»   » ರಿಲೀಸ್ ಗೆ ಇನ್ನೂ 2 ದಿನ ಇದೆ, 'ಸುಲ್ತಾನ್' ಟಿಕೆಟ್ ಸೋಲ್ಡ್ ಔಟ್

ರಿಲೀಸ್ ಗೆ ಇನ್ನೂ 2 ದಿನ ಇದೆ, 'ಸುಲ್ತಾನ್' ಟಿಕೆಟ್ ಸೋಲ್ಡ್ ಔಟ್

Posted By: Sonu Gowda
Subscribe to Filmibeat Kannada

ಬಿಟೌನ್ ಬಾಕ್ಸಾಫೀಸ್ ಸುಲ್ತಾನ ಸಲ್ಮಾನ್ ಖಾನ್ ಅವರು ಮತ್ತೆ ಬಾಕ್ಸಾಫೀಸ್ ನಲ್ಲಿ ಧೂಳೆಬ್ಬಿಸಲು ತಯಾರಾಗಿ ನಿಂತಿದ್ದಾರೆ. ಹೌದು ಭಾಯ್ ಜಾನ್ ಸಲ್ಮಾನ್ ಖಾನ್ ಅವರ ಬಹುನಿರೀಕ್ಷಿತ 'ಸುಲ್ತಾನ್' ಸಿನಿಮಾ ತೆರೆಗೆ ಬರಲು ಇನ್ನೇನು ಎರಡೇ ದಿನ ಬಾಕಿ ಇದೆ.

ಜುಲೈ 6 ರಂದು ಸಲ್ಮಾನ್ ಖಾನ್ ಮತ್ತು ಅನುಷ್ಕಾ ಶರ್ಮಾ ಒಂದಾಗಿ ಮಿಂಚಿರುವ 'ಸುಲ್ತಾನ್' ಭರ್ಜರಿಯಾಗಿ ತೆರೆಗೆ ಅಪ್ಪಳಿಸುತ್ತಿದೆ. ಇದೀಗ ಚಿತ್ರ ತೆರೆಗೆ ಬರಲು ಕೇವಲ ಎರಡೇ ದಿನ ಬಾಕಿ ಉಳಿದಿದೆ ಆದರೆ ಟಿಕೆಟ್ ಮಾತ್ರ ಒಂದು ವಾರಕ್ಕೆ ಮುಂಚೆಯೇ ಎಲ್ಲಾ ಕಡೆ ಸೋಲ್ಡ್ ಔಟ್ ಆಗಿದೆ.[ತಮ್ಮ ವಿವಾದಾತ್ಮಕ ಹೇಳಿಕೆ ಬಗ್ಗೆ ಸಲ್ಮಾನ್ ಖಾನ್ ಏನಂತಾರೆ?]

Sultan Tickets Might Be Sold Out Even Before Its Release

ಆನ್ ಲೈನ್ ಮುಖಾಂತರ ಅಭಿಮಾನಿಗಳು ಫಸ್ಟ್ ಡೇ ಫಸ್ಟ್ ಶೋ ನೋಡಲು ಟಿಕೆಟ್ ಬುಕ್ ಮಾಡಿಸಿದ್ದರಿಂದ ಬಹುತೇಕ ಟಿಕೆಟ್ ಗಳು ಈಗಾಗಲೇ ಸೋಲ್ಡ್ ಔಟ್ ಆಗಿವೆ. ಎಲ್ಲಾ ಕಡೆ ಟಿಕೆಟ್ ಸೋಲ್ಡ್ ಔಟ್ ಆದ ಕಾರಣ ಚಿತ್ರತಂಡ ಕೂಡ ಫುಲ್ ಖುಷ್ ಆಗಿದೆ.

ಸಿನಿಮಾ ರಿಲೀಸ್ ಆಗುವ ಮುನ್ನವೇ ಇಷ್ಟರಮಟ್ಟಿಗೆ ಟಿಕೆಟ್ ಸೋಲ್ಡ್ ಔಟ್ ಆಗಿದೆ ಅಂದ್ರೆ, ಈ ಬಾರಿ ಬಾಕ್ಸಾಫೀಸ್ ನಲ್ಲಿ ಬಿರುಗಾಳಿ ಬೀಸೋದು ಗ್ಯಾರೆಂಟಿ ಅಂತ ಚಿತ್ರತಂಡ ಈಗಲೇ ಲೆಕ್ಕಾಚಾರ ಮಾಡುತ್ತಿದೆ.[]'ರೇಪ್ ಆದ ಮಹಿಳೆ ಪರಿಸ್ಥಿತಿ ನನ್ನದಾಗಿತ್ತು': ಸಲ್ಲು ವಿವಾದಾತ್ಮಕ ಹೇಳಿಕೆ

Sultan Tickets Might Be Sold Out Even Before Its Release

ಇದೇ ಮೊದಲ ಬಾರಿಗೆ ಸಲ್ಮಾನ್ ಖಾನ್ ಅವರು ಕುಸ್ತಿಪಟುವಾಗಿ ಕಾಣಿಸಿಕೊಂಡಿದ್ದು, ನಟಿ ಅನುಷ್ಕಾ ಶರ್ಮಾ ಅವರು ಕೂಡ ಕುಸ್ತಿಪಟುವಾಗಿ ಸಲ್ಮಾನ್ ಜೊತೆ ಮಿಂಚಿದ್ದಾರೆ. ಅಲಿ ಅಬ್ಬಾಸ್ ಜಾಫರ್ ಅವರು ಆಕ್ಷನ್-ಕಟ್ ಹೇಳಿರುವ 'ಸುಲ್ತಾನ್' 'ಈದ್' ಹಬ್ಬಕ್ಕೆ ಅಭಿಮಾನಿಗಳಿಗೆ ಸೂಪರ್ ಗಿಫ್ಟ್ ಆಗಿದೆ.[ಹರ್ಯಾಣದ 'ಸುಲ್ತಾನ್' ಸಲ್ಲೂಗೆ ಟ್ವಿಟ್ಟರಲ್ಲಿ 'ಅಪಮಾನ್']

English summary
Bollywood actor Salman Khan starrer 'Sultan' is all set for a grand release on July 6, 2016. And the movie has already sold almost half of its tickets in Multiplexes across metro cities in India. The movie is directed by Ali Abbas Zafar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada