For Quick Alerts
  ALLOW NOTIFICATIONS  
  For Daily Alerts

  ಅಥಿಯಾ ಶೆಟ್ಟ, ಕೆಎಲ್ ರಾಹುಲ್ ಮದುವೆ ತಡವೇಕೆಂದು ಹೇಳಿದ ಸುನೀಲ್ ಶೆಟ್ಟಿ!

  |

  ನಟ ಸುನೀಲ್ ಶೆಟ್ಟಿ ಪುತ್ರಿ ಅಥಿಯಾ ಶೆಟ್ಟಿ ಹಾಗೂ ಕ್ರಿಕೆಟಿಗ ಕೆಎಲ್ ರಾಹುಲ್ ಪ್ರೀತಿಯಲ್ಲಿ ಇದ್ದಾರೆ, ಇ ಜೊಡಿ ಮದುವೆ ಆಗಲಿದೆ ಎನ್ನುವ ಬಗ್ಗೆ ಹಲವು ದಿನಗಳಿಂದ ಚರ್ಚೆ ನಡೆಯುತ್ತಿದೆ. ಇದೀಗ ಇವರ ಮದುವೆ ಬಗ್ಗೆ ಮಾತನಾಡಲು ಸ್ವತಃ ಸುನೀಲ್ ಶೆಟ್ಟಿ ಮಾತನಾಡಿದ್ದಾರೆ.

  ಈ ಜೋಡಿ ಮದುವೆ ಆಚೆಗೆ ಅವರ ತಮ್ಮ, ತಮ್ಮ ಕೆಲಸಗಳಲ್ಲಿ ಬ್ಯುಸಿ ಇರುವೇ ಕಾರಣ ಎಂದು ಹೇಳಿದ್ದಾರೆ. ಅಂದರೆ ಅವರು ನಿರ್ಧಾರಿಸಿದಾಗ ಮದುವೆ ಆಗುತ್ತದೆ. ಇದು ತಮ್ಮ ಮಗಳಿಗೆ ಬಿಟ್ಟ ವಿಚಾರ ಎಂದು ಸುನಿಲ್ ಶೆಟ್ಟಿ ಹೇಳಿಕೊಂಡಿದ್ದಾರೆ.

  ಕಪೂರ್ ಖಾಂದಾನ್‌ಗೆ ಮತ್ತೆ ಗಣೇಶ ಹಬ್ಬದ ಸಡಗರ ತಂದ ಆಲಿಯಾ- ರಣ್‌ಬೀರ್ ಕೂಸು!ಕಪೂರ್ ಖಾಂದಾನ್‌ಗೆ ಮತ್ತೆ ಗಣೇಶ ಹಬ್ಬದ ಸಡಗರ ತಂದ ಆಲಿಯಾ- ರಣ್‌ಬೀರ್ ಕೂಸು!

  "ಮಕ್ಕಳು ನಿರ್ಧರಿಸಿದ ತಕ್ಷಣ ಮದುವೆ ಆಗುತ್ತೆ. ರಾಹುಲ್ ತುಂಬಾ ಬಿಡುವಿಲ್ಲದ ವೇಳಾಪಟ್ಟಿಯನ್ನು ಹೊಂದಿದ್ದಾರೆ. ಏಷ್ಯಾ ಕಪ್, ವಿಶ್ವಕಪ್, ದಕ್ಷಿಣ ಆಫ್ರಿಕಾ ಪ್ರವಾಸ, ಆಸ್ಟ್ರೇಲಿಯಾ ಪ್ರವಾಸ. ಮಕ್ಕಳಿಗೆ ರಜೆ ಸಿಕ್ಕರೆ ಮಾತ್ರ ಮದುವೆ ನಡೆಯುತ್ತದೆ. ರಾಹುಲ್ ಟೂರ್ನಮೆಂಟ್ ಕ್ಯಾಲೆಂಡರ್ ತುಂಬಾ ಬ್ಯುಸಿಯಾಗಿದೆ ಮತ್ತು ಕೇವಲ 1-2 ದಿನಗಳ ವಿರಾಮವಿದೆ. ಆದ್ದರಿಂದ ಕಡಿಮೆ ಸಮಯದಲ್ಲಿ ಮದುವೆ ನಡೆಯಲು ಸಾಧ್ಯವಿಲ್ಲ. ಸಮಯ ಬಂದಾಗ ಮದುವೆ ಆಯೋಜನೆ ಮಾಡಲಾಗುವುದು" ಎಂದು ಮಾಧ್ಯಮದವರೊಂದಿಗೆ ಮಾತನಾಡಿದ ಸುನೀಲ್ ಶೆಟ್ಟಿ ಹೇಳಿದ್ದಾರೆ.

  ಅಥಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್ ಕಳೆದ ಕೆಲವು ವರ್ಷಗಳಿಂದ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಇಬ್ಬರೂ ಒಟ್ಟಿಗೆ ಮುಂಬೈನ ಬಾಂದ್ರಾದಲ್ಲಿ ಐಷಾರಾಮಿ ಅಪಾರ್ಟ್‌ಮೆಂಟ್ ತೆಗೆದುಕೊಂಡಿದ್ದಾರೆ ಮತ್ತು ಒಟ್ಟಿಗೆ ವಾಸಿಸುತ್ತಿದ್ದಾರೆ ಎನ್ನಲಾಗಿದೆ.

  2021ರಲ್ಲಿ ತನ್ನ ಸಹೋದರ ಅಹಾನ್ ಶೆಟ್ಟಿ ಚೊಚ್ಚಲ ಚಿತ್ರ 'ತಡಪ್' ಪ್ರದರ್ಶನದಲ್ಲಿ ಅಥಿಯಾ ಕೆಎಲ್ ರಾಹುಲ್ ಜೊತೆಗೆ ಬಂದಿದ್ದು, ಆಗಲೇ ಇವರ ನಡುವೆ ಲವ್ವಿ- ಡವ್ವಿ ನಡೆಯುತ್ತಿದೆ ಎನ್ನುವ ವಿಚಾರ ಬಹಿರಂಗವಾಯಿತು.

  ಆದರೆ ಅದಕ್ಕೂ ಮೊದಲೇ ಈ ಜೋಡಿ ಹಲವು ದಿನಗಳಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದರೇ ಎನ್ನುವ ವಿಚಾರವು ಚರ್ಚೆಯಲ್ಲಿ ಇತ್ತು. ಇಬ್ಬರೂ ತಮ್ಮ ರಜಾದಿನಗಳನ್ನು ಕಳೆಯುವ ಮತ್ತು ಒಟ್ಟಿಗೆ ಎಂಜಾಯ್ ಮಾಡುತ್ತಿರುವ ಅನೇಕ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರೆ.

  Sunil Shetty Reveals Secret About Daughter Athiya Shetty And KL Rahul Love Story

  ವರದಿಗಳ ಪ್ರಕಾರ, ಅಥಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್ 2023 ಆರಂಭದಲ್ಲಿ, ಅಂದರೆ ಜನವರಿ ಅಥವಾ ಫೆಬ್ರವರಿಯಲ್ಲಿ ಮದುವೆಯಾಗುವ ಸಾಧ್ಯತೆಯಿದೆ. ರಾಹುಲ್, ಅಥಿಯಾ ಮದುವೆಗೆ ಸಮಯ ಕೊಡುವ ವರೆಗೂ, ಮದುವೆಯನ್ನು ಮುಂದೂಡಲಾಗುತ್ತದೆ.

  English summary
  Sunil Shetty Reveals Secret About Daughter Athiya Shetty And KL Rahul Love Story, Know More,
  Thursday, August 25, 2022, 0:43
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X