For Quick Alerts
  ALLOW NOTIFICATIONS  
  For Daily Alerts

  ದಬಾಂಗ್ 3 ಚಿತ್ರದ ನಟನೆಗಾಗಿ ಸುದೀಪ್ ಗೆ ಸಿಕ್ತು ಮೊದಲ ಪ್ರಶಸ್ತಿ

  |
  ಕಿಚ್ಚ ಅಭಿಮಾನಿಗಳಿಗೆ ಹೇಳಿದ ಖುಷಿಯ ವಿಚಾರ ಏನು ಗೊತ್ತಾ..? | Sudeep | Kotigobba 3 | Filmibeat Kannada

  ದಬಾಂಗ್ 3 ಚಿತ್ರದಲ್ಲಿ ಕಿಚ್ಚ ಸುದೀಪ್ ಅವರ ಅಭಿನಯ ವೈಯಕ್ತಿಕವಾಗಿ ಮೆಚ್ಚುಗೆ ಗಳಿಸಿಕೊಂಡಿತ್ತು. ಸಲ್ಮಾನ್ ಖಾನ್ ಎದುರು ಖಡಕ್ ವಿಲನ್ ಆಗಿ ಸುದೀಪ್ ಅಬ್ಬರಿಸಿದ್ದರು. ವಿಶೇಷವಾಗಿ ದಬಾಂಗ್ 3 ಚಿತ್ರವನ್ನು ಇಷ್ಟಪಟ್ಟ ಕನ್ನಡ ಪ್ರೇಕ್ಷಕರು ಸಲ್ಲುಗಿಂತ ಕಿಚ್ಚ ಸೂಪರ್ ಎಂದೆಲ್ಲ ಹೇಳಿದ್ದರು.

  ಇದೀಗ, ದಬಾಂಗ್ 3 ಚಿತ್ರದ ಅದ್ಭುತ ನಟನೆಗಾಗಿ ಸುದೀಪ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ 'ಭರವಸೆಯ ನಟ' ಪ್ರಶಸ್ತಿ ಸಿಕ್ಕಿದೆ.

  'ದಬಾಂಗ್' 15ನೇ ದಿನದ ಗಳಿಕೆ ನೋಡಿದ್ರೆ ಭಾರಿ ನಿರಾಸೆ ಆಗುತ್ತೆ!'ದಬಾಂಗ್' 15ನೇ ದಿನದ ಗಳಿಕೆ ನೋಡಿದ್ರೆ ಭಾರಿ ನಿರಾಸೆ ಆಗುತ್ತೆ!

  ಫೆಬ್ರವರಿ 20 ರಂದು ಮುಂಬೈನಲ್ಲಿ ದಾದಾ ಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯಲಿದೆ. ಮಹಾರಾಷ್ಟ್ರದ ರಾಜ್ಯಪಾಲರು ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ.

  ಈ ಚಿತ್ರೋತ್ಸವದಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯದ ಹಲವು ಚಿತ್ರಗಳು, ಹಲವು ವಿಭಾಗದಲ್ಲಿ ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ. ಇದೇ ವೇಳೆ ಹಿಂದಿ ಇಂಡಸ್ಟ್ರಿಯ ನಟ-ನಟಿಯರಿಗೂ ಪ್ರಶಸ್ತಿ ನೀಡಲಾಗುತ್ತೆ.

  ದಬಾಂಗ್ ಹೀನಾಯ ಪ್ರದರ್ಶನ: ಸೌತ್ ನಟನ ಮುಂದೆ ಮಂಕಾದ ಸಲ್ಲು-ಸುದೀಪ್!ದಬಾಂಗ್ ಹೀನಾಯ ಪ್ರದರ್ಶನ: ಸೌತ್ ನಟನ ಮುಂದೆ ಮಂಕಾದ ಸಲ್ಲು-ಸುದೀಪ್!

  ಸಲ್ಮಾನ್ ಖಾನ್ ನಾಯಕನಾಗಿ ನಟಿಸಿದ್ದ ದಬಾಂಗ್ 3 ಚಿತ್ರವನ್ನು ಪ್ರಭುದೇವ ನಿರ್ದೇಶಿಸಿದ್ದರು. ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಮತ್ತು ಸಲ್ಮಾನ್ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದರು. ಸೋನಾಕ್ಷಿ ಸಿನ್ಹಾ ನಾಯಕಿಯಾಗಿದ್ದರು. ಕನ್ನಡದಲ್ಲೂ ಈ ಚಿತ್ರ ಬಿಡುಗಡೆಯಾಗಿದ್ದು ವಿಶೇಷವಾಗಿತ್ತು.

  English summary
  Kannada actor Kiccha Sudeep gets the Dadasaheb Phalke International Film Festival's most promising actor award for his role in Dabangg3.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X