ಸುಹಾನಿ ಭಟ್ನಾಗರ್ ನಿಧನ ; ಕಂಬನಿ ಮಿಡಿದ ಆಮೀರ್ ಖಾನ್..!

ಸುಹಾನಿ ಭಟ್ನಾಗರ್ ನಿಧನಕ್ಕೆ ಆಮೀರ್ ಖಾನ್ ಸಂತಾಪವನ್ನ ಸೂಚಿಸಿದ್ದಾರೆ. ದಂಗಲ್ ಚಿತ್ರದಲ್ಲಿ ಸುಹಾನಿ {ಬಬಿತಾ ಪೋಗಟ್} ತಂದೆಯ ಪಾತ್ರವನ್ನ ನಿರ್ವಹಿಸಿದ್ದ ಆಮೀರ್ , ಸುಹಾನಿ ಅವರ ನಿಧನದ ಸುದ್ದಿ ಕೇಳಿ ನಮಗೆ ತುಂಬಾ ದುಃಖವಾಗಿದೆ. ಅವರ ತಾಯಿ ಪೂಜಾ ಅವರಿಗೆ ಮತ್ತು ಇಡೀ ಕುಟುಂಬಕ್ಕೆ ಆ ದೇವರು ದು:ಖ ಭರಿಸುವ ಶಕ್ತಿಯನ್ನ ನೀಡಲಿ ಎಂದು ಸಂತಾಪ ಸೂಚಿಸಿದ್ದಾರೆ. ಸುಹಾನಿ ಇಲ್ಲದಿದ್ದರೆ ದಂಗಲ್ ಅಪೂರ್ಣವಾಗುತ್ತಿತ್ತು ಎಂದಿರುವ ಆಮೀರ್ ಖಾನ್ ಸುಹಾನಿ ನೀವು ಯಾವಾಗಲೂ ನಮ್ಮ ಹೃದಯದಲ್ಲಿ ನಕ್ಷತ್ರವಾಗಿ ಉಳಿಯುತ್ತೀರಿ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ತಮ್ಮ ದುಃಖವನ್ನ ಹಂಚಿಕೊಂಡಿದ್ದಾರೆ.

ದಂಗಲ್ ಚಿತ್ರದ ನಿರ್ದೇಶಕ ನಿತೀಶ್ ತಿವಾರಿ ಕೂಡ ಸುಹಾನಿ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಸುಹಾನಿ ಅವರ ಅಕಾಲಿಕ ಮರಣದಿಂದಾಗಿ ಆಘಾತಕ್ಕೊಳಗಾಗಿದ್ದೇನೆ ಎಂದು ನಿತೀಶ್ ತಿವಾರಿ ಹೇಳಿದ್ದಾರೆ

Suhani Bhatnagar dies at 19, Aamir khans team offer condolences

ಸುಹಾನಿ ಅವರಿಗೆ ಏನಾಗಿತ್ತು..?

ದಂಗಲ್ ಚಿತ್ರದ ಮೂಲಕ ನೇಮ್ ಹಾಗೂ ಫೇಮ್ ಗಳಿಸಿದ್ದ ಸುಹಾನಿಯ ಸಾವಿನ ಬಗ್ಗೆ ಅನೇಕ ರೀತಿಯ ಚರ್ಚೆಗಳಾಗ್ತಿವೆ. ಅಂತೆ-ಕಂತೆ ಎಂಬ ಮಾತು ಕೇಳಿ ಬರುತ್ತಿವೆ. ಆದರೆ, ವಾಸ್ತವದಲ್ಲಿ ಸುಹಾನಿ ಕೆಲ ದಿನಗಳ ಹಿಂದೆ ಭೀಕರ ಅಪಘಾತಕ್ಕೆ ತುತ್ತಾಗಿದ್ದರು ಅನ್ನುವ ಮಾತು ಇದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಸುಹಾನ ಅವರನ್ನ ದೆಹಲಿಯ ಪ್ರತಿಷ್ಠಿತ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಬದಲಿಗೆ ಸುಹಾನಿ ಆರೋಗ್ಯ ಇನ್ನೆಷ್ಟು ಹದಗೆಟ್ಟಿತ್ತು. ನೀಡಲಾದ ಔಷಧಿಯ ಅಡ್ಡ ಪರಿಣಾಮದಿಂದ ದಿನದಿಂದ ದಿನಕ್ಕೆ ಸುಹಾನಿ ಸ್ಥಿತಿ ಕ್ಷೀಣಿಸತೊಡಗಿತು. ದೇಹದಲ್ಲಿ ನೀರು ತುಂಬಿಕೊಂಡಿತು. ಕೊನೆಗೆ ಸಾವು ಬದುಕಿನ ನಡುವೆ ಅನೇಕ ದಿನಗಳ ಕಾಲ ಹೋರಾಟ ಮಾಡಿದ ಸುಹಾನಿ ಇಂದು ಕೊನೆಯುಸಿರೆಳೆದರು ಅನ್ನುವ ಮಾತು ಸದ್ಯಕ್ಕೆ ಹಿಂದಿ ಉದ್ಯಮದಲ್ಲಿ ಕೇಳಿ ಬರುತ್ತಿದೆ.

11000 ಬಾಲಕಿಯರನ್ನ ಹಿಂದಿಕ್ಕಿ ಆಯ್ಕೆಯಾಗಿದ್ದ ಸುಹಾನಿ

ಹರಿಯಾಣಾದ ಫರೀದಾಬಾದ್​ನವರಾದ ಸುಹಾಸಿನಿ ಭಟ್ನಾಗರ್ ಸಣ್ಣ ವಯಸ್ಸಿನಲ್ಲಿಯೇ ಹಲವು ಜಾಹೀರಾತುಗಳಲ್ಲಿ ನಟಿಸಿದ್ದರು. ಆಮಿರ್ ಖಾನ್ ನಟನೆಯ 'ದಂಗಲ್' ಸಿನಿಮಾನಲ್ಲಿ ಬಬಿತಾ ಪೋಗಟ್​ ಎಳೆಯ ವಯಸ್ಸಿನ ಪಾತ್ರದಲ್ಲಿ ನಟಿಸಿದ್ದರು. 'ದಂಗಲ್' ಸಿನಿಮಾಕ್ಕೆ ಸುಹಾಸಿಯನ್ನು ಆಯ್ಕೆ ಮಾಡಿದ್ದ ಕಾಸ್ಟಿಂಗ್ ನಿರ್ದೇಶಕ ಮುಖೇಶ್ ಚಬ್ರಾ ಮಾತನಾಡಿ, '11 ಸಾವಿರ ಬಾಲಕಿಯರನ್ನು ಆಡಿಷನ್ ಮಾಡಲಾಗಿತ್ತು. ಅದರಲ್ಲಿ ಸುಹಾಸಿನಿ ಬಬಿತಾರ ಸಣ್ಣ ವಯಸ್ಸಿನ ಪಾತ್ರಕ್ಕೆ ಆಯ್ಕೆ ಆಗಿದ್ದರು ಎಂದು ಹೇಳಿದರು.

More from Filmibeat

English summary
Suhani Bhatnagar, known for her role in the blockbuster film Dangal, has died. She was 19. Suhani was seen as Aamir Khan's daughter in Dangal.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X