ಗೆಳೆಯರ ಜೊತೆ ಮಲಗುವಂತೆ ಕರಿಷ್ಮಾ ಕಪೂರ್‌ಗೆ ಒತ್ತಾಯ ಮಾಡುತ್ತಿದ್ದ ಸಂಜಯ್ ಕಪೂರ್
ಜನಸಾಮಾನ್ಯರ ದೃಷ್ಟಿಯಲ್ಲಿ ಚಿತ್ರರಂಗದವರು ಅಂದ ಕೂಡಲೇ ಕಣ್ತುಂಬ ಬಗೆ ಬಗೆಯ ಬಣ್ಣಗಳೇ ತುಂಬಿಕೊಳ್ಳುತ್ತವೆ. ಆದರೆ, ವಾಸ್ತವದಲ್ಲಿ ... ಬಣ್ಣದ ಬದುಕಿನಲ್ಲಿ ಬದುಕು ಕಟ್ಟಿಕೊಂಡವರಿಗೆ ಕೂಡ ಹಲವು ಕಷ್ಟಗಳು ಇರುತ್ತವೆ. ಅವರದ್ದೇ ಆದ ದು:ಖ ಸಂಕಟಗಳಿರುತ್ತವೆ. ಇದಕ್ಕೆ ಅಂದಕಾಲತ್ತಿಲ್‌ನ ಚೆಲುವೆ, ಕಪೂರ್ ಖಾನ್ದಾನ್‌ನ ಕುಡಿ ಕರಿಷ್ಮಾ ಕಪೂರ್ ಅವರ ವ್ಯೆಯಕ್ತಿಕ ಬದುಕು ಅತ್ಯುತ್ತಮ ಉದಾಹರಣೆ.
ಹೌದು, ವೃತ್ತಿ ಬದುಕಿನಲ್ಲಿ ಖ್ಯಾತಿಯ ಶಿಖರಕ್ಕೇರಿದ ಕರಿಷ್ಮಾ ಕಪೂರ್ ತಮ್ಮ ವ್ಯೆಯಕ್ತಿಕ ಜೀವನದಲ್ಲಿ ಅನುಭವಿಸಿದ ನರಕಯಾತನೆ ಅಷ್ಟಿಷ್ಟಲ್ಲ. ಅನುದಿನ - ಅನುಕ್ಷಣ .. 07 ವರ್ಷ ಕಣ್ಣೀರಿನಲ್ಲಿಯೇ ಕೈ ತೊಳೆದವರು ಕರಿಷ್ಮಾ ಕಪೂರ್.

ಹೌದು, ನಿಮಗೆ ಗೊತ್ತಿರಲಿ ಎಲ್ಲವೂ ಅಂದುಕೊಂಡತೆ ಆಗಿದ್ದರೆ ಐಶ್ವರ್ಯ ರೈ ಬದಲು ಅಮಿತಾಬ್ ಬಚ್ಚನ್ ಮನೆಯ ಸೊಸೆಯಾಗಬೇಕಿತ್ತು ಕರಿಷ್ಮಾ ಕಪೂರ್. 2002ರಲ್ಲಿ ಅಭಿಷೇಕ್ ಮತ್ತು ಕರಿಷ್ಮಾ ಕಪೂರ್ ನಡುವೆ ನಿಶ್ಚಿತಾರ್ಥ ಕೂಡ ನಡೆದಿತ್ತು.
ಆದರೆ ಆ ನಂತರ 2003ರಲ್ಲಿ ಈ ಸಂಬಂಧ ಮುರಿದು ಬಿತ್ತು. ಅಭಿಷೇಕ್ ಬಚ್ಚನ್ ಅವರಿಂದ ದೂರವಾದ ಕರಿಷ್ಮಾ ಆ ನಂತರ ಆತುರ ಆತುರವಾಗಿ ಇಂದು { ಜೂನ್ 13 } ಕೊನೆಯುಸಿರೆಳೆದ ಸಂಜಯ್ ಕಪೂರ್ ಅವರನ್ನು ಮದುವೆಯಾದರು.
ಸಂಜಯ್ ಕಪೂರ್‌ಗೆ ಅದಾಗಲೇ ಪ್ರಸಿದ್ದ ಫ್ಯಾಶನ್ ಡಿಸೈನರ್ ನಂದಿತಾ ಮೆಹ್ತಾನಿಯ ಜೊತೆ ಮದುವೆ ಆಗಿತ್ತು. ನಾಲ್ಕು ವರ್ಷಗಳ ಈ ದಾಂಪತ್ಯ ಜೀವನ ಮುರಿದು ಕೂಡ ಬಿದ್ದಿತ್ತು. ಆದರೂ ಕೂಡ ಕರಿಷ್ಮಾ ಕಪೂರ್ ಮರು ಮಾತನಾಡದೇ ಮರು ಯೋಚಿಸದೇ ಸಂಜಯ್ ಕಪೂರ್ ಅವರ ಜೊತೆ 2003ರಲ್ಲಿಯೇ ಮದುವೆಯಾದರು.
ಇಲ್ಲಿಂದ ಕರಿಷ್ಮಾ ಕಪೂರ್ ಬದುಕು ಮತ್ತೊಂದು ಮಗ್ಗಲಿನತ್ತ ಹೊರಳಿತು. ಮದುವೆಯಾದ ಕೆಲವೇ ದಿನಗಳಿಗೆ ಸಂಜಯ್ ಕಪೂರ್ ಅವರ ವ್ಯಕ್ತಿತ್ವದ ಪರಿಚಯ ಕರಿಷ್ಮಾಗೆ ಆಯ್ತು.

ಕರಿಷ್ಮಾ ಹಿಂದೆ ಖುದ್ದು ಹೇಳಿಕೊಂಡಂತೆ ಮದುವೆಯಾದ ನಂತರ ಸಂಜಯ್ ಕಪೂರ್ ತನ್ನ ಸ್ನೇಹಿತರ ಜೊತೆ ಹಾಸಿಗೆ ಹಂಚಿಕೊಳ್ಳುವಂತೆ ಪೀಡಿಸಲು ಶುರು ಮಾಡಿದ್ದರು. ಇದಕ್ಕೆ ಕರಿಷ್ಮಾ ಕಪೂರ್ ವಿರೋಧ ವ್ಯಕ್ತಪಡಿಸುತ್ತಿದ್ದರು. ವಿರೋಧ ವ್ಯಕ್ತಪಡಿಸಿದಾಗೆಲ್ಲ ಸಂಜಯ್ ಕಪೂರ್ ಇವರ ಮೇಲೆ ಹಲ್ಲೆಯನ್ನು ಕೂಡ ಮಾಡಿದ್ದರು. ಇಷ್ಟೇ ಅಲ್ಲ ಹರಾಜಿನ ಮೂಲಕ ತನ್ನ ಗೆಳೆಯರಿಗೆ ಕರಿಷ್ಮಾ ಕಪೂರ್ ಅವರನ್ನು ಮಾರುವ ಪ್ರಯತ್ನವನ್ನು ಕೂಡ ಸಂಜಯ್ ಕಪೂರ್ ಮಾಡಿದ್ದರು.
ಇನ್ನು. ಕರಿಷ್ಮಾ ಕಪೂರ್ ಗರ್ಭಿಣಿಯಾಗಿದ್ದಾಗ ಅವರ ಅತ್ತೆ ಬಟ್ಟೆಯೊಂದನ್ನು ಕರಿಷ್ಮಾಗೆ ನೀಡಿದ್ದರು. ಆದರೆ ಆ ಬಟ್ಟೆ ಚಿಕ್ಕದಾದ ಕಾರಣ ಕರಿಷ್ಮಾಗೆ ಧರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಈ ವಿಚಾರಕ್ಕೂ ಕೂಡ ಜಗಳ ಮಾಡಿದ್ದ ಸಂಜಯ್ ತಮ್ಮ ತಾಯಿಯಿಂದ ಕರಿಷ್ಮಾಗೆ ಹೊಡೆಸಿದ್ದರು. ಈ ಎಲ್ಲ ವಿಚಾರಗಳನ್ನು ಕರಿಷ್ಮಾ ಕಪೂರ್ ತಮ್ಮ ವಿಚ್ಚೇದನದ ಅರ್ಜಿಯಲ್ಲಿ ಉಲ್ಲೇಖಿಸಿದ್ದರು ಎಂದು ಅಂದು ಬಾಲಿವುಡ್ ಶಾದಿಸ್ ಮತ್ತು ಡಿಎನ್‌ಎ ವರದಿಯನ್ನು ಮಾಡಿದ್ದವು.
ಹೀಗೆ ಸಂಜಯ್ ಕಪೂರ್ ಅವರಿಂದ ನಿರಂತರವಾಗಿ ದೌರ್ಜನ್ಯಕ್ಕೊಳಗಾಗುತ್ತಲೇ ಬಂದ ಕರಿಷ್ಮಾ ಕಪೂರ್ 2010ರಲ್ಲಿ ಇನ್ನು ಜೊತೆಯಲ್ಲಿ ಬದುಕಲು ಸಾಧ್ಯ ಇಲ್ಲ ಎಂದುಕೊಂಡು ತನ್ನ ಇಬ್ಬರು ಮಕ್ಕಳನ್ನು ಕರೆದುಕೊಂಡು ಮುಂಬೈಗೆ ಮರಳಿ ಬಂದರು. ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದರು. ಮಾನಸಿಕ ಕಿರುಕುಳ, ದೈಹಿಕ ಹಲ್ಲೆ ಮತ್ತು ಕೌಟಂಬಿಕ ಹಿಂಸಾಚಾರ ಪ್ರಕರಣಗಳನ್ನು ಕೂಡ ದಾಖಲಿಸಿದರು.
ನನ್ನ ಮಕ್ಕಳ ಮತ್ತು ನನ್ನ ಖರ್ಚು ವೆಚ್ಚಗಳನ್ನು ನೀಡಲು ಸಂಜಯ್ ಕಪೂರ್ ಹಿಂದೇಟು ಹಾಕುತ್ತಿದ್ದಾರೆ ಎಂದು ಕೂಡ ಆರೋಪ ಮಾಡಿದರು. 2010ರಿಂದ 2016ರರವರೆಗೆ ನಡೆದ ಸುದೀರ್ಘ ವಾದ ವಿವಾದದ ನಂತರ ಕರೀಷ್ಮಾ ಕಪೂರ್ ಕೊನೆಗೂ ಸಂಜಯ್ ಕಪೂರ್ ಅವರಿಂದ ವಿಚ್ಚೇದನವನ್ನು ಪಡೆದರು.
ಮಾಧ್ಯಮ ವರದಿಗಳ ಪ್ರಕಾರ, ಮುಂಬೈನ ಖಾರ್‌ನಲ್ಲಿರುವ ಸಂಜಯ್ ಕಪೂರ್ ಅವರ ಮನೆಯನ್ನು ತಮ್ಮದಾಗಿಸಿಕೊಂಡರು. ಇಷ್ಟೇ ಅಲ್ಲ ತಮ್ಮ ಇಬ್ಬರು ಮಕ್ಕಳ ಹೆಸರಿನಲ್ಲಿ 14 ಕೋಟಿ ಮೌಲ್ಯದ ಬಾಂಡ್‌ಗಳನ್ನು ಕೂಡ ಖರೀದಿ ಮಾಡಿದರು. ಈ ಬಾಂಡ್‌ಗಳಿಂದ ಪ್ರತಿ ತಿಂಗಳು ಸುಮಾರು ಹತ್ತು ಲಕ್ಷ ಬಡ್ಡಿ ಕರಿಷ್ಮಾ ಕಪೂರ್‌ಗೆ ಬರುತ್ತೆ.
ಕರಿಷ್ಮಾ ಕಪೂರ್ ಅವರಿಂದ ದೂರವಾದ ನಂತರ ಮರು ವರ್ಷವೇ ಸಂಜಯ್ ಕಪೂರ್, ಪ್ರಿಯಾ ಸಚ್‌ದೇವ್ ಜೊತೆ ಮೂರನೇ ಮದುವೆಯಾದರು. ಪ್ರಿಯಾಗೆ ಇದು ಎರಡನೇ ಮದುವೆಯಾಗಿತ್ತು. ಇವರಿಬ್ಬರ ಪ್ರೀತಿಯ ಸಂಕೇತವಾಗಿ ಇಬ್ಬರಿಗೆ ಒಂದು ಮಗು ಇದೆ.


Click it and Unblock the Notifications











