'ಬಾಯ್‌ಕಾಟ್ ಬಾಲಿವುಡ್': ಯುಪಿ ಸಿಎಂ ಯೋಗಿ ಆದಿತ್ಯನಾಥ್ ಸಹಾಯ ಕೇಳಿದ ಸ್ಟಾರ್ ನಟ
ಕೋವಿಡ್ ಅಪ್ಪಳಿಸಿದ ಬಳಿಕ 2021, 2022 ರಲ್ಲಿ ಹಲವು ಚಿತ್ರರಂಗಗಳು ಚೇತರಿಸಿಕೊಂಡಿದ್ದು ಮಾತ್ರವಲ್ಲ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳಲ್ಲಿ ಹೊಸ ಹೊಸ ದಾಖಲೆಗಳನ್ನು ಮಾಡುತ್ತಿವೆ. ಆದರೆ ಬಾಲಿವುಡ್ ಮಾತ್ರ ತಮ್ಮ ಹಳೆಯ ಚಾರ್ಮ್ ಅನ್ನು ಕಳೆದುಕೊಂಡು ತೀರ ದಯನೀಯ ಸ್ಥಿತಿ ತಲುಪಿದೆ.
ಕೋವಿಡ್ ಸಮಯದಲ್ಲಿಯೇ ಸುಶಾಂತ್ ಸಿಂಗ್ ಸಾವಿನ ಬಳಿಕ ಎದ್ದ ನೆಪೊಟಿಸಮ್ ಚರ್ಚೆ, ಬಾಲಿವುಡ್ ಡ್ರಗ್ಸ್ ಪ್ರಕರಣ, ಬಾಲಿವುಡ್ಡಿಗರ ಪಾಶ್ಚಿಮಾತ್ಯ ಪ್ರೀತಿ ಹಾಗೂ ಜನಸಾಮಾನ್ಯರಿಗೆ ಸಿನಿಮಾ ಮಾಡದೇ ಎಲೈಟ್ ಜನರಿಗಾಗಿ ಮಾತ್ರವೇ ಸಿನಿಮಾ ಮಾಡುವ ರೀತಿ ಎಲ್ಲದರ ಬಗ್ಗೆ ಹಿಂದಿ ಭಾಗದ ಜನ ರೋಸಿ ಹೋಗಿದ್ದು ಬಾಲಿವುಡ್ ಅನ್ನು ಬಾಯ್‌ಕಾಟ್ ಮಾಡಿದ್ದಾರೆ.
ಬಾಲಿವುಡ್‌ನಲ್ಲಿ ಬಿಡುಗಡೆ ಆಗುತ್ತಿರುವ ಬಹುತೇಕ ಪ್ರತಿಸಿನಿಮಾಕ್ಕೂ ಬಾಯ್‌ಕಾಟ್ ಟ್ರೆಂಡ್ ಆಗುತ್ತಿದೆ. ಇದೇ ಟ್ರೆಂಡ್‌ನ ಕಾರಣದಿಂದ ಈಗಾಗಲೇ ಕೆಲವು ಸಿನಿಮಾಗಳು ಮಖಾಡೆ ಮಲಗಿವೆ. ಇದೀಗ ಈ ಬಾಯ್‌ಕಾಟ್ ಟ್ರೆಂಡ್‌ನಿಂದ ಪಾರು ಮಾಡುವಂತೆ ಬಾಲಿವುಡ್‌ನ ಕೆಲವು ಮುಖ್ಯವಾದವರು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಮೊರೆ ಹೋಗಿದ್ದಾರೆ.

ಸುನಿಲ್ ಶೆಟ್ಟಿ ಮಾಡಿದರು ಮನವಿ
ನಟ ಸುನಿಲ್ ಶೆಟ್ಟಿ ಹಾಗೂ ಇನ್ನಿತರರು ಮುಂಬೈನಲ್ಲಿ ಇಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥರನ್ನು ಭೇಟಿಯಾಗಿದ್ದು, ''ಬಾಯ್‌ಕಾಟ್ ಬಾಲಿವುಡ್ ಟ್ರೆಂಡ್ ಅನ್ನು ಅಂತ್ಯಗೊಳಿಸಲು ಹೇಗೆ ಸಹಾಯ ಮಾಡಿರೆಂದು' ಮನವಿ ಮಾಡಿದ್ದಾರೆ. ಸಿಎಂ ಜೊತೆಗಿನ ಸಭೆಯಲ್ಲಿ ಇನ್ನೂ ಕೆಲವು ಬಾಲಿವುಡ್ ನಟರು, ತಂತ್ರಜ್ಞರು ಸಹ ಭಾಗವಹಿಸಿದ್ದರು.

ಯೋಗಿ ಬಳಿ ಸುನಿಲ್ ಮನವಿ
''ನಿಮ್ಮ ಸಹಾಯದಿಂದ 'ಬಾಯ್‌ಕಾಟ್ ಬಾಲಿವುಡ್' ಹ್ಯಾಶ್‌ಟ್ಯಾಗ್ ಟ್ರೆಂಡ್ ಅನ್ನು ನಿಲ್ಲಿಸಬಹುದು. ಬಾಲಿವುಡ್‌ನವರು ಒಳ್ಳೆಯ ಕೆಲಸ ಮಾಡಿದ್ದೇವೆ ಎಂದು ಜನರಿಗೆ ತಿಳಿಸುವುದು ಮುಖ್ಯವಾಗಿದೆ. ಉದ್ಯಮದಲ್ಲಿ ಒಂದು ಕೊಳೆತ ಸೇಬು ಇರಬಹುದು ಆದರೆ ನಮ್ಮಲ್ಲಿ ಶೇಕಡಾ 99 ರಷ್ಟು ಜನರು ಯಾವುದೇ ತಪ್ಪು ಮಾಡಿದವರಲ್ಲ. ನಾವು ಜನರ ಗ್ರಹಿಕೆಯನ್ನು ಬದಲಾಯಿಸಬೇಕಾಗಿದೆ. ನೀವು ನೇತೃತ್ವ ವಹಿಸಿದರೆ ಮತ್ತು ಪ್ರಧಾನ ಮಂತ್ರಿಯೊಂದಿಗೆ ಮಾತನಾಡಿದರೆ ಬದಲಾವಣೆ ಸಾಧ್ಯವಾಗುತ್ತದೆ'' ಎಂದು ಯೋಗಿ ಆದಿತ್ಯನಾಥ್ ಬಳಿ ಮನವಿ ಮಾಡಿದ್ದಾರೆ.

ಸುಶಾಂತ್ ಸಾವಿನ ಬಳಿಕ ಟ್ರೆಂಡ್
2020ರಲ್ಲಿ ಸುಶಾಂತ್ ಸಿಂಗ್ ಹಠಾತ್ ಸಾವಿನ ಬಳಿಕ 'ಬಾಯ್‌ಕಾಟ್ ಬಾಲಿವುಡ್' ಟ್ರೆಂಡ್ ಆಗುತ್ತಿದೆ. ಆಮಿರ್ ಖಾನ್, ಅಕ್ಷಯ್ ಕುಮಾರ್, ಸಲ್ಮಾನ್ ಖಾನ್, ಹೃತಿಕ್ ರೋಷನ್ ಇನ್ನೂ ಹಲವು ಬಾಲಿವುಡ್ ನಟ ನಟಿಯರ ಸಿನಿಮಾಗಳನ್ನು ಬಾಯ್ ಕಾಟ್ ಮಾಡುವಂತೆ ಟ್ವಿಟ್ಟರ್‌ನಲ್ಲಿ ಅಭಿಯಾನ ನಡೆಸಲಾಗುತ್ತಿದೆ. ಅದಕ್ಕೆ ತಕ್ಕಂತೆ ಹಲವು ಸಿನಿಮಾಗಳು ಒಂದರ ಹಿಂದೊಂದರಂತೆ ಸೋತಿವೆ ಸಹ. ಜೊತೆಗೆ ದಕ್ಷಿಣದ ಸಿನಿಮಾಗಳು ಸಹ ಹಿಟ್ ಆಗಲು ಆರಂಭವಾಗಿ ಬಾಲಿವುಡ್ ಮತ್ತಷ್ಟು ಬೇಡಿಕೆಯನ್ನು ಕಳೆದುಕೊಂಡಿದೆ.

'ಪಠಾಣ್' ಸಿನಿಮಾದ ಮೇಲೆ ಕಣ್ಣು!
ಈಗ ಶಾರುಖ್ ಖಾನ್ ನಟನೆಯ 'ಪಠಾಣ್' ಸಿನಿಮಾದ ವಿರುದ್ಧ ಈ ಬಾಯ್‌ಕಾಟ್ ಗ್ಯಾಂಗ್‌ನ ಕಣ್ಣು ಬಿದ್ದಿದೆ. ಇದರ ಜೊತೆಗೆ ಹಿಂದುಪರ ಸಂಘಟನೆಗಳು ಸಹ ಸೇರಿಕೊಂಡಿದ್ದು, 'ಪಠಾಣ್' ಸಿನಿಮಾವನ್ನು ಬಾಯ್‌ಕಾಟ್ ಮಾಡುವಂತೆ ಅಭಿಯಾನ ನಡೆಸಲಾಗುತ್ತಿದೆ. 'ಪಠಾಣ್' ಸಿನಿಮಾದ ಬೇಷರಮ್ ಹಾಡಿನಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಉಡುಗೆ ತೊಟ್ಟಿರುವುದನ್ನೇ ದೊಡ್ಡ ವಿಷಯ ಮಾಡಿ ಬ್ಯಾನ್‌ಗೆ ಒತ್ತಾಯಿಸಲಾಗುತ್ತಿದೆ.


Click it and Unblock the Notifications











