ದಬಾಂಗ್ 3 ಚಿತ್ರದ ನಟನೆಗಾಗಿ ಸುದೀಪ್ ಗೆ ಸಿಕ್ತು ಮೊದಲ ಪ್ರಶಸ್ತಿ
Recommended Video
ದಬಾಂಗ್ 3 ಚಿತ್ರದಲ್ಲಿ ಕಿಚ್ಚ ಸುದೀಪ್ ಅವರ ಅಭಿನಯ ವೈಯಕ್ತಿಕವಾಗಿ ಮೆಚ್ಚುಗೆ ಗಳಿಸಿಕೊಂಡಿತ್ತು. ಸಲ್ಮಾನ್ ಖಾನ್ ಎದುರು ಖಡಕ್ ವಿಲನ್ ಆಗಿ ಸುದೀಪ್ ಅಬ್ಬರಿಸಿದ್ದರು. ವಿಶೇಷವಾಗಿ ದಬಾಂಗ್ 3 ಚಿತ್ರವನ್ನು ಇಷ್ಟಪಟ್ಟ ಕನ್ನಡ ಪ್ರೇಕ್ಷಕರು ಸಲ್ಲುಗಿಂತ ಕಿಚ್ಚ ಸೂಪರ್ ಎಂದೆಲ್ಲ ಹೇಳಿದ್ದರು.
ಇದೀಗ, ದಬಾಂಗ್ 3 ಚಿತ್ರದ ಅದ್ಭುತ ನಟನೆಗಾಗಿ ಸುದೀಪ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ 'ಭರವಸೆಯ ನಟ' ಪ್ರಶಸ್ತಿ ಸಿಕ್ಕಿದೆ.
ಫೆಬ್ರವರಿ 20 ರಂದು ಮುಂಬೈನಲ್ಲಿ ದಾದಾ ಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯಲಿದೆ. ಮಹಾರಾಷ್ಟ್ರದ ರಾಜ್ಯಪಾಲರು ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ.

ಈ ಚಿತ್ರೋತ್ಸವದಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯದ ಹಲವು ಚಿತ್ರಗಳು, ಹಲವು ವಿಭಾಗದಲ್ಲಿ ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ. ಇದೇ ವೇಳೆ ಹಿಂದಿ ಇಂಡಸ್ಟ್ರಿಯ ನಟ-ನಟಿಯರಿಗೂ ಪ್ರಶಸ್ತಿ ನೀಡಲಾಗುತ್ತೆ.
ಸಲ್ಮಾನ್ ಖಾನ್ ನಾಯಕನಾಗಿ ನಟಿಸಿದ್ದ ದಬಾಂಗ್ 3 ಚಿತ್ರವನ್ನು ಪ್ರಭುದೇವ ನಿರ್ದೇಶಿಸಿದ್ದರು. ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಮತ್ತು ಸಲ್ಮಾನ್ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದರು. ಸೋನಾಕ್ಷಿ ಸಿನ್ಹಾ ನಾಯಕಿಯಾಗಿದ್ದರು. ಕನ್ನಡದಲ್ಲೂ ಈ ಚಿತ್ರ ಬಿಡುಗಡೆಯಾಗಿದ್ದು ವಿಶೇಷವಾಗಿತ್ತು.


Click it and Unblock the Notifications











