twitter
    For Quick Alerts
    ALLOW NOTIFICATIONS  
    For Daily Alerts

    24 ವರ್ಷದ ಹಿಂದೆ 128 ಲೈಂಗಿಕ ಕಾರ್ಯಕರ್ತೆಯರನ್ನು ರಕ್ಷಿಸಿದ್ದ ಸುನೀಲ್ ಶೆಟ್ಟಿ

    |

    ಸಿನಿಮಾಗಳಲ್ಲಿ ದುಷ್ಟರಿಂದ ನಾಯಕಿಯರನ್ನು ರಕ್ಷಿಸುವ ನಾಯಕ ನಟರು. ನಿಜ ಜೀವನದಲ್ಲಿ ಈ ರೀತಿಯ ಕಾರ್ಯಗಳನ್ನು ಮಾಡುವುದು ಅಪರೂಪ. ಅಂಥಹಾ ಅಪರೂಪದ ಪ್ರಕರಣಕ್ಕೆ ಕಾರಣವಾಗಿದ್ದರು ಬಾಲಿವುಡ್ ನಟ ಸುನೀಲ್ ಶೆಟ್ಟಿ.

    Recommended Video

    'ಓಂ' ಚಿತ್ರದ ಬಗ್ಗೆ ನಿಮಗೆ ಗೊತ್ತಿಲ್ಲದ ವಿಷಯಗಳು | 25 Years for OM | Shivarajkumar | Upendra

    ಕರ್ನಾಟಕ ಮೂಲದವರಾದ ಸುನಿಲ್ ಶೆಟ್ಟಿ, ಹಲವಾರು ವರ್ಷಗಳಿಂದ ಬಾಲಿವುಡ್‌ನಲ್ಲಿ ಬಹುಬೇಡಿಕೆಯ ನಟ. ಇತ್ತೀಚೆಗೆ ಕನ್ನಡದ ಪೈಲ್ವಾನ್ ಸಿನಿಮಾದಲ್ಲಿಯೂ ಸಹ ಸುನಿಲ್ ಶೆಟ್ಟಿ ನಟಿಸಿದ್ದಾರೆ.

    'ನನಗೂ ರಾಹುಲ್ ಗೂ ಸಂಬಂಧವಿಲ್ಲ, ಮಗಳನ್ನು ಕೇಳಿ': ಗರಂ ಆದ ಸುನಿಲ್ ಶೆಟ್ಟಿ'ನನಗೂ ರಾಹುಲ್ ಗೂ ಸಂಬಂಧವಿಲ್ಲ, ಮಗಳನ್ನು ಕೇಳಿ': ಗರಂ ಆದ ಸುನಿಲ್ ಶೆಟ್ಟಿ

    ಸುನಿಲ್ ಶೆಟ್ಟಿ 24 ವರ್ಷದ ಹಿಂದೆ ಮಾಡಿದ್ದ ಒಂದು ಅತ್ಯುತ್ತಮ ಕಾರ್ಯ ಈಗ ಬೆಳಕಿಗೆ ಬಂದಿದೆ. 24 ವರ್ಷದ ಹಿಂದೆ ಸುನಿಲ್ ಶೆಟ್ಟಿ ಅವರು 128 ಮಂದಿ ಲೈಂಗಿಕ ಕಾರ್ಯಕರ್ತೆಯರನ್ನು ರಕ್ಷಿಸಿ ಅವರಿಗೆ ನೆರವಾಗಿದ್ದರು. ಆ ಕ್ಲಿಷ್ಟಕರ ಘಟನೆಯನ್ನು ರಕ್ಷಣೆಗೊಳಗಾಗಿದ್ದ ಹೆಣ್ಣುಮಗಳೊಬ್ಬಳು ಹೇಳಿಕೊಂಡಿದ್ದಾರೆ.

    1996 ರಂದು ಕಾಮಾಟಿಪುರದ ಮೇಲೆ ರೈಡ್

    1996 ರಂದು ಕಾಮಾಟಿಪುರದ ಮೇಲೆ ರೈಡ್

    ಫೆಬ್ರವರಿ 5 ರ 1996 ರಂದು ಮುಂಬೈ ಪೊಲೀಸರು ಮುಂಬೈನ ಕಾಮಾಟಿಪುರದ ಮೇಲೆ ರೈಡ್ ಮಾಡಿದರು. ಅಲ್ಲಿನ 456 ಮಂದಿ ಲೈಂಗಿಕ ಕಾರ್ಯಕರ್ತೆಯರನ್ನು ವಶಕ್ಕೆ ಪಡೆದರು. ರೈಡ್ ಮಾಡಲು ಕಾರಣ, ಏಡ್ಸ್ ತಡೆ.

    128 ಮಂದಿ ನೇಪಾಳದ ಹೆಣ್ಣು ಮಕ್ಕಳನ್ನು

    128 ಮಂದಿ ನೇಪಾಳದ ಹೆಣ್ಣು ಮಕ್ಕಳನ್ನು

    ಪೊಲೀಸರು ರಕ್ಷಿಸಿದ್ದ 456 ಲೈಂಗಿಕ ಕಾರ್ಯಕರ್ತೆಯರನ್ನು 128 ಮಂದಿ ನೇಪಾಳದ ಹೆಣ್ಣು ಮಕ್ಕಳಾಗಿದ್ದರು. ಆದರೆ ಅವರ ಬಳಿ ಸೂಕ್ತ ದಾಖಲೆಗಳಿಲ್ಲವೆಂದು ನೇಪಾಳ ಸರ್ಕಾರ ಅವರನ್ನು ತನ್ನ ದೇಶಕ್ಕೆ ಕರೆಸಿಕೊಳ್ಳಲು ಒಪ್ಪಲಿಲ್ಲ. ಆಗ ಆ 128 ಮಂದಿ ಲೈಂಗಿಕ ಕಾರ್ಯಕರ್ತೆಯರು ಅತಂತ್ರರಾದರು.

    ಕೆ.ಎಲ್ ರಾಹುಲ್-ಅತಿಯಾ ಪ್ರೀತಿ ವಿಷ್ಯ ಬಿಚ್ಚಿಡ್ತು ರೋಮ್ಯಾಂಟಿಕ್ ಫೋಟೋ ಮತ್ತು ವಿಶ್ಕೆ.ಎಲ್ ರಾಹುಲ್-ಅತಿಯಾ ಪ್ರೀತಿ ವಿಷ್ಯ ಬಿಚ್ಚಿಡ್ತು ರೋಮ್ಯಾಂಟಿಕ್ ಫೋಟೋ ಮತ್ತು ವಿಶ್

    ವಿಶೇಷ ವಿಮಾನದಲ್ಲಿ ಕಳಿಸಿಕೊಟ್ಟರು

    ವಿಶೇಷ ವಿಮಾನದಲ್ಲಿ ಕಳಿಸಿಕೊಟ್ಟರು

    ಸುದ್ದಿಗೆ ಕಿವಿಗೆ ಬಿದ್ದೊಡನೆ ನೆರವಿಗೆ ಬಂದ ಸುನಿಲ್ ಶೆಟ್ಟಿ, ವಿಶೇಷ ವಿಮಾನವೊಂದರ ವ್ಯವಸ್ಥೆ ಮಾಡಿಸಿ, ಅಷ್ಟೂ ಮಂದಿ ಹೆಣ್ಣು ಮಕ್ಕಳಿಗೆ ವಿಮಾನ ಟಿಕೆಟ್ ಖರೀದಿಸಿ ಕೊಟ್ಟು, ಅವರೆಲ್ಲರೂ ಕಠ್ಮಂಡುವಿನಲ್ಲಿ ಇಳಿಯಲು ನೆರವಾದರು.

    ಪ್ರಚಾರ ಪಡೆಯಲಿಲ್ಲ ಸುನಿಲ್ ಶೆಟ್ಟಿ

    ಪ್ರಚಾರ ಪಡೆಯಲಿಲ್ಲ ಸುನಿಲ್ ಶೆಟ್ಟಿ

    ಇಷ್ಟೆಲ್ಲಾ ದೊಡ್ಡ ನೆರವು ಮಾಡಿದರೂ ಸಹ ಸುನಿಲ್ ಶೆಟ್ಟಿ ಇದಕ್ಕಾಗಿ ಪ್ರಚಾರ ಪಡೆಯಲಿಲ್ಲ. ಇದರ ಎಲ್ಲಾ ಶ್ರೇಯವನ್ನು ಮುಂಬೈ ಪೊಲೀಸ್ ಮತ್ತು ಸುನಿಲ್ ಶೆಟ್ಟಿ ಅವರ ಅತ್ತೆ ನಡೆಸುತ್ತಿರುವ 'ಸೇವ್ ದಿ ಚಿಲ್ಡ್ರನ್' ಎನ್‌ಜಿಓ ಗೆ ನೀಡಿದರು.

    ಬಾಲಿವುಡ್‌ನ ಹಿಟ್ ಚಿತ್ರದ ಸೀಕ್ವೆಲ್‌ನಲ್ಲಿ ಸ್ಟಾರ್ ನಟರ ಮಕ್ಕಳು?ಬಾಲಿವುಡ್‌ನ ಹಿಟ್ ಚಿತ್ರದ ಸೀಕ್ವೆಲ್‌ನಲ್ಲಿ ಸ್ಟಾರ್ ನಟರ ಮಕ್ಕಳು?

    ವಿಡಿಯೋ ಈಗ ವೈರಲ್ ಆಗಿದೆ

    ವಿಡಿಯೋ ಈಗ ವೈರಲ್ ಆಗಿದೆ

    ಅಂದು ರಕ್ಷಿಸಲ್ಪಟ್ಟ ಹೆಣ್ಣು ಮಗಳೊಬ್ಬಳನ್ನು ಒಬ್ಬ ನೇಪಾಳಿ ಪತ್ರಕರ್ತೆ ಸಂದರ್ಶನ ಮಾಡಿದಾಗ ಈ ಘಟನೆಯನ್ನು ಆಕೆ ಹೇಳಿದ್ದಾಳೆ. ಆ ಮಹಿಳೆ ಮಾತನಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸುನಿಲ್ ಶೆಟ್ಟಿ ಅವರನ್ನು ಅಭಿನಂದಿಸುತ್ತಿದ್ದಾರೆ.

    ಹುಟ್ಟುಹಬ್ಬದ ಸಂಭ್ರಮದಲ್ಲಿರುವ ನಟ ಸುನೀಲ್ ಶೆಟ್ಟಿಗೆ ಸುದೀಪ್ ಹೇಳಿದ್ದೇನು?ಹುಟ್ಟುಹಬ್ಬದ ಸಂಭ್ರಮದಲ್ಲಿರುವ ನಟ ಸುನೀಲ್ ಶೆಟ್ಟಿಗೆ ಸುದೀಪ್ ಹೇಳಿದ್ದೇನು?

    English summary
    Actor Sunil Shetty helped 128 Nepal Women to go back their homes.
    Tuesday, May 19, 2020, 17:46
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X