ಸುದೀಪ್ ಅಭಿಮಾನಿ ಹುಚ್ಚಾಟ: ಆತ್ಮ ಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಪೋಸ್ಟ್!

ನಟ ಸುದೀಪ್ ಅಭಿನಯದ 'ವಿಕ್ರಾಂತ್ ರೋಣ' ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಈಗಾಗಲೇ ರಿಲೀಸ್ ಆಗಿರುವ ಚಿತ್ರದ ತುಣುಕುಗಳು ಸಿನಿಮಾದ ಮೇಲೆ ಹೆಚ್ಚಿನ ಕುತೂಹಲ, ನಿರೀಕ್ಷೆಯನ್ನು ಮೂಡುವಂತೆ ಮಾಡಿದೆ. ಇನ್ನು ಕಿಚ್ಚನ ಅಭಿಮಾನಿಗಳು ಚಿತ್ರವನ್ನು ನೋಡಲು ತುದಿಗಾಲಲ್ಲಿ ನಿಂತು ಕಾಯುತ್ತಾ ಇದ್ದಾರೆ.

ಕೆಲವೊಮ್ಮೆ ಸ್ಟಾರ್ ನಟರ ಅಭಿಮಾನಿಗಳ ಅಭಿಮಾನ ಅತಿರೇಕಕ್ಕೆ ಹೋಗಿ ಬಿಡುತ್ತದೆ. ಹಾಗಾಗಿ ಕುರುಡು ಅಭಿಮಾನದಲ್ಲಿ ಅಭಿಮಾನಿಗಳು ತಪ್ಪು ಹೆಜ್ಜೆ ಇಡುತ್ತಾರೆ. ಈಗ ಕಿಚ್ಚನ ಅಭಿಮಾನಿ ಒಬ್ಬ ಇಂತಹ ಎಡವಟ್ಟು ಮಾಡಿದ್ದಾನೆ. ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬರೆದು ಟ್ವಿಟ್ಟರ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

ಅಂಗೈಯಲ್ಲಿ ಪೆನ್ನಿನಿಂದ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬರೆದು ಫೊಟೋ ತೆಗೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಈಗ ಹೀಗೆ ಮಾಡಲು ಕಾರಣ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾ. ವಿಕ್ರಾಂತ್ ರೋಣ ಚಿತ್ರದ ಬಗ್ಗೆ ಮಾಹಿತಿಗಾಗಿ ಈ ರೀತಿ ಬರೆದುಕೊಂಡಿದ್ದಾರೆ. ಕೈ ಫೋಟೋ ಮಾತ್ರ ಹಂಚಿಕೊಂಡ ಕಾರಣ ಈಗ ಯಾರು ಎಂದು ತಿಳಿದು ಬಂದಿಲ್ಲ.

ಸತೀಶ್ ಗೌಡ ಎನ್ನುವ ಅಕೌಂಟ್‌ನಿಂದ ಈ ಫೋಟೋ ಪೋಸ್ಟ್ ಆಗಿದೆ. "ವಿಕ್ರಾಂತ್ ರೋಣ ಚಿತ್ರದ ಅಪ್ಡೇಟ್ ಬಾರದ ಕಾರಣ ನಾನು ಆತ್ಮ ಹತ್ಯೆ ಮಾಡಿಕೊಳ್ಳುತ್ತಾ ಇದ್ದೇನೆ" ಎಂದು ಟ್ವೀಟ್‌ನಲ್ಲಿ ಬರೆದು ಸುದೀಪ್ ಮತ್ತು ಅನುಪ್ ಭಂಡಾರಿಗೆ ಟ್ಯಾಗ್ ಮಾಡಲಾಗಿದೆ.

ಇದು ಚಿತ್ರದ ಅಪ್ಡೇಟ್‌ಗಾಗಿ ಅಭಿಮಾನಿ ಹೂಡಿದ ಅಸ್ತ್ರ ಇರಬಹುದು. ಆದರೆ ತಮಾಷೆಗಾಗಿ ಹೀಗೆಲ್ಲಾ ಮಾಡುವುದು ಅತಿರೇಕ ಅಲ್ಲದೆ ಮತ್ತೇನು ಅಲ್ಲ. ಹಾಗಾಗಿ ಈತನ ಪೋಸ್ಟ್‌ಗೆ ಎಲ್ಲರೂ ವಿರೋಧ ವ್ಯಕ್ತಪಡಿಸಿದ್ದಾರೆ.

Sudeep Fan Write Suicide Note For Vikranth Rona Update

ಕಿಚ್ಚ ಸುದೀಪ್ ಮತ್ತು ನಿರ್ದೇಶಕ ಅನೂಪ್ ಭಂಡಾರಿ ಕಂಬಿನೇಷನ್‌ನಲ್ಲಿ ಅದ್ದೂರಿ ವೆಚ್ಚದಲ್ಲಿ ತಯಾರಾಗಿರುವ ವಿಕ್ರಾಂತ್ ರೋಣ, 3ಡಿ ಆ್ಯಕ್ಷನ್ ಅಡ್ವೆಂಚರ್‌, ಮಿಸ್ಟ್ರಿ ಥ್ರಿಲ್ಲರ್ ಒಳಗೊಂಡಿದೆ. ಕನ್ನಡ, ಹಿಂದಿ, ತೆಲುಗು ಸೇರಿ 5 ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಅಲ್ಲದೇ ಇಂಗ್ಲೀಷ್, ಅರೇಬಿಕ್, ಜರ್ಮನ್, ರಷಿಯನ್, ಮ್ಯಾಂಡರಿನ್ ಭಾಷೆಗೂ ಡಬ್ ಆಗುತ್ತಿದೆ. ಈ ಚಿತ್ರವನ್ನು ಶಾಲಿನಿ ಪ್ರೊಡಕ್ಷನ್ಸ್ ಮೂಲಕ ಜಾಕ್ ಮಂಜುನಾಥ್ ನಿರ್ಮಿಸುತ್ತಿದ್ದು, ಅಲಂಕಾರ್ ಪಾಂಡಿಯನ್ ಕೋ ಪ್ರೊಡ್ಯೂಸರ್ ಆಗಿದ್ದಾರೆ. ಜಾಕ್ವೆಲಿನ್ ಫರ್ನಾಂಡಿಸ್ , ನಿರೂಪ್ ಭಂಡಾರಿ, ನೀತಾ ಅಶೋಕ್ ಚಿತ್ರದ ಉಳಿದ ತಾರಾಗಣದಲ್ಲಿದ್ದಾರೆ.

More from Filmibeat

English summary
Sudeep Fan Write Suicide Note For Vikranth Rona Update, Know More
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X