For Quick Alerts
  ALLOW NOTIFICATIONS  
  For Daily Alerts

  ಸಲ್ಮಾನ್ ಖಾನ್ ಸಿನಿಮಾಕ್ಕೆ ಸುಭಾಷ್ ಘಾಯ್ ಸಜ್ಜು

  |
  ಬಾಲಿವುಡ್ ಖ್ಯಾತ ಚಿತ್ರ ನಿರ್ದೇಶಕ ಹಾಗೂ ನಿರ್ಮಾಪಕ ಸುಭಾಷ್ ಘಾಯ್, ಮತ್ತೊಮ್ಮೆ ಭಾರಿ ಸುದ್ದಿಯಲ್ಲಿದ್ದಾರೆ. ಕಾರಣ, ಅವರು ಬಾಲಿವುಡ್ ಸದ್ಯದ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರನ್ನು ನಾಯಕರನ್ನಾಗಿಸಿಕೊಂಡು ಹಿಂದಿ ಚಿತ್ರವೊಂದನ್ನು ನಿರ್ದೇಶಿಸಲಿದ್ದಾರೆ. ಇತ್ತೀಚಿಗೆ ಕನ್ನಡ ಚಿತ್ರ 'ನಿಂಬೆಹುಳಿ' ಮೂಲಕ ದಕ್ಷಿಣ ಭಾರತ, ಅದರಲ್ಲೂ ಮುಖ್ಯವಾಗಿ ಕನ್ನಡ ಚಿತ್ರರಂಗಕ್ಕೆ ಸುಭಾಷ್ ಘಾಯ್ ಕಾಲಿಟ್ಟಿರುವುದು ವಿಶೇಷ.

  ಇತ್ತೀಚಿಗೆ ಯಾಕೋ ನಿರ್ದೇಶನದಿಂದ ಹಿಂದೆ ಸರಿದು ನಿರ್ಮಾಣದತ್ತಲೇ ತಮ್ಮನ್ನು ತೊಡಗಿಸಿಕೊಂಡಿದ್ದ ಸುಭಾಷ್ ಘಾಯ್, ಸಲ್ಮಾನ್ ಖಾನ್ ಇತ್ತೀಚಿಗೆ ಬೆಳದಿರುವ ರೀತಿಗೆ ಹಾಗೂ ಅವರು ನಟಿಸಿರುವ ಚಿತ್ರಗಳನ್ನು ನೋಡಿ ಖುಷಿಯಾಗಿದ್ದರಂತೆ. ಅದರಲ್ಲೂ ಈಗ ಯಶಸ್ವಿ ಪ್ರದರ್ಶನ ಕಾಣುತ್ತಿರುವ 'ಏಕ್ ಥಾ ಟೈಗರ್' ಚಿತ್ರವನ್ನು ನೋಡಿದ ಮೇಲೆ ಅವರಿಗೆ ಸಲ್ಮಾನ್ ಚಿತ್ರವನ್ನು ನಿರ್ದೇಶಿಸುವ ಬಯಕೆಯಾಗಿದೆ. ಅದೀಗ ನಿರ್ಧಾರಕ್ಕೂ ತಿರುಗಿದೆ.

  ಈ ಕುರಿತು ಮಾತನಾಡಿರುವ ಸುಭಾಷ್ ಘಾಯ್ "ನಾನೀಗ ಎರಡು ಚಿತ್ರಗಳನ್ನು ನಿರ್ದೇಶಿಸಲಿದ್ದೇನೆ. ಅದರಲ್ಲೊಂದು ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರದು. ಅದು ಬರುವ ವರ್ಷ (2013) ಪ್ರಾರಂಭವಾಗಲಿದೆ. ಆದರೆ ಇನ್ನೊಂದನ್ನು ಇದೇ ವರ್ಷದಲ್ಲಿ ಶುರುಮಾಡಲಿದ್ದೇನೆ" ಎಂದಿದ್ದಾರೆ. ಆ ಇನ್ನೊಂದು ಪ್ರಾಜೆಕ್ಟ್ ಗುಟ್ಟುನ್ನು ಸುಭಾಷ್ ಘಾಯ್ ಸದ್ಯಕ್ಕೆ ರಟ್ಟು ಮಾಡಿಲ್ಲ. ಆದರೆ, ಸಲ್ಲೂ ಚಿತ್ರವು ಆಕ್ಷನ್, ಮಸಾಲಾ ಮಿಕ್ಸ್ ಸಿನಿಮಾ ಆಗಲಿದೆ" ಎಂದಿದ್ದಾರೆ.

  ಮುಂದುವರಿದ ಸುಭಾಷ್ ಘಾಯ್ "ನನ್ನ ಚಿತ್ರಕ್ಕೆ ಈಗಾಗಲೇ ಸಲ್ಮಾನ್ ಸಹಿ ಬಿದ್ದಿದೆ. ಸಲ್ಲೂರ ಈಗಿನ ಸೂಪರ್ ಸ್ಟಾರ್ ಇಮೇಜಿಗೆ ತಕ್ಕ ಸಾಹಸ, ರೊಮಾನ್ಸ್ ಸಂಗಮದ ಚಿತ್ರವನ್ನು ನಾನು ನೀಡಲಿದ್ದೇನೆ. ಸದ್ಯಕ್ಕೆ ಸ್ಕ್ರಿಪ್ಟ್ ಕೆಲಸದಲ್ಲಿ ನಾನು ಬಿಜಿಯಾಗಿದ್ದೇನೆ" ಎಂದಿದ್ದಾರೆ. ಅಂದಹಾಗೆ, 'ಏಕ್ ಥಾ ಟೈಗರ್' ನಂತರ ಸಲ್ಮಾನ್ ಚಿತ್ರಗಳು ಸಾಲಾಗಿ ಬರಲಿವೆ. 'ದಬಾಂಗ್ 2', 'ಶೇರ್ ಖಾನ್' ಹಾಗೂ 'ಕಿಕ್' ಲಿಸ್ಟ್ ಗೆ ಇದೀಗ ಸುಭಾಷ್ ಘಾಯ್ ಅವರ ಹೊಸ ಚಿತ್ರವೂ ಸೇರಿದಂತಾಗಿದೆ. (ಏಜೆನ್ಸೀಸ್)

  English summary
  Filmmaker Subhash Ghai has decided to wield the megaphone again and team up with Salman Khan for an action packed masala entertainer.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X