಖಾನ್ ವಹಿಸಿದ್ದರು.

SRK UNLEASHED in KING Glimpse Ruthless Avatar amp amp 60th Birthday Trailer Tease Ignite Fan Frenzy

ಸದ್ಯ ಟೀಸರ್ ನೋಡುತ್ತಿದ್ದರೆ ಶಾರುಖ್ ಖಾನ್ ಅವರ ಭರವಸೆಯನ್ನು ಸಿದ್ಧಾರ್ಥ್ ಆನಂದ್ ಉಳಿಸಿಕೊಂಡಂತೆ ಇದೆ. ಸೋಶಿಯಲ್ ಮೀಡಿಯಾದಲ್ಲಿ ''ಕಿಂಗ್'' ಗುಣಗಾನ ಸದ್ಯ ನಡೆಯುತ್ತಿದೆ. ಕೇವಲ ಅಭಿಮಾನಿಗಳಷ್ಟೇ ಅಲ್ಲ ಹಲವು ತಾರೆಯರು ಶಾರುಖ್ ಖಾನ್ ಅವರ ಈ ಮಾಸ್ ಜಾತ್ರೆ ಕಂಡು ಶಿಳ್ಳೆ ಹೊಡೆದು ಸಂಭ್ರಮ ಪಡುತ್ತಿದ್ದಾರೆ. ಬಾಲಿವುಡ್‌ ಬಾದ್‌ಷಾಗೆ ಹುಟ್ಟುಹಬ್ಬದ ಶುಭಾಶಯ ಕೋರುತ್ತಿದ್ದಾರೆ.

ಇನ್ನುಳಿದಂತೆ ಈ ಚಿತ್ರದ ಮೂಲಕ ಶಾರುಖ್ ಖಾನ್ ಅವರ ಮುದ್ದಾದ ಮಗಳು ಸುಹಾನಾ ಖಾನ್ ಚಿತ್ರರಂಗಕ್ಕೆ ಬರುತ್ತಿದ್ದಾರೆ.ಈ ಹಿಂದೆ ಸುಹಾನಾ ''ಆರ್ಚಿಸ್'' ಚಿತ್ರವನ್ನು ಮಾಡಿದ್ದರಾದರೂ ಅದು ನೇರವಾಗಿ ಓಟಿಟಿಯಲ್ಲಿ ಬಿಡುಗಡೆಯಾಗಿತ್ತು. ಹೀಗಾಗಿ ಬೆಳ್ಳಿತೆರೆಯಲ್ಲಿ ''ಕಿಂಗ್'' ಸುಹಾನಾಗೆ ಮೊದಲ ಅನುಭವ. ಈ ಹಿನ್ನೆಲೆ ಶಾರುಖ್ ಖಾನ್ ಅವರ ಅಭಿಮಾನಿಗಳು ಈ ಚಿತ್ರಕ್ಕೆ ಕಾತುರರಾಗಿದ್ದಾರೆ. ತೆರೆಯ ಮೇಲೆ ಅಪ್ಪ ಮತ್ತು ಮಗಳ ಜುಗಲಬಂದಿ ನೋಡಲು ಕುತೂಹಲದಿಂದ ಕಾಯುತ್ತಿದ್ದಾರೆ.

ಸುಹಾನಾ ಅವರ ತಾಯಿಯ ಪಾತ್ರವನ್ನು ಚಿತ್ರದಲ್ಲಿ ದೀಪಿಕಾ ಪಡುಕೋಣೆ ನಿರ್ವಹಿಸುತ್ತಿದ್ದಾರೆ. ಈ ಮೂಲಕ ಆರನೇ ಬಾರಿ ಶಾರುಖ್ ಖಾನ್ ಜೊತೆ ದೀಪಿಕಾ ಪಡುಕೋಣೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಅಭಿಷೇಕ್ ಬಚ್ಚನ್ ಚಿತ್ರದ ಖಳನಾಯಕ ಎನ್ನುವ ಸುದ್ದಿ ಇದೆ. ಶಾರುಖ್ ಖಾನ್ ಒಡೆತನದ ''ರೆಡ್ ಚಿಲ್ಲಿಸ್'' ಸಂಸ್ಥೆ ಈ ಚಿತ್ರವನ್ನು ನಿರ್ಮಾಣ ಮಾಡಲಿದೆ. ಇನ್ನು, ಭಾರತೀಯ ಚಿತ್ರರಂಗದಲ್ಲಿ ಹಿಂದೆಂದೂ ಬೆಳ್ಳಿಪರದೆಯ ಮೇಲೆ ನೋಡಿರದ ಸಾಹಸ ಸನ್ನಿವೇಶಗಳು ಕಿಂಗ್ ಚಿತ್ರದಲ್ಲಿರಲಿವೆ ಎನ್ನುವ ಮಾತು ಸದ್ಯ ಕೇಳಿ ಬರುತ್ತಿದ್ದು, ಬಿಡುಗಡೆಯಾದ ಟೀಸರ್ ಈ ಮಾತುಗಳನ್ನು ಪುಷ್ಠಿಕರಿಸುವಂತೆ ಇದೆ.

ಒಟ್ನಲ್ಲಿ ಏನೇ ಕಿಂಗ್ ಖಾನ್ ಆದ್ರೂ ಅದು ಬಾಲಿವುಡ್ ಗೆ ಮಾತ್ರ. ಸೌತ್ ಇಂಡಿಯಾಗೆ ಯಾವ ಕಿಂಗೂ ಇಲ್ಲ ಅನ್ನುವ ಮಾತು ಆಗಾಗ ಕೇಳಿ ಬರುತ್ತಾನೇ ಇರುತ್ತೆಯಾದರೂ ಸದ್ಯ ಇಂದು ( ನವೆಂಬರ್ 2) ಬಿಡುಗಡೆಯಾದ ''ಕಿಂಗ್'' ಟೀಸರ್ ಇಡೀ ಭಾರತದೆಲ್ಲೆಡೆ ಸದ್ದು ಮಾಡುತ್ತಿದೆ. ಟ್ವಿಟರ್.. ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್‌ನಲ್ಲಿದೆ. Happy Birthday King Khan...

More from Filmibeat

English summary
The King has arrived! Shah Rukh Khan's 60th birthday surprise is the explosive first look of 'King'. Get ready for a stylish, high-octane glimpse and the massive fan reaction to SRK's much-awaited trailer tease.
Read more about: shah rukh khan teaser
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X