ಟಾಪ್ ಲೆವಲ್‌ಗೆ ನಾನು ಹೋಗಬೇಕು, ಹೀಗಾಗಿ ಇನ್ಮುಂದೆ ಒಳ ಉಡುಪು ಹಾಕಲ್ಲ ; ಜ್ಯೋತಿಷಿ ಸಲಹೆ- ರಾಖಿ ಸಾವಂತ್ ನಿರ್ಧಾರ
ವೈಜ್ಞಾನಿಕ ಯುಗದಲ್ಲಿದ್ದರೂ ಕೂಡ ಜ್ಯೋತಿಷ್ಯದ ಮೇಲೆ ಹಲವರಿಗೆ ನಂಬಿಕೆ ಇದೆ. ಜ್ಯೋತಿಷ್ಯ ಹೇಳುವುದೆಲ್ಲಾ ಸತ್ಯನಾ? ಎಲ್ಲವನ್ನೂ ಕುಂಡಲಿಯಲ್ಲಿರುವ ಗ್ರಹಗಳೇನಿರ್ಧರಿಸುವುದಾದರೆ ವಿಜ್ಞಾನಿಗಳೇಕೆ ? ವಿಜ್ಞಾನವೇಕೆ ? ಎನ್ನುವ ಪ್ರಶ್ನೆ ಎದ್ದರೂ ಕೂಡ ಜ್ಯೋತಿಷ್ಯದ ಸುತ್ತ ಕುತೂಹಲ ಹೆಚ್ಚಾಗಿದೆ. ಜ್ಯೋತಿಷ್ಯಶಾಸ್ತ್ರವು ವಿಜ್ಞಾನವೇ. ಅದರಲ್ಲಿರುವ ವೈಜ್ಞಾನಿಕ ಅಂಶಗಳನ್ನು ಸಾಕಷ್ಟು ಗ್ರಂಥಗಳಲ್ಲಿ ನೋಡಬಹುದು ಎಂಬ ಅಭಿಪ್ರಾಯ ಕೂಡ ವ್ಯಕ್ತವಾಗುತ್ತದೆ.
ಇನ್ನು ಬದುಕಿನಲ್ಲಿ ನಿರಂತರ ಸೋಲುಗಳು ಎದುರಾದಾಗ ಹಲವರು ಈ ಜ್ಯೋತಿಷ್ಯಶಾಸ್ತ್ರದ ಮೊರೆ ಹೋಗುತ್ತಾರೆ. ಆದರೆ ಒಬ್ಬರ ಭಯವನ್ನೇ ಮತ್ತೊಬ್ಬರು ಬಂಡವಾಳ ಮಾಡಿಕೊಂಡಿರುವ ಕಾಲ ಇದು. ಈ ಕಾಲದಲ್ಲಿ ಮೂಢರನ್ನಾಗಿಸುವುದು ಕೂಡ ಹಲವರು ಕಲಿತ ಕಲೆ. ಈ ಕಲೆಗೆ ಸದ್ಯ ರಾಖಿ ಸಾವಂತ್ ಕೂಡ ಮರುಳಾಗಿದ್ದಾರಾ ಅಥವಾ ಪ್ರಚಾರದ ಗೀಳಾ ಗೊತ್ತಿಲ್ಲ. ಆದರೆ ರಾಖಿ ಸಾವಂತ್ ಅವರಾಡಿದ ಒಂದು ಮಾತು ಸದ್ಯ ವ್ಯಾಪಕ ಚರ್ಚೆಗೀಡಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಇವರದ್ದೊಂದು ವಿಡಿಯೋ ವೈರಲ್ ಆಗಿದೆ.

ವೈರಲ್ ಆದ ಈ ವಿಡಿಯೋದಲ್ಲಿ ರಾಖಿ ಸಾವಂತ್, ಒಂದು ವರ್ಷದವರೆಗೆ ಚಡ್ಡಿ ಮತ್ತು ಬನಿಯಾನ್ (ಒಳ ಉಡುಪು ) ಹಾಕದಂತೆ ನನಗೆ ಜ್ಯೋತಿಷಿಯೊಬ್ಬರು ಸೂಚನೆಯನ್ನು ನೀಡಿದ್ದಾರೆ. ಹೀಗೆ ಮಾಡಿದರೆ ನನ್ನ ವೃತ್ತಿ ಬದುಕು 'ಟಾಪ್ ಲೆವಲ್'ಗೆ ಹೋಗಲಿದೆಯಂತೆ ಎಂದು ಹೇಳಿದ್ದಾರೆ. ಹೀಗಾಗಿ ಉತ್ತುಂಗಕ್ಕೇರಲು ನಾನು ಒಳ ಉಡುಪು ಹಾಕಿಕೊಳ್ಳುವುದನ್ನು ಬಿಟ್ಟಿದ್ದೇನೆ ಎಂದು ಹೇಳಿದ್ದಾರೆ.
ರಾಖಿ ಸಾವಂತ್ ಆಡಿದ ಈ ಮಾತುಗಳಿಂದ ಮುಜುಗರಕ್ಕೊಳಗಾದ ನಿರೂಪಕಿ ಈಗಲೂ ಹಾಕಿಲ್ಲವೇ ಎಂದು ಕೇಳಲು ಮುಂದಾದಾಗ ನೀವು ಸಂಕೋಚ ಪಡಬೇಡಿ ಈಗಲೂ ಕೂಡ ನಾನೇನು ಹಾಕಿಲ್ಲ. ಮೇಲೆಯೂ ಹಾಕಿಲ್ಲ. ಕೆಳಗಡೆಯೂ ಹಾಕಿಲ್ಲ ಎಂದು ಹೇಳಿದ್ದಾರೆ. ಶೆಕೆ ಜಾಸ್ತಿ ಗಾಳಿ ಆಡಬೇಕಲ್ವಾ ಎಂದಿದ್ದಾರೆ. ನನ್ನ ವೃತ್ತಿ ಬದುಕನ್ನು ನಾನು ಮತ್ತೊಂದು ಹಂತಕ್ಕೆ ಕರೆದೊಯ್ಯಬೇಕು, ಹೀಗಾಗಿ ಫಾಲೋ ಮಾಡ್ತಿದ್ದೇನೆ ಎಂದು ಹೇಳಿರುವ ರಾಖಿ ಸಾವಂತ್, ''ಕಂಡರೆ ತಾನೇ ಮಾರಾಟವಾಗುವುದು'' ಎಂದು ಹೇಳಿದ್ದಾರೆ.

''ಫಿಲ್ಮಿಗ್ಯಾನ್'' ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು ನಾಲ್ಕು ದಿನದಲ್ಲಿ 399,000 ಕ್ಕೂ ಅಧಿಕ ಜನ ವಿಡಿಯೋವನ್ನು ಲೈಕ್ ಮಾಡಿದ್ದಾರೆ. 20,000ಕ್ಕೂ ಅಧಿಕ ಜನ ತಮ್ಮ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಅಂದ್ಹಾಗೇ ಚಿತ್ರರಂಗದಲ್ಲಿ ದೊಡ್ಡ ದೊಡ್ಡ ತಾರೆಯರು ಸದಾ ಸುದ್ದಿಯಲ್ಲಿರಲು ಪಿಆರ್ ಏಜೆನ್ಸಿಗಳನ್ನು ಕೆಲಸಕ್ಕೆ ಹಚ್ಚಿರುತ್ತಾರೆ. ಈ ಕೆಲಸಕ್ಕೆ ತಮ್ಮ ಜೇಬಿಂದ ತಿಂಗಳಿಗೆ ಲಕ್ಷಾಂತರ ಹಣವನ್ನು ನೀರಿನಂತೆ ಖರ್ಚು ಮಾಡುತ್ತಾರೆ. ಆದರೂ ಕೂಡ ಕೆಲ ಒಮ್ಮೆ ಇವರ ಸುದ್ದಿಗಳು ಸುದ್ದಿಯಾಗಲ್ಲ. ಇವರ ಹೆಸರು ಸದ್ದು ಮಾಡಲ್ಲ. ಆದರೆ ರಾಖಿ ಸಾವಂತ್ ಮಾತ್ರ ಇದಕ್ಕೆ ತದ್ವಿರುದ್ದ. ಒಂದು ನಾಯ ಪೈಸೆ ಖರ್ಚು ಮಾಡದೇ ಈ ತರಹದ ಬಾಲಿಶ, ಹಾಸ್ಯಾಸ್ಪದ ಹೇಳಿಕೆಗಳನ್ನು ನೀಡುವ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಾರೆ. ವೈರಲ್ ಆಗುತ್ತಾರೆ.
ಜನರ ನಾಡಿಮಿಡಿತ ರಾಖಿ ಸಾವಂತ್ ಅವರಿಗೆ ಚೆನ್ನಾಗಿ ಗೊತ್ತು. ಇದಕ್ಕೆ ಮತ್ತೊಂದು ಉದಾಹರಣೆಯಂತೆ ಈ ವಿಡಿಯೋ ಇದ್ದು ಗ್ರಹ ಮತ್ತು ನಕ್ಷತ್ರಗಳ ಸಂಚಾರಕ್ಕೂ ಹಾಗೂ ರಾಖಿ ಸಾವಂತ್ ಹಾಕಿಕೊಳ್ಳುವ ಒಳುಡುಪಿಗೆ ಸಂಬಂಧ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಆಗಲೇ ಹೇಳಿದಂತೆ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ರಾಕೆಟ್ ವೇಗದಲ್ಲಿ ಮುನ್ನುಗ್ಗುತ್ತಿದೆ. ರಾಖಿ ಸಾವಂತ್ ಅವರ ಈ ಹೇಳಿಕೆಯ ವಿರುದ್ಧ ಆಕ್ರೋಶ ಕೂಡ ವ್ಯಕ್ತವಾಗುತ್ತಿದೆ.


Click it and Unblock the Notifications











