For Quick Alerts
  ALLOW NOTIFICATIONS  
  For Daily Alerts

  'ದಬಾಂಗ್' ಚಿತ್ರದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಟ ಸುದೀಪ್, ಎಷ್ಟು?

  |

  ಸಲ್ಮಾನ್ ಖಾನ್ ನಟಿಸಿರುವ ದಬಾಂಗ್ 3 ಸಿನಿಮಾ ಇದೇ ಡಿಸೆಂಬರ್ 20 ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ. ಹಿಂದಿಯಲ್ಲಿ ತಯಾರಾಗಿರುವ ಈ ಸಿನಿಮಾ ತಮಿಳು, ತೆಲುಗು ಜೊತೆಗೆ ಕನ್ನಡದಲ್ಲೂ ರಿಲೀಸ್ ಆಗುತ್ತಿರುವುದು ಸ್ಯಾಂಡಲ್ವುಡ್ ಪಾಲಿಗೆ ವಿಶೇಷ.

  ದಬಾಂಗ್ 3 ಚಿತ್ರದಲ್ಲಿ ಕನ್ನಡದ ಅಭಿನಯ ಚಕ್ರವರ್ತಿ ಸುದೀಪ್ ಖಳನಾಯಕನಾಗಿ ನಟಿಸಿರುವುದು ಈ ಚಿತ್ರಕ್ಕೆ ಮತ್ತಷ್ಟು ಧಮ್ ಹೆಚ್ಚಿಸಿದೆ. ಸಲ್ಲು ಎದುರು ಕಿಚ್ಚನ ಖದರ್ ನೋಡಲು ಕನ್ನಡ ಪ್ರೇಕ್ಷಕರು ಕಾಯುತ್ತಿದ್ದಾರೆ.

  ಸಲ್ಮಾನ್ ಖಾನ್ ಜೊತೆ ಕಪಿಲ್ ಶರ್ಮಾ ಶೋನಲ್ಲಿ ನಕ್ಕು-ನಲಿದ ಕಿಚ್ಚ ಸುದೀಪ್ಸಲ್ಮಾನ್ ಖಾನ್ ಜೊತೆ ಕಪಿಲ್ ಶರ್ಮಾ ಶೋನಲ್ಲಿ ನಕ್ಕು-ನಲಿದ ಕಿಚ್ಚ ಸುದೀಪ್

  ಇಂತಹ ಸಮಯದಲ್ಲಿ ಕಿಚ್ಚ ಸುದೀಪ್ ಅವರು ತಮ್ಮ ಸಂಭಾವನೆ ಬಗ್ಗೆ ಮಾತನಾಡಿದ್ದಾರೆ. ದಬಾಂಗ್ ಚಿತ್ರದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಟ ನಾನೇ ಎಂದು ಸ್ವತಃ ಸುದೀಪ್ ಹೇಳಿದ್ದಾರೆ. ಹಾಗಿದ್ರೆ, ಸಲ್ಲು ಎದುರು ವಿಲನ್ ಆಗಿ ನಟಿಸಲು ಕಿಚ್ಚ ಪಡೆದ ಸಂಭಾವನೆ ಎಷ್ಟು? ಮುಂದೆ ಓದಿ....

  'ದಬಾಂಗ್' ಚಿತ್ರದಲ್ಲಿ ನಾನು ಕಾಸ್ಟ್ಲಿ ನಟ

  'ದಬಾಂಗ್' ಚಿತ್ರದಲ್ಲಿ ನಾನು ಕಾಸ್ಟ್ಲಿ ನಟ

  ದಬಾಂಗ್ ಸಿನಿಮಾದಲ್ಲಿ ನಾನು ಅತಿ ಹೆಚ್ಚು ಸಂಭಾವನೆ ಪಡೆದ ನಟ ಎಂದು ಕಿಚ್ಚ ಸುದೀಪ್ ಅವರು ''ನ್ಯೂಸ್ ನೇಷನ್' ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಆದರೆ, ಅವರ ಸಂಭಾವನೆ ಎಷ್ಟು ಕೇಳಿದ್ದಕ್ಕೆ ಅವರ ಕೊಟ್ಟ ಉತ್ತರ ಮಾತ್ರ ವಿಶೇಷವಾಗಿತ್ತು.

  'ದಬಾಂಗ್-3' ಪ್ರಮೋಷನ್ ನಲ್ಲಿ ಜಾವಾ ಬೈಕ್ ಏರಿದ ಕಿಚ್ಚ ಸುದೀಪ್'ದಬಾಂಗ್-3' ಪ್ರಮೋಷನ್ ನಲ್ಲಿ ಜಾವಾ ಬೈಕ್ ಏರಿದ ಕಿಚ್ಚ ಸುದೀಪ್

  ನನಗೆ ಬಹಳ ಸಿಕ್ಕಿದೆ

  ನನಗೆ ಬಹಳ ಸಿಕ್ಕಿದೆ

  ''ದಬಾಂಗ್ ಸಿನಿಮಾದ ಬಗ್ಗೆ ಹೇಳುವುದಾರೇ ನಾನೊಂದು ಪುಸ್ತಕ ಬರೆಯಬಹುದು. ಈ ಚಿತ್ರದ ಮೂಲಕ ಬಹಲ ಜನರನ್ನು ಭೇಟಿ ಮಾಡುವ ಅವಕಾಶ ಸಿಕ್ತು. ಅವರ ಜೊತೆ ಸಮಯ ಕಳೆಯುವ ಕ್ಷಣಗಳು ನನಗೆ ಸಿಕ್ತು. ಸಿನಿಮಾ ಮುಗಿದ್ಮೇಲೆ ದೊಡ್ಡ ಪ್ರೀತಿ ಸಿಕ್ಕಿದೆ. ಒಬ್ಬ ಫ್ಯಾಮಿಲಿ ಸದಸ್ಯನಂತೆ ಸಲ್ಮಾನ್ ಖಾನ್ ನನ್ನನ್ನು ನೋಡಿಕೊಂಡಿದ್ದಾರೆ. ಹಾಗ್ನೋಡಿದ್ರೆ, ನಾನು ದಬಾಂಗ್ ಚಿತ್ರದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಟ'' ಎಂದು ಸಂತಸ ಹಂಚಿಕೊಂಡಿದ್ದಾರೆ.

  ಸಲ್ಮಾನ್ ಖಾನ್ ಕನ್ನಡ ಕೇಳಿ ಖುಷಿಯಾದ ಕನ್ನಡಿಗರುಸಲ್ಮಾನ್ ಖಾನ್ ಕನ್ನಡ ಕೇಳಿ ಖುಷಿಯಾದ ಕನ್ನಡಿಗರು

  ದುಡ್ಡಿನ ಬಗ್ಗೆ ನಾನು ಮಾತಾಡುತ್ತಿಲ್ಲ

  ದುಡ್ಡಿನ ಬಗ್ಗೆ ನಾನು ಮಾತಾಡುತ್ತಿಲ್ಲ

  ''ಇಲ್ಲಿ ನಾನು ದುಡ್ಡಿನ ಬಗ್ಗೆ ಮಾತಾಡುತ್ತಿಲ್ಲ. ನನಗೆ ಸಿಕ್ಕ ಪ್ರೀತಿಗೆ ಮಾತ್ರ ಮಾತನಾಡುತ್ತಿದ್ದೇನೆ'' ಎಂದು ಹೇಳುವ ಮೂಲಕ ಸಲ್ಮಾನ್ ಖಾನ್ ಮತ್ತು ದಬಾಂಗ್ ಚಿತ್ರತಂಡ, ಸುದೀಪ್ ಅವರನ್ನ ನೋಡಿಕೊಂಡ ರೀತಿಗೆ ಖುಷಿ ವ್ಯಕ್ತಪಡಿಸಿದರು. ಹಾಗ್ನೋಡಿದ್ರೆ, ಸಲ್ಮಾನ್ ಖಾನ್ ಬಿಟ್ಟರೇ ಸುದೀಪ್ ಅವರಿಗೆ ಹೆಚ್ಚು ಸಂಭಾವನೆ ಸಿಕ್ಕಿರುತ್ತೆ.

  ಸಲ್ಮಾನ್ ಖಾನ್ ಪ್ರೊಡಕ್ಷನ್ ಚಿತ್ರ ಇದು

  ಸಲ್ಮಾನ್ ಖಾನ್ ಪ್ರೊಡಕ್ಷನ್ ಚಿತ್ರ ಇದು

  ದಬಾಂಗ್ 3 ಚಿತ್ರವನ್ನ ನಿರ್ಮಿಸಿರುವುದು ಸಲ್ಮಾನ್ ಖಾನ್ ಸಹೋದರ ಮತ್ತು ಸಲ್ಮಾನ್ ಖಾನ್. ಸುಮಾರು 100 ಕೋಟಿ ಬಜೆಟ್ ಹಾಕಲಾಗಿದೆಯಂತೆ. ಈ ಚಿತ್ರಕ್ಕೆ ಸಲ್ಲು ಸಂಭಾವನೆ ಲೆಕ್ಕಕ್ಕೆ ಇಲ್ಲ. ಯಾಕಂದ್ರೆ, ಅವರದ್ದೇ ಪ್ರೊಡಕ್ಷನ್. ಸಲ್ಮಾನ್ ಖಾನ್ ಬಿಟ್ಟರೆ ಸುದೀಪ್ ಗೆ ಹೆಚ್ಚು ಸಂಭಾವನೆ ಸಿಕ್ಕಿದೆ ಎನ್ನಲಾಗಿದೆ.

  ದಬಾಂಗ್ 3 ಟ್ರೈಲರ್: ಚುಲ್ ಬುಲ್ ಪಾಂಡೆ ದರ್ಬಾರ್, ಸುದೀಪ್ ಸೂಪರ್ದಬಾಂಗ್ 3 ಟ್ರೈಲರ್: ಚುಲ್ ಬುಲ್ ಪಾಂಡೆ ದರ್ಬಾರ್, ಸುದೀಪ್ ಸೂಪರ್

  ಕನ್ನಡದಲ್ಲಿ ದಬಾಂಗ್

  ಕನ್ನಡದಲ್ಲಿ ದಬಾಂಗ್

  ಸಲ್ಮಾನ್ ಖಾನ್ ಸಿನಿಮಾ ಇದೇ ಮೊದಲ ಕನ್ನಡದಲ್ಲಿ ಬರ್ತಿದೆ. ಮೂಲಗಳ ಪ್ರಕಾರ ಸ್ವತಃ ಸಲ್ಮಾನ್ ಖಾನ್ ಅವರೇ ಕನ್ನಡದಲ್ಲಿ ಡಬ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಟ್ರೈಲರ್ ನಲ್ಲಿ ಸಲ್ಲು ಕನ್ನಡ ಮಾತನಾಡಿರುವುದು ಈಗಾಗಲೇ ತಿಳಿದಿರುವ ವಿಚಾರ. ಸುದೀಪ್ ಈ ಸಿನಿಮಾದಲ್ಲಿ ವಿಲನ್ ಆಗಿರುವುದರಿಂದ ಸ್ಯಾಂಡಲ್ವುಡ್ ಗೆ ಇದು ದೊಡ್ಡ ಸಿನಿಮಾ ಆಗಲಿದೆ.

  English summary
  Kannada actor Kiccha Sudeep has the highest paid actor in dabangg 3 movie. Salman khan played lead role in this film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X