ಸ್ಟಾರ್ ನಟಿಯನ್ನು ಹಿಂಬಾಲಿಸಿದ ಬೀದಿ ನಾಯಿ.. ವೀಡಿಯೋ ಫುಲ್ ವೈರಲ್
ಸಿನಿಮಾ ತಾರೆಯರು ಸಾರ್ವಜನಿಕವಾಗಿ ಓಡಾಡುವುದೇ ಕಷ್ಟ ಎಂದು ಆಗಾಗ್ಗೆ ಬೇಸರ ವ್ಯಕ್ತಪಡಿಸುತ್ತಿರುತ್ತಾರೆ. ನಮಗೂ ನಾರ್ಮಲ್ ಲೈಫ್ ಇರುತ್ತದೆ. ನಾವು ಬೀದಿ ಬದಿಯ ಬಂಡಿಯಲ್ಲಿ ಪಾನಿಪುರಿ ತಿನ್ನಬೇಕು, ರಸ್ತೆಯಲ್ಲಿ ಸಾಮಾನ್ಯರಂತೆ ಅಡ್ಡಾಡಬೇಕು ಎನ್ನುತ್ತಿರುತ್ತಾರೆ.
ಒಮ್ಮೆ ಜನಪ್ರಿಯತೆ ಬಂದುಬಿಟ್ಟರೆ ಅದನ್ನೆಲ್ಲಾ ಮಿಸ್ ಮಾಡಿಕೊಳ್ಳುತ್ತೇವೆ. ಕಾರಣ ಅಭಿಮಾನಿಗಳು ಮುಗಿಬೀಳುತ್ತಾರೆ. ಸೆಲ್ಫಿ ಕೇಳುತ್ತಾರೆ. ಶೇಕ್ ಹ್ಯಾಂಡ್ ಮಾಡುತ್ತಾರೆ ಹೀಗೆ ಏನೇನೋ ಸಮಸ್ಯೆ. ಆದರೂ ಇದು ಚೆನ್ನಾಗಿರುತ್ತದೆ. ಜನ ನಮ್ಮನ್ನು ಗುರ್ತಿಸುತ್ತಾರೆ. ಅಷ್ಟು ಪ್ರೀತಿ ಕೊಡುತ್ತಾರೆ ಎನ್ನುವುದೇ ಖುಷಿಯ ಸಂಗತಿ ಎನ್ನುತ್ತಾರೆ. ಇನ್ನು ಬಾಲಿವುಡ್ ನಟ, ನಟಿಯರ ಕ್ರೇಜ್ ಬಗ್ಗೆ ಹೇಳುವುದೇ ಬೇಕಾಗಿಲ್ಲ.

ಬಾಲಿವುಡ್ ಬ್ಯೂಟಿ ಕಿಯಾರಾ ಅಡ್ವಾಣಿಗೆ ಒಳ್ಳೆ ಫ್ಯಾನ್ ಫಾಲೋಯಿಂಗ್ ಇದೆ. ಹಾಟ್ ಹಾಟ್ ಫೋಟೊಶೂಟ್‌ಗಳಿಂದ ಚೆಲುವೆ ಆಗಾಗ್ಗೆ ಮೋಡಿ ಮಾಡುತ್ತಿದ್ದಾರೆ. ಕನ್ನಡದ 'ಟಾಕ್ಸಿಕ್' ಚಿತ್ರದಲ್ಲಿ ಕಿಯಾರಾ ನಟಿಸುತ್ತಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಆದರೆ ಅಧಿಕೃತವಾಗಿ ಆ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಸದ್ಯ ತೆಲುಗಿನ 'ಗೇಮ್ ಚೇಂಜರ್' ಚಿತ್ರದಲ್ಲಿ ಆಕೆ ನಟಿಸಿದ್ದಾರೆ.
ಕಳೆದ ವರ್ಷವಷ್ಟೆ ಬಾಲಿವುಡ್ ನಟ ಸಿದ್ದಾರ್ಥ್ ಮಲ್ಹೋತ್ರಾ ಕೈ ಹಿಡಿದ ಕಿಯಾರಾ ಬಳಿಕ ಕೂಡ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ಕಿಯಾರಾ ಎಲ್ಲೇ ಹೋದರು ಅಭಿಮಾನಿಗಳು ಮುತ್ತಿಕೊಳ್ಳುತ್ತಾರೆ. ಅಭಿಮಾನಿಗಳು ಕೂಡ ಆಕೆಯನ್ನು ನೋಡುವುದು ಕಷ್ಟ ಎನ್ನುವ ಸಮಯದಲ್ಲಿ ಬೀದಿ ನಾಯಿಯೊಂದು ಆಕೆಯನ್ನು ಹಿಂಬಾಲಿಸಿರುವ ವಿಡಿಯೋ ವೈರಲ್ ಆಗುತ್ತಿದೆ.

ಆಕೆ ಹೊರಗೆ ಕಾಲಿಟ್ಟರೆ ಸಾಕು ಅಭಿಮಾನಿಗಳು ನೋಡಲು ಮುಗಿಬೀಳುತ್ತಾರೆ. ಅಭಿಮಾನಿಗಳನ್ನು ನಿಯಂತ್ರಿಸಲು ಬೌನ್ಸರ್‌ಗಳು ಸಿದ್ಧರಾಗಿ ಇರುತ್ತಾರೆ. ಅಷ್ಟೇ ಭದ್ರತೆ ನಡುವೆ ಬೀದಿ ನಾಯಿ ಆಕೆಯನ್ನು ಹಿಂಬಾಲಿಸಿದೆ. ಮುಂಬೈ ಏರ್‌ಪೋರ್ಟ್‌ನಲ್ಲಿ ಕಿಯಾರಾ ಕಾರ್ ಇಂದ ಇಳಿದು ಒಳಗೆ ಹೊರಟಿದ್ದಾರೆ. ಆಗ ಬೀದಿ ನಾಯಿಯೊಂದು ಹಿಂದೆ ಬಂದಿದೆ.
ಬಳಿಕ ಪಾಪಾರಾಜಿಗಳು(ಫೋಟೊಗ್ರಾಫರ್ಸ್) ಆಕೆಯನ್ನು ಮುತ್ತಿಕೊಂಡಿದ್ದಾರೆ. ಫೋಟೊ, ವಿಡಿಯೋ ಮಾಡಲು ಮುಂದಾಗಿದ್ದಾರೆ. ಬಳಿಕ ಆ ಬೀದಿ ನಾಯಿ ಅಲ್ಲಿಂದ ಹೊರಟು ಹೋಗಿರುವುದನ್ನು ನೋಡಬಹುದು. ವೀಡಿಯೋ ವೈರಲ್ ಆಗುತ್ತಿದ್ದಂತೆ ಮುಂಬೈ ವಿಮಾನ ನಿಲ್ದಾಣ ಪ್ರಾಧಿಕಾರದ ಮೇಲೆ ಟೀಕೆಗಳು ಕೇಳಿ ಬರುತ್ತಿವೆ. ಬೀದಿನಾಯಿಗಳು ವಿಮಾನ ನಿಲ್ದಾಣದ ಒಳಗೆ ಹೇಗೆ ಇರುತ್ತವೆ ಎಂದು ಕೆಲವರು ಪ್ರಶ್ನಿಸುತ್ತಾರೆ. ಪ್ರಯಾಣಿಕರ ಮೇಲೆ ದಾಳಿ ಮಾಡಿದರೆ ಪರಿಸ್ಥಿತಿ ಏನಾಗುತ್ತೋ ಎಂದು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
2014ರಲ್ಲಿ ಬಂದ 'ಫಗ್ಲಿ' ಸಿನಿಮಾ ಮೂಲಕ ಕಿಯಾರಾ ಅದ್ವಾನಿ ಬಾಲಿವುಡ್‌ಗೆ ಎಂಟ್ರಿ ಕೊಟ್ಟರು. 'ಎಂ. ಎಸ್ ಧೋನಿ' ಚಿತ್ರದಲ್ಲಿ ನಾಯಕಿಯಾಗಿ ಮೋಡಿ ಮಾಡಿದರು. 'ಲಸ್ಟ್ ಸ್ಟೋರಿಸ್' ಚಿತ್ರದಲ್ಲಿ ಮೇಘಾ ಉಪಾಧ್ಯಾಯ್ ಆಗಿ ಪಡ್ಡೆ ಹುಡುಗರ ಗಮನ ಸೆಳೆದರು. 'ಕಬೀರ್ ಸಿಂಗ್' ಚಿತ್ರದ ಪ್ರೀತಿ ಪಾತ್ರಕ್ಕೂ ಮೆಚ್ಚುಗೆ ವ್ಯಕ್ತವಾಗಿತ್ತು. ಇತ್ತೀಚಿನ ವರ್ಷಗಳಲ್ಲಿ 'ಶೇರ್‌ಷಾ', 'ಭೂಲ್ ಬೂಲಯ್ಯ', 'ಸತ್ಯ ಪ್ರೇಮ್ ಕಿ ಕಥಾ' ಚಿತ್ರಗಳಲ್ಲಿ ಕಿಯಾರ ನಟಿಸಿ ಕಮಾಲ್ ಮಾಡಿದ್ದರು.
ಹೃತಿಕ್ ರೋಷನ್ ಹಾಗೂ ಜ್ಯೂ. ಎನ್‌ಟಿಆರ್ ನಟನೆಯ 'ವಾರ್-2' ಚಿತ್ರದಲ್ಲಿ ಸಹ ಕಿಯಾರಾ ಅಡ್ವಾಣಿ ನಟಿಸುತ್ತಿದ್ದಾರೆ. ಈಗಾಗಲೇ ಈ ಚಿತ್ರದ ಒಂದು ಶೆಡ್ಯೂಲ್ ಚಿತ್ರೀಕರಣ ಮುಗಿದಿದೆ, 'ಟಾಕ್ಸಿಕ್' ಚಿತ್ರದಲ್ಲಿ ಆಕೆ ನಟಿಸೋದು ನಿಜಾನಾ? ಎಂದು ಕಾದು ನೋಡಬೇಕಿದೆ. ಗೀತು ಮೋಹನ್ ದಾಸ್ ಈ ಪ್ಯಾನ್ ಇಂಡಿಯಾ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.


Click it and Unblock the Notifications











