ಜಾಕ್ವೆಲಿನ್‌ಗೆ ನೀಡಿದ್ದ ದುಬಾರಿ ಗಿಫ್ಟ್‌ಗಳ ಬಗ್ಗೆ ಬಾಯ್ಬಿಟ್ಟ ಸುಕೇಶ್ ಚಂದ್ರಶೇಖರ್
ತಾನೊಬ್ಬ ರಾಜಕಾರಣಿಗಳ ಆಪ್ತ ಹಾಗೂ ಸಂಬಂಧಿ ಎಂದು ಹೇಳಿಕೊಂಡು ಕೋಟಿ ಕೋಟಿ ವಂಚನೆ ಮಾಡಿದ್ದ ಆರೋಪದಲ್ಲಿ ಜೈಲು ಸೇರಿರುವ ವಂಚಕ ಸುಕೇಶ್ ಚಂದ್ರಶೇಖರ್ ವಿಚಾರಣೆ ಇನ್ನೂ ಕೂಡ ನಡೆಯುತ್ತಲೇ ಇದೆ. ದಿನದಿಂದ ದಿನಕ್ಕೆ ಈತ ಸಾಕಷ್ಟು ಮಾಹಿತಿಗಳನ್ನು ಬಾಯಿಬಿಡುತ್ತಿದ್ದು, ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಹೆಸರು ಕೂಡ ಕೇಳಿಬಂದು, ಜಾಕ್ವೆಲಿನ್ ಅವರನ್ನು ಕೂಡ ಈಗಾಗಲೇ ವಿಚಾರಣೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಸುಕೇಶ್ ಚಂದ್ರಶೇಖರ್ ಏನೆಲ್ಲಾ ಗಿಫ್ಟ್‌ಗಳನ್ನು ನೀಡಿದ್ದ ಎಂಬ ಪ್ರಶ್ನೆಗೆ ಜಾಕ್ವೆಲಿನ್ ಬಾಯಿಬಿಟ್ಟಿದ್ದರು. ಈ ಸಂದರ್ಭದಲ್ಲಿ ನಟಿ ಜಾಕ್ವೆಲಿನ್ ಆತ ತನಗೆ ಪರಿಚಯ ಮಾತ್ರ, ಬೇರೆ ಏನು ಮಾಹಿತಿ ನನಗೆ ಗೊತ್ತಿಲ್ಲ ಎಂದು ಹೇಳಿಕೊಂಡಿದ್ದರು.
ಈ ವಿಚಾರಕ್ಕೆ ಸಂಬಂಧಿಸಿದಂತೆ ಸುಕೇಶ್ ಚಂದ್ರಶೇಖರ್ ತಾನು ಮತ್ತು ಜಾಕ್ವೆಲಿನ್ ಡೇಟಿಂಗ್ ಮಾಡುತ್ತಿದ್ದೆವು ಎಂದು ಒಪ್ಪಿಕೊಂಡಿದ್ದ. ಈ ಹೇಳಿಕೆಯನ್ನು ತಳ್ಳಿ ಹಾಕಿದ್ದ ಜಾಕ್ವೆಲಿನ್ ಇದೆಲ್ಲ ಸುಳ್ಳು. ನನಗೂ ಸುಕೇಶ್‌ಗು ಯಾವುದೇ ತರಹದ ಸಂಬಂಧ ಇರಲಿಲ್ಲ, ಡೇಟಿಂಗ್ ಕೂಡ ಮಾಡುತ್ತಿರಲಿಲ್ಲ ಎಂದಿದ್ದಾರೆ. ಇದೀಗ ಸುಕೇಶ್ ಚಂದ್ರಶೇಖರ್ ಜಾಕ್ವೆಲಿನ್‌ಗೆ ಏನೆಲ್ಲಾ ದುಬಾರಿ ಉಡುಗೊರೆಗಳನ್ನು ನೀಡಿದ್ದ ಎಂಬ ಬಗ್ಗೆ ವಿಚಾರಣೆಯಲ್ಲಿ ಮಾಹಿತಿ ಹೊರಹಾಕಿದ್ದಾನೆ. ಈತನ ಗಿಫ್ಟ್ ಲಿಸ್ಟ್ ಕೇಳಿದ್ರೆ ದಂಗಾಗಿ ಹೋಗೊದು ಗ್ಯಾರಂಟಿ.
ಸುಕೇಶ್ ಚಂದ್ರಶೇಖರ್ ತನಗೂ ಜಾಕ್ವೆಲಿನ್‌ಗು ಉತ್ತಮ ಸಂಬಂಧ ಇತ್ತು. ನಾನು ಮತ್ತು ಜಾಕ್ವೆಲಿನ್ ಡೇಟಿಂಗ್ ಮಾಡುತ್ತಿದ್ದೆವು ಎಂದು ವಿಚಾರಣೆ ಉದ್ದಕ್ಕೂ ಹೇಳಿಕೊಂಡು ಬರುತ್ತಿದ್ದ ಸುಕೇಶ್ ಚಂದ್ರಶೇಖರ್ ತಾನು ಜಾಕ್ವೆಲಿನ್‌ಗೆ ನೀಡಿದ್ದ ಉಡುಗೊರೆ ಬಗ್ಗೆ ಈಗ ಬಾಯಿ ಬಿಟ್ಟಿದ್ದಾನೆ. ಈತ ಹೇಳುವ ಪ್ರಕಾರ ಲಕ್ಷ ಲಕ್ಷ ಬೆಲೆ ಬಾಳುವ 15 ಜೊತೆ ಕಿವಿಯೋಲೆಗಳನ್ನು ಸುಕೇಶ್ ಚಂದ್ರಶೇಖರ್ ಜಾಕ್ವೆಲಿನ್‌ಗೆ ನೀಡದ್ದನಂತೆ. ಇದಿಷ್ಟೆ ಅಲ್ಲದೇ ಎರಡೂ ಚಿನ್ನ ಮತ್ತು ವಜ್ರದ ನೆಕ್ಲೆಸ್, ಕಿವಿಯೋಲೆ ಮತ್ತು ನೆಕ್ಲೇಸ್ ಎರಡರ ಬೆಲೆ ಬರೋಬ್ಬರಿ 8 ಕೋಟಿಯಂತೆ. ಇದಿಷ್ಟೆ ಅಲ್ಲದೇ ದುಬಾರಿ ಬೆಲೆ ಬಾಳುವ ಬ್ಯಾಗ್‌ಗಳು, 1.80 ಲಕ್ಷ ಹಣ, ಬಿಎಮ್‌ಡಬ್ಲ್ಯೂ ಎಕ್ಸ್5, ಮತ್ತು ಇದರೊಂದಿಗೆ ಸಾಕಷ್ಟು ದುಬಾರಿ ಉಡುಗೊರೆಗಳನ್ನು ನೀಡಿರೋದಾಗಿ ಒಪ್ಪಿಕೊಂಡಿದ್ದಾನೆ. ಆದರೆ ವಿಚಾರಣೆ ವೇಳೆ ಜಾಕ್ವೆಲಿನ್ ಒಂದಷ್ಟನ್ನು ತಿರುಗಿಸಿ ಹೇಳಿರೊದು ಇಲ್ಲಿ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.

ಈ ಹಿಂದೆ ಇಡಿ ಅಧಿಕಾರಿಗಳು ಜಾಕ್ವೆಲಿನ್‌ನಿಂದ ಎರಡು ಬಾರಿ ಹೇಳಿಕೆ ಪಡೆದಿದ್ದರು. ಈ ಸಂದರ್ಭದಲ್ಲಿ ಜಾಕ್ವೆಲಿನ್ ವಂಚಕ ಸುಕೇಶ್ ಚಂದ್ರಶೇಖರ್ ಮೊದಲ ಭೇಟಿಯಲ್ಲಿ ತನ್ನ ಹೆಸರು ಶೇಖರ್ ರತ್ನ ವೇಲ ಎಂದು ಪರಿಚಯ ಮಾಡಿಕೊಂಡಿದ್ದನು. ಅಲ್ಲದೆ ತಾನು ಜಯಲಲಿತಾ ಕುಟುಂಬಕ್ಕೆ ಸೇರಿದವನು, ಸನ್ ಟಿವಿಯ ಮಾಲೀಕನೆಂದು ಪರಿಚಯ ಮಾಡಿಕೊಂಡಿದ್ದ ಎಂದಿದ್ದರು. ಇನ್ನು ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಕಚೇರಿಯಿಂದ ನಕಲಿ ಕರೆ ಮಾಡುತ್ತಿದ್ದ. ಆರಂಭದಲ್ಲಿ ತಾನು ಅವನ ಕರೆಗಳನ್ನು ಸ್ವೀಕರಿಸುತ್ತಿರಲಿಲ್ಲ. ಬಳಿಕ ಮೇಕಪ್ ಮ್ಯಾನ್ ಶಾನ್ ಮುತ್ತತ್ತಿಲ್‌ಗೆ ಕರೆ ಮಾಡಿ, ಶೇಖರ್ ಬಹಳ ಮುಖ್ಯವಾದ ವ್ಯಕ್ತಿ ಆತನ ಜೊತೆ ಸಂಪರ್ಕದಲ್ಲಿರುವಂತೆ ನಕಲಿ ಕರೆ ಮಾಡಿದ್ದ ವಂಚಕ ಸುಕೇಶ್. ಈ ವೇಳೆ ಸುಕೇಶ್ ದುಬಾರಿ ಉಡುಗೊರೆಗಳನ್ನು ನನಗೆ ಕಳುಹಿಸಿಕೊಟ್ಟಿದ್ದ ಎಂದು ಮಾಹಿತಿ ನೀಡಿದ್ದರು.

ಆ ಸಂದರ್ಭದಲ್ಲಿ ಜಾಕ್ವೆಲಿನ್ ಸುಕೇಶ್‌ನಿಂದ ಪಡೆದ ಉಡುಗೊರೆಗಳ ಬಗ್ಗೆ ಹೀಗೆ ಮಾಹಿತಿ ನೀಡಿದ್ದರು. ಅಂತಾರಾಷ್ಟ್ರೀಯ ಬ್ರ್ಯಾಂಡ್ ಗೂಚಿ(Gucci) ಕಂಪನಿಯ ಬ್ಯಾಗ್‌ಗಳನ್ನು ಉಡುಗೊರೆಯಾಗಿ ಕಳುಹಿಸಿಕೊಟ್ಟಿದ್ದ ಸುಕೇಶ್. ದುಬಾರಿ ಬೆಲೆ ಬಾಳುವ ಶೋಗಳನ್ನೂ ಕಳುಹಿಸಿಕೊಟ್ಟಿದ್ದನ್ನು ನಟಿ ಒಪ್ಪಿಕೊಂಡಿದ್ದರು. ಫ್ರಾನ್ಸ್ ಕಂಪನಿ ಲೂಯಿಸ್ ವಿಟಾನ್ ಅವರ ಬೆಲೆಬಾಳುವ ಶೂ ಕೂಡ ಜಾಕ್ವೆಲಿನ್‌ಗೆ ಉಡುಗೊರೆಯಾಗಿ ಬಂದಿವೆ. ಹಾಗೂ ದುಬಾರಿ ಮೊತ್ತದ ಕಾರನ್ನು ಕಳುಹಿಸಿಕೊಟ್ಟಿದ್ದ. ಬ್ರಿಟನ್ ಮೂಲದ ಈ ಮಿನಿ ಕಾರು ನೋಡುವುದಕ್ಕಷ್ಟೇ ಸಣ್ಣ ಕಾರು. ಇದರ ಬೆಲೆ ಆರಂಭ ಆಗುವುದೇ 45 ಲಕ್ಷದಿಂದ. ಆದರೆ ಈ ಕಾರನ್ನು ತಾನು ಹಿಂತಿರುಗಿಸಿದ್ದೆ ಎಂದು ಜಾಕ್ವೆಲಿನ್ ಫರ್ನಾಂಡೀಸ್ ಹೇಳಿಕೆ ನೀಡಿದ್ದರು. ಇನ್ನು ವಜ್ರದ ಕಿವಿಯೋಲೆಯನ್ನೂ ಉಡುಗೊರೆಯಾಗಿ ನೀಡಿದ್ದ , ಇದರೊಂದಿಗೆ ಬ್ರಾಸ್‌ಲೆಟ್‌ಗಳನ್ನೂ ನೀಡಿದ್ದ ಎಂದು ಜಾಕ್ವೆಲಿನ್ ಒಪ್ಪಿಕೊಂಡಿದ್ದರು.


Click it and Unblock the Notifications











