ಸುಕೇಶ್ ಚಂದ್ರಶೇಖರ್ ಬರೆದ ಪತ್ರದಲ್ಲಿ ಜಾಕ್ವೆಲಿನ್ ಫರ್ನಾಂಡೀಸ್ ಬಗ್ಗೆ ಹೇಳಿದ್ದೇನು?
200 ಕೋಟಿ ವಂಚನೆ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಸುಕೇಶ್ ಚಂದ್ರಶೇಖರ್ ಪತ್ರವೊಂದನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಹಾಗೂ ತಮ್ಮ ಸಂಬಂಧ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಬರೆದಿದ್ದಾರೆ. ಜಾಕ್ವೆಲಿನ್ ಯಾವುದೇ ಹಣಕಾಸಿನ ನಿರೀಕ್ಷೆಗಳನ್ನು ಇಟ್ಟುಕೊಂಡು ನನ್ನ ಬಳಿ ಇರಲಿಲ್ಲ. ನಾವಿಬ್ಬರು ನಿಶ್ಕಲ್ಮಷವಾಗಿ ಪ್ರೀತಿಸಿದ್ದೆವು ಎಂದು ಪತ್ರದ ಮೂಲಕ ತಿಳಿಸಿದ್ದಾರೆ. ಹಾಗಿದ್ದರೆ ಸುಕೇಶ್ ಚಂದ್ರಶೇಖರ್ ಪತ್ರದಲ್ಲಿ ಏನು ಮಾಹಿತಿ ನೀಡಿದ್ದಾರೆ ಮುಂದೆ ಓದಿ.
Recommended Video
"ಖಾಸಗಿ ಚಿತ್ರಗಳು ಪ್ರಸಾರವಾಗುತ್ತಿರುವುದು ನಿಜಕ್ಕೂ ಬೇಸರದ ಸಂಗತಿ, ಈ ರೀತಿ ಖಾಸಗೀ ವಿಚಾರಗಳು ಹೊರಬರುತ್ತಿರುವ ಬಗ್ಗೆ ನನಗೆ ಗೊತ್ತಾಯಿತು. ಇದು ಒಬ್ಬರ ಖಾಸಗಿತನ ಮತ್ತು ವೈಯಕ್ತಿಕ ಜೀವನಕ್ಕೆ ಧಕ್ಕೆಯಾಗಿದೆ. ನಾನು ಮೊದಲೇ ಹೇಳಿದಂತೆ, ಜಾಕ್ವೆಲಿನ್ ಮತ್ತು ನಾನು ಪ್ರೀತಿಸುತ್ತಿದ್ದೇವೆ. ನನ್ನ ಮತ್ತು ಜಾಕ್ವೆಲಿನ್ ಬಗ್ಗೆ ಊಹಿಸದ ರೀತಿಯಲ್ಲಿ ಕಾಮೆಂಟ್‌ಗಳು, ಟ್ರೋಲ್‌ಗಳನ್ನು ಮಾಡಲಾಗುತ್ತಿದೆ. ನಾವಿಬ್ಬರು ಯಾವುದೇ ನಿರೀಕ್ಷೆಗಳಿಲ್ಲದೆ ಪರಸ್ಪರ ಪ್ರೀತಿ ಮತ್ತು ಗೌರವವನ್ನು ಇಟ್ಟುಕೊಂಡಿದ್ದೆವು" ಎಂದು ಬರೆದಿದ್ದಾರೆ.
ಜೊತೆಗೆ ಜಾಕ್ವೆಲಿನ್ ಅವರನ್ನು ಮತ್ತಷ್ಟು ಸಮರ್ಥಿಸಿಕೊಂಡಿರುವ ಸುಕೇಶ್, ಜಾಕ್ವೆಲಿನ್‌ಗೂ 200 ಕೋಟಿ ಮನಿ ಲಾಂಡರಿಂಗ್ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಹಾಗೇ "ಏನನ್ನೂ ನಿರೀಕ್ಷಿಸದೆ ಪ್ರೀತಿಸುವ ಅವಳಿಗೆ ವಂಚನೆ ಅನ್ನೋದು ಸುಲಭವಲ್ಲ. ಅವಳನ್ನು ತಪ್ಪು ದಾರಿಯಲ್ಲಿ ತೋರಿಸುವುದನ್ನು ನಿಲ್ಲಿಸಲು ಎಲ್ಲರಿಗೂ ವಿನಂತಿಸುತ್ತೇನೆ. ನಾನು ಮೊದಲೇ ಹೇಳಿದಂತೆ, ನಡೆಯುತ್ತಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆಕೆಗೆ ಯಾವುದೇ ಸಂಬಂಧವಿಲ್ಲ" ಎಂದಿದ್ದಾರೆ.

"ಜಾಕ್ವೆಲಿನ್ ಪಡೆದ ದುಬಾರಿ ಉಡುಗೊರೆಗಳು ಮತ್ತು ಜಾಕ್ವೆಲಿನ್ ಕುಟುಂಬಕ್ಕೆ ನಾನು ನೀಡಿದ ಹಣ ಎಲ್ಲವೂ ಕಾನೂನುಬದ್ಧ ಗಳಿಕೆ" ಎಂದು ಸುಕೇಶ್ ಸ್ಪಷ್ಟಪಡಿಸಿದ್ದಾರೆ.
"ನಾನು ಜಾಕ್ವೆಲಿನ್‌ಗೆ ಸಾಕಷ್ಟು ಗಿಫ್ಟ್‌ಗಳನ್ನು ನೀಡಿದ್ದೇನೆ ಮತ್ತು ಅವಳ ಕುಟುಂಬದ ಒಳಿತನ್ನು ನೋಡಿಕೊಂಡಿದ್ದೇನೆ. ಇದು ಸಂಬಂಧದಲ್ಲಿ ತನ್ನ ಪ್ರೀತಿಪಾತ್ರರಿಗೆ ಮಾಡುವ ಸಾಮಾನ್ಯ ಕೆಲಸಗಳಾಗಿವೆ. ಇದು ವೈಯಕ್ತಿಕ, ಇದನ್ನು ಏಕೆ ದೊಡ್ಡ ವ್ಯವಹಾರ ಮಾಡುತ್ತಿದ್ದೀರ ಅಂತ ನನಗೆ ಅರ್ಥವಾಗುತ್ತಿಲ್ಲಾ. ಅದು ಯಾವುದು ವಂಚನೆ ಹಣದಿಂದ ನಾನು ಮಾಡಿರುವುದು ಅಲ್ಲ. ಇದೆಲ್ಲವೂ ಕಾನೂನುಬದ್ಧ ಗಳಿಕೆಯಿಂದ ಆಗಿದೆ ಮತ್ತು ಶೀಘ್ರದಲ್ಲೇ ನ್ಯಾಯಾಲಯದಲ್ಲಿ ಅದು ಸಾಬೀತಾಗಲಿದೆ, "ಎಂದು ಬರೆಯಲಾಗಿದೆ.

ಈಗಾಗಲೇ ಜಾರಿ ನಿರ್ದೇಶನಾಲಯವು ಈ ದುಬಾರಿ ಉಡುಗೊರೆಗಳ ಮೇಲೆ ದಾಳಿ ನಡೆಸಿದ್ದು, ಇದರಲ್ಲಿ ಗುಚ್ಚಿ, ಶನೆಲ್‌ನ ಡಿಸೈನರ್ ಬ್ಯಾಗ್‌ಗಳು, ಗುಚ್ಚಿ ಕಂಪೆನಿಯ ಎರಡು ಜಿಮ್ ಬಟ್ಟೆಗಳು, ಒಂದು ಜೋಡಿ ಲೂಯಿ ವಿಟಾನ್ ಶೂಗಳು, ಎರಡು ಜೋಡಿ ವಜ್ರದ ಕಿವಿಯೋಲೆಗಳು ಮತ್ತು ಎರಡು ಹರ್ಮ್ಸ್ ಬಳೆಗಳು ಇವೆ ಎಂದು ವರದಿಯಾಗಿದೆ. "ಇದನ್ನು ತಪ್ಪಾಗಿ ನೋಡುವುದನ್ನು ನಿಲ್ಲಿಸಬೇಕೆಂದು ನಾನು ಮತ್ತೊಮ್ಮೆ ಎಲ್ಲರಿಗೂ ವಿನಂತಿಸುತ್ತೇನೆ ಮತ್ತು ದಯವಿಟ್ಟು ಅವಳಿಗೆ ಸಾಕಷ್ಟು ಪ್ರೀತಿ ಮತ್ತು ಬೆಂಬಲವನ್ನು ತೋರಿಸಿ, ಏಕೆಂದರೆ ಅವಳು ಯಾವುದೇ ನಿರೀಕ್ಷೆಯಿಲ್ಲದೆ ಪ್ರೀತಿಸುವುದನ್ನು ಹೊರತುಪಡಿಸಿ, ಬೇರೆನೂ ಮಾಡಿಲ್ಲಾ" ಎಂದು ಸುಕೇಶ್ ಪತ್ರದಲ್ಲಿ ಕೋರಿದ್ದಾರೆ.

ಆರೋಪಿ ಸುಖೇಶ್ ಚಂದ್ರಶೇಖರ್ ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯಕ್ಕೆ ತನಿಖಾ ಸಂಸ್ಥೆ ಚಾರ್ಜ್ ಶೀಟ್ ಸಲ್ಲಿಸಿದೆ. ತಿಹಾರ್ ಜೈಲಿನಲ್ಲಿದ್ದ ಉದ್ಯಮಿಯೊಬ್ಬರ ಪತ್ನಿಯಿಂದ ₹ 200 ಕೋಟಿ ಸುಲಿಗೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಚಂದ್ರಶೇಖರ್ ಹಾಗೂ ನಟಿಯ ಮಧ್ಯೆ ಹಣಕಾಸಿನ ವಹಿವಾಟುಗಳು ನಡೆದಿರುವ ಬಗ್ಗೆ ಪುರಾವೆಗಳನ್ನು ಕೇಂದ್ರೀಯ ಸಂಸ್ಥೆ ಬಹಿರಂಗಪಡಿಸಿದೆ.


Click it and Unblock the Notifications











