ಅಮಿತಾಬ್ ಬಚ್ಚನ್ 'ಮೊಮ್ಮಗ'ನ ಜೊತೆ ಶಾರುಖ್ ಖಾನ್ ಮಗಳು 'ಸುಹಾನ' ಲವ್ವಿ ಡವ್ವಿ..!

ರಾಜಕಾರಣಿಗಳ ಮಕ್ಕಳು ರಾಜಕಾರಣಿಗಳಾಗೋದು ಹೇಗೆ ಕಾಮನ್ನೋ ಅದೇ ತರ ಸಿನಿಮಾರಂಗದಲ್ಲಿ ಸ್ಟಾರ್ ಗಳ ಮಕ್ಕಳು ಸ್ಟಾರ್ ಗಳಾಗೋದು ಕೂಡ ಕಾಮನ್ನೇ. ಇದಕ್ಕೆ ಬಣ್ಣದ ಪ್ರಪಂಚದಲ್ಲಿ ಅನೇಕ ಉದಾಹರಣೆಗಳಿವೆ. ಅದರಲ್ಲಿಯೂ.. ಬಾಲಿವುಡ್‌ನಲ್ಲಿ ಇವತ್ತು ಆಳುತ್ತಿರುವ ಬಹುತೇಕರು, ಒಂದ್ಕಾಲಿನ ಸ್ಟಾರ್ ಕಲಾವಿದರ ಮಕ್ಕಳೇ.

ಶಾರುಖ್ ಖಾನ್ ಮಗಳು ಸುಹಾನಾ ಖಾನ್ ಮತ್ತು ಅಭಿಷೇಕ್ ಬಚ್ಚನ್ ಸಹೋದರಿ ಶ್ವೇತಾ ಅವರ ಮಗ ಅಗಸ್ತ್ಯ ನಂದ ಕೂಡ ಈ ಸಾಲಿನಲ್ಲಿ ಸೇರಲು ಹವಣಿಸುತ್ತಿದ್ದಾರೆ. ಬಣ್ಣದ ಜಾಡು ಬೆನ್ನತ್ತಿ ಇಬ್ಬರು ಜೊತೆಯಲ್ಲಿ ''ದಿ ಆರ್ಚಿಸ್'' ಎಂಬ ಚಿತ್ರದ ಮೂಲಕ ಕಲರ್‌ಫುಲ್ ಪ್ರಯಾಣ ಶುರು ಮಾಡಿದ್ದಾರೆ.

Suhana Khan shares a playful photo to wish rumored boyfriend Agastya Nanda on his birthday

ಇಂಥಾ ಸುಹಾನಾ ಖಾನ್ ಮತ್ತು ಅಗಸ್ತ್ಯ ನಂದ ನಡುವೆ ಪ್ರೇಮಾಂಕುರವಾಗಿದೆ ಎನ್ನುವ ಅನುಮಾನ, ಬಹಳ ದಿನಗಳಿಂದ ಅನೇಕರಲ್ಲಿದೆ. ನಿಜಾ.. ಇಬ್ಬರು ಈ ವಿಚಾರವನ್ನು ಒಪ್ಪಿಕೊಂಡಿಲ್ಲ. ಆದರೆ .. ಬೆಂಕಿ ಇಲ್ಲದೆ ಹೊಗೆಯಾಡಲ್ಲ.

ಹೀಗಾಗಿಯೇ ಸುಹಾನಾ ಮತ್ತು ಅಗಸ್ತ್ಯ ಚಲನವಲನಗಳನ್ನು ಬಾಲಿವುಡ್‌ನ ಒಂದು ಬಣ ಸೂಕ್ಷ್ಮವಾಗಿ ಗಮನಿಸುತ್ತಿದೆ. ಹೀಗಿರುವಾಗ ಸುಹಾನಾ ಖಾನ್ ಮತ್ತು ಅಗಸ್ತ್ಯ ನಂದಾ ಆತ್ಮೀಯತೆಗೆ ಕೈಗನ್ನಡಿ ಹಿಡಿಯುವಂತಹ ಫೋಟೊವೊಂದು ಎಲ್ಲರ ಕಣ್ಣರಳಿಸಿದೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

suhana-khan-shares-a-playful-photo-to-wish-rumored-boyfriend-agastya-nanda-on-his-birthday

ಹೌದು, ಅಸಲಿಗೆ ಅಗಸ್ತ್ಯ ನಂದಾ ಇತ್ತೀಚಿಗೆಷ್ಟೇ ತಮ್ಮ 24ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಹಿನ್ನೆಲೆ ಶಾರುಖ್ ಖಾನ್ ಮಗಳು ಸುಹಾನಾ, ತಮ್ಮ ಗೆಳೆಯ ಅಗಸ್ತ್ಯಗೆ ವಿಶೇಷವಾದ ಫೋಟೊ ಹಂಚಿಕೊಳ್ಳುವ ಮೂಲಕ ಶುಭಾಶಯವನ್ನು ಕೋರಿದ್ದಾರೆ. ಫೋಟೋದ ಕ್ಯಾಪ್ಶನ್‌ನಲ್ಲಿ ವಿಂಕ್ ಎಮೋಜಿಯೊಂದಿಗೆ 'ಹ್ಯಾಪಿ ಬರ್ತ್‌ಡೇ' ಅಂತ ಬರೆದಿದ್ದಾರೆ. ಸದ್ಯಕ್ಕೆ ಈ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅನೇಕರ ಚಿತ್ತವನ್ನು ಕೂಡ ಕದಿಯುತ್ತಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಹಲವಾರು ಅಭಿಪ್ರಾಯಗಳು ಈ ಫೋಟೊಗೆ ವ್ಯಕ್ತವಾಗುತ್ತಿವೆ.

ಸುಹಾನ ಮತ್ತು ಅಗಸ್ತ್ಯ ಅವರದ್ದು ಹೇಳಿ ಮಾಡಿಸಿದ ಜೋಡಿ ಎಂದು ಕೆಲವರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರೆ,ಅಭಿಷೇಕ್ ಬಚ್ಚನ್ ಸಹೋದರಿ ಶ್ವೇತಾ ಬಚ್ಚನ್ ನಂದಾ ಮನೆಗೆ ಕಿಂಗ್ ಖಾನ್ ಅವರ ಮುದ್ದಿನ ಮಗಳು ಸುಹಾನಾ ಖಾನ್ ಸೊಸೆಯಾಗುವುದು ಖಚಿತ ಎನ್ನುವ ಅಭಿಪ್ರಾಯವನ್ನು ಅನೇಕರು ವ್ಯಕ್ತಪಡಿಸುತ್ತಿದ್ಧಾರೆ. ಸುಹಾನಾ ಮತ್ತು ಅಗಸ್ತ್ಯಾ ಪ್ರೇಮದ ಅಮಲನ್ನೇರಿಸಿಕೊಂಡಿದ್ದಾರೆ ಅನ್ನುವದಕ್ಕೂ ಇದೇ ಸಾಕ್ಷಿ ಎನ್ನುತ್ತಿದ್ದಾರೆ. ಇನ್ನು ಕೆಲವರು ಆ ಕಡೆ ಅಮಿತಾಬ್ ಬಚ್ಚನ್ ಮೊಮ್ಮಗ, ಈ ಕಡೆ ಶಾರುಖ್ ಖಾನ್ ಅಳಿಯ ಅಗಸ್ತ್ಯ ನಂದ ಅವರ ಹತ್ತು ಬೆರಳುಗಳಲ್ಲೂ ತುಪ್ಪ ಎಂದಿದ್ದಾರೆ. ಇನ್ನೂ ಕೆಲವರು ಇಬ್ಬರು ಚಿಕ್ಕವರು ಅವರ ಪಾಡಿಗೆ ಅವರನ್ನು ಖುಷಿಯಾಗಿರಲು ಬಿಡಿ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೂ ಕೆಲವರು ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಅಗಸ್ತ್ಯಾ ನಂದ ಅವರ ಹೋಲಿಕೆ ಮಾಡುತ್ತಿದ್ದಾರೆ.

ಅಂದ್ಹಾಗೇ ಕಳೆದ ಕೆಲ ತಿಂಗಳ ಹಿಂದೆ ಸುಹಾನ ಖಾನ್ ಮತ್ತು ಅಗಸ್ತ್ಯ ನಂದಾ ಅವರನ್ನು ತಮ್ಮ ವಿಚ್ಛೇದನದ ವದಂತಿಯ ನಡುವೆ ಅಭಿಷೇಕ್ ಬಚ್ಚನ್ ತಮ್ಮ ಕಾರಿನಲ್ಲಿ ಹೊರಗಡೆ ಕರೆದುಕೊಂಡು ಹೋಗಿದ್ದರು. ಆಗಲೂ ಕೂಡ ಸುಹಾನ ಮತ್ತು ಅಗಸ್ತ್ಯ ನಡುವಿನ ಸಂಬಂಧದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆದಿತ್ತು. ಇಬ್ಬರ ಪ್ರೇಮ ಕಥೆ ಅಭಿಷೇಕ್ ಬಚ್ಚನ್‌ಗೆ ಗೊತ್ತು ಎನ್ನುವ ಅಭಿಪ್ರಾಯ ಕೂಡ ವ್ಯಕ್ತವಾಗಿತ್ತು. ಇನ್ನುಳಿದಂತೆ ಸುಹಾನಾ ಖಾನ್ ಸದ್ಯ ''ಕಿಂಗ್'' ಎಂಬ ಚಿತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ವಿಶೇಷ ಅಂದರೆ ಈ ಚಿತ್ರದಲ್ಲಿ ಶಾರುಖ್ ಖಾನ್ ಕೂಡ ಕಾಣಿಸಿಕೊಳ್ಳಲಿದ್ದಾರೆ. ಈ ಮೂಲಕ ತಂದೆ ಮತ್ತು ಮಗಳು ಮೊದಲ ಬಾರಿ ತೆರೆಯನ್ನೂ ಹಂಚಿಕೊಳ್ಳಲಿದ್ದಾರೆ. ಇನ್ನೂ ವಿಶೇಷ ಅಂದರೆ ಅಭಿಷೇಕ್ ಬಚ್ಚನ್ ಈ ಚಿತ್ರದಲ್ಲಿ ಖಳನಾಯಕನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X