»   » ರಾಜಮೌಳಿ ಸರ್ಟಿಫಿಕೆಟ್ ಪಡೆದ ಹೃತಿಕ್ ರೋಶನ್

ರಾಜಮೌಳಿ ಸರ್ಟಿಫಿಕೆಟ್ ಪಡೆದ ಹೃತಿಕ್ ರೋಶನ್

Posted By:
Subscribe to Filmibeat Kannada
ತೆಲುಗಿನ ವಿಶ್ವವಿಖ್ಯಾತ ನಿರ್ದೇಶಕ ಎಸ್ ಎಸ್ ರಾಜಮೌಳಿಯವರು ಗುಟ್ಟೊಂದನ್ನು ಬಿಚ್ಚಿಟ್ಟಿದ್ದಾರೆ. ಈ ಮೊದಲು ಅವರದೇ ನಿರ್ದೇಶನದ ಸೂಪರ್ ಹಿಟ್ ತೆಲುಗು 'ಮಗಧೀರ' ಚಿತ್ರವನ್ನು ಅವರು ಹಿಂದಿಯಲ್ಲಿ ರೀಮೇಕ್ ಮಾಡಲಿದ್ದಾರೆ ಎನ್ನಲಾಗಿತ್ತು. ಆದರೆ ಆ ಸುದ್ದಿಯನ್ನು ರಾಜಮೌಳಿ ತಳ್ಳಿ ಹಾಕಿದ್ದಾರೆ. ಆದರೆ ಅವರು ಆ ವೇಳೆ ಅವರ ಮನದಲ್ಲಿದ್ದ ಗುಟ್ಟನ್ನು ರಟ್ಟು ಮಾಡಿದ್ದಾರೆ. ಗುಟ್ಟು ಬಾಲಿವುಡ್ ಸುಂದರಾಂಗ ನಟ ಹೃತಿಕ್ ರೋಶನ್ ಅವರಿಗೆ ಸಂಬಂಧಿಸಿದ್ದು.

ಇತ್ತೀಚಿಗೆ, 'ಮಗಧೀರ' ಚಿತ್ರವನ್ನು ಹಿಂದಿಯಲ್ಲಿ ಮಾಡಲಾರೆ ಎಂದ ರಾಜಮೌಳಿ ಈ ಮೊದಲು ಆ ಬಗ್ಗೆ ಯೋಚಿಸಿದ್ದನ್ನು ಒಪ್ಪಿಕೊಂಡಿದ್ದಾರೆ. ಆದರೆ ಆ ವೇಳೆ ಎರಡು ವರ್ಷ ಪೂರ್ತಿ ತೆಗೆದುಕೊಂಡು ಮಾಡಿರುವ 'ಮಗಧೀರ'ವನ್ನು ಮತ್ತೆ ಈಗ ಹಿಂದಿಯಲ್ಲಿ ಕೈಗೆತ್ತಿಕೊಂಡು ಮತ್ತೆ ಎರಡು ವರ್ಷ ಅದೇ ಚಿತ್ರವನ್ನು ಮಾಡಲು ವಿನಯೋಗಿಸಲಾರೆ" ಎಂದಿದ್ದಾರೆ.

ಆ ವೇಳೆ, ಪತ್ರಕರ್ತರಿಂದ ಪ್ರಶ್ನೆಯೊಂದು ತೂರಿ ಬಂದಿದೆ. "ಅಲ್ಲಿ ಮಾಡುವುದಿದ್ದರೆ ಯಾರನ್ನು ಹೀರೋ ಆಗಿ ಆಯ್ಕೆ ಮಾಡುತ್ತೀರಿ?" ಅದಕ್ಕೆ ಸ್ವಲ್ಪವೂ ಯೋಚಿಸದೇ 'ಹೃತಿಕ್ ರೋಶನ್' ಎಂದು ಉತ್ತರಿಸಿದ ರಾಜಮೌಳಿ, ಆ ಪಾತ್ರವನ್ನು ಯಾವ ಮಾಸ್ ಹೀರೋ ಬೇಕಾದರೂ ಮಾಡಬಹುದು. ಅದು ಮಾಸ್ ಚಿತ್ರವಾದ್ದರಿಂದ ಎಲ್ಲಾ ಮಾಸ್ ಹೀರೋಗಳಿಗೂ ಅದು ಸೂಟ್ ಆಗುತ್ತದೆ. ಆದರೆ ನಾನೇನಾದರೂ ಮಾಡುವುದಿದ್ದರೆ, ಅದಕ್ಕೆ ನಾಯಕ ಹೃತಿಕ್ ರೋಶನ್" ಎಂದಿದ್ದಾರೆ.

ಮುಂದುವರಿದ ರಾಜಮೌಳಿ "ನನ್ನ ಪ್ರಕಾರ ಆ ಚಿತ್ರಕ್ಕೆ ಬಾಲಿವುಡ್ ನಾಯಕರಲ್ಲಿ ಅತ್ಯಂತ ಸೂಟ್ ಆಗುವ ನಟ ಹೃತಿಕ್ ರೋಶನ್. ಆ ಪಾತ್ರಕ್ಕೆ ಹೇಳಿ ಮಾಡಿಸಿದಂತಿದ್ದಾರೆ ಹೃತಿಕ್. ನಾನು ಮಾಡುವುದಿದ್ದರೆ ಹೃತಿಕ್ ಬಿಟ್ಟು ಬೇರೆ ಯಾರನ್ನೂ ಆಯ್ಕೆ ಮಾಡುವುದಿಲ್ಲ" ಎಂದು ಸತ್ಯದ ತಲೆ ಮೇಲೆ ಹೊಡೆದಂತೆ ಹೇಳಿದ್ದಾರೆ. ಅದು ರಾಜಮೌಳಿಯ ಅಗಾಧ ಪ್ರತಿಭೆ, ನೇರ ಮಾತು. ರಾಜಮೌಳಿ ಹೀಗೆ ಸರ್ಟಿಫಿಕೆಟ್ ನೀಡಿದ್ದನ್ನು ತಿಳಿದರೆ ಹೃತಿಕ್ ರೋಶನ್ ಖುಷಿಯಾಗೋದು ಗ್ಯಾರಂಟಿ.

ರಾಜಮೌಳಿ ಯಾವತ್ತೂ ಪ್ರತಿಯೊಂದನ್ನು ಅಳೆದು-ತೂಗಿ ನೋಡುತ್ತಾರೆ. ಕೆಲಸದ ಮೂಲಕ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಳ್ಳುತ್ತಾರೆ ಕೂಡ. ಅದಕ್ಕೆ ಸಾಕ್ಷಿ ಬೇಕಿದ್ದರೆ ಇತ್ತೀಚಿಗೆ ಅವರ ನಿರ್ದೇಶನದಲ್ಲಿ ಮೂಡಿಬಂದು ಸೂಪರ್ ಹಿಟ್ ದಾಖಲಿಸಿರುವ ತೆಲುಗಿನ 'ಈಗ' ನಿಮ್ಮೆದುರೇ ಇದೆ. ಕನ್ನಡದ ಕಿಚ್ಚ ಸುದೀಪ್ ಈ ಪಾತ್ರವನ್ನು ಮಾಡುವುದಿದ್ದರೆ ಮಾತ್ರ ನಾನು 'ಈಗ' ಚಿತ್ರವನ್ನು ಮಾಡುತ್ತೇನೆಂದು ಪ್ರಾರಂಭದಲ್ಲೇ ರಾಜಮೌಳಿ ಹೇಳಿದ್ದನ್ನು ನೀವೂ ಮರೆತಿರಲಿಕ್ಕಿಲ್ಲ... (ಒನ್ ಇಂಡಿಯಾ ಕನ್ನಡ)

English summary
Telugu Director, World famous SS Rajamouli told that if he remakes his Super Hit Telugu Movie Magadheera to Bollywood, he will select Bollywood Star Hrithik Roshan for Hero Role. 
 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada