"ಕೊಹ್ಲಿ ಅಂದ್ರೆ ಹುಚ್ಚು ಪ್ರೀತಿ"; ಇದೆಲ್ಲಾ ಈಗ ಬೇಕಾ ಎಂದ ಮೃಣಾಲ್
'ಸೀತಾರಾಮಂ' ಚಿತ್ರದಲ್ಲಿ ನಟಿಸಿ ದಿಢೀರನೆ ಸೌತ್ ಸಿನಿದುನಿಯಾದಲ್ಲಿ ಕ್ರೇಜ್ ಸೃಷ್ಟಿಸಿಕೊಂಡ ಬೆಡಗಿ ಮೃಣಾಲ್ ಠಾಕೂರ್. ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಆಕೆ ಬ್ಯುಸಿಯಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲೂ ಆಕ್ಟೀವ್ ಆಗಿರುವ ಚೆಲುವೆ ಹಾಟ್ ಹಾಟ್ ಫೋಟೊಶೂಟ್ ಮೂಲಕ ಮೋಡಿ ಮಾಡುತ್ತಿದ್ದಾರೆ.
ಮೃಣಾಲ್ ಆಗಾಗ್ಗೆ ಫ್ಯಾಷನ್ ಶೋಗಳಲ್ಲಿ ರ್ಯಾಂಪ್ ವಾಕ್ ಮಾಡಿ ಗಮನ ಸೆಳೆಯುತ್ತಿರುತ್ತಾರೆ. ತಮ್ಮ ಬೋಲ್ಡ್ ಸ್ಟೇಟ್‌ಮೆಂಟ್‌ಗಳಿಂದಲೂ ಸುದ್ದಿ ಆಗುತ್ತಾರೆ. ಮರಾಠಿ ಚೆಲುವೆ ಒಂದಷ್ಟು ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿದರೂ ಬ್ರೇಕ್ ಸಿಕ್ಕಿರಲಿಲ್ಲ. ಆದರೆ ದುಲ್ಕರ್ ಸಲ್ಮಾನ್ ಜೊತೆ ನಟಿಸಿದ ತೆಲುಗು ಸಿನಿಮಾ 'ಸೀತಾರಾಮಂ' ಹಿಟ್ ಆಗಿತ್ತು. ಈ ಚಿತ್ರ ಬೇರೆ ಭಾಷೆಗಳಿಗೂ ಡಬ್ ಆಗಿ ಸದ್ದು ಮಾಡಿತ್ತು.

ಇನ್ನು ವಿರಾಟ್ ಕೊಹ್ಲಿಯನ್ನು ಮೃಣಾಲ್ ಪ್ರೀತಿಸುತ್ತಿದ್ದರು ಎಂದು ವದಂತಿ ಹಿಂದೆ ಹರಿದಾಡಿತ್ತು. ಕೊಹ್ಲಿ ಮೇಲೆ ಮೃಣಾಲ್ ಮನಸ್ಸು ಈಗ ಅನುಷ್ಕಾ ಕಥೆ ಏನು ಎನ್ನುವಂತೆ ಬಾಲಿವುಡ್ ಮಾಧ್ಯಮವೊಂದು ವದಂತಿ ಕ್ರಿಯೇಟ್ ಮಾಡಿತ್ತು. ಹಿಂದೆ ಮೃಣಾಲ್ ಕ್ರಿಕೆಟಿಗರಾದ ಕೊಹ್ಲಿ ಹಾಗೂ ಸಚಿನ್ ಬಗ್ಗೆ ಆಡಿದ ಮಾತುಗಳನ್ನು ಅದಕ್ಕೆ ಸಾಕ್ಷಿ ಎನ್ನುವಂತೆ ಬಿಂಬಿಸಿತ್ತು.
ಸದ್ಯ ಇದೇ ವಿಚಾರದ ಬಗ್ಗೆ ಮೃಣಾಲ್ ಠಾಕೂರ್ ಮತ್ತೊಮ್ಮೆ ಪ್ರತಿಕ್ರಿಯಿಸಿದ್ದಾರೆ. ಆ ವದಂತಿಯನ್ನು ಹೈಲೆಟ್ ಮಾಡಿ ಬಾಲಿವುಡ್ ಮಾಧ್ಯಮವೊಂದು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದರು. ಇದಕ್ಕೆ ಮೃಣಾಲ್ ಪ್ರತಿಕ್ರಿಯಿಸಿದ್ದಾರೆ. ಈ ರೀತಿ ಸುದ್ದಿ ಹಬ್ಬಿಸುವುದು ನಿಲ್ಲಿಸಿ ಎಂದು ಕಮೆಂಟ್ ಮಾಡಿದ್ದಾರೆ. ಸದ್ಯ ಇದು ವೈರಲ್ ಆಗುತ್ತಿದೆ.
ಅಂದಹಾಗೆ ಮೃಣಾಲ್ 'ಜೆರ್ಸಿ' ಸಿನಿಮಾ ಪ್ರಚಾರದ ವೇಳೆ ವಿರಾಟ್ ಕೊಹ್ಲಿ ಬಗ್ಗೆ ಮಾತನಾಡಿದ್ದರು. "ನನ್ನ ಸಹೋದರನಿಗೆ ಕ್ರಿಕೆಟ್ ಅಂದ್ರೆ ಬಹಳ ಇಷ್ಟ. ಹಾಗಾಗಿ ನಾನು ಕೂಡ ಅವನೊಟ್ಟಿಗೆ ಕ್ರಿಕೆಟ್ ನೋಡುತ್ತಿದ್ದೆ. 5 ವರ್ಷಗಳ ಹಿಂದೆ ಅವನೊಟ್ಟಿಗೆ ಸೇರಿ ಸ್ಟೇಡಿಯಂಗೆ ಹೋಗಿ ಲೈವ್ ಮ್ಯಾಚ್ ನೋಡಿದ್ದೆ. ಬ್ಲೂ ಜೆರ್ಸಿ ತೊಟ್ಟು ಟೀಂ ಇಂಡಿಯಾಗೆ ಬೆಂಬಲ ಸೂಚಿಸಿದ್ದೆ"
"ಇನ್ನು ವಿರಾಟ್ ಕೊಹ್ಲಿಯನ್ನು ಹುಚ್ಚು ಹುಚ್ಚಾಗಿ ಪ್ರೀತಿಸಿದ ದಿನಗಳಿವೆ. ಸಚಿನ್ ತೆಂಡೂಲ್ಕರ್ ಅಂದ್ರೆ ಕೂಡ ಇಷ್ಟ. ಈಗ ನಾನು ಕ್ರಿಕೆಟ್ ಹಿನ್ನೆಲೆ ಚಿತ್ರದಲ್ಲಿ ನಟಿಸುತ್ತಿರುವುದು ಬಹಳ ಖುಷಿಯಿದೆ" ಎಂದು ಮೃಣಾಲ್ ಹೇಳಿಕೊಂಡಿದ್ದರು. ಆದರೆ ಇದೀಗ ವಿರಾಟ್ ಕೊಹ್ಲಿ ಜೊತೆ ಮೃಣಾಲ್ ಪ್ರೀತಿಲಿ ಬಿದ್ದಿದ್ದಾರೆ ಎನ್ನುವಂತೆ ಸುದ್ದಿ ಹಬ್ಬಿರುವುದಕ್ಕೆ ಆಕೆ ಬೇಸರ ವ್ಯಕ್ತಪಡಿಸಿದ್ದಾರೆ.
ಅಂದಹಾಗೆ 4 ಸಿನಿಮಾಗಳಲ್ಲಿ ಮೃಣಾಲ್ ಠಾಕೂರ್ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಬಂದ 'ಕಲ್ಕಿ 2898AD' ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಒಂದೇ ಒಂದು ಸನ್ನಿವೇಶದಲ್ಲಿ ಹೀಗೆ ಬಂದು ಹೋಗುವ ಪಾತ್ರವದು. ಇನ್ನು 'ಪೂಜಾ ಮೇರಿ ಜಾನ್', 'ಹೈ ಜವಾನಿ ತೊ ಇಷ್ಕ್ ಹೊನಾ ಹೈ' ಹಾಗೂ 'ಸನ್ ಆಫ್ ಸರ್ದಾರ್-2' ಸಿನಿಮಾಗಳಲ್ಲಿ ಮೃಣಾಲ್ ನಟಿಸುತ್ತಿದ್ದಾರೆ.
ಕೆಲ ತೆಲುಗು ಹಾಗೂ ತಮಿಳು ಸಿನಿಮಾಗಳಿಗೂ ಮೃಣಾಲ್ ಹೆಸರು ಕೇಳಿಬರ್ತಿದೆ. ಮಹಾರಾಷ್ಟ್ರದ ಧುಲೆಯಲ್ಲಿ ಹುಟ್ಟಿ ಬೆಳೆದ ಚೆಲುವೆ ಮೊದಲಿಗೆ ಮರಾಠಿ ಸಿನಿಮಾಗಳಲ್ಲಿ ಮಿಂಚಿದ್ದರು. ಬಳಿಕ 'ಲವ್ ಸೋನಿಯಾ' ಎನ್ನುವ ಬಾಲಿವುಡ್ ಸಿನಿಮಾದಲ್ಲಿ ನಂತರ ನಟಿಸಿದ್ದರು. ಬಳಿಕ 'ತೂಫಾನ್', 'ಜೆರ್ಸಿ' ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು.


Click it and Unblock the Notifications











