ಕೋವಿಡ್‌ಗೆ ಹೆದರಿದ ಸ್ಟಾರ್ ನಟರು! ಮತ್ತೆ ಬರಿದಾಗುವತ್ತ ಚಿತ್ರಮಂದಿರಗಳು
ಕೋವಿಡ್ ಎರಡನೇ ಅಲೆ ಬಳಿಕ ಕೊರೊನಾ ಕಡಿಮೆಯಾಯಿತು ಎಂದು ಎಲ್ಲರೂ ನಿಟ್ಟುಸಿರು ಬಿಟ್ಟಿದ್ದರು. ಕಳೆದ ಒಂದೆರಡು ವರ್ಷಗಳಿಂದಲೂ ಬಿಡುಗಡೆಗೆ ಕಾಯುತ್ತಿದ್ದ ಸಿನಿಮಾಗಳನ್ನು ಒಂದರ ಹಿಂದೆ ಒಂದರಂತೆ ಬಿಡುಗಡೆ ಮಾಡಲು ಸಜ್ಜಾಗಿತ್ತು. ಆದರೆ ಇದೀಗ ಓಮಿಕ್ರಾನ್ ವಕ್ಕರಿಸಿದೆ, ಚಿತ್ರಮಂದಿರಗಳು ಮತ್ತೆ ಬರಿದಾಗುವ ದಟ್ಟ ಸಾಧ್ಯತೆ ಕಂಡು ಬರುತ್ತಿದೆ.
ಓಮಿಕ್ರಾನ್ ದೆಸೆಯಿಂದಾಗಿ ದೊಡ್ಡ ದೊಡ್ಡ ಸ್ಟಾರ್ ನಟರೇ ತಮ್ಮ ಸಿನಿಮಾಗಳ ಬಿಡುಗಡೆಯನ್ನು ಮುಂದಕ್ಕೆ ಹಾಕಿಕೊಳ್ಳುತ್ತಿದ್ದಾರೆ. ಭಾರತದ ಬಹು ನಿರೀಕ್ಷಿತ ಸಿನಿಮಾ 'ಆರ್ಆರ್ಆರ್' ಜನವರಿ 07ರಂದು ಬಿಡುಗಡೆ ಆಗಲಿಕ್ಕಿತ್ತು, ಕೋವಿಡ್ ಪ್ರಕರಣಗಳಲ್ಲಿ ಹೆಚ್ಚಳವನ್ನು ಗಮನಿಸಿ ಸಿನಿಮಾದ ಬಿಡುಗಡೆಯನ್ನು ಮುಂದೂಡಲಾಯಿತು.
ಇದೀಗ ಮತ್ತೊಂದು ಸ್ಟಾರ್ ನಟನ ಸಿನಿಮಾ ಸಹ ಮುಂದೂಡಲ್ಪಟ್ಟಿದೆ. ಅಕ್ಷಯ್ ಕುಮಾರ್ ನಟನೆಯ 'ಪೃಥ್ವಿರಾಜ್' ಸಿನಿಮಾದ ಬಿಡುಗಡೆಯನ್ನು ಮುಂದೂಡಲಾಗಿದೆ. ಈ ಸಿನಿಮಾವು ಜನವರಿ 21ಕ್ಕೆ ಬಿಡುಗಡೆ ಆಗಲಿಕ್ಕಿತ್ತು. ಆದರೆ ಬಾಲಿವುಡ್‌ನ ಮುಖ್ಯ ಮಾರುಕಟ್ಟೆಯಾದ ಮಹಾರಾಷ್ಟ್ರ, ದೆಹಲಿ, ಪಂಜಾಬ್, ಉತ್ತರ ಪ್ರದೇಶಗಳಲ್ಲಿ ಕೋವಿಡ್ ಪ್ರಕರಣಗಳು ತೀವ್ರ ಗತಿಯಲ್ಲಿ ಹೆಚ್ಚಳವಾಗುತ್ತಿರುವ ಕಾರಣದಿಂದಾಗಿ ಸಿನಿಮಾದ ಬಿಡುಗಡೆಯನ್ನು ಮುಂದೂಡಲಾಗಿದೆ. ಈ ಬಗ್ಗೆ ಹೇಳಿಕೆ ಹೊರಡಿಸಿರುವ ಯಶ್ ರಾಜ್ ಫಿಲಮ್ಸ್, 'ವೈಆರ್‌ಎಫ್ ನಿರ್ಮಾಣ ಸಂಸ್ಥೆಯು ಪೃಥ್ವಿರಾಜ್ ಸಿನಿಮಾವನ್ನು ಜನವರಿ 21ರಂದು ಬಿಡುಗಡೆ ಮಾಡುತ್ತಿಲ್ಲ. ಸಿನಿಮಾದ ಮುಂದಿನ ಬಿಡುಗಡೆ ದಿನಾಂಕದ ಬಗ್ಗೆ ಇನ್ನೂ ನಿರ್ಧರಿಸಲಾಗಿಲ್ಲ'' ಎಂದಿದ್ದಾರೆ.
{photo-feature}


Click it and Unblock the Notifications











