For Quick Alerts
  ALLOW NOTIFICATIONS  
  For Daily Alerts

  ಎನ್‌ಟಿಆರ್‌ಗಾಗಿ ದಕ್ಷಿಣಕ್ಕೆ ಬಂದ ಬಾಲಿವುಡ್‌ನ ಸೂಪರ್ ಸ್ಟಾರ್ ನಿರ್ದೇಶಕ

  By ರವೀಂದ್ರ ಕೊಟಕಿ
  |

  ಪ್ರಸ್ತುತ ಭಾರತೀಯ ಸಿನಿಮಾ ರಂಗದಲ್ಲಿ ಒಂದು ವಿಚಿತ್ರವಾದ ಪರಿಸ್ಥಿತಿ ಏರ್ಪಟ್ಟಿದೆ. ಅದೇನಪ್ಪ ಅಂದ್ರೆ ಬಾಲಿವುಡ್ ಸೂಪರ್ ಸ್ಟಾರ್ ಗಳನ್ನು ಸೂಪರ್ ಸ್ಟಾರ್ ಗಳು ಅಂತಲೇ ಕರೆಯಲಾಗುತ್ತದೆ. ಆದರೆ ಸೌತ್ ಸಿನಿ ಇಂಡಸ್ಟ್ರಿಯ ಸೂಪರ್ ಸ್ಟಾರ್‌ಗಳನ್ನು ಮಾತ್ರ ಈಗ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಗಳಾಗಿ ಗುರುತಿಸಲಾಗುತ್ತಿದೆ. ಸೌತ್ ಸೂಪರ್ ಸ್ಟಾರ್‌ಗಳ ಸ್ಟಾರ್ ಡಮ್ ಬಾಲಿವುಡ್ ಸೂಪರ್ ಸ್ಟಾರ್‌ಗಳನ್ನು ಮೀರಿದೆ.

  ಈಗಾಗಲೇ ಪ್ರಭಾಸ್, ಯಶ್ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್‌ಗಳಾಗಿ ಬದಲಾಗಿದ್ದಾರೆ. ಅಲ್ಲು ಅರ್ಜುನ್ 'ಪುಷ್ಪ' ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಆಗಲು ಹೊರಟಿದ್ದಾರೆ. ಇನ್ನು ಎಸ್ ಎಸ್ ರಾಜಮೌಳಿ ನಿರ್ದೇಶನದ 'ಆರ್‌ಆರ್‌ಆರ್‌' ಚಿತ್ರದ ಮೂಲಕ ರಾಮ್ ಚರಣ್ ತೇಜ ಮತ್ತು ಎನ್‌ಟಿಆರ್ ಅವರು ಕೂಡ ಬಾಲಿವುಡ್ ನಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿಯುತ್ತಿದ್ದಾರೆ. ಇನ್ನು ಪೂರಿ ಜಗನ್ನಾಥ್ ನಿರ್ದೇಶನದ 'ಲೈಗರ್' ಚಿತ್ರದ ಮೂಲಕ ವಿಜಯ್ ದೇವರಕೊಂಡ ಕೂಡ ಬಾಲಿವುಡ್‌ ಹಾದಿಯನ್ನು ಹಿಡಿದಿದ್ದಾರೆ. ಬಾಕ್ಸಿಂಗ್‌ನ ದಂತಕತೆ ಮೈಕಲ್ ಟೈಸನ್ ಈ ಚಿತ್ರದಲ್ಲಿ ನಟಿಸುತ್ತಿರುವುದರಿಂದ ಇದು ವಿಶ್ವದ ಗಮನಸೆಳೆಯುತ್ತಿದೆ. ಅಲ್ಲದೆ, ಈ ಚಿತ್ರವನ್ನು ಹಿಂದಿಯಲ್ಲಿ ಕರಣ್ ಜೋಹರ್ ನಿರ್ಮಿಸುತ್ತಿದ್ದಾರೆ.

  ಹೀಗೆ ಸಾಲು ಸಾಲು ಸೌತ್ ಹೀರೋಗಳು ಬಾಲಿವುಡ್ ಮೇಲೆ ಅತಿಕ್ರಮಣಕ್ಕೆ ಮುಂದಾಗಿದ್ದಾರೆ. ಹೀಗಾಗಿಯೇ ಬಾಲಿವುಡ್ ನಿರ್ಮಾಪಕರ ಮತ್ತು ನಿರ್ದೇಶಕರ ಕಣ್ಣು ನೇರವಾಗಿ ಈ ಸ್ಟಾರ್‌ಗಳ ಮೇಲೆ ಬಿದ್ದಿದೆ. ಬಾಲಿವುಡ್‌ನ ಖ್ಯಾತ ನಿರ್ಮಾಣ ಸಂಸ್ಥೆ ಯಶ್ ರಾಜ್ ಫಿಲಂಸ್ ಪ್ರಭಾಸ್ ಅವರ ಕೈಯಲ್ಲಿ'ಧೂಮ್-4' ಮಾಡಿಸಲು ಮುಂದಾಗಿತ್ತು ಆದರೆ ಪ್ರಭಾಸ್ ಈ ಆಫರ್ ತಿರಸ್ಕರಿಸಿದ್ದರು. ಈಗ ಇದೇ ಯಶ್ ರಾಜ್ ಫಿಲಂಸ್, ಯಶ್ ಅವರ ಸಿನಿಮಾ ಮಾಡಲು ಪ್ರಸ್ತುತ ಹರಸಾಹಸ ಮಾಡುತ್ತಿದೆ.

  ದಕ್ಷಿಣದ ನಟನಿಗಾಗಿ ಬಂದ ಸಂಜಯ್ ಲೀಲಾ ಬನ್ಸಾಲಿ

  ದಕ್ಷಿಣದ ನಟನಿಗಾಗಿ ಬಂದ ಸಂಜಯ್ ಲೀಲಾ ಬನ್ಸಾಲಿ

  ಪ್ರಭಾಸ್ ನೇರ ಹಿಂದಿ ಚಿತ್ರವೊಂದಕ್ಕೆ ಕಾಲ್ ಶೀಟ್ ಕೊಟ್ಟಿದ್ದು,'ತಾನಾಜಿ' ಖ್ಯಾತಿಯ ಓಂ ರೌತ್ ನಿರ್ದೇಶನದ 'ಆದಿಪುರುಷ್‌' ಚಿತ್ರೀಕರಣ ಪ್ರಸ್ತುತ ಭರದಿಂದ ಸಾಗುತ್ತಿದೆ. ಈಗ ಇದೇ ಕ್ರಮದಲ್ಲಿ ಸ್ಟ್ರೈಟ್ ಆಗಿ ಹಿಂದಿ ಸಿನಿಮಾ ಒಂದಕ್ಕೆ ಮತ್ತೊಬ್ಬ ಸೂಪರ್ ಸ್ಟಾರ್ ಅವರನ್ನು ಸಂಪರ್ಕಿಸಲಾಗಿದೆ. ಹಾಗಂತ ಈ ಆಫರ್ ಹಿಡಿದು ಬಂದಿರುವ ನಿರ್ದೇಶಕ ಸಾಮಾನ್ಯ ನಿರ್ದೇಶಕ ನಲ್ಲ, ಬದಲಾಗಿ ಬಾಲಿವುಡ್ ಸಿನಿಮಾ ಮಾಂತ್ರಿಕ ಸಂಜಯ್ ಲೀಲಾ ಬನ್ಸಾಲಿ. ಮತ್ತು ಬನ್ಸಾಲಿ ಅವರು ಅಪ್ರೋಚ್ ಆಗಿರುವ ನಟ ಬೇರೆ ಯಾರು ಅಲ್ಲ, ಎನ್‌ಟಿಆರ್.

  ಟಾಲಿವುಡ್ ನ ಟಾಪ್ ಹೀರೋಗಳಲ್ಲಿ ಒಬ್ಬರು ಯಂಗ್ ಟೈಗರ್

  ಟಾಲಿವುಡ್ ನ ಟಾಪ್ ಹೀರೋಗಳಲ್ಲಿ ಒಬ್ಬರು ಯಂಗ್ ಟೈಗರ್

  ಟಾಲಿವುಡ್ ನ 'ಯಂಗ್ ಟೈಗರ್' ಎನ್ ಟಿ ಆರ್ ಪ್ರಸ್ತುತ ರಾಜಮೌಳಿ ಅವರ 'ಆರ್ ಆರ್ ಆರ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ನಂತರ ನಿರ್ದೇಶಕ ಕೊರಟಾಲ ಶಿವ ಅವರ ಚಿತ್ರದಲ್ಲಿ ನಟಿಸಲಿದ್ದಾರೆ. ಆ ಚಿತ್ರದ ನಂತರ ಮೈತ್ರಿ ಮೂವೀಸ್ ಬ್ಯಾನರ್ ಅಡಿಯಲ್ಲಿ ಪ್ರಶಾಂತ್ ನೀಲ್ ಅವರ ಚಿತ್ರ ಇರುತ್ತದೆ ಎನ್ನಲಾಗುತ್ತಿದೆ. ಆದರೆ ಇದರ ಬಗ್ಗೆ ಇದುವರೆಗೂ ಯಾವುದೇ ಅಧಿಕೃತ ಪ್ರಕಟಣೆ ಮಾತ್ರ ಹೊರಬಿದ್ದಿಲ್ಲ. ಗುಣಶೇಖರ್ ನಿರ್ದೇಶನದ 'ಬಾಲ ರಾಮಾಯಣಂ' ಚಿತ್ರದಲ್ಲಿ ಶ್ರೀರಾಮನ ಪಾತ್ರ ನಿರ್ವಹಿಸುವುದರ ಮೂಲಕ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ ಎನ್ ಟಿ ಆರ್ ಅವರು, ಅವರ ತಾತ ಸೀನಿಯರ್ ಎನ್‌ಟಿಆರ್ ಅವರಂತೆ ಕಂಚಿನ ಕಂಠವನ್ನು ಹೊಂದಿದ್ದಾರೆ. ಡೈಲಾಗ್ ಮೊಡುಲೇಶನ್, ಡೆಲಿವರಿ ಮತ್ತು ಭಾಷೆಯ ಮೇಲಿನ ಹಿಡಿತ ಎನ್ ಟಿ ಆರ್ ಅವರ ಪ್ಲಸ್ ಪಾಯಿಂಟ್‌ಗಳು. ತೆಲುಗರ ಆರಾಧ್ಯದೈವವಾದ ಸೀನಿಯರ್ ಎನ್ ಟಿ ಆರ್ ಅವರಂತೆ ಹಾವ-ಭಾವ ಗೈರು ಗತ್ತು ಇದೆಲ್ಲವೂ ಜೂನಿಯರ್ ಎನ್ ಟಿ ಆರ್ ಅವರ ನಟನಾ ಕೌಶಲ್ಯದೊಂದಿಗೆ ಬೆರೆತುಹೋಗಿದೆ. ಹೀಗಾಗಿಯೇ ಅವರನ್ನು 'ಯಂಗ್ ಟೈಗರ್' ಅಂತ ನಂದಮೂರಿ ಅಭಿಮಾನಿಗಳು ಕರೆಯುವುದು.

  ಭಾರತೀಯ ಸಿನಿಮಾಂತ್ರಿಕ ಸಂಜಯ್ ಲೀಲಾ ಬನ್ಸಾಲಿ

  ಭಾರತೀಯ ಸಿನಿಮಾಂತ್ರಿಕ ಸಂಜಯ್ ಲೀಲಾ ಬನ್ಸಾಲಿ

  ಸಂಜಯ್ ಲೀಲಾ ಬನ್ಸಾಲಿ ಈ ಹೆಸರು ಕೇಳಿದ ತಕ್ಷಣವೇ ಅದ್ದೂರಿಯಾದ ಸೆಟ್‌ಗಳು.ಇಂದೆಂದೂ ನೋಡಿರದ ದೃಶ್ಯವೈಭವ, ರೋಮ್ಯಾಂಟಿಕ್ ಪ್ರೇಮಕಥೆಗಳು ಇದೆಲ್ಲವೂ ಕಣ್ಣಮುಂದೆ ಬರುತ್ತದೆ. ಸಂಜಯ್ ಲೀಲಾ ಬನ್ಸಾಲಿ ಭಾರತೀಯ ಸಿನಿಮಾ ರಂಗ ಕಂಡ ಒಬ್ಬ ಅದ್ಭುತ ಫಿಲಿಮ್ ಮೇಕರ್. 'ಜೋಧಾ ಅಕ್ಬರ್', 'ಬಾಜಿರಾವ್ ಮಸ್ತಾನಿ' 'ಪದ್ಮಾವತ್' ಅಂತಹ ಹಿಸ್ಟಾರಿಕಲ್ ಕಥೆಗಳು. 'ಬ್ಲಾಕ್' ನಂತ ಪ್ರಯೋಗಗಳು, 'ದೇವದಾಸ್' 'ಹಮ್ ದಿಲ್ ದೇ ಚುಕೆ ಸನಮ್' ಅಂತಹ ಪ್ರಣಯಭರಿತ ದೃಶ್ಯ ಕಾವ್ಯಗಳಿಂದ ಸಿನಿಮಾರಂಗವನ್ನು ಶ್ರೀಮಂತಗೊಳಿಸಿದ ನಿರ್ದೇಶಕ.

  ಪ್ರಸ್ತುತ 'ಗಂಗೂಬಾಯಿ ಕಾಠಿಯಾವಾಡಿ' ನಿರ್ದೇಶಿಸುತ್ತಿದ್ದು ಚಿತ್ರ ಜನವರಿ 6ರಂದು ಹಿಂದಿ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ.

  ಬನ್ಸಾಲಿ ಮುಂದಿನ ಚಿತ್ರ ಎನ್‌ಟಿಆರ್ ಜೊತೆಗೆ

  ಬನ್ಸಾಲಿ ಮುಂದಿನ ಚಿತ್ರ ಎನ್‌ಟಿಆರ್ ಜೊತೆಗೆ

  ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್‌ಗಳ ಮೇಲೆ ಕಣ್ಣಿಟ್ಟಿರುವ ಬಾಲಿವುಡ್ ಮಂದಿ ಈಗ ಅವರೊಂದಿಗೆ ಸ್ಟ್ರೈಟ್ ಹಿಂದಿ ಸಿನಿಮಾ ಮಾಡಲು ಎದುರುನೋಡುತ್ತಿದ್ದಾರೆ. ಈಗ ಇದೇ ಕ್ರಮದಲ್ಲಿ ಸಂಜೆ ಲೀಲಾ ಬನ್ಸಾಲಿ ಅವರು ಎನ್ ಟಿ ಆರ್ ಜೊತೆ ಭಾರಿ ಬಜೆಟ್‌ನ ಪ್ಯಾನ್ ಇಂಡಿಯಾ ಸಿನಿಮಾ ಮಾಡಲು ಮುಂದಾಗಿದ್ದಾರೆ. ಬನ್ಸಾಲಿ, ಎನ್ ಟಿ ಆರ್ ಅವರ ಜೊತೆ ಸಿನಿಮಾ ಮಾಡಲು ಮುಖ್ಯವಾದ ಕಾರಣವೆಂದರೆ, ಅವರ ಬಾಡಿ ಲಾಂಗ್ವೇಜ್, ಡೈಲಾಗ್ ಡೆಲಿವರಿ

  ನಟನಾ ಕೌಶಲ್ಯ ಅದರಲ್ಲೂ ಕೂಡ ಪೌರಾಣಿಕ, ಹಿಸ್ಟಾರಿಕಲ್ ಫಿಲಂಗಳು ಮಾಡಲು ಬೇಕಾದ ಗತ್ತು ಎನ್ ಟಿ ಆರ್ ಅವರಲ್ಲಿ ಪುಷ್ಕಳವಾಗಿ ತುಂಬಿರುವುದು. ಅಲ್ಲದೆ ಎನ್ ಟಿ ಆರ್ ಅವರು ಈಗಾಗಲೇ ಶ್ರೀರಾಮ, ಯಮರಾಜನ ಪಾತ್ರಗಳಲ್ಲಿ ಮಿಂಚಿದ್ದಾರೆ.

  ಎನ್ ಟಿ ಆರ್ ಅವರ ನಟನೆಯಿಂದ ಇಂಪ್ರೆಸ್ ಆಗಿರುವ ಬನ್ಸಾಲಿ ಅವರು ತಮ್ಮ ಮುಂದಿನ ಚಿತ್ರ ಎನ್ ಟಿ ಆರ್ ಅವರೊಂದಿಗೆ ಮಾಡಲು ನಿರ್ಧರಿಸಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಒಂದು ಸುತ್ತಿನ ಮಾತುಕತೆಯನ್ನು ಅವರೊಂದಿಗೆ ಮಾಡಿ ಮುಗಿಸಿದ್ದಾರೆ. ಅಲ್ಲದೆ ಎನ್ ಟಿ ಆರ್ ಅವರು ಕೂಡ ಬನ್ಸಾಲಿ ಅವರ ಜೊತೆಯಲ್ಲಿ ಸಿನಿಮಾ ಮಾಡಲು ಉತ್ಸುಕರಾಗಿದ್ದಾರೆ. ಹೀಗಾಗಿ ಮುಂದಿನ ವರ್ಷದ ಮಧ್ಯಂತರದಲ್ಲಿ ಇವರಿಬ್ಬರ ಕಾಂಬಿನೇಷನ್ ಸಿನಿಮಾ ಇರುತ್ತದೆ ಅಂತ ಟಾಲಿವುಡ್ ವರದಿ ಮಾಡುತ್ತಿದೆ.

  English summary
  Bollywood's star director Sanjay Leela Bhansali will direct a movie for Jr NTR. Movie will start from next month.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X