ಮದುವೆ ತೀರ್ಮಾನ ಮಗಳು ಆತಿಯಾಳದ್ದೇ ಆಗಿರುತ್ತದೆ: ಸುನಿಲ್ ಶೆಟ್ಟಿ!

ಅತಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್ ಪ್ರೀತಿಯಲ್ಲಿ ಇರುವ ವಿಚಾರ ಬಗ್ಗೆ ಸಾಕಷ್ಟು ವದಂತಿಗಳು ಹಬ್ಬಿವೆ. ಅಹಾನ್ ಶೆಟ್ಟಿಯವರ ಚೊಚ್ಚಲ ಚಿತ್ರ 'ತಡಪ್' ಪ್ರೀಮಿಯರ್ ವೇಳೆ ಕೆಎಲ್ ರಾಹುಲ್ ಮತ್ತು ಆತಿಯಾ ಶೆಟ್ಟಿ ಇಡೀ ಶೆಟ್ಟಿ ಕುಟುಂಬದೊಂದಿಗೆ ಭಾಗಿ ಆಗಿದ್ದರು. ಅಲ್ಲಿಂದಲೇ ಆತಿಯಾ ಮತ್ತು ಕೆ.ಎಲ್ ರಾಹುಲ್ ನಡುವೆ ಲವ್ ಸ್ಟೋರಿಯೊಂದು ಹುಟ್ಟಿಕೊಂಡಿದ್ದು. ಅಷ್ಟೇ ಅಲ್ಲ ಇತ್ತೀಚೆಗೆ ಈ ಜೋಡಿ ಮದುವೆ ಅಗುತ್ತೆ ಅಂತಲೂ ಹೇಳಲಾಗುತ್ತಾ ಇತ್ತು.

ಮಗಳ ಮದುವೆ ಬಗ್ಗೆ ಸುನಿಲ್ ಶೆಟ್ಟಿ ಸಂದರ್ಶನ ಒಂದರಲ್ಲಿ ಮಾತನಾಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ನಟ ಸುನಿಲ್ ಶೆಟ್ಟಿ, ಆತಿಯಾ ಶೆಟ್ಟಿ ನನ್ನ ಮಗಳು ಆಕೆಯ ಮದುಯನ್ನು ನೋಡಲು ಬಯಸುತ್ತೇನೆ, ಎನ್ನುವುದರ ಜೊತೆಗೆ ತಮ್ಮ ಮಗ ಕೂಡ ಮದುವೆ ಆಗಬೇಕು ಅದು ಆದಷ್ಟು ಬೇಗ ಒಳ್ಳೆಯ ರೀತಿಯಲ್ಲಿ ಆಗಲಿ ಎಂದಿದ್ದಾರೆ. ಇನ್ನು ಮದುವೆ ವಿಚಾರವನ್ನು ಅವರವರಿಗೆ ಬಿಟ್ಟಿರುವುದಾಗಿಯೂ ಹೇಳಿದ್ದಾರೆ.

"ಕಾಲ ಬದಲಾಗಿರುವುದರಿಂದ ಏನು ಮಾಡಬೇಕು ಎನ್ನುವುದನ್ನು ಅವರೇ ನಿರ್ಧರಿಸುತ್ತಾರೆ. ನನ್ನ ಮಗಳು ಮತ್ತು ಮಗ ಇಬ್ಬರೂ ಜವಾಬ್ದಾರಿ ಇರುವವರು. ಅವರೇ ನಿರ್ಧಾರ ತೆಗೆದುಕೊಳ್ಳಬೇಕೆಂದು ನಾನು ಬಯಸುತ್ತೇನೆ. ಅವರಿಗೆ ನನ್ನ ಆಶೀರ್ವಾದ ಸದಾ ಇರುತ್ತದೆ.'' ಎಂದು ಹೇಳಿ ಅಡ್ಡ ಗೋಡೆ ಮೇಲೆ ದೀಪ ಇಟ್ಟಿದ್ದಾರೆ. ದಕ್ಷಿಣ ಭಾರತೀಯ ಸಂಪ್ರದಾಯದ ಪ್ರಕಾರ ಅದ್ಧೂರಿಯಾಗಿ ಮದುವೆ ನಡೆಯಲಿದೆ ಎನ್ನಲಾಗಿದೆ.

Sunil Shetty Talk About Daughter Athiya Shetty And KL Rahul Love Gossip And Wedding

ಆತಿಯಾ ಶೆಟ್ಟಿ ಹಾಗೂ ಕೆ.ಎಲ್.ರಾಹುಲ್ ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಪರಸ್ಪರ ಪ್ರೀತಿಸುತ್ತಿದ್ದಾರೆ. ಈ ಹಿಂದೆಯೂ ತಮ್ಮ ಮಗಳ ಪ್ರೀತಿಗೆ ಬಗ್ಗೆ ಸುನಿಲ್ ಶೆಟ್ಟಿ ಪರೋಕ್ಷವಾಗಿ ಮಾತನಾಡಿದ್ದರು. ಕೆಎಲ್ ರಾಹುಲ್ ಅದ್ಭುತ ವ್ಯಕ್ತಿ ಎಂದು ಬಣ್ಣಿಸಿದ್ದರು. ಈ ಜೋಡಿ ಕೆಲವೇ ತಿಂಗಳಲ್ಲಿ ವಿವಾಹವಾಗಲಿದ್ದಾರೆ ಎನ್ನಲಾಗುತ್ತಿದೆ. ಬಾಂದ್ರಾದ ಹೊಸ ಅಪಾರ್ಟ್‌ಮೆಂಟ್‌ನಲ್ಲಿ ಹಲವು ಫ್ಲಾಟ್‌ಗಳನ್ನು ಕೆ.ಎಲ್.ರಾಹುಲ್ ಹಾಗೂ ಸುನಿಲ್ ಶೆಟ್ಟಿ ಜಂಟಿಯಾಗಿ ಖರೀದಿಸಿದ್ದು, ಅಪಾರ್ಟ್‌ಮೆಂಟ್‌ನ ಒಂದು ಭಾಗದಲ್ಲಿ ಸುನಿಲ್ ಶೆಟ್ಟಿ ಕುಟುಂಬ ಹಾಗೂ ಮತ್ತೊಂದು ಭಾಗದಲ್ಲಿ ಕೆ.ಎಲ್.ರಾಹುಲ್ ಹಾಗೂ ಆತಿಯಾ ಶೆಟ್ಟಿ ಇರಲಿದ್ದಾರೆ ಎನ್ನಲಾಗಿದೆ.

Sunil Shetty Talk About Daughter Athiya Shetty And KL Rahul Love Gossip And Wedding

ಕೆಎಲ್ ರಾಹುಲ್ ಐಪಿಎಲ್ ಟೂರ್ನಿ ಮುಗಿದ ಬಳಿಕ ಟಿ20 ವಿಶ್ವಕಪ್ ಆಡಬೇಕಿದೆ. ಈ ಎರಡು ಮಹತ್ವದ ಟೂರ್ನಿಗಳ ಬಳಿಕ ರಾಹುಲ್ ಮತ್ತು ಆತಿಯಾ ವಿವಾಹವಾಗಲಿದ್ದಾರೆ. ಆತಿಯಾ 'ಮೋತಿಚೂರ್-ಚಕ್ನಾಚೂರ್' ಸಿನಿಮಾದ ಬಳಿಕ ಕೆಲ ಕಾಲ ಬ್ರೇಕ್ ತೆಗೆದುಕೊಂಡಿದ್ದರು. ಈಗ ಆತಿಯಾ ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

More from Filmibeat

English summary
Sunil Shetty Talk About Daughter Athiya Shetty And KL Rahul Love Gossip And Wedding, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X