ರಣಬೀರ್ ಕಪೂರ್ ನಟನೆಯ ಅನಿಮಲ್‌ ಯಶಸ್ಸು 'ಅಪಾಯಕಾರಿ' ಎಂದ ಲೇಖಕ ಜಾವೇದ್ ಅಖ್ತರ್

ಬಾಲಿವುಡ್ ಸಿನಿಮಾ 'ಅನಿಮಲ್‌' ಕಳೆದ ವರ್ಷ ಭರ್ಜರಿ ಯಶದ್ದು ಪಡೆದಿದೆ. ರಣಬೀರ್ ಕಪೂರ್ ನಟನೆಯ ಈ ಆಕ್ಷನ್ ಫಿಲಂಗೆ ನೆಗೆಟಿವ್ ವಿಮರ್ಶೆಗಳ ನಡುವೆಯೂ ಬ್ಲಾಕ್‌ಬಸ್ಟರ್ ಆಗಿದೆ. ಜೊತೆಗೆ ಇತ್ತೀಚಿನ ದಿನಗಳಲ್ಲಿ ಭಾರಿ ಚರ್ಚೆಗೆ ಒಳಗಾದ ಸಿನಿಮಾಗಳಲ್ಲಿ ಅನಿಮಲ್ ಕೂಡ ಒಂದು. ಈಗ ಮತ್ತೆ ಅನಿಮಲ್ ಸುದ್ದಿಯಲ್ಲಿದ್ದು, ಲೇಖಕ ಜಾವೇದ್ ಅಖ್ತರ್ ಪ್ರತಿಕ್ರಿಯಿಸಿದ್ದಾರೆ.

ಔರಂಗಾಬಾದ್‌ನಲ್ಲಿ ನಡೆದ ಅಜಂತಾ ಎಲ್ಲೋರಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಜಾವೇದ್ ಅಖ್ತರ್ ಮಾತನಾಡಿದ್ದು, ಇಂದಿನ ಕಾಲಘಟ್ಟದಲ್ಲಿ ತಯಾರಾಗುತ್ತಿರುವ ಚಲನಚಿತ್ರಗಳು ಮತ್ತು ಹಾಡುಗಳ ಯಶಸ್ಸಿನ ಬಗ್ಗೆ ಕಿಡಿಕಾರಿದ್ದಾರೆ. ಜೊತೆಗೆ ಈ ಯಶಸ್ಸಿನ ಜವಾಬ್ದಾರಿ ಕೂಡ ಪ್ರೇಕ್ಷಕರ ಮೇಲೆಯೇ ನಿಂತಿದೆ ಎಂದು ಹೇಳಿದ್ದಾರೆ.

Success of Animal film is dangerous Says Javed Akhtar At 9th AIFF

ಅನಿಮಲ್ ಸಕ್ಸಸ್ ಬಗ್ಗೆ ಜಾವೇದ್ ಅಖ್ತರ್ ಪ್ರತಿಕ್ರಿಯೆ

ಕಬೀರ್ ಸಿಂಗ್ ಮತ್ತು ಅರ್ಜುನ್ ರೆಡ್ಡಿ ಖ್ಯಾತಿಯ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ 'ಅನಿಮಲ್' ಕಳೆದ ವರ್ಷ ಬಿಡುಗಡೆಯಾಗಿ ಸೂಪರ್ ಹಿಟ್ ಎನಿಸಿಕೊಂಡ ಸಿನಿಮಾ. ಚಿತ್ರದಲ್ಲಿ ನಟ ರಣಬೀರ್ ಕಪೂರ್, ರಶ್ಮಿಕಾ ಮಂದಣ್ಣ, ಅನಿಲ್ ಕಪೂರ್ ಮತ್ತು ಬಾಬಿ ಡಿಯೋಲ್ ಅಭಿನಯಿಸಿದ್ದಾರೆ. ಈ ಸಿನಿಮಾ ಹೆಸರು ಹೇಳದೇ ಗೀತರಚನೆಕಾರ ಮತ್ತು ಮಾಜಿ ಚಿತ್ರಕಥೆಗಾರ ಜಾವೇದ್ ಅಖ್ತರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

"ಒಂದು ವೇಳೆ ಪುರುಷನು ಮಹಿಳೆಯನ್ನು ತನ್ನ ಶೂ ನೆಕ್ಕಲು ಕೇಳುವ ಚಲನಚಿತ್ರವಿದ್ದರೆ, ಒಬ್ಬ ಪುರುಷನು ಮಹಿಳೆಗೆ ಕಪಾಳಮೋಕ್ಷ ಮಾಡುವುದನ್ನು ಸರಿ ಎಂದು ಹೇಳುವುದಿದ್ದರೇ, ಅಂತಹ ಚಿತ್ರವು ಸೂಪರ್ ಹಿಟ್ ಆಗಿದ್ದರೆ ಅದು ತುಂಬಾ ಅಪಾಯಕಾರಿ" ಅವರು ಹೇಳಿದ್ದಾರೆ. ಇಲ್ಲಿ ನಾವು ರಣಬೀರ್ ಕಪೂರ್ ಮತ್ತು ತ್ರಿಪ್ತಿ ಧಿಮ್ರಿ ನಡುವಿನ ದೃಶ್ಯಗಳನ್ನು ನೆನಪಿಸಿಕೊಳ್ಳಬಹುದು. ಜೊತೆಗೆ ಶಾಹಿದ್ ಕಪೂರ್ ಮತ್ತು ಕಿಯಾರಾ ಅಡ್ವಾಣಿ ನಟಿಸಿದ ಸಂದೀಪ್ ಅವರ ಹಿಂದಿನ ಚಿತ್ರ ಕಬೀರ್ ಸಿಂಗ್ ಸಿನಿಮಾದ ಕಪಾಳಮೋಕ್ಷ ದೃಶ್ಯವನ್ನೂ ನೆನಪಿಸಿಕೊಳ್ಳಬಹುದು.

ಅನಿಮಲ್ ಸಿನಿಮಾ

ಡಿಸೆಂಬರ್ 1, 2023 ರಂದು ಬಿಡುಗಡೆಯಾದ 'ಅನಿಮಲ್' ಸಿನಿಮಾ ಸೂಪರ್ ಹಿಟ್ ಆಗಿದೆ. ಪ್ರಪಂಚದಾದ್ಯಂತ ಇದು ಬಾಕ್ಸ್ಆಫೀಸ್‌ನಲ್ಲಿ 896 ಕೋಟಿ ರೂಪಾಯಿ ಗಳಿಸಿದೆ. ಚಿತ್ರದಲ್ಲಿ ರಣಬೀರ್ ಕಪೂರ್, ರಶ್ಮಿಕಾ ಮಂದಣ್ಣ, ಅನಿಲ್ ಕಪೂರ್ ಮತ್ತು ಬಾಬಿ ಡಿಯೋಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಚೋಲಿ ಕೆ ಪೀಚೆ ಕ್ಯಾ ಹೈ ಬಗ್ಗೆ ಜಾವೇದ್ ಮಾತು

ಆನಂದ್ ಬಕ್ಷಿ ಬರೆದ ಸಾಹಿತ್ಯದ ಬಗ್ಗೆ ವಿವಾದಗಳ ಹೊರತಾಗಿಯೂ, ಖಳ್ ನಾಯಕ್‌ ಸಿನಿಮಾದ 'ಚೋಲಿ ಕೆ ಪೀಚೆ ಕ್ಯಾ ಹೈ' ಹಾಡು 90 ರ ದಶಕದಲ್ಲಿ ಭಾರಿ ಹಿಟ್ ಆಗಿತ್ತು. ಈ ಹಾಡುಗಳ ಬಗ್ಗೆಯೂ ಜಾವೇದ್ ಅಖ್ತರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 'ಸಮಸ್ಯೆಯೆಂದರೆ ಪ್ರೇಕ್ಷಕರು ಈ ಹಾಡನ್ನು ಭಾರಿ ಹಿಟ್ ಮಾಡಿದ್ದಾರೆ. ಕೋಟಿಗಟ್ಟಲೆ ಜನರು ಹಾಡನ್ನು ಇಷ್ಟಪಟ್ಟಿದ್ದಾರೆ, ಅದೇ ತುಂಬಾ ಭಯಾನಕ' ಎಂಬುದನ್ನು ಹೇಳಿದ್ದಾರೆ.

ಒಂದು ಚಲನಚಿತ್ರ ಮತ್ತು ಹಾಡುಗಳನ್ನು ಹಿಟ್ ಮಾಡುವುದು ಪ್ರೇಕ್ಷಕರ ಮೇಲೆ ನಿಂತಿದೆ. "ಸಿನಿಮಾ ನಿರ್ಮಾಪಕರಿಗಿಂತ ಹೆಚ್ಚಿನ ಜವಾಬ್ದಾರಿ ಇಂದು ಪ್ರೇಕ್ಷಕರ ಮೇಲಿದೆ. ನೀವು ಯಾವ ರೀತಿಯ ಚಲನಚಿತ್ರಗಳನ್ನು ನೋಡುತ್ತೀರಿ ಎಂಬುದರ ಜವಾಬ್ದಾರಿಯನ್ನು ಸಹ ನೀವು ತೆಗೆದುಕೊಳ್ಳಬೇಕು. ಇದರಿಂದ ಯಾವ ರೀತಿಯ ಚಿತ್ರಗಳನ್ನು ಮಾಡಬೇಕು ಎಂಬುದು ಕೂಡ ನಿರ್ಧಾರವಾಗುತ್ತದೆ" ಎಂದಿದ್ದಾರೆ.

More from Filmibeat

English summary
Success of Animal film is dangerous says Javed Akhtar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X