For Quick Alerts
  ALLOW NOTIFICATIONS  
  For Daily Alerts

  ಮತ್ತೊಂದು ಸೌತ್ ಸಿನಿಮಾ ಮೇಲೆ ಬಿಟೌನ್ ಕಣ್ಣು: ಸುನೀಲ್ ಶೆಟ್ಟಿ ಮಗ ನಾಯಕ

  |

  ಅದ್ಯಾಕೋ ಬಾಲಿವುಡ್ ಮಂದಿ ಸ್ವಮೇಕ್ ಚಿತ್ರಗಳಿಗಿಂತ ರೀಮೇಕ್ ಚಿತ್ರಗಳ ಮೇಲೆ ಹೆಚ್ಚು ಒಲವು ತೋರುತ್ತಿದ್ದಾರೆ. ಅದರಲ್ಲೂ ಸ್ಟಾರ್ ನಟ-ನಟಿಯರು ಮಕ್ಕಳ ಲಾಂಚ್ ಗೆ ಬೇರೆ ಭಾಷೆಯಲ್ಲಿ ಸೂಪರ್ ಹಿಟ್ ಆದ ಯಾವುದಾದರೂ ಒಂದು ಹಿಟ್ ಚಿತ್ರವನ್ನ ರೀಮೇಕ್ ಮಾಡ್ತಾರೆ.

  ಮರಾಠಿಯಲ್ಲಿ ಹಿಟ್ ಆಗಿದ್ದ ಸೈರಾಟ್ ಚಿತ್ರದ ರೀಮೇಕ್ ಮೂಲಕ ಶ್ರೀದೇವಿ ಮಗಳು ಜಾಹ್ನವಿ ಕಪೂರ್ ಬೆಳ್ಳಿತೆರೆಗೆ ಬಂದಿದ್ದರು. ಸ್ಟಾರ್ ನಟ ಶಾಹೀದ್ ಕಪೂರ್ 'ಅರ್ಜುನ್ ರೆಡ್ಡಿ' ರೀಮೇಕ್ ಮಾಡಿ ಗೆದ್ದರು. ಇದರ ಬೆನ್ನಲ್ಲೆ ಮತ್ತೊಂದು ತೆಲುಗು ಸಿನಿಮಾ ಜೆರ್ಸಿ ರೀಮೇಕ್ ಮೇಲೆ ಕಣ್ಣಾಕಿದ್ದಾರೆ.

  ಸುನಿಲ್ ಶೆಟ್ಟಿ ಬಗ್ಗೆ ಕೇಳಿಬಂದಿದ್ದ ಸುದ್ದಿ ಸುಳ್ಳು

  ಹೀಗೆ, ಸೌತ್ ಇಂಡಸ್ಟ್ರಿಯಲ್ಲಿ ಹಿಟ್ ಆದ ಚಿತ್ರಗಳನ್ನ ತಗೊಂಡು ಬರ್ತಿರುವ ಬಾಲಿವುಡ್ ಮಂದಿ, ಈಗ ಮತ್ತೊಂದು ಯಶಸ್ವಿ ಚಿತ್ರದ ಹಿಂದೆ ಬಿದ್ದಿದ್ದಾರೆ. ಈ ಚಿತ್ರಕ್ಕೆ ಸುನೀಲ್ ಶೆಟ್ಟಿ ಅವರ ಮಗ ನಾಯಕ ಎಂದು ಹೇಳಲಾಗ್ತಿದೆ. ಅಷ್ಟಕ್ಕೂ ಆ ಚಿತ್ರ ಯಾವುದು? ಸುನೀಲ್ ಶೆಟ್ಟಿ ಮಗ ಯಾರು? ಮುಂದೆ ಓದಿ....

  ಬಾಲಿವುಡ್ ನಲ್ಲಿ 'RX 100'

  ಬಾಲಿವುಡ್ ನಲ್ಲಿ 'RX 100'

  ಅರ್ಜುನ್ ರೆಡ್ಡಿ ಬಳಿಕ ಸೌತ್ ನಲ್ಲಿ ಅದೇ ರೀತಿ ಸದ್ದು ಮಾಡಿದ ಚಿತ್ರ ಆರ್ ಎಕ್ಸ್ 100. ಕಾರ್ತಿಕೇಯನ್ ನಟಿಸಿದ್ದ ಈ ಚಿತ್ರ ಟಾಲಿವುಡ್ ಬಾಕ್ಸ್ ಆಫೀಸ್ ಧೂಳೆಬ್ಬಿಸಿತ್ತು. ಕಾರ್ತಿಕೇಯನ್ ಗೆ ದೊಡ್ಡ ಬ್ರೇಕ್ ಕೊಡ್ತು. ಇದೀಗ, ಈ ಚಿತ್ರ ಬಾಲಿವುಡ್ ನಲ್ಲಿ ರೀಮೇಕ್ ಆಗ್ತಿದೆ.

  ಸುನೀಲ್ ಶೆಟ್ಟಿ ಮಗ ಅಹಾನ್ ಶೆಟ್ಟಿ

  ಸುನೀಲ್ ಶೆಟ್ಟಿ ಮಗ ಅಹಾನ್ ಶೆಟ್ಟಿ

  ಈಗಾಗಲೇ ಸುನೀಲ್ ಶೆಟ್ಟಿ ಅವರ ಮಗಳು ಅತಿಯಾ ಶೆಟ್ಟಿ ಬಾಲಿವುಡ್ ನಲ್ಲಿ ನಟಿಸುತ್ತಿದ್ದಾರೆ. ಈಗ ಸುನೀಲ್ ಶೆಟ್ಟಿ ಅವರ ಮಗ ಅಹಾನ್ ಶೆಟ್ಟಿ ಚಿತ್ರರಂಗ ಪ್ರವೇಶ ಮಾಡುತ್ತಿದ್ದಾರೆ. RX 100 ಸಿನಿಮಾದ ರೀಮೇಕ್ ನಲ್ಲಿ ಅಹಾನ್ ಶೆಟ್ಟಿ ನಾಯಕನಾಗಿ ನಟಿಸುತ್ತಿದ್ದಾರೆ.

  500 ಕೋಟಿ 'ರಾಮಾಯಣ': ಹೃತಿಕ್ ರಾಮ, ಬೆಂಗಳೂರು ಹುಡುಗಿ ಸೀತೆ.!

  ಸಾಜಿದ್ ನಿರ್ಮಾಣದಲ್ಲಿ ಅಹಾನ್

  ಸಾಜಿದ್ ನಿರ್ಮಾಣದಲ್ಲಿ ಅಹಾನ್

  ಈ ಚಿತ್ರವನ್ನ ಮಿಲನ್ ಲುತಾರಿಯಾ ನಿರ್ದೇಶನ ಮಾಡ್ತಿದ್ದಾರೆ. 'ತಡಪ್' ಎಂದು ಈ ಚಿತ್ರಕ್ಕೆ ಟೈಟಲ್ ಇಟ್ಟಿದ್ದು, ತಾರಾ ಸುತಾರಿಯಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಇನ್ನು ಬಾಲಿವುಡ್ ಇಂಡಸ್ಟ್ರಿಯ ದೊಡ್ಡ ನಿರ್ಮಾಪಕ ಸಾಜಿದ್ ನದಿಯಾದ್ವಾಲಾ ಅಹಾನ್ ಶೆಟ್ಟಿ ಅವರನ್ನ ಇಂಡಸ್ಟ್ರಿಗೆ ಪರಿಚಯ ಮಾಡ್ತಿದ್ದಾರೆ. ಹೌಸ್ ಫುಲ್ 4, ಕಿಕ್ 2, 83, ಭಾಗಿ 3 ಚಿತ್ರಗಳನ್ನ ನಿರ್ಮಿಸುತ್ತಿರುವ ಸಾಜಿದ್ ಈಗ ಆರ್ ಎಕ್ಸ್ 100 ರೀಮೇಕ್ ಗೂ ಬಂಡವಾಳ ಹಾಕ್ತಿದ್ದಾರೆ.

  ಶುಭ ಕೋರಿದ ಸುದೀಪ್

  ಶುಭ ಕೋರಿದ ಸುದೀಪ್

  ಸುನೀಲ್ ಶೆಟ್ಟಿ ಅವರ ಮಗ ಅಹಾನ್ ಶೆಟ್ಟಿ ಚಿತ್ರರಂಗಕ್ಕೆ ಬರುತ್ತಿರುವುದಕ್ಕೆ ಕನ್ನಡ ನಟ ಸುದೀಪ್ ಶುಭ ಕೋರಿದ್ದಾರೆ. ಟ್ವಿಟ್ಟರ್ ನಲ್ಲಿ ವಿಶ್ ಮಾಡಿರುವ ಕಿಚ್ಚ ''ಸುನೀಲ್ ಶೆಟ್ಟಿ ಅಣ್ಣ,,,,,ನಿಮ್ಮ ಮಗನಿಗೆ ಈ ಸಿನಿಮಾ ದೊಡ್ಡ ಮಟ್ಟದ ಸಕ್ಸಸ್ ತಂದುಕೊಡಲಿ'' ಎಂದು ವಿಶ್ ಮಾಡಿದ್ದಾರೆ. ಸುದೀಪ್ ಅಭಿನಯದ ಪೈಲ್ವಾನ್ ಚಿತ್ರದಲ್ಲಿ ಸುನೀಲ್ ಶೆಟ್ಟಿ ನಟಿಸಿದ್ದಾರೆ. ಇದು ಇವರ ಮೊದಲ ಕನ್ನಡ ಸಿನಿಮಾ.

  English summary
  Ahan Shetty son of Suniel Shetty begins his journey in Hindi films. His debut film the Hindi adaptation of Telugu film RX100, begins filming today at a South Mumbai theatre.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X