ಹಾಡುತ್ತಿರುವಾಗಲೇ ಸುನಿಧಿ ಚೌಹಾಣ್ ಮೇಲೆ ಬಾಟಲಿ ಎಸೆದ ಪುಂಡ ; ವಿಕ್ರಾಂತ್ ರೋಣ ಗಾಯಕಿ ಮಾಡಿದ್ದೇನು..?

ಸುನಿಧಿ ಚೌಹಾಣ್.. ಬಾಲಿವುಡ್‌ನ ಖ್ಯಾತ ಗಾಯಕಿ. ಕೇವಲ ಬಾಲಿವುಡ್‌ ನಲ್ಲಿ ಅಷ್ಟೇ ಅಲ್ಲ, ಇವರನ್ನ ಆರಾಧಿಸುವ ಭಕ್ತರು ದೇಶದೆಲ್ಲೆಡೆ ಇದ್ದಾರೆ.

ಇನ್ನೂ ಕನ್ನಡಿಗರಿಗೂ ಸುನಿಧಿ ಚಿರಪರಿಚಿತ. ಮುಂಗಾರು ಮಳೆಯ ಕುಣಿದು ಕುಣಿದು ಬಾರೇ.. ಜೋಗಿ ಚಿತ್ರದ ಚುಕ್ಕು ಬುಕ್ಕು ರೈಲು.. ವಿಕ್ರಾಂತ್ ರೋಣ ಚಿತ್ರದ ರಾ ರಾ ರಕ್ಕಮ್ಮ.. ಒಂದಾ, ಎರಡಾ.. ಹತ್ತಾರು ಕನ್ನಡ ಹಾಡುಗಳಿಗೆ ತಮ್ಮ ಚಿನ್ನದ ಕಂಠವನ್ನ ಕುಣಿಸಿದವರು ಇವರು. ಇಂಥ ಸುನಿಧಿ ಚೌಹಾಣ್ ಮೇಲೆ ವ್ಯಕ್ತಿಯೊಬ್ಬ ಪ್ಲಾಸ್ಟಿಕ್ ಬಾಟಲಿ ಎಸೆದಿದ್ದಾನೆ. ಅಗೌರವ ತೋರಿಸಿದ್ದಾನೆ.

sunidhi-chauhans-powerful-response-to-fan-who-threw-bottle-during-concert

ಹೌದು, ಸುನಿಧಿ ಚೌಹಾಣ್ ಸದ್ಯಕ್ಕೆ ಅನೇಕ ಕಡೆ ಸಂಗೀತ ಕಾರ್ಯಕ್ರಮಗಳನ್ನ ನೀಡುತ್ತಿದ್ದಾರೆ. ಊರೂರು ಸುತ್ತುತ್ತಿದ್ದಾರೆ. ಇದರ ಒಂದು ಭಾಗ ಎಂಬಂತೆ ಮೊನ್ನೆ ಸುನಿಧಿ ಚೌಹಾಣ್ ಡೆಹ್ರಾಡೂನ್‌ನಲ್ಲಿ ಬೀಡು ಬಿಟ್ಟಿದ್ದರು. ತಮ್ಮ ಅಭಿಮಾನಿಗಳಿಗಾಗಿ.. ಸಂಗೀತ ಪ್ರಿಯರಿಗಾಗಿ ಹಾಡನ್ನ ಹಾಡುತ್ತಿದ್ದರು. ಇನ್ನೂ ಸುನಿಧಿ ಇದ್ದಲ್ಲಿ ಅಲ್ಲಿ ಉತ್ಸಾಹ ತುಸು ಹೆಚ್ಚೇ ಇರುತ್ತೆ, ಅಭಿಮಾನದ ಜಾತ್ರೆ ಕೂಡ ನಡೆಯುತ್ತೆ. ಡೆಹ್ರಾಡೂನ್ ನಲ್ಲಿ ಕೂಡ ಇಂಥಹದ್ದೇ ವಾತಾವರಣ ಇತ್ತು. ಆದರೆ ಇದೇ ಸಮಯದಲ್ಲಿ ವಾತಾವರಣಕ್ಕೆ ಭಂಗ ತರುವಂತ ಕೆಲಸವನ್ನ ಒಬ್ಬ ವ್ಯಕ್ತಿ ಮಾಡಿದ್ದಾನೆ.

ಅಸಲಿಗೆ ಡೆಹ್ರಾಡೂನ್‌ನ ಎಸ್‌ಜಿಆರ್‌ಆರ್ ವಿಶ್ವವಿದ್ಯಾಲಯದಲ್ಲಿ ವೇದಿಕೆಯನ್ನೇರಿ ಸುನಿಧಿ ಹಾಡು ಹಾಡ್ತಿದ್ದರು. ನೆರೆದ ಜನಸ್ತೋಮ ಹುಚ್ಚೆದ್ದು ಕುಣಿಯುತ್ತಿತ್ತು. ಇದೇ ಸಮಯದಲ್ಲಿ ಬಾಟಲಿ ಒಂದು ವೇದಿಕೆಯತ್ತ ತೂರಿ ಬಂತು. ಸುನಿಧಿ ಚೌಹಾಣ್ ಅವರ ಕೈಗೆ ತಾಗಿತು. ಸುನಿಧಿ ಜಾಗದಲ್ಲಿ ಬೇರೆ ಯಾರಾದರೂ ಇದ್ದಿದ್ದರೆ, ತಕ್ಷಣವೇ ಹಾಡನ್ನ ನಿಲ್ಲಿಸಿ ವೇದಿಕೆಯಿಂದಹೊರಟು ಹೋಗುತ್ತಿದ್ದರೋ ಏನೋ ಗೊತ್ತಿಲ್ಲ. ಆದರೆ ಸುನಿಧಿ ಮಾತ್ರ ನಿಂತ ಜಾಗದಿಂದ ಕದಲಲಿಲ್ಲ. ಸಮಚಿತ್ತದಿಂದ ಪರಿಸ್ಥಿತಿಯನ್ನು ನಿಭಾಯಿಸಿದ ಸುನಿಧಿ ಚೌಹಾಣ್ ಬಾಟಲಿಗಳನ್ನು ಎಸೆಯುವುದರಿಂದ ಏನಾಗುತ್ತದೆ ಹೇಳಿ. ಹೆಚ್ಚೆಂದರೆ ನಾನು ಕಾರ್ಯಕ್ರಮದಿಂದ ಹೊರಕ್ಕೆ ಹೋಗುತ್ತೇನೆ. ಅದು ನಿಮಗೆ ಇಷ್ಟನಾ? ಎಂದು ಕೇಳಿದರು. ಸುನಿಧಿಯ ಈ ಪ್ರಶ್ನೆಗೆ ಹಾಡು ಕೇಳಲು ಬಂದಿದ್ದ ಸಭಿಕರೆಲ್ಲ ನೋ ಎಂದು ಉತ್ತರವನ್ನ ಕೊಟ್ಟರು.

ಸದ್ಯಕ್ಕೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಕೆಲವೇ ಕೆಲ ಘಂಟೆಗಳಲ್ಲಿ 44000ಕ್ಕೂ ಅಧಿಕ ವೀಕ್ಷಣೆಯನ್ನ ಕಂಡಿದೆ. ಇನ್ನೂ ವಿಡಿಯೋ ವೈರಲ್ ಆದ ಬೆನ್ನಲ್ಲಿಯೇ ಅನೇಕರು ತಮ್ಮ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ. ಬಾಟಲಿ ಎಸೆದ ವ್ಯಕ್ತಿಯನ್ನ ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಸುನಿಧಿ ನಿಜಕ್ಕೂ ಗ್ರೇಟ್‌ ಎಂದಿದ್ದಾರೆ. ಇದು ತುಂಬಾ ಅಸಹ್ಯಕರ ನಡವಳಿಕೆ. ಸುನಿಧಿ ಗೌರವಕ್ಕೆ ಅರ್ಹಳು ಎಂದು ಕಮೆಂಟ್‌ ಮಾಡಿದ್ದಾರೆ. ಇನ್ನೂ ಕೆಲವರು ಮನಸು ಮಾಡಿದ್ದರೆ ಸುನಿಧಿ ಕಾರ್ಯಕ್ರಮವನ್ನು ಸುಲಭವಾಗಿ ಅವರು ಬಿಟ್ಟು ಹೋಗಬಹುದಿತ್ತು. ಆದರೆ ಸುನಿಧಿ ಹಾಗೇ ಮಾಡಿಲ್ಲ. ಅವಳು ಯಾವತ್ತು ಕ್ವೀನ್‌ʼʼಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

More from Filmibeat

English summary
Sunidhi Chauhan's Reaction to Bottle Thrown On Stage Sparks Netizens' Responses"
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X