Viral Video ; ವೈರಲ್ ಆಯ್ತು ಶಾರುಖ್ ಖಾನ್ ಪುತ್ರಿ ಸುಹಾನಾ ವಿಡಿಯೋ...!
ರಾಜಕಾರಣಿಗಳ ಮಕ್ಕಳು ರಾಜಕಾರಣಿಗಳಾಗೋದು ಹೇಗೆ ಕಾಮನ್ನೋ ಅದೇ ತರ ಸಿನಿಮಾರಂಗದಲ್ಲಿ ಸ್ಟಾರ್ ಗಳ ಮಕ್ಕಳು ಸ್ಟಾರ್ ಗಳಾಗೋದು ಕೂಡ ಕಾಮನ್ನೇ. ಇದಕ್ಕೆ ಬಣ್ಣದ ಪ್ರಪಂಚದಲ್ಲಿ ಅನೇಕ ಉದಾಹರಣೆಗಳಿವೆ. ಅದರಲ್ಲಿಯೂ.. ಬಾಲಿವುಡ್‌ನಲ್ಲಿ ಇವತ್ತು ಆಳುತ್ತಿರುವ ಬಹುತೇಕರು, ಒಂದ್ಕಾಲಿನ ಸ್ಟಾರ್ ಕಲಾವಿದರ ಮಕ್ಕಳೇ. ಆ ಪೈಕಿ ಶಾರುಖ್ ಖಾನ್ ಅವರ ಮಗಳು ಸುಹಾನಾ ಖಾನ್ ಕೂಡ ಒಬ್ಬರು.
ಈಗಾಗಲೇ ''ದಿ ಆರ್ಚಿಸ್'' ಎಂಬ ಚಿತ್ರದ ಮೂಲಕ ಕಲರ್‌ಫುಲ್ ಪ್ರಯಾಣವನ್ನು ಶುರು ಮಾಡಿರುವ ಸುಹಾನಾ ಸದ್ಯ ತಮ್ಮ ತಂದೆ ಶಾರುಖ್ ಖಾನ್ ಜೊತೆ ತೆರೆ ಹಂಚಿಕೊಳ್ಳಲು ಸಿದ್ಧರಾಗಿದ್ದಾರೆ. ಈ ಚಿತ್ರಕ್ಕೆ ತಯಾರಿಯನ್ನೂ ಶುರು ಮಾಡಿದ್ದಾರೆ. ಜಿಮ್‌ನಲ್ಲಿ ದೇಹ ದಂಡಿಸುತ್ತಿದ್ದಾರೆ. ಫುಲ್ ಅಪ್, ಪುಶ್ ಅಪ್, ಡೆಡ್ ಲಿಫ್ಟ್‌ನಂತಹ ಕಷ್ಟದ ವ್ಯಾಯಾಮಗಳನ್ನು ಮಾಡಿರುವ ಸುಹಾನಾ, ತಾವು ಪ್ರತಿ ದಿನ ನಡೆಸುವ ತಾಲೀಮಿನ ದೃಶ್ಯಗಳನ್ನು ಸೇರಿಸಿ ತಮ್ಮ ಅಭಿಮಾನಿಗಳಿಗೆ ವಿಡಿಯೋ ಹಂಚಿಕೊಂಡಿದ್ದಾರೆ.

ಸದ್ಯಕ್ಕೆ ಸುಹಾನಾ ಖಾನ್ ಅವರ ಈ ವರ್ಕೌಟ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಐದು ಮಿಲಿಯನ್‌ಗೂ ಅಧಿಕ ವೀಕ್ಷಣೆಯನ್ನು ಪಡೆದಿದೆ. ಹತ್ ಹತ್ರ ಮೂರು ಲಕ್ಷಕ್ಕೂ ಅಧಿಕ ಜನರ ಹೃದಯವನ್ನು ಕೂಡ ಈ ವಿಡಿಯೋ ಗೆದ್ದಿದೆ. ನಿಮ್ಮ ಸೌಂದರ್ಯದ ರಹಸ್ಯವೇನು ಎಂದು ಒಬ್ಬ ಅಭಿಮಾನಿ ಕೇಳಿದರೆ, ಇನ್ನೊಬ್ಬ ಅಭಿಮಾನಿ ನಿಮ್ಮ ವ್ಯಾಯಾಮವನ್ನು ಕಣ್ತುಂಬಿಕೊಳ್ಳುವುದೇ ನಮ್ಮ ಸೌಭಾಗ್ಯ ಎಂದಿದ್ದಾನೆ. ತಂದೆಯಂತೆ ತುಂಬಾ ಶ್ರಮ ಜೀವಿ ಎಂದು ಒಬ್ಬ ಅಭಿಮಾನಿ ಹೇಳಿದರೆ, ಡ್ರಾಮಾ ಕ್ವೀನ್ ಎಂದು ಕಾಮೆಂಟ್ ಮಾಡುವ ಮತ್ತೊಬ್ಬ ವ್ಯಕ್ತಿ ಸುಹಾನಾ ಅವರ ಕಾಲೆಳೆದಿದ್ದಾನೆ.
ಅಂದ್ಹಾಗೇ ಸುಜೋಯ್ ಘೋಷ್ ನಿರ್ದೇಶನದಲ್ಲಿ ಬರಲಿರುವ ಸುಹಾನಾ ಖಾನ್ ಅಭಿನಯದ ಎರಡನೇ ಚಿತ್ರ ಈ ಜನವರಿಯಿಂದ ಆರಂಭವಾಗಲಿದೆ. ಈ ಹಿನ್ನೆಲೆ ಸದ್ಯ ಫಿಟ್ನೆಸ್‌ಗೋಸ್ಕರ ಬೆವರು ಸುರಿಸುತ್ತಿರುವ ಸುಹಾನಾ ಈ ಚಿತ್ರದಲ್ಲಿ ಅಪಾಯಕಾರಿ ಸ್ಟಂಟ್‌ಗಳನ್ನು ಕೂಡ ಮಾಡಲಿದ್ದಾರೆ. ಅಂತಾಷ್ಟ್ರೀಯ ತರಬೇತುದಾರರ ಮಾರ್ಗದರ್ಶನದಲ್ಲಿ ಪ್ರ್ಯಾಕ್ಟಿಸ್ ಮಾಡಲಿದ್ದಾರೆ. ಮಗಳ ಜೊತೆ ಶಾರುಖ್ ಖಾನ್ ಕೂಡ ತರಬೇತಿಯನ್ನು ಪಡೆಯಲಿದ್ದಾರೆ.
ಇನ್ನೂ ತಂದೆ ಮತ್ತು ಮಗಳು ಜೊತೆಯಲ್ಲಿ ಅಭಿನಯಿಸುತ್ತಿರುವ ಈ ಚಿತ್ರದ ಚಿತ್ರೀಕರಣ ಮುಂದಿನ ವರ್ಷದ ಆಗಸ್ಟ್ ಅಥವಾ ಸೆಪ್ಟೆಂಬರ್ ಸಮಯಕ್ಕೆ ಮುಗಿಯುವ ನಿರೀಕ್ಷೆ ಇದ್ದು, 2026ರ ಈದ್ ಹಬ್ಬದ ಪ್ರಯುಕ್ತ ಚಿತ್ರ ಬಿಡುಗಡೆಯಾಗಲಿದೆ. ಫೈಟರ್, ವಾರ್, ಪಠಾಣ್ ಚಿತ್ರಗಳನ್ನು ನಿರ್ದೇಶಿಸಿರುವ ಸಿದ್ಧಾರ್ಥ್ ಆನಂದ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು ಶಾರುಖ್ ಖಾನ್ ಪತ್ನಿ ಗೌರಿ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ. ಇನ್ನೂ ಅಭಿಷೇಕ್ ಬಚ್ಚನ್ ಕಿಂಗ್ ಚಿತ್ರದಲ್ಲಿ ಖಳನಾಯಕನ ಪಾತ್ರವನ್ನು ನಿರ್ವಹಿಸುತ್ತಿರುವುದು ವಿಶೇಷ.
ಉಳಿದಂತೆ ಅಭಿಷೇಕ್ ಬಚ್ಚನ್ ಸಹೋದರಿ ಶ್ವೇತಾ ಅವರ ಮಗ ಅಗಸ್ತ್ಯಾ ಅವರನ್ನು ಸುಹಾನಾ ಪ್ರೀತಿ ಮಾಡುತ್ತಿದ್ದಾರೆ ಎನ್ನುವ ಮಾತು ಬಾಲಿವುಡ್‌ನಲ್ಲಿ ಕೇಳಿ ಬರುತ್ತಿದೆ. ಸುಹಾನಾ ಅಭಿನಯದ ಮೊದಲ ಚಿತ್ರ ''ದಿ ಆರ್ಚಿಸ್'' ನಲ್ಲಿ ಅಗಸ್ತ್ಯಾ ನಂದ ಕೂಡ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದರು. ಇನ್ನೂ ಇಬ್ಬರು ಆಗಾಗ ಜೊತೆಯಾಗಿ ಕಾಣಿಸಿಕೊಳ್ಳುವ ಹಿನ್ನೆಲೆ ಇವರಿಬ್ಬರದ್ದು ಸ್ನೇಹ ಅಲ್ಲ ಬದಲಿಗೆ ಪ್ರೇಮ ಅನ್ನುವ ಅನುಮಾನ ಅನೇಕ ಸಿನಿಮಾ ಪ್ರೇಮಿಗಳಲ್ಲಿದೆ. ಒಟ್ನಲ್ಲಿ ಸದ್ಯಕ್ಕೆ ಸುಹಾನಾ ಜಿಮ್‌ನಲ್ಲಿ ಮಾಡುತ್ತಿರುವ ಕಸರತ್ತಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಚಿತ್ರದ ಮೇಲೆ ಸುಹಾನಾಗೆ ಇರುವ ಶ್ರದ್ಧೆ ಮತ್ತು ಪ್ರೀತಿಯ ಕುರಿತು ಚರ್ಚೆ ಕೂಡ ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿದೆ.


Click it and Unblock the Notifications











