twitter
    For Quick Alerts
    ALLOW NOTIFICATIONS  
    For Daily Alerts

    ಸುಶಾಂತ್ ಸಾವಿನ ಹಿಂದೆ ಗಣ್ಯರ ಕೈವಾಡ: ಪ್ರಧಾನಿ ಮೋದಿಗೆ ಸುಬ್ರಮಣಿಯನ್ ಸ್ವಾಮಿ ಪತ್ರ

    |

    ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಒತ್ತಾಯಿಸಿದ್ದ ಸಂಸದ ಸುಬ್ರಮಣಿಯನ್ ಸ್ವಾಮಿ, ಈ ಸಂಬಂಧ ಈಗ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

    Recommended Video

    Hulivana Gangadhar ,ಹಿರಿಯ ನಟ ಕೊರೊನದಿಂದ ಸಾವು | Filmibeat Kannada

    ಈ ಮೂಲಕ ಸುಶಾಂತ್ ಅವರ ಸಾವಿನ ಪ್ರಕರಣದಲ್ಲಿ ಸಿಬಿಐ ತನಿಖೆ ನಡೆಸಬೇಕು ಎಂಬ ಅಭಿಮಾನಿಗಳು, ಕೆಲವು ಸೆಲೆಬ್ರಿಟಿಗಳು ಹಾಗೂ ಸಂಘಟನೆಗಳ ಆಗ್ರಹಕ್ಕೆ ಮತ್ತಷ್ಟು ಬಲ ಸಿಕ್ಕಂತಾಗಿದೆ. ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿರುವ ಸುಬ್ರಮಣಿಯನ್ ಸ್ವಾಮಿ, ಸುಶಾಂತ್ ಸಾವಿನ ಪ್ರಕರಣವನ್ನು ಮುಚ್ಚಿಹಾಕಲು ಬಾಲಿವುಡ್‌ನ ದೊಡ್ಡ ದೊಡ್ಡ ಹೆಸರುಗಳು ಹೇಗೆ ಪ್ರಯತ್ನಿಸುತ್ತಿವೆ ಎಂಬುದನ್ನು ಪ್ರಧಾನಿಗೆ ಬರೆದಿರುವ ಪತ್ರದಲ್ಲಿ ವಿವರಿಸಿದ್ದಾರೆ. ಮುಂದೆ ಓದಿ...

    ವಕೀಲರು ಅಧ್ಯಯನ ನಡೆಸಿದ್ದಾರೆ

    ವಕೀಲರು ಅಧ್ಯಯನ ನಡೆಸಿದ್ದಾರೆ

    'ಚಿತ್ರ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಸಂಗತಿ ನಿಮಗೆ ಚೆನ್ನಾಗಿ ತಿಳಿದಿದೆ ಎನ್ನುವುದು ಗೊತ್ತಿದೆ. ಸುಶಾಂತ್ ಮಾಡಿಕೊಂಡಿದ್ದಾರೆ ಎನ್ನಲಾದ ಆತ್ಮಹತ್ಯೆಯ ಆರೋಪದ ಕುರಿತು ನನ್ನ ಕಾನೂನು ಸಹವರ್ತಿ ಇಶ್‌ಕರಣ್ ಭಂಡಾರಿ ಅ ಸಂಗತಿಯ ಸುತ್ತಲೂ ಅಧ್ಯಯನ ನಡೆಸಿದ್ದಾರೆ ಎಂದು ಹೇಳಿದ್ದಾರೆ.

    ಸುಶಾಂತ್ ಪ್ರಕರಣವನ್ನು ಸಿಬಿಐ ಗೆ ಒಪ್ಪಿಸಿ: ಸುಬ್ರಹ್ಮಣಿಯನ್ ಸ್ವಾಮಿಸುಶಾಂತ್ ಪ್ರಕರಣವನ್ನು ಸಿಬಿಐ ಗೆ ಒಪ್ಪಿಸಿ: ಸುಬ್ರಹ್ಮಣಿಯನ್ ಸ್ವಾಮಿ

    ದೊಡ್ಡವರ ಹಸ್ತಕ್ಷೇಪ

    ದೊಡ್ಡವರ ಹಸ್ತಕ್ಷೇಪ

    ಎಫ್‌ಐಆರ್ ದಾಖಲಿಸಿಕೊಂಡ ಬಳಿಕ ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿದ್ದರೂ, ಮುಂಬೈನಲ್ಲಿರುವ ನನ್ನ ಮೂಲಗಳಿಂದ ತಿಳಿದುಬಂದಿರುವುದೇನೆಂದರೆ ದುಬೈನಲ್ಲಿರುವ ಡಾನ್‌ಗಳ ಜತೆಗೆ ನಂಟು ಹೊಂದಿರುವ ಬಾಲಿವುಡ್‌ನ ಅನೇಕ ದೊಡ್ಡ ಹೆಸರುಗಳು, ಪೊಲೀಸರ ತನಿಖೆಯನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿವೆ. ಈ ಮೂಲಕ ಸುಶಾಂತ್ ಸಾವು ಸ್ವಯಂ ಪ್ರೇರಿತ ಆತ್ಮಹತ್ಯೆಯಿಂದಲೇ ನಡೆದಿದೆ ಎಂದು ಅಂತಿಮಗೊಳಿಸಲು ಬಯಸಿದ್ದಾರೆ.

    ನಿಷ್ಪಕ್ಷಪಾತ ತನಿಖೆ ಅಗತ್ಯ

    ನಿಷ್ಪಕ್ಷಪಾತ ತನಿಖೆ ಅಗತ್ಯ

    ಸುಶಾಂತ್ ಅವರು ತಾವಾಗಿಯೇ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದಾರೆ ಎಂದು ಸಾಬೀತುಪಡಿಸಲು ಮಹಾರಾಷ್ಟ್ರ ಸರ್ಕಾರಕ್ಕೆ ಅನೇಕ ಅನುಕೂಲತೆಗಳಿವೆ. ಹೀಗಾಗಿ ಈ ಪ್ರಕರಣದಲ್ಲಿ ಮುಂಬೈ ಪೊಲೀಸರು ಸಾರ್ವಜನಿಕರ ವಿಶ್ವಾಸ ಗಳಿಸಲು ನಿಷ್ಪಕ್ಷಪಾತ ತನಿಖೆ ನಡೆಸಬೇಕಿದೆ.

    ಅಮಿತ್ ಶಾ ಗೆ ಕೈಮುಗಿದು ಮನವಿ ಮಾಡಿದ ಸುಶಾಂತ್ ಸಿಂಗ್ ಪ್ರೇಯಸಿಅಮಿತ್ ಶಾ ಗೆ ಕೈಮುಗಿದು ಮನವಿ ಮಾಡಿದ ಸುಶಾಂತ್ ಸಿಂಗ್ ಪ್ರೇಯಸಿ

    ಸಲಹೆ ನೀಡಲು ಮನವಿ

    ಸಲಹೆ ನೀಡಲು ಮನವಿ

    ಹೀಗಾಗಿ, ಭಾರತ ಸರ್ಕಾರದ ಮುಖ್ಯಸ್ಥರಾಗಿರುವ ನೀವು, ಮಾಡದ ತಪ್ಪಿಗೆ ಸಿಲುಕಿಕೊಳ್ಳುವ ಅಮಾಯಕ ಜನರ ಕುರಿತಾಗಿ ಅನುಕಂಪ ಹೊಂದಿರುವುದು ತಿಳಿದಿರುವಂಥದ್ದು. ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ನೇರವಾಗಿ ಮಹಾರಾಷ್ಟ್ರ ಮುಖ್ಯಮಂತ್ರಿಗೆ ಅಥವಾ ರಾಜ್ಯಪಾಲರ ಮೂಲಕ ಸಲಹೆ ನೀಡುವಂತೆ ಕೋರುತ್ತೇನೆ.

    ವಿಶ್ವಾಸ ಮರಳಲು ಸಿಬಿಐ ತನಿಖೆ

    ವಿಶ್ವಾಸ ಮರಳಲು ಸಿಬಿಐ ತನಿಖೆ

    ಮುಂಬೈ ಪೊಲೀಸರು ಈಗಾಗಲೇ ಕೊರೊನಾ ವೈರಸ್ ಕುರಿತಾದ ಸಮಸ್ಯೆಗಳು ಮತ್ತು ಕಾನೂನು ಹಾಗೂ ಸುವ್ಯವಸ್ಥೆಗೆ ಸಂಬಂಧಿಸಿದಂತೆ ವಿಪರೀತ ಕೆಲಸಗಳನ್ನು ಹೊಂದಿದ್ದಾರೆ. ಅವುಗಳ ನಡುವೆ ಈ ಪ್ರಯಾಸಕರ ತನಿಖೆ ನಡೆಸುವುದರಿಂದ ಸಾರ್ವಜನಿಕ ವಿಶ್ವಾಸಾರ್ಹತೆ ಕುಸಿಯುತ್ತಿದೆ. ಸಾರ್ವಜನಿಕರ ವಿಶ್ವಾಸ ಮರಳಿ ಗಳಿಸಲು ಸಿಬಿಐ ತನಿಖೆಯೊಂದೇ ಮಾರ್ಗವಾಗಿದೆ. ಅಂತಹ ಸಲಹೆ ಮೇರೆಗೆ ಮಹಾರಾಷ್ಟ್ರ ಮುಖ್ಯಮಂತ್ರಿಗಳು ಸಿಬಿಐ ತನಿಖೆಗೆ ಒಪ್ಪಿಸುತ್ತಾರೆ ಎಂದು ನನಗೆ ನಂಬಿಕೆಯಿದೆ ಎಂದು ಸುಬ್ರಮಣಿಯನ್ ಸ್ವಾಮಿ ಬರೆದಿದ್ದಾರೆ.

    ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣ: ಸಲ್ಮಾನ್ ಖಾನ್ ವಿಚಾರಣೆ ಇಲ್ಲ ಎಂದ ಮುಂಬೈ ಪೊಲೀಸರುಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣ: ಸಲ್ಮಾನ್ ಖಾನ್ ವಿಚಾರಣೆ ಇಲ್ಲ ಎಂದ ಮುಂಬೈ ಪೊಲೀಸರು

    English summary
    BJP MP Subramanian Swamy wrote a letter to PM Narendra Modi demanding CBI inquiry in Sushant Singh Rajput's case.
    Friday, July 17, 2020, 15:08
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X