For Quick Alerts
  ALLOW NOTIFICATIONS  
  For Daily Alerts

  ಶಾರುಖ್ ಖಾನ್ ಮಗಳು ಧರಿಸಿರುವ ಟೋಪಿಯ ಬೆಲೆ, ಅಬ್ಬಬ್ಬಾ!

  |

  ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಸಿನಿಮಾಗಳಲ್ಲಿ ನಟಿಸದಿದ್ದರೂ ಯಾವ ನಟಿಗೂ ಕಡಿಮೆ ಇಲ್ಲದಷ್ಟು ಖ್ಯಾತಿ, ಇನ್‌ಸ್ಟಾಗ್ರಾಂನಲ್ಲಿ ಫಾಲೋವರ್ಸ್ ಪಡೆದಿದ್ದಾರೆ.

  ವಿದೇಶದಲ್ಲಿ ವ್ಯಾಸಾಂಗ ಮಾಡುತ್ತಿರುವ ಸುಹಾನಾ ಖಾನ್ ಇನ್‌ಸ್ಟಾಗ್ರಾಂನಲ್ಲಿ ಫೊಟೊ ಹಂಚಿಕೊಳ್ಳುವ ಮೂಲಕ ತನ್ನ ಐಶಾರಾಮಿ ಜೀವನದ ಪರಿಚಯವನ್ನು ಆಗಾಗ್ಗೆ ಮಾಡಿಕೊಡುತ್ತಿರುತ್ತಾರೆ.

  ಗೆಳೆಯರೊಟ್ಟಿಗೆ ಪಾರ್ಟಿ, ದುಬಾರಿ ಬೆಲೆಯ ಉಡುಪು, ದುಬಾರಿ ಅಪಾರ್ಟ್‌ಮೆಂಟ್ ಹೀಗೆ ಅವರು ಹಂಚಿಕೊಳ್ಳುವ ಚಿತ್ರದಲ್ಲಿ ಸುಹಾನಾರ ಐಶಾರಾಮಿ ಬದುಕು ಇಣುಕುತ್ತಿರುತ್ತದೆ.

  ಇದೀಗ ಹೊಸ ಚಿತ್ರವೊಂದನ್ನು ಸುಹಾನಾ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ನೀಲಿ ಬಣ್ಣದ ಟೋಪಿಯೊಂದನ್ನು ಧರಿಸಿರುವ ಸುಹಾನಾ, ಆ ಟೋಪಿ ಎದ್ದು ಕಾಣುವಂತೆ ಸೆಲ್ಫಿ ಕ್ಲಿಕ್ಕಿಸಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಚಿತ್ರದಲ್ಲಿ ಕಪ್ಪು ಬಣ್ಣದ ಬೆಕ್ಕೊಂದಿದೆ. ಈ ಚಿತ್ರಕ್ಕೆ 'ಕ್ಯಾಟ್ ಲೇಡಿ' ಎಂದು ಕ್ಯಾಪ್ಷನ್ ನೀಡಿದ್ದಾರೆ ಸುಹಾನಾ.

  ಸುಹಾನ ಧರಿಸಿರುವುದು ದುಬಾರಿ ಫ್ಯಾಷನ್ ಬ್ರ್ಯಾಂಡ್‌ಗಳಲ್ಲಿ ಒಂದಾಗಿರುವ 'ಗುಚ್ಚಿ'ಯ ಟೋಪಿ. ಈ ಟೋಪಿಯ ಬೆಲೆ ಬರೋಬ್ಬರಿ 40 ಸಾವಿರ. ನ್ಯೂಯಾರ್ಕ್ ಯಾಂಕೀಸ್ ಬೇಸ್‌ಬಾಲ್‌ ತಂಡದ ಕ್ಯಾಪ್ ಅದಾಗಿದ್ದು ಅಭಿಮಾನಿಗಳಿಗಾಗಿ ಗುಚ್ಚಿ ತಯಾರಿಸಿದ ಕ್ಯಾಪ್ ಅನ್ನು ಸುಹಾನಾ ಧರಿಸಿದ್ದಾರೆ. ನ್ಯೂಯಾರ್ಕ್‌ನಲ್ಲಿ ವಾಸವಿರುವ ಸುಹಾನಾ ಬೇಸ್‌ಬಾಲ್ ಅಭಿಮಾನಿಯಾಗಿದ್ದು ನ್ಯೂಯಾರ್ಕ್ ಯಾಂಕೀಸ್ ಸುಹಾನಾರ ಮೆಚ್ಚಿನ ತಂಡ.

  ಈ ನೀಲಿ ಟೋಪಿಯಂತೆಯೇ ಸುಹಾನಾ ಬಳಿ ಹಲವಾರು ದುಬಾರಿ ಫ್ಯಾಷನ್ ಆಕ್ಸಸರಿಗಳಿವೆ. ಸುಹಾನಾರ ಉಡುಪುಗಳು ಸಹ ಅತ್ಯಂತ ದುಬಾರಿ ಬೆಲೆಯದ್ದಾಗಿವೆ. ಬಾಲಿವುಡ್ ಬಾದ್‌ಶಾ ಮಗಳು ಒಳ್ಳೆಯ ಐಶಾರಾಮಿ ಜೀವನವನ್ನೇ ನಡೆಸುತ್ತಿದ್ದಾರೆ. ಇತ್ತೀಚೆಗೆ ಸುಹಾನಾ ತನ್ನ ಗೆಳೆತಿಯರೊಂದಿಗೆ ಮಾಡಿದ್ದ ಪೂಲ್ ಪಾರ್ಟಿಯ ಚಿತ್ರ ಸಖತ್ ವೈರಲ್ ಆಗಿತ್ತು.

  ರಾಬರ್ಟ್ ಚಿತ್ರದಿಂದ ಮತ್ತೊಂದು ದಾಖಲೆ ಬರೆದ ಅರ್ಜುನ್ ಜನ್ಯ | Filmibeat Kannada

  ನ್ಯೂಯಾರ್ಕ್‌ನ ಟಿಶ್ಶೆ ಸ್ಕೂಲ್ ಆಫ್‌ ಆರ್ಟ್ಸ್‌ ನಲ್ಲಿ ಸಿನಿಮಾ ತಂತ್ರಜ್ಞಾನ ಮತ್ತು ನಟನೆ ಕಲಿಯುತ್ತಿದ್ದಾರೆ. ಅಮೆರಿಕದಲ್ಲಿ ರಂಗಭೂಮಿಯಲ್ಲಿಯೂ ತೊಡಗಿಕೊಂಡಿರುವ ಸುಹಾನಾ, 2018 ರಲ್ಲಿ ಶೇಕ್ಸ್‌ಪಿಯರ್ ರಚಿತ 'ರೋಮಿಯೊ ಜೂಲಿಯೆಟ್' ನಾಟಕದಲ್ಲಿ ನಟಿಸಿದ್ದರು. ಸುಹಾನಾ ಬಾಲಿವುಡ್‌ಗೆ ಪ್ರವೇಶ ಪಡೆಯುವ ಸಾಧ್ಯತೆ ಹೆಚ್ಚಿದೆ.

  English summary
  Sharukh Khan's daughter Suhana Khan Wear 40 thousand cost Gucci New York Yankees Patch Baseball cap.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X