'ಛತ್ರಪತಿ' ಹಿಂದಿ ರಿಮೇಕ್ ಗೆ ನಿರ್ದೇಶಕ ರಾಜಮೌಳಿ ಸಾಥ್

ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ನಟನೆಯ ಸೂಪರ್ ಹಿಟ್ ಸಿನಿಮಾ ಛತ್ರಪತಿ ಹಿಂದಿಗೆ ರಿಮೇಕ್ ಆಗುತ್ತಿದೆ ಎನ್ನುವ ವಿಚಾರ ಕಳೆದ ಒಂದು ವರ್ಷದಿಂದ ಕೇಳಿಬರುತ್ತಿದೆ. ಆದರೀಗ ಸಿನಿಮಾ ಅಧಿಕೃತವಾಗಿ ಬಾಲಿವುಡ್ ನಲ್ಲಿ ಸೆಟ್ಟೇರಿದೆ.

ಇಂದು (ಜುಲೈ 16) ಚಿತ್ರಕ್ಕೆ ಮುಹೂರ್ತ ಮಾಡುವ ಮೂಲಕ ಹಿಂದಿ ಛತ್ರಪತಿಗೆ ಅದ್ದೂರಿ ಚಾಲನೆ ದೊರೆಯಿತು. ವಿಶೇಷ ಎಂದರೆ ಛತ್ರಪತಿ ಹಿಂದಿ ರಿಮೇಕ್ ಗೆ ಖ್ಯಾತ ನಿರ್ದೇಶಕ ರಾಜಮೌಳಿ ಸಾಥ್ ನೀಡಿದ್ದಾರೆ. ಅಂದಹಾಗೆ ಹಿಂದಿಯಲ್ಲೂ ರಾಜಮೌಳಿ ಆಕ್ಷನ್ ಕಟ್ ಹೇಳುತ್ತಿದ್ದಾರಾ ಅಂತ ಅಂದ್ಕೋಬೇಡಿ. ಇಂದು ನಡೆದ ಮುಹೂರ್ತ ಸಮಾರಂಭದಲ್ಲಿ ಭಾಗಿಯಾಗಿ ಚಿತ್ರಕ್ಕೆ ಕ್ಲ್ಯಾಪ್ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭಹಾರೈಸಿದ್ರು. ಮುಂದೆ ಓದಿ...

ಮುಹೂರ್ತ ಫೋಟೋಗಳು ವೈರಲ್

ಮುಹೂರ್ತ ಫೋಟೋಗಳು ವೈರಲ್

ಹಿಂದಿಗೆ ರಿಮೇಕ್ ಆಗುತ್ತಿರುವ ಛತ್ರಪತಿಯಲ್ಲಿ ನಾಯಕನಾಗಿ ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್ ಕಾಣಿಸಿಕೊಳ್ಳುತ್ತಿದ್ದಾರೆ. ಇಂದು ನಡೆದ ಮುಹೂರ್ತ ಸಮಾರಂಭದಲ್ಲಿ ಬೆಲ್ಲಂಕೊಂಡ ಶ್ರೀನಿವಾಸ್ ಮತ್ತು ರಾಜಮೌಳಿ ಸೇರಿದಂತೆ ಚಿತ್ರತಂಡದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದುಡುತ್ತಿವೆ. ಅಂದಹಾಗೆ ಹಿಂದಿ ರಿಮೇಕ್ ಛತ್ರಪತಿಗೆ ವಿವಿ ವಿನಾಯಕ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಪ್ರಭಾಸ್ ಪಾತ್ರದಲ್ಲಿ ಸಾಯಿ ಶ್ರೀನಿವಾಸ್ ನಟನೆ

ಪ್ರಭಾಸ್ ಪಾತ್ರದಲ್ಲಿ ಸಾಯಿ ಶ್ರೀನಿವಾಸ್ ನಟನೆ

ಛತ್ರಪತಿ ಹಿಂದಿ ರಿಮೇಕ್ ಮೂಲಕ ತೆಲುಗು ನಟ ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್ ಬಾಲಿವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ. ಮೊದಲ ಬಾಲಿವುಡ್ ಸಿನಿಮಾದ ಬಗ್ಗೆ ಶ್ರೀನಿವಾಸ್ ಸಖತ್ ಎಕ್ಸಾಯಿಟ್ ಆಗಿದ್ದಾರೆ. ತೆಲುಗಿನಲ್ಲಿ ದೊಡ್ಡ ಮಟ್ಟದ ಹಿಟ್ ಆಗಿದ್ದ ಛತ್ರಪತಿ ಬಾಲಿವುಡ್ ನಲ್ಲೂ ಸಕ್ಸಸ್ ಆಗುತ್ತಾ ಎನ್ನುವುದು ಕುತೂಹಲ ಮೂಡಿಸಿದೆ.

ರಾಜಮೌಳಿ-ಪ್ರಭಾಸ್ ಕಾಂಬಿನೇಷನ್ ನ ಮೊದಲ ಸಿನಿಮಾ

ರಾಜಮೌಳಿ-ಪ್ರಭಾಸ್ ಕಾಂಬಿನೇಷನ್ ನ ಮೊದಲ ಸಿನಿಮಾ

ಅಂದಹಾಗೆ ಛತ್ರಪತಿ ನಿರ್ದೇಶಕ ರಾಜಮೌಳಿ ಮತ್ತು ಪ್ರಭಾಸ್ ಕಾಂಬಿನೇಷನ್ ನಲ್ಲಿ ಮೂಡಿಬಂದ ಮೊದಲ ಸಿನಿಮಾ. ಈ ಸಿನಿಮಾ ರಿಲೀಸ್ ಆಗಿ 16 ವರ್ಷಗಳಾಗಿದೆ. ಅಂದುಕೊಂಡಂತೆ ಆಗಿದ್ದರೆ ಸಿನಿಮಾ ಈಗಾಗಲೇ ಹಿಂದಿಯಲ್ಲಿ ಸೆಟ್ಟೇರಬೇಕಿತ್ತು. ಆದರೆ ಕೊರೊನಾ ಕಾರಣದಿಂದ ತಡವಾಗಿ ಆರಂಭವಾಗಿದೆ.

ಚಿತ್ರೀಕರಣಕ್ಕೂ ಮೊದಲೇ ಕೋಟಿ ಕೋಟಿ ನಷ್ಟ

ಚಿತ್ರೀಕರಣಕ್ಕೂ ಮೊದಲೇ ಕೋಟಿ ಕೋಟಿ ನಷ್ಟ

ಇನ್ನು ಚಿತ್ರೀಕರಣಕ್ಕಾಗಿ ಬರೋಬ್ಬರಿ 3 ಕೋಟಿ ರೂ. ವೆಚ್ಚದ ಬೃಹತ್ ಸೆಟ್ ಅನ್ನು ಹೈದರಾಬಾದ್ ನಲ್ಲಿ ನಿರ್ಮಾಣ ಮಾಡಲಾಗಿತ್ತು. ಸುಮಾರು 6 ಎಕರೆ ಜಾಗದಲ್ಲಿ ಹಳ್ಳಿ ಸೆಟ್ ನಿರ್ಮಾಣ ಮಾಡಲಾಗಿತ್ತು. ಆದರೆ ಮಳೆಯಿಂದ ಸಂಪೂರ್ಣ ಸೆಟ್ ಹಾನಿಯಾಗಿತ್ತು. ಇದರಿಂದ ಚಿತ್ರೀಕರಣ ಪ್ರಾರಂಭಕ್ಕೂ ಮೊದಲೇ ಚಿತ್ರತಂಡಕ್ಕೆ ಕೋಟಿ ಕೋಟಿ ಹಣ ನಷ್ಟವಾಗಿದೆ. ಇದೀಗ ಮತ್ತೆ ಸೆಟ್ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಹೈದರಾಬಾದ್ ನಲ್ಲೇ ಚಿತ್ರೀಕರಣ ಮಾಡಲು ಎಲ್ಲಾ ಸಿದ್ಧತೆ ಮಾಡಿಕೊಂಡಿದೆ ಸಿನಿಮಾತಂಡ.

Recommended Video

Indrajith Lankesh and Sandesh audio leak ಅವರು ದರ್ಶನ್ ಬಗ್ಗೆ ಮಾತನಾಡಿರುವ ಆಡಿಯೋ | Darshan | Filmibeat
'ಛತ್ರಪತಿ' ಸಿನಿಮಾದ ಬಗ್ಗೆ

'ಛತ್ರಪತಿ' ಸಿನಿಮಾದ ಬಗ್ಗೆ

ಛತ್ರಪತಿ ಸಿನಿಮಾದಲ್ಲಿ ಪ್ರಭಾಸ್ ಶಿವಾಜಿ ಎನ್ನುವ ಪಾತ್ರವನ್ನು ನಿರ್ವಹಿಸಿದ್ದರು. ಶಿವಾಜಿ ಚಿಕ್ಕ ವಯಸ್ಸಿನಲ್ಲೇ ತಾಯಿ ಮತ್ತು ಸಹೋದರನಿಂದ ಬೇರೆಯಾಗಿ ಕುಗ್ರಾಮಕ್ಕೆ ಬಂದು ಜನರ ಮಧ್ಯೆ ಬೆಳೆಯುತ್ತಾನೆ. ಬಳಿಕ ತಾಯಿಯನ್ನು ಹುಡುಕುವುದು ಮತ್ತು ಆಕ್ಷನ್ ಸೇರಿದಂತೆ ಸಿನಿಮಾ ಅನೇಕ ರೋಚಕ ತಿರುವುಗಳಿಂದ ಕುತೂಹಲ ಮೂಡಿಸಿತ್ತು. ತೆಲುಗಿನಲ್ಲಿ ಸೂಪರ್ ಹಿಟ್ ಆಗಿದ್ದ ಛತ್ರಪತಿಯನ್ನು ಹಿಂದಿ ಮಂದಿ ಹೇಗೆ ಸ್ವೀಕಾರ ಮಾಡುತ್ತಾರೆ ಎಂದು ಕಾದುನೋಡಬೇಕು.

More from Filmibeat

English summary
SS Rajamouli launches Hindi remake of Chatrapathi. Bellamkonda Sai Srinivas playing lead role in this movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X