'ಮಂಚಕ್ಕೆ ಬಾ' ಎಂದು ಫೇಸ್ ಬುಕ್ನಲ್ಲಿ ನಟಿಗೆ ಕೋರಿಕೆಯಿಟ್ಟ ವಿದೇಶಿ ವ್ಯಕ್ತಿ.!

ಜಗತ್ತನ್ನು ಇಂದು ಆಳುತ್ತಿರುವ ಮಾಧ್ಯಮ ಸೋಶಿಯಲ್ ಮೀಡಿಯಾ. ಈ ವೇದಿಕೆಯಿಂದ ಎಷ್ಟೋ ಒಳ್ಳೆಯ ವಿಷ್ಯಗಳು ಆಗುತ್ತಿದೆ. ಅದೇ ರೀತಿ ಅಷ್ಟೇ ಕೆಟ್ಟ ಬೆಳವಣಿಗೆಗಳು ಈ ವೇದಿಕೆ ಮೂಲಕ ನಡೆಯುತ್ತಿದೆ. ಸಿನಿಮಾ ಇಂಡಸ್ಟ್ರಿಯಲ್ಲಿ, ಅದರಲ್ಲೂ ಮಹಿಳೆಯರಿಗೆ ಕಿರುಕುಳ ನೀಡುವ ಪ್ರಕರಣಗಳು ಹೆಚ್ಚು ಬೆಳಕಿಗೆ ಬರುತ್ತಿದೆ.

ಬಾಲಿವುಡ್ ನಟಿ, ಗಾಯಕಿ ಸುಚಿತ್ರಾ ಕೃಷ್ಣಮೂರ್ತಿ ಅವರಿಗೆ ವಿದೇಶಿ ವ್ಯಕ್ತಿಯದ್ದು ಎಂದು ತೋರಿಸುತ್ತಿರುವ ಫೇಸ್ ಬುಕ್ ಖಾತೆಯಿಂದ ಅಸಭ್ಯವಾಗಿ ಸಂದೇಶ ಬಂದಿದೆ. ''ಕೃಷ್ಣಮೂರ್ತಿ ನೀನು ನನ್ನ ಕೋರಿಕೆಯನ್ನ ತೀರಿಸುತ್ತೀರಾ'' ಎಂದು ಕೇಳಿದ್ದಾನೆ. ಇದರಿಂದ ಅಚ್ಚರಿಗೊಂಡ ಆ ನಟಿ ಪೊಲೀಸರ ಮೊರೆ ಹೋಗಿದ್ದಾರೆ.

Suchitra Krishnamoorthi Received Vulgar Message in Facebook

ಈ ವಿದೇಶಿ ವ್ಯಕ್ತಿಯದ್ದು ಎನ್ನಲಾಗಿರುವ ಆ ಫೇಸ್ ಬುಕ್ ಖಾತೆಯನ್ನು ಮುಂಬೈ ಪೊಲೀಸರಿಗೆ ಟ್ಯಾಗ್ ಮಾಡಿ, ಫೇಸ್ ಬುಕ್ ನಲ್ಲಿ ಈ ರೀತಿಯಾದ ಸಂದೇಶ ಕಳುಹಿಸಿದ್ದಾರೆ. ದಯವಿಟ್ಟು ಇದರ ಬಗ್ಗೆ ಗಮನಹರಿಸಿ ಎಂದು ವಿಷಯ ಮುಟ್ಟಿಸಿದ್ದಾರೆ ನಟಿ.

ಅಂದ್ಹಾಗೆ, ಸುಚಿತ್ರಾ ಅವರಿಗೆ ಸಂದೇಶ ಕಳುಹಿಸಿರುವ ಆ ವ್ಯಕ್ತಿ ರಾಷ್ಟ್ರೀಯ ಅಪರಾಧ ತಡೆಗಟ್ಟುವಿಕೆ (national crime prevention) ವಿಭಾಗದಲ್ಲಿ ಕೆಲಸ ಮಾಡುತ್ತಿರುವುದಾಗಿ ಬರೆದುಕೊಂಡಿದ್ದಾರೆ. ಇಲ್ಲಿ ನೋಡಿದ್ರೆ, ಮಹಿಳೆಯೊಬ್ಬರಿಗೆ ಈ ರೀತಿ ಮೆಸೆಜ್ ಮಾಡಿ ಕಿರುಕುಳ ನೀಡಿರುವುದು ನಿಜಕ್ಕೂ ದುರಂತ.

ಸುಚಿತ್ರಾ ಅವರ ಟ್ವೀಟ್ ಗೆ ಮುಂಬೈ ಪೊಲೀಸರು ಸ್ಪಂದಿಸಿದ್ದು, ಈಗಾಗಲೇ ಆ ಖಾತೆಯ ಬಗ್ಗೆ ಪರಿಶೀಲನೆ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ. 'ನೀವು ನೀಡಿದ ಮಾಹಿತಿಯನ್ನ ಸೈಬರ್ ಕ್ರೈಂ ವಿಭಾಗಕ್ಕೆ ರವಾನೆ ಮಾಡಲಾಗಿದೆ. ನಿಮಗೆ ಏನಾದರೂ ಸಮಸ್ಯೆ, ಆತಂಕ ಇದ್ದಲ್ಲಿ 100ಗೆ ಕರೆ ಮಾಡಿ' ಎಂದು ಧೈರ್ಯ ತುಂಬಿದ್ದಾರೆ.

Suchitra Krishnamoorthi Received Vulgar Message in Facebook

ನಟಿ ಪೊಲೀಸರ ಗಮನಕ್ಕೆ ತಂದ ಬೆನ್ನಲ್ಲೆ ಸ್ಪಂದಿಸಿದ್ದಕ್ಕೆ ಸುಚಿತ್ರಾ ಧನ್ಯವಾದ ತಿಳಿಸಿದ್ದು, ''ಕೇವಲ ನಿಮ್ಮ ಗಮನಕ್ಕೆ ತರಲು ಮಾತ್ರ ಈ ವಿಷ್ಯ ಹೇಳಿದೆ. ಇದರಿಂದ ನನಗೆ ಏನು ಆಗಬೇಕಿಲ್ಲ. ನನ್ನವಂತರಿಗೆ ಸೋಶಿಯಲ್ ಮೀಡಿಯಾದಲ್ಲಿ ಈ ರೀತಿ ಸಂದೇಶ ಬಂದ್ರೆ ಬೇರೆಯವರ ಕಥೆ ಏನು? ಆದರೂ ನನ್ನ ಟ್ವೀಟ್ ಗೆ ಇಷ್ಟು ಬೇಗ ಸ್ಪಂದಿಸಿದ್ದಕ್ಕೆ ಧನ್ಯವಾದ'' ಎಂದಿದ್ದಾರೆ.

ಸುಚಿತ್ರಾ ಕೃಷ್ಣಮೂರ್ತಿ ಟಿವಿ ನಟಿ, ಕೆಲವು ಸಿನಿಮಾದಲ್ಲೂ ನಟಿಸಿದ್ದಾರೆ. ಬರಹಗಾರ್ತಿ ಹಾಗೂ ಗಾಯಕಿಯೂ ಹೌದು. ಶೇಖರ್ ಕಪೂರ್ ಎಂಬ ಸಿನಿಮಾ ಮೇಕರ್ ಜೊತೆ ವಿವಾಹವಾಗಿದ್ದರು. ಈಗ ವಿಚ್ಛೇದನವಾಗಿದೆ.

More from Filmibeat

English summary
Bollywood actress, singer suchitra krishnamoorthi received vulgar message in facebook from foreign man account.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X