For Quick Alerts
  ALLOW NOTIFICATIONS  
  For Daily Alerts

  ಸುದೀಪ್ ಮತ್ತು ಸಲ್ಮಾನ್ ಖಾನ್ 'ಈ ಒಂದು' ದೃಶ್ಯಕ್ಕಾಗಿ 25 ದಿನಗಳು ಹೊಡೆದಾಡಿದ್ದಾರೆ

  |

  ಕಿಚ್ಚು ಸುದೀಪ್ ಮತ್ತು ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ಅಭಿನಯದ ದಬಾಂಗ್-3 ಸಿನಿಮಾ ರಿಲೀಸ್ ಗೆ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದೆ. ಈಗಾಗಲೆ ಚಿತ್ರತಂಡ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದೆ. ಸುದೀಪ್ ಮೊದಲ ಬಾರಿಗೆ ಸಲ್ಮಾನ್ ಖಾನ್ ಎದುರು ತೊಡೆ ತಟ್ಟಿ ನಿಂತಿದ್ದಾರೆ. ಇಬ್ಬರ ಕಾದಾಟ ನೋಡಲು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.

  ದಬಾಂಗ್-3 ಪ್ರಮೋಷನ್ ನಲ್ಲಿ ಬ್ಯುಸಿಯಾಗಿರುವ ಸುದೀಪ್ ಇತ್ತೀಚಿಗೆ ನೀಡಿದ ಸಂದರ್ಶವೊಂದರಲ್ಲಿ ಇಂಟ್ರಸ್ಟಿಂಗ್ ವಿಚಾರವೊಂದನ್ನು ರಿವೀಲ್ ಮಾಡಿದ್ದಾರೆ. ಮೊದಲ ಬಾರಿಗೆ ಸಲ್ಮಾನ್ ಖಾನ್ ಎದುರು ಅಭಿನಯಿಸಿರುವ ಅನುಭವ ಬಿಚ್ಚಿಟ್ಟಿರುವ ಸುದೀಪ್ ಚಿತ್ರದ ಕ್ಲೈಮ್ಯಾಕ್ಸ್ ಬಗ್ಗೆ ಮಾತನಾಡಿದ್ದಾರೆ.

  ಹೈ ವೋಲ್ಟೇಜ್ ಕ್ಲೈಮ್ಯಾಕ್ಸ್ ಚಿತ್ರಕ್ಕಾಗಿ ಇಬ್ಬರು 25 ದಿನಗಳನ್ನು ತೆಗೆದುಕೊಂಡಿದ್ದರಂತೆ. ಕ್ಲೈಮ್ಯಾಕ್ಸ್ ನಲ್ಲಿ ಇಬ್ಬರ ಕಾದಾಟದ ರೋಚಕ ದೃಶ್ಯವಿದೆ. ರೋಚಕವಾದ ಕ್ಲೈಮ್ಯಾಕ್ಸ್ ನಲ್ಲಿ ಇಬ್ಬರು ಸರಿಸಮಾನವಾಗಿ ಫೈಟ್ ಮಾಡಿದ್ದಾರಂತೆ. ಇಲ್ಲಿ ಯಾರು ವಿನ್ನರ್ ಮತ್ತು ಲೂಸರ್ ಎನ್ನುವುದು ಇಲ್ಲದೆ ಫೈಟ್ ಮಾಡಿದ್ದಾರಂತೆ. ಇಬ್ಬರು ಸರಿಯಾಗೆ ಕಿತ್ತಾಡಿದ್ದಾರಂತೆ. ಈ ದೃಶ್ಯಕ್ಕಾಗಿ ಇಬ್ಬರು 25 ದಿನಗಳನ್ನು ತೆಗೆದುಕೊಂಡಿದ್ದರಂತೆ.

  ವಿಶೇಷ ಅಂದರೆ ಸುದೀಪ್ ಕ್ಲೈಮ್ಯಾಕ್ಸ್ ದೃಶ್ಯಕ್ಕಾಗಿ ಬರೋಬ್ಬರಿ 25 ದಿನಗಳನ್ನು ತೆಗೆದುಕೊಂಡ ಉದಾಹರಣೆಯೆ ಇಲ್ಲವಂತೆ. ಇದೇ ಮೊದಲ ಬಾರಿಗೆ ಸುದೀಪ್ ಇಷ್ಟುದಿನಗಳ ಕಾಲ ಕ್ಲೈಮ್ಯಾಕ್ಸ್ ಚಿತ್ರೀಕರಣ ಮಾಡಿದ್ದಾರಂತೆ. ಪಕ್ಕ ಪ್ರಾಣಿಗಳಂತೆ ಕಾದಾಡಿದ್ದಾರಂತೆ. ಅದ್ಭುತವಾದ ಕ್ಲೈಮ್ಯಾಕ್ಸ್ ಎಂದು ಹೇಳಿದ್ದಾರೆ. ಬಾರಿ ನಿರೀಕ್ಷೆ ಮೂಡಿಸಿರುವ ದಬಾಂಗ್-3 ಇದೆ ತಿಂಗಳು 20ಕ್ಕೆ ತೆರೆಗೆ ಬರುತ್ತಿದೆ. ವಿಶೇಷ ಅಂದರೆ ದಬಾಂಗ್-3 ಕನ್ನಡದಲ್ಲೂ ತೆರೆಗೆ ಬರುತ್ತಿದೆ.

  English summary
  Kannada actor Sudeep and Salman Khan have fought 25 days for the dabangg-3 climax scene.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X