24 ವರ್ಷದ ಹಿಂದೆ 128 ಲೈಂಗಿಕ ಕಾರ್ಯಕರ್ತೆಯರನ್ನು ರಕ್ಷಿಸಿದ್ದ ಸುನೀಲ್ ಶೆಟ್ಟಿ

ಸಿನಿಮಾಗಳಲ್ಲಿ ದುಷ್ಟರಿಂದ ನಾಯಕಿಯರನ್ನು ರಕ್ಷಿಸುವ ನಾಯಕ ನಟರು. ನಿಜ ಜೀವನದಲ್ಲಿ ಈ ರೀತಿಯ ಕಾರ್ಯಗಳನ್ನು ಮಾಡುವುದು ಅಪರೂಪ. ಅಂಥಹಾ ಅಪರೂಪದ ಪ್ರಕರಣಕ್ಕೆ ಕಾರಣವಾಗಿದ್ದರು ಬಾಲಿವುಡ್ ನಟ ಸುನೀಲ್ ಶೆಟ್ಟಿ.

Recommended Video

'ಓಂ' ಚಿತ್ರದ ಬಗ್ಗೆ ನಿಮಗೆ ಗೊತ್ತಿಲ್ಲದ ವಿಷಯಗಳು | 25 Years for OM | Shivarajkumar | Upendra

ಕರ್ನಾಟಕ ಮೂಲದವರಾದ ಸುನಿಲ್ ಶೆಟ್ಟಿ, ಹಲವಾರು ವರ್ಷಗಳಿಂದ ಬಾಲಿವುಡ್‌ನಲ್ಲಿ ಬಹುಬೇಡಿಕೆಯ ನಟ. ಇತ್ತೀಚೆಗೆ ಕನ್ನಡದ ಪೈಲ್ವಾನ್ ಸಿನಿಮಾದಲ್ಲಿಯೂ ಸಹ ಸುನಿಲ್ ಶೆಟ್ಟಿ ನಟಿಸಿದ್ದಾರೆ.

ಸುನಿಲ್ ಶೆಟ್ಟಿ 24 ವರ್ಷದ ಹಿಂದೆ ಮಾಡಿದ್ದ ಒಂದು ಅತ್ಯುತ್ತಮ ಕಾರ್ಯ ಈಗ ಬೆಳಕಿಗೆ ಬಂದಿದೆ. 24 ವರ್ಷದ ಹಿಂದೆ ಸುನಿಲ್ ಶೆಟ್ಟಿ ಅವರು 128 ಮಂದಿ ಲೈಂಗಿಕ ಕಾರ್ಯಕರ್ತೆಯರನ್ನು ರಕ್ಷಿಸಿ ಅವರಿಗೆ ನೆರವಾಗಿದ್ದರು. ಆ ಕ್ಲಿಷ್ಟಕರ ಘಟನೆಯನ್ನು ರಕ್ಷಣೆಗೊಳಗಾಗಿದ್ದ ಹೆಣ್ಣುಮಗಳೊಬ್ಬಳು ಹೇಳಿಕೊಂಡಿದ್ದಾರೆ.

1996 ರಂದು ಕಾಮಾಟಿಪುರದ ಮೇಲೆ ರೈಡ್

1996 ರಂದು ಕಾಮಾಟಿಪುರದ ಮೇಲೆ ರೈಡ್

ಫೆಬ್ರವರಿ 5 ರ 1996 ರಂದು ಮುಂಬೈ ಪೊಲೀಸರು ಮುಂಬೈನ ಕಾಮಾಟಿಪುರದ ಮೇಲೆ ರೈಡ್ ಮಾಡಿದರು. ಅಲ್ಲಿನ 456 ಮಂದಿ ಲೈಂಗಿಕ ಕಾರ್ಯಕರ್ತೆಯರನ್ನು ವಶಕ್ಕೆ ಪಡೆದರು. ರೈಡ್ ಮಾಡಲು ಕಾರಣ, ಏಡ್ಸ್ ತಡೆ.

128 ಮಂದಿ ನೇಪಾಳದ ಹೆಣ್ಣು ಮಕ್ಕಳನ್ನು

128 ಮಂದಿ ನೇಪಾಳದ ಹೆಣ್ಣು ಮಕ್ಕಳನ್ನು

ಪೊಲೀಸರು ರಕ್ಷಿಸಿದ್ದ 456 ಲೈಂಗಿಕ ಕಾರ್ಯಕರ್ತೆಯರನ್ನು 128 ಮಂದಿ ನೇಪಾಳದ ಹೆಣ್ಣು ಮಕ್ಕಳಾಗಿದ್ದರು. ಆದರೆ ಅವರ ಬಳಿ ಸೂಕ್ತ ದಾಖಲೆಗಳಿಲ್ಲವೆಂದು ನೇಪಾಳ ಸರ್ಕಾರ ಅವರನ್ನು ತನ್ನ ದೇಶಕ್ಕೆ ಕರೆಸಿಕೊಳ್ಳಲು ಒಪ್ಪಲಿಲ್ಲ. ಆಗ ಆ 128 ಮಂದಿ ಲೈಂಗಿಕ ಕಾರ್ಯಕರ್ತೆಯರು ಅತಂತ್ರರಾದರು.

ವಿಶೇಷ ವಿಮಾನದಲ್ಲಿ ಕಳಿಸಿಕೊಟ್ಟರು

ವಿಶೇಷ ವಿಮಾನದಲ್ಲಿ ಕಳಿಸಿಕೊಟ್ಟರು

ಸುದ್ದಿಗೆ ಕಿವಿಗೆ ಬಿದ್ದೊಡನೆ ನೆರವಿಗೆ ಬಂದ ಸುನಿಲ್ ಶೆಟ್ಟಿ, ವಿಶೇಷ ವಿಮಾನವೊಂದರ ವ್ಯವಸ್ಥೆ ಮಾಡಿಸಿ, ಅಷ್ಟೂ ಮಂದಿ ಹೆಣ್ಣು ಮಕ್ಕಳಿಗೆ ವಿಮಾನ ಟಿಕೆಟ್ ಖರೀದಿಸಿ ಕೊಟ್ಟು, ಅವರೆಲ್ಲರೂ ಕಠ್ಮಂಡುವಿನಲ್ಲಿ ಇಳಿಯಲು ನೆರವಾದರು.

ಪ್ರಚಾರ ಪಡೆಯಲಿಲ್ಲ ಸುನಿಲ್ ಶೆಟ್ಟಿ

ಪ್ರಚಾರ ಪಡೆಯಲಿಲ್ಲ ಸುನಿಲ್ ಶೆಟ್ಟಿ

ಇಷ್ಟೆಲ್ಲಾ ದೊಡ್ಡ ನೆರವು ಮಾಡಿದರೂ ಸಹ ಸುನಿಲ್ ಶೆಟ್ಟಿ ಇದಕ್ಕಾಗಿ ಪ್ರಚಾರ ಪಡೆಯಲಿಲ್ಲ. ಇದರ ಎಲ್ಲಾ ಶ್ರೇಯವನ್ನು ಮುಂಬೈ ಪೊಲೀಸ್ ಮತ್ತು ಸುನಿಲ್ ಶೆಟ್ಟಿ ಅವರ ಅತ್ತೆ ನಡೆಸುತ್ತಿರುವ 'ಸೇವ್ ದಿ ಚಿಲ್ಡ್ರನ್' ಎನ್‌ಜಿಓ ಗೆ ನೀಡಿದರು.

ವಿಡಿಯೋ ಈಗ ವೈರಲ್ ಆಗಿದೆ

ವಿಡಿಯೋ ಈಗ ವೈರಲ್ ಆಗಿದೆ

ಅಂದು ರಕ್ಷಿಸಲ್ಪಟ್ಟ ಹೆಣ್ಣು ಮಗಳೊಬ್ಬಳನ್ನು ಒಬ್ಬ ನೇಪಾಳಿ ಪತ್ರಕರ್ತೆ ಸಂದರ್ಶನ ಮಾಡಿದಾಗ ಈ ಘಟನೆಯನ್ನು ಆಕೆ ಹೇಳಿದ್ದಾಳೆ. ಆ ಮಹಿಳೆ ಮಾತನಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸುನಿಲ್ ಶೆಟ್ಟಿ ಅವರನ್ನು ಅಭಿನಂದಿಸುತ್ತಿದ್ದಾರೆ.

More from Filmibeat

English summary
Actor Sunil Shetty helped 128 Nepal Women to go back their homes.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X