'ಕೌನ್ ಬನೇಗ ಕರೋಡ್ ಪತಿ'ಯಲ್ಲಿ ಸುಧಾ ಮೂರ್ತಿ: ಅಮಿತಾಬ್ ಗೆ ಸಿಕ್ತು ವಿಶೇಷ ಉಡುಗೊರೆ

ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ನಡೆಸಿಕೊಡುತ್ತಿರುವ ಖ್ಯಾತ ಕಾರ್ಯಕ್ರಮ 'ಕೌನ್ ಬನೇಗ ಕರೋಡ್ ಪತಿ-11' ಕೊನೆಯ ಹಂತಕ್ಕೆ ಬಂದಿದೆ. ಕಳೆದ 10 ಸಂಚಿಕೆಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಅಮಿತಾಬ್ ಈಗ 11ನೇ ಸಂಚಿಕೆಯ ಮುಕ್ತಾಯ ಹಂತಕ್ಕೆ ಬಂದಿದ್ದಾರೆ. ಆನಾರೋಗ್ಯದ ನಡುವೆಯೂ ಬಿಗ್ ಬಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕರೋಡ್ ಪತಿಯನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ.

ಸದ್ಯ ಕೊನೆಯ ಸಂಚಿಕೆ ರೆಕಾರ್ಡಿಂಗ್ ಮುಗಿಸಿರುವ ಅಮಿತಾಬ್ ಅಚ್ಚರಿಕರ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ. ಹೌದು, ಈ ಬಾರಿಯ 'ಕೌನ್ ಬನೇಗ ಕರೋಡ್ ಪತಿ-11' ಕಾರ್ಯಕ್ರಮದಲ್ಲಿ ಹೆಮ್ಮೆಯ ಕನ್ನಡತಿ, ಖ್ಯಾತ ಉದ್ಯಮಿ, ಇನ್ಪೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಭಾಗಿಯಾಗಿದ್ದರು. ಈ ಬಗ್ಗೆ ಅಮಿತಾಬ್ ಬಚ್ಚನ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ವಿಶೇಷ ಅಂದರೆ ಸುಧಾ ಮೂರ್ತಿ, ಅಮಿತಾಬ್ ಅವರಿಗೆ ಉಡುಗೊರೆಯೊಂದನ್ನು ನೀಡಿದ್ದಾರೆ.

ಅಮಿತಾಬ್ ಜೊತೆ ಹೆಮ್ಮೆಯ ಕನ್ನಡತಿ

ಅಮಿತಾಬ್ ಜೊತೆ ಹೆಮ್ಮೆಯ ಕನ್ನಡತಿ

'ಕೌನ್ ಬನೇಗ ಕರೋಡ್ ಪತಿ-11' ಕಾರ್ಯಕ್ರಮದ ಕೊನೆಯ ಸಂಚಿಕೆ ಅಂದರೆ ಗ್ರ್ಯಾಂಡ್ ಫಿನಾಲೆಗೆ ಹೆಮ್ಮೆಯ ಕನ್ನಡತಿ ಸುಧಾ ಮೂರ್ತಿ ಭಾಗಿಯಾಗಿದ್ದಾರೆ. ಖ್ಯಾತ ಉದ್ಯಮಿ ಸುಧಾ ಮೂರ್ತಿ ಭೇಟಿಯಾದ ಖುಷಿಯನ್ನು ಅಮಿತಾಬ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಮಿತಾಬ್ ಮುಂದೆ ಹಾಟ್ ಸೀಟಿನಲ್ಲಿ ಕುಳಿತಿರುವ ಸುಧಾ ಮೂರ್ತಿ ಅವರನ್ನು ನೋಡಲು ಇಡೀ ದೇಶವೆ ಕಾತುರದಿಂದ ಕಾಯುತ್ತಿದೆ.

ಅಮಿತಾಬ್ ಗೆ ವಿಶೇಷ ಉಡುಗೊರೆ

ಅಮಿತಾಬ್ ಗೆ ವಿಶೇಷ ಉಡುಗೊರೆ

ಕರೋಡ್ ಪತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸುಧಾಮೂರ್ತಿ, ಅಮಿತಾಬ್ ಬಚ್ಚನ್ ಗೆ ವಿಶೇಷವಾದ ಉಡುಗೊರೆಯೊಂದನ್ನು ನೀಡಿದ್ದಾರೆ. ದೇವದಾಸಿಯರು ತಯಾರಿಸಿದ ಕೌದಿಯನ್ನು ಅಮಿತಾಬ್ ಗೆ ಗಿಫ್ಟ್ ಆಗಿ ನೀಡಿದ್ದಾರೆ. ಕೌದಿಯ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸುಧಾ ಮೂರ್ತಿ ಅವರು ಹೊಸ ಜೀವನ ನೀಡಿದ ದೇವದಾಸಿಯರು ಹೊಲಿದಿರುವ ಕೌದಿ ಇದಾಗಿದೆ.

ಸುಧಾ ಮೂರ್ತಿ ಬಗ್ಗೆ ಅಮಿತಾಬ್ ಹೇಳಿದ್ದೇನು?

ಸುಧಾ ಮೂರ್ತಿ ಬಗ್ಗೆ ಅಮಿತಾಬ್ ಹೇಳಿದ್ದೇನು?

"ನಿನ್ನೆ 3 ಸಂಚಿಕೆಗಳನ್ನು ಚಿತ್ರೀಕರಿಸಲಾಗಿದೆ. ಅದರಲ್ಲಿ ಗೌರವಾನ್ವಿತ ಸುಧಾ ಮೂರ್ತಿ ಅವರ ಸಂಚಿಕೆ ಅದ್ಭುತವಾಗಿದೆ. ಸುಧಾಮೂರ್ತಿ ಅವರು ನನಗೆ ನೀಡಿದ ಈ ಉಡುಗೊರೆ ಈ ಅಧ್ಬುತ ಕಾರ್ಯಕ್ರಮನ್ನು ಯಾವಾಗಲು ನೆನಪಿನಲ್ಲಿ ಇಟ್ಟುಕೊಳ್ಳಲುವಂತೆ ಮಾಡಿದೆ." ಎಂದು ಹೇಳಿದ್ದಾರೆ.

ದೇವದಾಸಿಯರಿಗೆ ಹೊಸ ಜೀವನ ನೀಡಿದ್ದಾರೆ

ದೇವದಾಸಿಯರಿಗೆ ಹೊಸ ಜೀವನ ನೀಡಿದ್ದಾರೆ

"ಕಾರ್ಯಕ್ರಮದಲ್ಲಿ ಇನ್ಫೋಸಿಸ್ ನಾರಾಯಣ ಮೂರ್ತಿ ಅವರ ಪತ್ನಿ ಸುಧಾ ನಾರಾಯಣ ಮೂರ್ತಿ ಅವರು ಭಾಗಿಯಾಗಿರುವುದು ನಮ್ಮ ಹೆಮ್ಮೆ. ಈ ಮೂಲಕ ಅವರ ಕಂಪೆನಿ ಮತ್ತು ಅವರು ಮಾಡುತ್ತಿರುವ ಸಾಮಾಜಮುಖಿ ಕೆಲಸಗಳು, ಬಡವರ ಬಗ್ಗೆ ಕಾಳಜಿ ಹೀಗೆ ಅಪಾರ ಪ್ರಮಾಣದ ಕೆಲಸದ ಬಗ್ಗೆ ಕೇಳಲು ಮತ್ತು ಕಲಿಯಲು ಸಾಧ್ಯವಾಯಿತು. ದೇವದಾಸಿಯರಿಗೆ ಹೊಸ ಜೀವನ ನೀಡಿದ್ದತಂಹ ಮಹಿಳೆ. ಎಂತಹ ಅದ್ಭುತ ಅನುಭವ. ಎಂತಹ ಮಹಿಳೆ. ನನಗೂ ಸೇರಿದಂತೆ ಅವರ ಜೊತೆ ಕೆಲಸ ಮಾಡುವರಿಗೆ ಅಪಾರವಾದ ಕಲಿಕೆ" ಎಂದು ಹೇಳಿದ್ದಾರೆ.

More from Filmibeat

English summary
Infosys Foundation Chairperson Sudha Murthy in Amitabh Bachchan hosting Kaun Banega Crorepati.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X