ಬದುಕಿ ಬದುಕಲು ಬಿಡಿ, ಕರೀನಾ ಕಪೂರ್ ಕೋಪ, ತಾಪ, ಹತಾಶೆ, ಆತಂಕ..!

ಸೆಲೆಬ್ರಿಟಿಗಳ ಖಾಸಗಿ ಬದುಕು, ಮನರಂಜನೆಯ ಸರಕು ಆಗಿ ಬದಲಾಗಿದ್ದು ಇಂದು ನಿನ್ನೆಯಲ್ಲ. ಅನೇಕ ವರ್ಷದ ಹಿಂದೆಯೇ .. ಬಣ್ಣದ ಪ್ರಪಂಚಲ್ಲಿರುವ ಬಣ್ಣ .. ಬಣ್ಣದ .. ಜನ ಹೋದಲ್ಲಿ .. ಬಂದಲ್ಲಿ .. ಕ್ಯಾಮರಾಗಳನ್ನ ಕರೆಸಿಕೊಳ್ಳುವ ಮೂಲಕ ತಮ್ಮ ಕೈಯಾರೆ ತಮ್ಮ ಖಾಸಗಿತನಕ್ಕೆ ಕೊಳ್ಳಿ ಇಟ್ಟಿದ್ದಾರೆ. ಆದರೆ ಅದರ ತೀವೃತೆ ಈಗ ಅವರ ಅನುಭವಕ್ಕೆ ಬರುತ್ತಿದೆ. ಇದಕ್ಕೆ ಕರೀನಾ ಕಪೂರ್ ಖಾನ್ ಸದ್ಯದ ಉದಾಹರಣೆ.

ಹೌದು, ಸೈಫ್ ಅಲಿ ಖಾನ್ ಮೇಲೆ ನಡೆದ ಹಲ್ಲೆಯಿಂದ ಕರೀನಾ ದಿಗಿಲುಗೊಂಡಿದ್ದಾರೆ. ತಲೆಯಲ್ಲಿ ಹತ್ತು ಹಲವು ಪ್ರಶ್ನೆಗಳು ಗಿರಕಿ ಹೊಡೆಯುತ್ತಿವೆ. ಇನ್ನೂ ಕೇವಲ ಕರೀನಾ ಮಾತ್ರ ಅಲ್ಲ ಇಡೀ ಕಪೂರ್ ಖಾನ್ದಾನ್ ಮತ್ತು ಪಟೌಡಿ ಮನೆತನ ಈ ಹಲ್ಲೆಯಿಂದ ವಿಚಲಿತಗೊಂಡಿದೆ. ಆದರೆ, ಇದನ್ನು ಅರಿಯದೆ ಈ ಕಷ್ಟದ ಸಮಯದಲ್ಲಿ ಕೂಡ ಬಾಲಿವುಡ್‌ನ ಪಾಪರಾಜಿಗಳು ಕರೀನಾ ಕಪೂರ್ ಬೆನ್ನು ಬಿಡುತ್ತಿಲ್ಲ. ಬದಲಿಗೆ ಸೈಫ್ ಅಲಿ ಖಾನ್ ಮತ್ತು ಕರೀನಾ ವಾಸ ಮಾಡುವ ಸದ್ಗುರು ಶರಣ್ ಅಪಾರ್ಟ್‌ಮೆಂಟ್ ಹೊರಗಡೆ ಬೀಡು ಬಿಟ್ಟಿದ್ದಾರೆ. 24 ಗಂಟೆ ಸೈಫ್ ಅಲಿ ಖಾನ್ ಅವರ ಮನೆಯ ಕಾವಲನ್ನು ಕಾಯುತ್ತಿದ್ದಾರೆ. ಮನೆ ಒಳಗೆ ಹೊರಗೆ ಬರುವವರನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯುತ್ತಿದ್ದಾರೆ.

stop-this-now-kareena-kapoor-slams-paparazzi-for-filming-her-home-and-deletes-post-later

ಇದೇ ಸಮಯದಲ್ಲಿ ಕರೀನಾ ಕಪೂರ್ ಅವರ ಮನೆಗೆ ಅವರ ಮಕ್ಕಳಾದ ತೈಮೂರ್ ಮತ್ತು ಜೇ ಅಲಿಗೆ ಹೊಸ ಆಟಿಕೆ ಸಾಮಾನುಗಳು ಬಂದಿವೆ. ಇದನ್ನು ಕೂಡ ಲೈಕ್.. ಶೇರ್.. ಸಬ್‌ಸ್ಕ್ರೈಬ್.. ಆಸೆಗೆ ಚಿತ್ರೀಕರಿಸಿರುವ ಈ ಪಾಪರಾಜಿಗಳು ಮನಬಂದಂತೆ ಕ್ಯಾಪ್ಶನ್ ನೀಡಿ ತಮ್ಮ ತಮ್ಮ ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ. ಪಾಪರಾಜಿಗಳ ಈ ಕೆಲಸ ಕರೀನಾ ಕಪೂರ್ ಖಾನ್ ಅವರ ಗಮನಕ್ಕೆ ಬಂದಿದೆ. ಪಾಪರಾಜಿಗಳ ಈ ವರ್ತನೆ ಪಿತ್ತ ನೆತ್ತಿಗೇರುವಂತೆ ಮಾಡಿದೆ.

ಹೀಗಾಗಿಯೇ ಕೆರಳಿ ಕೆಂಡವಾದ ಕರೀನಾ ಕಪೂರ್ ಇದೆಲ್ಲ ಈಗಲೇ ನಿಲ್ಲಿಸಿ ಎಂದು ಗುಡುಗಿದ್ದಾರೆ. ನಿಮಗೆಲ್ಲ ಹೃದಯ ಇದೆಯಾ ಎಂದು ಪ್ರಶ್ನೆ ಮಾಡಿ ನಮ್ಮನ್ನು ನಮ್ಮ ಪಾಡಿಗೆ ಇರಲು ಬಿಡಿ ಎಂದು ಕೋಪದಲ್ಲಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡು ಕೈ ಮುಗಿದಿದ್ದಾರೆ. ಆದರೆ, ಆ ನಂತರ ಅದೇನಾಯ್ತೋ. ಹಾಕಿದ್ದ ಫೋಸ್ಟ್‌ನ ಕರೀನಾ ಡಿಲೀಟ್ ಮಾಡಿದ್ದಾರೆ.

stop-this-now-kareena-kapoor-slams-paparazzi-for-filming-her-home-and-deletes-post-later

ಸದ್ಯ ಕರೀನಾ ಹಂಚಿಕೊಂಡು ಆ ನಂತರ ಡಿಲೀಟ್ ಮಾಡಿದ ಫೋಸ್ಟ್‌ನ ಸ್ಕ್ರೀನ್ ಶಾಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಂದ್ಹಾಗೇ ಸೈಫ್ ಅಲಿ ಖಾನ್ ಆಸ್ಪತ್ರೆಗೆ ದಾಖಲಾದಾಗ ಕರೀನಾ ಕಪೂರ್ ಇದೇ ಪಾಪರಾಜಿಗಳಿಗೆ ಮನವಿಯನ್ನು ಮಾಡಿಕೊಂಡಿದ್ದರು. ನಾವೆಲ್ಲ ತುಂಬಾ ಆಘಾತಕ್ಕೊಳಗಾಗಿದ್ದೇವೆ ದಯಮಾಡಿ ನಮ್ಮ ಖಾಸಗಿತನಕ್ಕೆ ಬೆಲೆ ಕೊಡಿ ಎಂದು ಕೈ ಮುಗಿದು ಬೇಡಿಕೊಂಡಿದ್ದರು. ಆದರೆ, ಕರೀನಾ ಕಪೂರ್ ಅವರ ಆಗ ಕೂಡ ಬೆಲೆ ಸಿಗಲಿಲ್ಲ. ಈಗ ಕೂಡ ಬೆಲೆ ಸಿಕ್ಕಿಲ್ಲ. ಆಕ್ರೋಶ ಹೊರಹಾಕಿದರು ಕೂಡ ಪಾಪರಾಜಿಗಳು ಸೈಫ್ ಅಲಿ ಖಾನ್ ಮನೆಯ ಆವರಣದಿಂದ ಇನ್ನು ಕದಲಿಲ್ಲ.

ಇನ್ನುಳಿದಂತೆ ಕಳೆದ ಒಂದು ವಾರದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೈಫ್ ಅಲಿ ಖಾನ್ ಇಂದು ಮಧ್ಯಾಹ್ನ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದಾರೆ.ಇದರ ನಡುವೆ ಮನೆಯನ್ನು ಬದಲಿಸುವ ತೀರ್ಮಾನಕ್ಕೆ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಬಂದಿದ್ದಾರೆ ಎನ್ನುವ ಸುದ್ದಿ ಕೂಡ ಗುಲ್ಲಾಗಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X