ಎಲ್ಲರಿಗೂ ಸಕತ್ ಶಾಕ್ ನೀಡಿದ ಸಲ್ಮಾನ್
ಹೀಗೂ ಉಂಟಾ ! ಎಂದು ನೆರೆದಿದ್ದ ಪ್ರೇಕ್ಷಕರು ಮೂಗಿನ ಮೇಲೆ ಬೆರಳಿಟ್ಟುಕೊಂಡು ನೋಡುತ್ತಿದ್ದಂತೆ ಹಿಂದಿ ಚಿತ್ರರಂಗದ ಪರಮ ವೈರಿಗಳು ಪರಮಾಪ್ತರಂತೆ ವರ್ತಿಸಿಬಿಟ್ಟಿದ್ದಾರೆ. ವೈಯಕ್ತಿಕ ಅಹಂಗಳನ್ನು ಬದಿಗೊತ್ತಿ ಸಲ್ಮಾನ್ ಖಾನ್ ನೇರವಾಗಿ ಶಾರುಖ್ ಬಳಿ ಬಂದು ಹಸ್ತಲಾಘವ ಮಾಡಿ ವಿಶ್ ಮಾಡಿದ್ದಾರೆ.
ಸಲ್ಮಾನ್ ಹಾಗೂ ಶಾರುಖ್ ಮತ್ತೆ ಒಂದಾಗಲು ಮತ್ತೊಂದು 'ಈದ್' ಬರಬೇಕು ಎಂದುಕೊಂಡಿದ್ದ ಅಭಿಮಾನಿಗಳಿಗೆ ಸಲ್ಲೂ ಸಣ್ಣದೊಂದು ಶಾಕ್ ನೀಡಿದ್ದಾರೆ. ಸ್ಟಾರ್ ಗಿಲ್ಡ್ ಪ್ರಶಸ್ತಿ 2014 ಪ್ರದಾನ ಸಮಾರಂಭದ ನೇರ ವರದಿ ಮಾಡುತ್ತಿರುವ ಒನ್ ಇಂಡಿಯಾ ಸಂಸ್ಥೆ ವರದಿಗಾರರ ಪ್ರಕಾರ ಇಬ್ಬರು ನಾಯಕ ನಟರು ಪರಸ್ಪರ ಕೈ ಕುಲುಕಿ, ಅಪ್ಪಿಕೊಂಡಿದ್ದರಲ್ಲಿ ಯಾವುದೇ ನಾಟಕೀಯತೆ ಕಂಡು ಬಂದಿಲ್ಲ.[ಸ್ಟಾರ್ ಗಿಲ್ಡ್ 2014 ಪ್ರಶಸ್ತಿ ವಿಜೇತರ ಪಟ್ಟಿ]
ಸ್ಟಾರ್ ಗಿಲ್ಡ್ ಪ್ರಶಸ್ತಿ 2014 ಪ್ರದಾನ ಸಮಾರಂಭದ ನಿರೂಪಕರಾಗಿರುವ ಸಲ್ಮಾನ್ ಖಾನ್ ಅವರು ಶಾರುಖ್ ಖಾನ್ ಅವರ ಚೆನ್ನೈ ಎಕ್ಸ್ ಪ್ರೆಸ್ ಚಿತ್ರದ ಯಶಸ್ಸಿಗೆ ಶುಭ ಹಾರೈಸಿದ ಸಲ್ಲೂ ಅಲ್ಲೂ ತನ್ನ ತುಂಟತನ ಬಿಡಲಿಲ್ಲ. ಕೊನೆಯಲ್ಲಿ ಶಾರುಖ್ ಖಾನ್ ಬಾಯಲ್ಲಿ 'ಜೈ ಹೋ' ಎಂದು ಹೇಳಿಸಿಬಿಟ್ಟರು. ಮುಂದೇನಾಯ್ತು? ಓದಿ...

ಸಲ್ಲೂ ಕೋರಿಕೆ ಕೇಳಿ ಅವಾಕ್ಕಾದ ಶಾರುಖ್
ಸಲ್ಮಾನ್ ಅವರ ಮುಂಬರುವ ಚಿತ್ರ 'ಜೈ ಹೋ' ಗೆ ಶಾರುಖ್ ಪರೋಕ್ಷವಾಗಿ ಪ್ರಚಾರ ನೀಡುವ ಮೂಲಕ ಸಲ್ಮಾನ್ ಎದುರು ಶಾರುಖ್ ಸೋಲೊಪ್ಪಿಕೊಂಡಿದ್ದಂತಾಯಿತು ಎಂದು ಅಭಿಮಾನಿಗಳು ಹರ್ಷಪಡುತ್ತಿದ್ದಾರೆ. ಇದು ಸಲ್ಮಾನ್ ಚಿತ್ರಕ್ಕೆ ಸಿಕ್ಕ ಬಹುದೊಡ್ಡ ಪ್ರಚಾರ ಎನ್ನಲಾಗುತ್ತಿದೆ. ಅಂದ ಹಾಗೆ, ಸ್ಲಂ ಡಾಗ್ ಮಿಲೇನಿಯರ್ ಚಿತ್ರದ ಹಾಡಿನ ಪದ' ಜೈ ಹೋ' ಸಮರ್ಥವಾಗಿ ಬಳಸಿಕೊಂಡ ಕಾಂಗ್ರೆಸ್ ಪಕ್ಷದ ಪರ ಶಾರುಖ್ ನಿಂತಿದ್ದರೆ, ಸಲ್ಮಾನ್ ಇತ್ತೀಚೆಗೆ ಮೋದಿ ಸಂಗಡ ಕಾಣಿಸಿಕೊಂಡಿದ್ದರು.

ಕಿಂಗ್ ಖಾನ್ ಕಂಗಲಾದ ಕ್ಷಣ
ಸಮಾರಂಭದಲ್ಲಿ ಕುಳಿತ್ತಿದ್ದ ಕಿಂಗ್ ಖಾನ್ ನೋಡಿ 'Shahrukh, kya ho raha hai? ಎಂದ ಸಲ್ಮಾನ್ ನಂತರ ಚೆನ್ನೈ ಎಕ್ಸ್ ಪ್ರೆಸ್ ಯಶಸ್ಸಿಗೆ ಅಭಿನಂದಿಸಿದರು. ಇದೇ ಶಾರುಖ್ ಗೆ ಶಾಕ್ ಎಂದರೆ ಕೊನೆಯಲ್ಲಿ ಜೈ ಹೋ ಎಂದು ಹೇಳಿಸಿ ಶಾರುಖ್ ರನ್ನು ಮತ್ತೆ ಸಲ್ಲೂ ಬಲೆಗೆ ಕೆಡವಿಕೊಂಡರು. ಸಭಿಕರನ್ನು ಚಪ್ಪಾಳೆ ಹೊಡೆದು ಸಂಭ್ರಮಿಸಿದರು.
2008ರಲ್ಲಿ ಕತ್ರೀನಾ ಕೈಫ್ ಅವರು ಸಲ್ಲೂಗೆ ಗೆಳತಿಯಾಗಿದ್ದ ಕಾಲ. ಕೈಫ್ ಹುಟ್ಟುಹಬ್ಬದ ದಿನ ಕಿಂಗ್ ಖಾನ್ ಹಾಗೂ ಸಲ್ಲೂಗೆ ಐಶ್ವರ್ಯಾ ರೈ ವಿಷಯದಲ್ಲಿ ಜಗಳ ಶುರುವಾಗಿದ್ದು ಇಲ್ಲಿ ತನಕ ಮುಂದುವರೆದಿತ್ತು.
ಸ್ಟಾರ್ ಗಿಲ್ಡ್ ಪ್ರಶಸ್ತಿ 2014 ಪ್ರದಾನ ಸಮಾರಂಭ
ಸ್ಟಾರ್ ಗಿಲ್ಡ್ ಪ್ರಶಸ್ತಿ 2014 ಪ್ರದಾನ ಸಮಾರಂಭದ ಒಂದಾದ ಕಿಂಗ್ ಖಾನ್ ಶಾರುಖ್ ಹಾಗೂ ಸಲ್ಮಾನ್ ಖಾನ್
ಒಂದಾದ ಶಾರುಖ್ ಹಾಗೂ ಸಲ್ಮಾನ್ ಖಾನ್
ಸ್ಟಾರ್ ಗಿಲ್ಡ್ ಪ್ರಶಸ್ತಿ 2014 ಪ್ರದಾನ ಸಮಾರಂಭದ ಒಂದಾದ ಕಿಂಗ್ ಖಾನ್ ಶಾರುಖ್ ಹಾಗೂ ಸಲ್ಮಾನ್ ಖಾನ್ ಎಂದು ಟ್ವೀಟ್ ಮಾಡಿದ ತರಣ್ ಆದರ್ಶ್
ಸ್ಟಾರ್ ಗಿಲ್ಡ್ ಪ್ರಶಸ್ತಿ 2014 ಪ್ರದಾನ
ಸ್ಟಾರ್ ಗಿಲ್ಡ್ ಪ್ರಶಸ್ತಿ 2014 ಪ್ರದಾನ ಸಮಾರಂಭದ ಸಂಪೂರ್ಣ ವರದಿಗಾಗಿ ನೋಡಿ


Click it and Unblock the Notifications











