ಎಲ್ಲರೆದುರು ''ಬಾರ್''ನಲ್ಲಿ 20 ನಿಮಿಷ ''ಬೆತ್ತಲಾದ'' ಶಾರುಖ್ ಖಾನ್ ನಾಯಕಿ..!
ಒಂದ್ಕಾಲದಲ್ಲಿ ಶಾರುಖ್ ಖಾನ್ ಅಭಿನಯದ ''ಕಭಿ ಹಾ ಕಭಿ ನಾ'' ಚಿತ್ರದ ನಾಯಕಿಯಾಗಿ ಜನ ಮನ ಗೆದ್ದವರು ಸುಚಿತ್ರಾ ಕೃಷ್ಣಮೂರ್ತಿ. ಆ ನಂತರ ಗಾಯಕಿಯಾಗಿ ಬರಹಗಾರ್ತಿಯಾಗಿ ಕೂಡ ಹೆಸರು ಮಾಡಿದವರು ಇವರು.
ಇನ್ನೂ .. ಮಿಸ್ಟರ್ ಇಂಡಿಯಾ ಚಿತ್ರದ ನಿರ್ದೇಶಕ ಶೇಖರ್ ಕಪೂರ್ ಅವರ ಜೊತೆ 08 ವರ್ಷ ಸಂಸಾರ ನಡೆಸಿ ಆ ನಂತರ ವಿಚ್ಛೇದನ ಪಡೆದು ದೂರವಾದ ಸುಚಿತ್ರಾ ಕೃಷ್ಣಮೂರ್ತಿ ಅವರಿಗೆ 2019ರಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ವಿಪರೀತವಾಗಿ ಕಾಡಿದ್ದ. ಫೇಸ್ ಬುಕ್ ಮೆಸೇಂಜರನಲ್ಲಿ "ಕೃಷ್ಣಮೂರ್ತಿ ನೀನು ನನ್ನ ಕೋರಿಕೆಯನ್ನ ತೀರಿಸುತ್ತೀರಾ" ಎಂಬ ಸಂದೇಶವನ್ನೂ ಕಳಿಸಿದ್ದ. ಹೀಗಾಗಿ ಸುಚಿತ್ರಾ ಆ ಕಾಲದಲ್ಲಿ ನೊಂದು ಬೆಂದು ಟ್ವೀಟ್ ಮಾಡುವ ಮೂಲಕ ಮುಂಬೈ ಪೊಲೀಸರ ಸಹಾಯವನ್ನೂ ಬೇಡಿದ್ದರು. ಪೊಲೀಸರು ಆಗ ಸಹಾಯದ ಹಸ್ತ ಚಾಚಿ ನೀವು ನೀಡಿದ ಮಾಹಿತಿಯನ್ನು ಸೈಬರ್ ಕ್ರೈಂ ವಿಭಾಗಕ್ಕೆ ರವಾನೆ ಮಾಡಲಾಗಿದೆ. ನಿಮಗೆ ಏನಾದರೂ ಸಮಸ್ಯೆ, ಆತಂಕ ಇದ್ದಲ್ಲಿ 100ಗೆ ಕರೆ ಮಾಡಿ' ಎಂದು ಧೈರ್ಯವನ್ನೂ ತುಂಬಿದ್ದರು. ಇಂಥಾ ಸುಚಿತ್ರಾ ಕೃಷ್ಣಮೂರ್ತಿ ಈಗ ಎಲ್ಲರೆದುರು ಬೆತ್ತಲಾಗಿದ್ದಾರೆ. ತಮ್ಮಈ ಅನುಭವವನ್ನೂ ಹಂಚಿಕೊಂಡಿದ್ದಾರೆ.

ಹೌದು, ಅಸಲಿಗೆ ಜರ್ಮನಿಯ ಬರ್ಲಿನ್‌ನಲ್ಲಿ ಬೆತ್ತಲೆ ಪಾರ್ಟಿಯನ್ನು ಆಯೋಜನೆ ಮಾಡಲಾಗುತ್ತೆ. ಈ ಪಾರ್ಟಿಗೆ ಅಲ್ಲಿನ ಜನ ಪಾಸಿಟಿವಿಟಿ ಪಾರ್ಟಿ ಎಂದು ಕರೆಯುತ್ತಾರೆ. ಇನ್ನೂ.. ಕೇವಲ ಜರ್ಮನಿಯವರು ಅಷ್ಟೇ ಅಲ್ಲ ದೇಶ-ವಿದೇಶದಿಂದ ಅನೇಕರು ಈ ಪಾರ್ಟಿಗೆ ಬರ್ತಾರೆ. ದೊಡ್ಡ ದೊಡ್ಡವರು ಈ ನೇಕೆಡ್ ಪಾರ್ಟಿಯಲ್ಲಿ ಪಾಲ್ಗೊಂಡು ಸಂಭ್ರಮಿಸುತ್ತಾರೆ.
ಇಂತಹ ಪಾರ್ಟಿಯ ಕುರಿತು ಸುಚಿತ್ರಾ ಕೃಷ್ಣಮೂರ್ತಿ ಅವರಲ್ಲಿ ತೀವೃ ಕುತೂಹಲ ಇತ್ತು. ಹೀಗಾಗಿಯೇ ಈ ತಾವೂ ಕೂಡ ಬೆತ್ತಲಾಗುವ ನಿರ್ಧಾರಕ್ಕೆ ಬಂದ ಸುಚಿತ್ರಾ ಸದ್ಯ ತಮ್ಮ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ಹೊಸದೊಂದು ಚರ್ಚೆಯನ್ನು ಹುಟ್ಟುಹಾಕಿದ್ದಾರೆ.

ಬರ್ಲಿನ್‌ನಲ್ಲಿನ ಬಾಡಿ ಪಾಸಿಟಿವಿಟಿ. ಬೆತ್ತಲೆ ಪಾರ್ಟಿಯಲ್ಲಿ ಪಾಲ್ಗೊಂಡೆ ಎಂದಿರುವ ಸುಚಿತ್ರಾ, ಇದರಲ್ಲಿ ಭಾಗಿಯಾದ ಬಳಿಕ ನಿಮ್ಮ ಮೆದುಳು ಕಾರ್ಯನಿರ್ವಹಿಸದಷ್ಟು ಒಪನ್ ಮೈಂಡೆಡ್ ಆಗಿರಬೇಡಿ ಎಂಬ ಮಾತು ನನಗೆ ನೆನಪಾಯಿತು ಅಂದಿದ್ದಾರೆ.ನಾನು ಎಂದೆಂದಿಗೂ ದೇಸಿ ಹುಡುಗಿ. ''ನಾನು ಮೊದಲು ಸ್ನಾನ ಮಾಡಿ ಗಾಯತ್ರಿ ಮಂತ್ರ ಪಠಣ ಬೇಕು" ಎಂದು ಬರೆದುಕೊಂಡಿದ್ದಾರೆ.
ಇನ್ನೂ ತಮ್ಮ ಈ ಅನುಭವವನ್ನೂ'ಬಾಲಿವುಡ್ ಹಂಗಾಮಾ' ಜೊತೆ ಹಂಚಿಕೊಂಡಿರುವ ಸುಚಿತ್ರಾ ಕೃಷ್ಣಮೂರ್ತಿ, ಇಂತಹ ವಿಷಯಗಳು ಅಲ್ಲಿ ಎಲ್ಲ ತುಂಬಾನೇ ಕಾಮನ್ನು ಅಂದಿದ್ದಾರೆ. . ದೇಹದ ಸಕಾರಾತ್ಮಕತೆಯನ್ನು ಉತ್ತೇಜಿಸುವ ಉದ್ದೇಶವನ್ನೊಂದಿರುವ ಈ ಪಾರ್ಟಿಯನ್ನು ನನ್ನ ಸ್ನೇಹಿತನಿಗೆ ಸೇರಿದ ಬಾರ್‌ನಲ್ಲಿ ಪಾರ್ಟಿ ಆಯೋಜನೆ ಮಾಡಲಾಗಿತ್ತು. ಅದು ಅಲ್ಲದೇ ನನ್ನನ್ನು ಅತಿಥಿ ಪಟ್ಟಿಗೆ ಸೇರಿಸಲಾಗಿತ್ತು. ಹೀಗಾಗಿ ಕುತೂಹಲದಿಂದ ನಾನು ಅಲ್ಲಿಗೆ ಹೋಗಿದ್ದೆ ಎಂದಿರುವ ಸುಚಿತ್ರಾ, ಕೇವಲ 20 ನಿಮಿಷದಲ್ಲಿ ಅಲ್ಲಿಂದ ನಾನು ಓಡೋಡಿ ಬಂದೆ ಎಂದು ಕೂಡ ಹೇಳಿದ್ದಾರೆ.
ನಾನು ತುಂಬಾ ದೇಸಿ, ನನಗೆ ಕಂಡ ಕಂಡವರ ಖಾಸಗಿ ಅಂಗ ನೋಡುವ ಯಾವ ಆಸೆಯೂ ಇಲ್ಲ. ಅದಕ್ಕಾಗಿ ನಾನು ಹೊರಬಂದೆ ಎಂದಿರುವ ಸುಚಿತ್ರಾ, ಅದನ್ನಲ್ಲಿ ಅಶ್ಲೀಲವಾಗಿ ನೋಡುವುದಿಲ್ಲ. ಅಲ್ಲಿನ ಪರಿಸರಕ್ಕೆ ಅದು ಉತ್ತಮ. ಆದರೆ ಭಾರತೀಯರಾಗಿ, ನಾವು ನಮ್ಮ ದೇಹದ ಬಗ್ಗೆ ಸಾಕಷ್ಟು ಜಾಗೃತರಾಗಿ ಬೆಳೆದಿದ್ದೇವೆ. ಭಾರತದಲ್ಲಿ ಬೆಳೆದ ನಮಗೆ ಅದು ಸರಿ ಹೊಂದುವುದಿಲ್ಲ ಎಂದು ಹೇಳಿದ್ದಾರೆ.
ಅಂದ್ಹಾಗೇ ಸುಚಿತ್ರಾ ಮತ್ತು ಶೇಖರ್ ಕಪೂರ್ ಅವರ ಪ್ರೀತಿಯ ಸಂಕೇತವಾಗಿ ಎದೆಯೆತ್ತರಕ್ಕೆ ಬೆಳೆದ ಮಗಳಿದ್ದಾಳೆ. ಹೀಗಾಗಿಯೇ ಈ ಬೆತ್ತಲೆ ಸಮಾಚಾರ ನಿಮ್ಮ ಮಗಳಿಗೆ ಗೊತ್ತಾ ಎಂಬ ಪ್ರಶ್ನೆಯನ್ನೂ ಸುಚಿತ್ರಾ ಅವರಿಗೆ ಕೇಳಲಾಗಿದೆ. ಇದಕ್ಕೆ ಉತ್ತರ ನೀಡಿರುವ ಸುಚಿತ್ರಾ ಇಲ್ಲಿಯವರೆಗೆ ಗೊತ್ತಿರಲಿಲ್ಲ, ಗೊತ್ತಾದರೂ ಕೂಡ ಇಂತಹದ್ದೊಂದು ಸಾಹಸ ಮಾಡಿದ್ದಕ್ಕಾದರೂ ನನ್ನ ಮಗಳು ಖುಷಿ ಪಡುತ್ತಾಳೆ ಎಂದಿದ್ದಾರೆ.


Click it and Unblock the Notifications











