twitter
    For Quick Alerts
    ALLOW NOTIFICATIONS  
    For Daily Alerts

    ಸೋಲಿನ ಸುಳಿಯಲ್ಲಿರುವ ಅಕ್ಷಯ್‌ಗೆ ಮತ್ತೊಂದು ಸಂಕಷ್ಟ ತಂದಿಟ್ಟ ಬಿಜೆಪಿ ಸಂಸದ

    |

    ಬಾಲಿವುಡ್ ಸ್ಟಾರ್ ನಟ ಅಕ್ಷಯ್ ಕುಮಾರ್ ಸತತ ಸೋಲಿನ ಸುಳಿಯಲ್ಲಿದ್ದಾರೆ. ಅವರ ನಟನೆಯ ಮೂರು ಸಿನಿಮಾಗಳು ಒಂದರ ಹಿಂದೊಂದು ಬಿಡುಗಡೆ ಆಗಿ ಹೀನಾಯ ಸೋಲು ಕಂಡಿವೆ.

    ಇದೀಗ ನಾಲ್ಕನೇ ಸಿನಿಮಾ ಬಿಡುಗಡೆಗೆ ತಯಾರಾಗಿದೆ. ಆದರೆ ಆ ಸಿನಿಮಾಕ್ಕೆ ಕಾನೂನು ತೊಡಕು ಎದುರಾಗಿದೆ. ಬಿಜೆಪಿ ರಾಜ್ಯಸಭಾ ಸದಸ್ಯರೊಬ್ಬರು ಅಕ್ಷಯ್ ಕುಮಾರ್ ಸೇರಿದಂತೆ ಸಿನಿಮಾಕ್ಕೆ ಸಂಬಂಧಿಸಿದ ಎಂಟು ಮಂದಿಗೆ ನೊಟೀಸ್ ನೀಡಿದ್ದು, ಸಿನಿಮಾ ಬಿಡುಗಡೆಗೆ ತಕರಾರು ತೆಗೆದಿದ್ದಾರೆ.

    ಚಾಲೆಂಜಿಂಗ್‌ ಸ್ಟಾರ್‌ಗೆ ಹುಟ್ಟುಹಬ್ಬದ ಶುಭಾಶಯ ಕೋರಿದ ಬಾಲಿವುಡ್ ನಟಿ: ತಬ್ಬಿಬ್ಬಾದ ಅಭಿಮಾನಿಗಳು! ಚಾಲೆಂಜಿಂಗ್‌ ಸ್ಟಾರ್‌ಗೆ ಹುಟ್ಟುಹಬ್ಬದ ಶುಭಾಶಯ ಕೋರಿದ ಬಾಲಿವುಡ್ ನಟಿ: ತಬ್ಬಿಬ್ಬಾದ ಅಭಿಮಾನಿಗಳು!

    'ರಾಮ್ ಸೇತು' ಸಿನಿಮಾದಲ್ಲಿ ರಾಮಸೇತುವಿನ ಬಗ್ಗೆ ಸುಳ್ಳು ಅಥವಾ ತಿರುಚಿದ ಮಾಹಿತಿ ಸೇರಿಸಲಾಗಿದೆ ಎಂದು ಮಾಜಿ ಸಚಿವ, ಹಾಲಿ ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಹ್ಮಣಿಯನ್ ಸ್ವಾಮಿ ಆರೋಪಿಸಿದ್ದು, ಸಿನಿಮಾದಲ್ಲಿ ನಟಿಸಿರುವ ಅಕ್ಷಯ್ ಕುಮಾರ್, ಜಾಕ್ವೆಲಿನ್ ಫರ್ನಾಂಡೀಸ್, ನುಶ್ರತ್ ಬರೂಚಾ ಸೇರಿದಂತೆ ಎಂಟು ಮಂದಿಗೆ ನೊಟೀಸ್ ನೀಡಿದ್ದಾರೆ.

    ಸಿನಿಮಾದವರಿಗೆ ಸತ್ಯವನ್ನು ತಿರುಚುವ ಚಾಳಿ: ಸುಬ್ರಹ್ಮಣಿಯನ್ ಸ್ವಾಮಿ

    ಸಿನಿಮಾದವರಿಗೆ ಸತ್ಯವನ್ನು ತಿರುಚುವ ಚಾಳಿ: ಸುಬ್ರಹ್ಮಣಿಯನ್ ಸ್ವಾಮಿ

    ಈ ಬಗ್ಗೆ ಟ್ವೀಟ್ ಸಹ ಮಾಡಿರುವ ಸುಬ್ರಹ್ಮಣಿಯನ್ ಸ್ವಾಮಿ, ''ಮುಂಬೈ ಸಿನಿಮಾವಾಲಾಗಳಿಗೆ ಸತ್ಯವನ್ನು ಸುಳ್ಳು ಮಾಡುವ ಸತ್ಯವನ್ನು ದುರುಪಯೋಗಪಡಿಸಿಕೊಳ್ಳುವ ಕೆಟ್ಟ ಚಾಳಿ ಹೊಂದಿದ್ದಾರೆ. ರಾಮ್ ಸೇತುವಿನ ನಿಜ ಕತೆಯನ್ನು ವಿರೂಪಗೊಳಿಸಿರುವ ಅಕ್ಷಯ್ ಕುಮಾರ್ ಹಾಗೂ ಎಂಟು ಜನರಿಗೆ ನೊಟೀಸ್ ನೀಡಿದ್ದೇನೆ. ಅವರಿಗೆ ಬೌದ್ಧಿಕ ಆಸ್ತಿ ಹಕ್ಕಿನ ಮಹತ್ವವನ್ನು ತಿಳಿಸುವ ಉದ್ದೇಶದಿಂದ ನನ್ನ ಸಹವೃತ್ತಿಕರ್ಮಿ ಸತ್ಯ ಸಬರ್ವಾಲ್ ಮೂಲಕ ನೊಟೀಸ್ ಜಾರಿಗೊಳಿಸಿದ್ದೇನೆ'' ಎಂದಿದ್ದಾರೆ.

    ನೊಟೀಸ್ ಕಳಿಸಿರುವ ಸತ್ಯ ಸಬರ್ವಾಲ್

    ನೊಟೀಸ್ ಕಳಿಸಿರುವ ಸತ್ಯ ಸಬರ್ವಾಲ್

    ಸತ್ಯ ಸಬರ್ವಾಲ್ ಕಳಿಸಿರುವ ನೊಟೀಸ್‌ನಲ್ಲಿ, ''ನನ್ನ ಕಕ್ಷೀಧಾರರು (ಸುಬ್ರಹ್ಮಣಿಯನ್ ಸ್ವಾಮಿ) 2007 ರಲ್ಲಿ ರಾಮಸೇತು ಸಂರಕ್ಷಣೆ ಮತ್ತು ರಕ್ಷಣೆಗಾಗಿ ಸುಪ್ರೀಂ ಕೋರ್ಟ್‌ನಲ್ಲಿ ಯಶಸ್ವಿಯಾಗಿ ವಾದ ಮಂಡಿಸಿದ್ದಾರೆ ಮತ್ತು ರಾಮಸೇತುವನ್ನು ಛಿದ್ರಗೊಳಿಸುವ ಉದ್ದೇಶದಿಂದ ಭಾರತ ಸರ್ಕಾರ ಮಾಡ ಹೊರಟಿದ್ದ ಸೇತುಸಮುದ್ರಂ ಶಿಪ್ ಚಾನೆಲ್ ಯೋಜನೆಯನ್ನು ವಿರೋಧಿಸಿದ್ದರು. 2007 ರ ಆಗಸ್ಟ್‌ನಲ್ಲಿ ಸುಪ್ರೀಂಕೋರ್ಟ್, ರಾಮ್ ಸೇತುವನ್ನು ಕೆಡವುವ ಸರ್ಕಾರದ ಯೋಜನೆಗೆ ತಡೆಯಾಜ್ಞೆ ನೀಡಿತು'' ಎಂದಿದ್ದಾರೆ.

    ''ಸುಬ್ರಹ್ಮಣಿಯನ್ ಸ್ವಾಮಿ ಹೋರಾಟ ಪ್ರಮುಖವಾದದ್ದು''

    ''ಸುಬ್ರಹ್ಮಣಿಯನ್ ಸ್ವಾಮಿ ಹೋರಾಟ ಪ್ರಮುಖವಾದದ್ದು''

    ''ಇದೀಗ ರಾಮ್ ಸೇತು ಹೆಸರಿನ ಸಿನಿಮಾ ಬಿಡುಗಡೆ ಆಗುತ್ತಿರುವುದು ನನ್ನ ಕಕ್ಷೀಧಾರರ ಗಮನಕ್ಕೆ ಬಂದಿದ್ದು, ರಾಮ್ ಸೇತುವನ್ನು ಉಳಿಸುವ ಕಾರ್ಯದಲ್ಲಿ ನ್ಯಾಯಾಲಯದಲ್ಲಿ ನಡೆದ ಹೋರಾಟ ಅತ್ಯಂತ ಮಹತ್ವದ್ದಾಗಿದ್ದು, ಈ ಕುರಿತು ಸಿನಿಮಾದಲ್ಲಿ ಮಾಹಿತಿಯನ್ನು ಇರಿಸಲಾಗಿದೆಯೇ ಎಂಬುದು ಕಕ್ಷೀಧಾರರ ಪ್ರಶ್ನೆ. ಒಂದೊಮ್ಮೆ ನ್ಯಾಯಾಲಯದ ಹೋರಾಟದ ಚಿತ್ರಣ ಇದ್ದರೆ ನನ್ನ ಕಕ್ಷೀಧಾರರ ಸೇವೆಯ ಚಿತ್ರಣವೂ ಇರಬೇಕಾಗುತ್ತದೆ. ಹೀಗಿದ್ದಾಗ ಸಿನಿಮಾದಲ್ಲಿ ಸತ್ಯಾಸತ್ಯತೆ ಎಷ್ಟಿದೆ? ನನ್ನ ಕಕ್ಷೀಧಾರನ ಹೆಸರನ್ನು ಸಿನಿಮಾದಲ್ಲಿ ಬಳಸಲಾಗಿದೆಯೇ ಎಂಬುದನ್ನು ನನ್ನ ಕಕ್ಷೀಧಾರ ತಿಳಿದುಕೊಳ್ಳಬೇಕಿದೆ'' ಎಂದಿದ್ದಾರೆ.

    ಬಿಡುಗಡೆಗೆ ಮುನ್ನ ಸಿನಿಮಾ ತೋರಿಸಲು ಬೇಡಿಕೆ

    ಬಿಡುಗಡೆಗೆ ಮುನ್ನ ಸಿನಿಮಾ ತೋರಿಸಲು ಬೇಡಿಕೆ

    ನ್ಯಾಯಾಲಯಕ್ಕೆ ಸಲ್ಲಿಸಿರುವ ಪಿಟಿಶನ್‌ನಲ್ಲಿ 'ರಾಮ್ ಸೇತು' ಸಿನಿಮಾದ ಚಿತ್ರಕತೆಯನ್ನು ಸುಬ್ರಹ್ಮಣಿಯನ್ ಸ್ವಾಮಿ ಅವರಿಗೆ ತೋರಿಸಬೇಕು, ಸಿನಿಮಾದಲ್ಲಿ ತಪ್ಪುಗಳು ಇಲ್ಲವೆಂದು ಖಾತ್ರಿಗೊಳಿಸಿದ ಬಳಿಕವೇ ಸಿನಿಮಾ ಬಿಡುಗಡೆ ಮಾಡಬೇಕು ಎಂದು ಸಹ ಒತ್ತಾಯಿಸಲಾಗಿದೆ. ಸಿನಿಮಾ ಬಿಡುಗಡೆಗೆ ಮುನ್ನಾ ಸುಬ್ರಹ್ಮಣಿಯನ್ ಸ್ವಾಮಿ ಅವರಿಗೆ ತೋರಿಸಬೇಕು ಎಂದು ಸಹ ಪಿಟಿಶನ್‌ನಲ್ಲಿ ಮನವಿ ಮಾಡಲಾಗಿದೆ. ಪುರಾತತ್ವ ಶಾಸ್ತ್ರಜ್ಞನೊಬ್ಬ ರಾಮ್ ಸೇತುವನ್ನು ಹುಡುಕಿ ಹೊರಡುವ ಸಾಹಸಮಯ ಕತೆಯನ್ನು 'ರಾಮ್ ಸೇತು' ಸಿನಿಮಾ ಹೊಂದಿದೆ. ಸಿನಿಮಾವನ್ನು ಅಭಿಶೇಕ್ ಶರ್ಮಾ ನಿರ್ದೇಶನ ಮಾಡಿದ್ದು ಅಕ್ಷಯ್ ಕುಮಾರ್ ಸಹ ನಿರ್ಮಾಣ ಮಾಡಿದ್ದಾರೆ. ಸಿನಿಮಾವು ಅಕ್ಟೋಬರ್ 24 ಕ್ಕೆ ತೆರೆಗೆ ಬರಲಿದೆ.

    English summary
    BJP Rajya Sabha MP Subramanian Swamy and his associate Sathya Sabarwal send legal notice to Akshay Kumar regarding Ram-Setu movie.
    Tuesday, August 30, 2022, 9:58
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X